Latest Updates
-
ಮಕ್ಕಳ ಭವಿಷ್ಯ ಭದ್ರವಾಗಿರಲಿ: ಎನ್ಪಿಎಸ್ ವಾತ್ಸಲ್ಯದಿಂದ ಪಾಕೆಟ್ ಮನಿವರೆಗೆ ಪೋಷಕರಿಗೆ ಇಲ್ಲಿದೆ ಸೂಕ್ತ ಹಣಕಾಸು ಮಾರ್ಗದರ್ಶಿ -
ಇಂದಿನಿಂದ ಹಾಲು ದುಬಾರಿ: ಅಮೂಲ್, ಮದರ್ ಡೈರಿ ಬೆಲೆ ಏರಿಕೆ; ಬಜೆಟ್ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬಿಗ್ ಬಾಸ್ ಕನ್ನಡ 13: ದೊಡ್ಮನೆಯ ಹೊಸ ಕ್ಯಾಪ್ಟನ್ ಯಶಸ್ ಕೃಷ್ಣ, ಮನೆಯಲ್ಲಿ ಬದಲಾಗುತ್ತಾ ಗೇಮ್ ಪ್ಲಾನ್? -
ದಟ್ಟ ಮಂಜು ಮತ್ತು ಮಾಲಿನ್ಯ: ಬೆಳಗಿನ ವಾಕಿಂಗ್ ಮಾಡುವವರು ಈ 12 ನಿಮಿಷದ ವ್ಯಾಯಾಮ ಮಿಸ್ ಮಾಡಬೇಡಿ! -
ಮದುವೆ ಪ್ಲಾನಿಂಗ್ ಗೊಂದಲವೇ? ಕನ್ನಡಿಗ ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಮತ್ತು ಶಾಂತಿಯುತ ಮದುವೆ ಮಾರ್ಗದರ್ಶಿ! -
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್! -
ದೆಹಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆಯಾ? ವಾಟ್ಸಾಪ್ ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ! -
ತಮಿಳುನಾಡಿನಲ್ಲಿ ಮಳೆ ಅಬ್ಬರ: ಕರೆಂಟ್ ಇಲ್ಲದಿದ್ದರೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್ ಟಿಪ್ಸ್! -
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ!
ಆಗಸ್ಟ್ 3ಕ್ಕೆ ಕೊಡಗಿನ ಎಲ್ಲಾ ಮನೆಗಳಲ್ಲಿ ಸಿಗುತ್ತೆ ಕಡು ನೀಲಿ ಬಣ್ಣದ ಪಾಯಸ, ಇದರ ವಿಶೇಷತೆಯೇನು?
ಕೆಲವು ಕಡೆ ಆಷಾಢ ಆಚರಣೆ ಮಾಡಿದರೆ ಇನ್ನು ಕೆಲವು ಕಡೆ ಆಟಿ ತಿಂಗಳು ಅಂತ ಆಚರಣೆ ಮಾಡಲಾಗುವುದು, ದಕ್ಷಿಣ ಕನ್ನಡ, ಕೊಡಗು ಈ ಭಾಗಗಳಲ್ಲಿ ಆಟಿ ಮಾಸ ಎಂದು ಆಚರಣೆ ಮಾಡುತ್ತಾರೆ. ಆಟಿ ಅಮವಾಸ್ಯೆ, ಆಟಿ 18 ಇದೆಲ್ಲಾ ವಿಶೇಷ ದಿನವಾಗಿ ಆಚರಿಸುತ್ತಾರೆ. ಆಗಸ್ಟ್ 3ಕ್ಕೆ ಆಟಿ 18 ಆಚರಿಸುತ್ತಿದ್ದಾರೆ, ಈ ದಿನ ಕೊಡಗಿನ ಯಾವುದೇ ಮನೆಗೆ ಹೋಗಿ(ಜಾತಿ-ಬೇಧವಿಲ್ಲದೆ)ಅಲ್ಲೊಂದು ಕಡು ನೀಲಿ ಬಣ್ಣದ ಪಾಯಸ ಸೇವಿಸಲು ಕೊಡುತ್ತಾರೆ, ಅದನ್ನು ಆಟಿ ಪಾಯಸ ಎಂದು ಕರೆಯಲಾಗುವುದು.

.
ಈ ಆಟಿ ಪಾಯಸದಲ್ಲಿ 18 ಬಗೆಯ ಔಷಧಗಳು ಸೇರಿರುತ್ತದೆ ಎಂದು ಹೇಳಲಾಗುವುದು, ಹಾಗಾಗಿ ಈ ಪಾಯಸ ಸೇವನೆ ಆರೋಗ್ಯಕ್ಕೆ ಅಷ್ಟೊಂದು ಅನುಕೂಲಕರ ಎಂದು ಪರಿಗಣಿಸಲಾಗಿದೆ. ಆಟಿ ಸೊಪ್ಪು ಎಂದು ದೊರೆಯುತ್ತದೆ, ಅದನ್ನು ಬೇರೆ ಸಮಯದಲ್ಲಿ ಬೇಯಿಸಿದರೆ ಆ ಸೊಪ್ಪು ಹಾಕಿ ಬೇಯಿಸಿದ ನೀರು ಕಡು ನೀಲಿ ಬಣ್ಣಕ್ಕೆ ಬರುವುದಿಲ್ಲ, ಆದರೆ ಈ ಸಮಯದಲ್ಲಿ ಅದರಲ್ಲಿಯೂ ಆಟಿ 18ಕ್ಕೆ ಈ ಸೊಪ್ಪು ಬೇಯಿಸಿದಾಗ ಕಡು ನೀಲಿ ಬಣ್ಣಕ್ಕೆ ಬರುತ್ತದೆ.
ಆ ನೀರಿಗೆ ಅಕ್ಕಿ ಪಾಯಸ ಪಾಡುವ ರೀತಿಯಲ್ಲಿ ಮಾಡಲಾಗುವುದು, ಕೊಡಗಿನವರು ಈ ಸಮಯದಲ್ಲಿ ಕೊಡಗಿನಿಂದ ಹೊರಗಡೆ ಇದ್ದರೆ ಈ ಪಾಯಸ ಖಂಡಿತ ಮಿಸ್ ಮಾಡಿಕೊಳ್ಳುತ್ತಾರೆ, ಅಷ್ಟರ ಮಟ್ಟಿಗೆ ಪ್ರಿಯವಾದ ಪಾಯಸವಿದು.
ಔಷಧೀಯ ಗುಣವಿರುವ ಈ ಪಾಯಸದ ಮಹತ್ವವೇನು?
ಮಳೆಗಾಲ, ನಾಟಿಯ ಸಮಯವಿದು ಈ ಸಮಯದಲ್ಲಿ ಆರೋಗ್ಯಕರ ಆಹಾರದ ಕಡೆಗೆ ತುಂಬಾನೇ ಗಮನಹರಿಸಬೇಕು. ಕೆಲವೊಂದು ಔಷಧಿಗಳನ್ನು ಸೇವಿಸಬೇಕು, ಈ ಆಟಿ ಸೊಪ್ಪಿನಲ್ಲಿ ಅಷ್ಟೊಂದು ಔಷಧೀಯ ಗುಣಗಳಿವೆ, ಹಾಗಾಗಿ ಹಿಂದಿನ ಕಾಲದಿಂದಲೂ ಈ ಆಟಿ ಪಾಯಸ ಮಾಡುವುದನ್ನು ಒಂದು ಆಚರಣೆಯಂತೆ ಮಾಡುತ್ತಾರೆ.
ಈ ಆಟಿ ಪಾಯಸ ಹೇಗೆ ಮಾಡುತ್ತಾರೆ?
ಆಟಿ ಸೊಪ್ಪು
3 ಲೀಟರ್ ನೀರು
1 ಲೋಟ ಅಕ್ಕಿ
ತೆಂಗಿನ ಕಾಯಿ ಹಾಲು 1 ಕಪ್
1/2 ಕೆಜಿ ಬೆಲ್ಲ (ಪೂರ್ತಿ ಹಾಕಬೇಡಿ, ಸ್ವಲ್ಪ ಉಳಿಸಿ 1/2 ಕೆಜಿಗಿಂತ ಸ್ವಲ್ಪ
ಹೆಚ್ಚು ಹಾಕಿ)
2 ಚಮಚ ತುಪ್ಪ
2-3 ಏಲಕ್ಕಿ
ಸ್ವಲ್ಪ ಗೋಡಂಬಿ, ದ್ರಾಕ್ಷಿ
ಮಾಡುವುದು ಹೇಗೆ?
ಸೊಪ್ಪು ತೊಳೆದು ನಂತರ ನೀರು ಹಾಕಿ ಬೇಯಿಸಿ, ನೀರು ನೀಲಿ ಬಣ್ಣಕ್ಕೆ ಬರುತ್ತದೆ, ಆ
ನೀರನ್ನು ಮತ್ತೊಂದು ಪಾತ್ರೆಗೆ ಸುರಿದು ಅದರಲ್ಲಿ ಅಕ್ಕಿ ಮತ್ತು ಬೆಲ್ಲ ಹಾಕಿ
ಬೇಯಿಸಿ.
ಪಾಯಸ ಬೇಯುವಾಗ ಏಲಕ್ಕಿ ಹಾಕಿ
ಪಾಯಸ ಬೆಂದ ಮೇಲೆ ತೆಂಗಿನಕಾಯಿ ಹಾಲು ಹಾಕಿ ಮತ್ತೆ 5 ನಿಮಿಷ ಬೇಯಿಸಿ
ನಂತರ ಪಾತ್ರೆಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ ಹಾಕಿ ನಂತರ
ಪಾಯಸಕ್ಕೆ ಸೇರಿಸಿದರೆ ಪಾಯಸ ಸವಿಯಲು ರೆಡಿ.



Click it and Unblock the Notifications
