Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಆಟಿ 18: ಕೊಡಗಿನ ಪ್ರತಿ ಮನೆಗಳಲ್ಲೂ ಆಟಿ ಪಾಯಸದ್ದೇ ಘಮಲು
ಆಗಸ್ಟ್ 3ಕ್ಕೆ ಕೊಡಗಿನಲ್ಲಿ ಆಟಿ ಸಂಭ್ರಮ. ಆಟಿ 18 ಎಂದರೆ ಕೊಡಗಿನವರಿಗೆ ತುಂಬಾನೇ ವಿಶೇಷ. ಅಲ್ಲಿಯ ಪ್ರತಿ ಮನೆಯಲ್ಲೂ ಆಟಿ ಪಾಯಸ ಘಮ್ ಅಂತ ಸುವಾಸನೆ ಬೀರುತ್ತಿರುತ್ತದೆ. ವರ್ಷಕ್ಕೆ ಒಂದೇ ಬಾರಿ ಮಾಡುವ ಆ ಪಾಯಸ ತುಂಬಾನೇ ವಿಶೇಷ.
ಏಕೆಂದರೆ ಆಟಿ ಸೊಪ್ಪು ಬಳಸಿ ಮಾಡುವ ಆ ಪಾಯಸವನ್ನು ನೀವು ತಿನ್ನಬೇಕೆಂದು ಬಯಸಿದರೂ ಬೇರೆ ಸಮಯದಲ್ಲಿ ಸವಿಯಲು ಸಾಧ್ಯವಾಗುವುದಿಲ್ಲ. ಆಟಿ ತಿಂಗಳಿನಲ್ಲಿ 18 ದಿನಕ್ಕೆ 18 ಬಗೆಯ ಔಷಧೀಯ ಗುಣಗಳು ಸೇರಿರುತ್ತದೆ ಆ ಗಿಡದಲ್ಲಿ.

ನೀವು ಬೇರೆ ಸಮಯದಲ್ಲಿ ಅದರ ಸೊಪ್ಪು ಚಿವುಟಿದರೆ ಯಾವುದೇ ವಿಶೇಷ ವಾಸನೆ ಇರುವುದಿಲ್ಲ. ನೀರಿನಲ್ಲಿ ಬೇಯಿಸಿದರೆ ಕಡು ನೀಲಿ ಬಣ್ಣಕ್ಕೆ ತಿರುಗುವುದೂ ಇಲ್ಲ. ಅದೇ ಆಟಿ ತಿಂಗಳಿನಲ್ಲಿ ಆ ಸೊಪ್ಪಿಗೆ ವಿಶೇಷ ವಾಸನೆ ಸೇರಿಕೊಳ್ಳುತ್ತದೆ. ಪ್ರತಿದಿನವೂ ದಿನವೂ ಒಂದೊಂದು ಬಗೆಯ ಔಷಧಿ ಅದರಲ್ಲಿ ಸೇರುತ್ತಾ ಹೋಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಈ ಆಟಿಸೊಪ್ಪು ಬೇರೆ ಕಡೆ ಸಿಗುವುದು ಕಡಿಮೆ, ಕೊಡಗಿನಲ್ಲಿ ಎಲ್ಲಾ ಕಡೆ ಸಿಗುತ್ತದೆ, ಕೊಡಗಿನ ಸಾಮಗ್ರಿ ಸಿಗುವ ವಸ್ತುಗಳು ಬೆಂಗಳೂರಿನಲ್ಲಿದ್ದರೆ ಅಲ್ಲಿ ನಿಮಗೆ ಈ ಸೊಪ್ಪು ಸಿಕ್ಕರೆ ತಂದು ಖಂಡಿತ ಇದರ ರುಚಿ ನೋಡಿ.
Recipe By: Reena TK
Recipe Type: Sweet
Serves: 4
-
ಸಾಮಗ್ರಿ
ಆಟಿ ಸೊಪ್ಪು
ಅಕ್ಕಿ 1 ಲೋಟ
ಬೆಲ್ಲ ರುಚಿಗೆ ತಕ್ಕಷ್ಟು
1 ಚಮಚ ತುಪ್ಪ
ಸ್ವಲ್ಪ ಏಲಕ್ಕಿ
ಸ್ವಲ್ಪ ಗೋಡಂಬಿ
-
ಆಟಿ 18 ಎಂದರೆ ಕೊಡಗಿನವರಿಗೆ ತುಂಬಾನೇ ವಿಶೇಷ. ಅಲ್ಲಿಯ ಪ್ರತಿ ಮನೆಯಲ್ಲೂ ಆಟಿ ಪಾಯಸ ಘಮ್ ಅಂತ ಸುವಾಸನೆ ಬೀರುತ್ತಿರುತ್ತದೆ. ವರ್ಷಕ್ಕೆ ಒಂದೇ ಬಾರಿ ಮಾಡುವ ಆ ಪಾಯಸ ತುಂಬಾನೇ ವಿಶೇಷ.
ಏಕೆಂದರೆ ಆಟಿ ಸೊಪ್ಪು ಬಳಸಿ ಮಾಡುವ ಆ ಪಾಯಸವನ್ನು ನೀವು ತಿನ್ನಬೇಕೆಂದು ಬಯಸಿದರೂ ಬೇರೆ ಸಮಯದಲ್ಲಿ ಸವಿಯಲು ಸಾಧ್ಯವಾಗುವುದಿಲ್ಲ. ಆಟಿ ತಿಂಗಳಿನಲ್ಲಿ 18 ದಿನಕ್ಕೆ 18 ಬಗೆಯ ಔಷಧೀಯ ಗುಣಗಳು ಸೇರಿರುತ್ತದೆ ಆ ಗಿಡದಲ್ಲಿ.
ನೀವು ಬೇರೆ ಸಮಯದಲ್ಲಿ ಅದರ ಸೊಪ್ಪು ಚಿವುಟಿದರೆ ಯಾವುದೇ ವಿಶೇಷ ವಾಸನೆ ಇರುವುದಿಲ್ಲ. ನೀರಿನಲ್ಲಿ ಬೇಯಿಸಿದರೆ ಕಡು ನೀಲಿ ಬಣ್ಣಕ್ಕೆ ತಿರುಗುವುದೂ ಇಲ್ಲ. ಅದೇ ಆಟಿ ತಿಂಗಳಿನಲ್ಲಿ ಆ ಸೊಪ್ಪಿಗೆ ವಿಶೇಷ ವಾಸನೆ ಸೇರಿಕೊಳ್ಳುತ್ತದೆ. ಪ್ರತಿದಿನವೂ ದಿನವೂ ಒಂದೊಂದು ಬಗೆಯ ಔಷಧಿ ಅದರಲ್ಲಿ ಸೇರುತ್ತಾ ಹೋಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಈ ಆಟಿಸೊಪ್ಪು ಬೇರೆ ಕಡೆ ಸಿಗುವುದು ಕಡಿಮೆ, ಕೊಡಗಿನಲ್ಲಿ ಎಲ್ಲಾ ಕಡೆ ಸಿಗುತ್ತದೆ, ಕೊಡಗಿನ ಸಾಮಗ್ರಿ ಸಿಗುವ ವಸ್ತುಗಳು ಬೆಂಗಳೂರಿನಲ್ಲಿದ್ದರೆ ಅಲ್ಲಿ ನಿಮಗೆ ಈ ಸೊಪ್ಪು ಸಿಕ್ಕರೆ ತಂದು ಖಂಡಿತ ಇದರ ರುಚಿ ನೋಡಿ.
{recipe}
- * ಇದಕ್ಕೆ ಅಕ್ಕಿ ಬದಲಿಗೆ ರವೆ ಹಾಕಿ ಕೂಡ ಮಾಡಬಹುದು * ಇದರಿಂದ ಇಡ್ಲಿ, ಬಟ್ಟಲು ಹಿಟ್ಟು ಕೂಡ ತಯಾರಿಸಬಹುದು.
ಮಾಡುವ ವಿಧಾನ:
*ಮೊದಲಿಗೆ ನೀವು ಸೊಪ್ಪನ್ನು ಅರ್ಧ ಮಡಿಕೆಯಷ್ಟು ನೀರು ಹಾಕಿ ಬೇಯಿಸಿಕೊಳ್ಳಬೇಕು,
ಸೊಪ್ಪು ಬೆಂದಾಗ ನೀರು ಕಡುನೀಲಿ ಬಣ್ಣಕ್ಕೆ ತಿರುಗುತ್ತದೆ.

* ಆ ನೀರನ್ನು ಸೋಸಿ, ಆ ನೀರಿಗೆ ಅಕ್ಕಿ ತೊಳೆದು ಹಾಕಬೇಕು, ಬೆಲ್ಲ
ಹಾಕಬೇಕು. ನಂತರ ಬೇಯಿಸಿ.

* ಅಕ್ಕಿ ಚೆನ್ನಾಗಿ ಬೆಂದ ಮೇಲೆ ತವಾಗೆ ಒಂದರಿಂದ ಎರಡು ಚಮಚ ತುಪ್ಪ
ಹಾಕಿ ಅದರಲ್ಲಿ ಗೋಡಂಬಿ ಹುರಿದು ಪಾಯಸಕ್ಕೆ ಹಾಕಿ ಸವಿಯಿರಿ.

Click it and Unblock the Notifications