Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಮೀನು ಸಾರು ಮಾಡುವ ಈ ಸೀಕ್ರೆಟ್ ತಿಳಿದರೆ ರೆಡಿಯಾಗುತ್ತೆ ಬೊಂಬಾಟ್ ರುಚಿಯ ಫಿಶ್ಕರಿ
ಮೀನು ಸಾರು ಈ ರೀತಿ ನೀವು ಟ್ರೈ ಮಾಡಿದ್ದೇ ಆದರೆ ಹೇಳುವಿರಿ ಅಬ್ಬಾಬ್ಬ ಎಷ್ಟು ರುಚಿಯಾಗಿದೆ! ಇದುವರೆಗೆ ನಿಮಗೆ ತಿಳಿದಿರದ ಫಿಶ್ಕರಿ ಸೀಕ್ರೆಟ್ ಇದು, ತುಂಬಾ ಸ್ಪೆಷಲ್ ಮಸಾಲೆ ಹಾಕಿ ಮಾಡುವ ಈ ಮೀನಿನ ಸಾರು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಮೀನು (ಯಾವ ಮೀನು ಬೇಕಾದರು ಬಳಸಬಹುದು)
ತೆಂಗಿನೆಣ್ಣೆ
ಕರಿಬೇವು (ಕರಿಬೇವು ದಂಟು ಸಹಿತ ಬಳಸಿ)
ಕಾಚಂಪುಳಿ ಸಿಪ್ಪೆ ಅಥವಾ ಹುಣಸೆಹಣ್ಣು ಬಳಸಿ
ಬೆಳ್ಳುಳ್ಳಿ 8-10 ಎಸಳು
ಇಂಗು ಪುಡಿ
ಮೆಂತೆ ಪುಡಿ
ರುಚಿಗೆ ತಕ್ಕ ಉಪ್ಪು
ಮಸಾಲೆಗೆ
ಖಾರದ ಪುಡಿ
ಕಾಶ್ಮೀರಿ ಖಾರದ ಪುಡಿ
ಸಾಸಿವೆ
2 ಚಮಚ ತೆಂಗಿನೆಣ್ಣೆ
ಸ್ವಲ್ಪ ಕರಿಬೇವು
ಮಣ್ಣಿನ ಪಾತ್ರೆ
ಮಾಡುವ ವಿಧಾನ
ನೀವು ಯಾವುದೇ ಮೀನು ಬಳಸಿ ಕೂಡ ಈ ಸಾರು ಮಾಡಬಹುದು.
ಮೀನು ಸಾರು ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ರುಚಿ ಜಾಸ್ತಿ, ಹಾಗಾಗಿ ಮಣ್ಣಿನ
ಪಾತ್ರೆ ಇದ್ದರೆ ಅದನ್ನು ಬಳಸಿ ತಯಾರಿಸಿ
ಸಾರು ಪಾತ್ರೆ ಬಿಸಿ ಮಾಡಿ ಅದಕ್ಕೆ 2 ಚಮಚ ತೆಂಗಿನೆಣ್ಣೆ ಹಾಕಿ, ಪಾತ್ರೆಯ ಎಲ್ಲಾ
ಬದಿಗೆ ಸವರಿ (ದೋಸೆಗೆ ಎಣ್ಣೆ ಸವರುವ ಬ್ರೆಷ್ ಬಳಿಸಿ ಸವರಿ)
ನಂತರ ಕರಿಬೇವು ಹಾಕಿ, ಕರಿಬೇವು ಕಡ್ಡಿ ಸಹಿತ ಇಡಿ)
1/4 ಚಮಚ ಇಂಗು ಹಾಕಿ
3-4 ಕಾಚಂಪುಳಿ ತುಂಡುಗಳನ್ನು ಹಾಕಿ (ಅದಿಲ್ಲದಿದ್ದರೆ ನೀವು ಮೀಡಿಯಂ ಟೊಮೆಟೊ
ಗಾತ್ರದಷ್ಟು ಹುಣಸೆಹಣ್ಣು ತೆಗೆದು ಕಲೆಸಿ ಅದರ ರಸ ಹಾಕಿ)
ನಂತರ ಶುಚಿ ಮಾಡಿಟ್ಟ ಮೀನು ಹಾಕಿ
ಮೀನು ಸರಿಯಬೇಡಿ, ಒಂದೊಂದು ಮೀನು ಜೋಡಿ, ನೀವುಒಂದು ಕೆಜಿ ಮೀನು ತೆಗೆದಿದ್ದರೆ
ಅರ್ಧ ಕೆಜಿ ಈ ರೀತಿ ಮಡಿಕೆಯಲ್ಲಿ ಹರಡಿ ಮತ್ತೆ 1/4 ಚಮಚ ಮೆಂತೆ ಪುಡಿ ಹಾಕಿ,
ಅದರ ಮೇಲೆ ಮತ್ತೆ ಕರಿಬೇವು ಉದುರಿಸಿ
ಬಳಿಕ ಉಳಿದ ಮೀನು ಕೂಡ ಹಾಕಿ
ಅದರ ಮೇಲೆ 1 ಚಮಚ ಅರಿಶಿಣ ಪುಡಿ ಹಾಕಿ
ಅದರ ಮೇಲೆ ಹುಣಸೆಹಣ್ಣಿನ ರಸ (ಕಲೆಸಿದ ಹುಣಸೆಹಣ್ಣಿನ ರಸ ಅರ್ಧ ಹಾಕಿ ಮತ್ತೆ ಅರ್ಧ
ಈಗ ಹಾಕಿ)
ರುಚಿಗೆ ತಕ್ಕ ಉಪ್ಪು ಸೇರಿಸಿ
ಈಗ ನೀವು ಮಸಾಲೆ ರೆಡಿ ಮಾಡಬೇಕು
- 1 ಚಮಚ ಖಾರದ ಮೆಣಸಿನ ಪುಡಿ
- ಕಾಶ್ಮೀರಿ ಮೆಣಸಿನ ಪುಡಿ 3 ಚಮಚ
- ನಂತರ 1/4 ಚಮಚ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
- ಈಗ ಪ್ಯಾನ್ಗೆ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ನೀವು ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ 1ಚಮಚ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಸ್ವಲ್ಪ ಕರಿಬೇವು ಹಾಕಿ 8-10 ಬೆಳ್ಳುಳ್ಳಿ ಎಸಳು (ಚಿಕ್ಕದಾಗಿ ಕತ್ತರಿಸಿದ್ದು) ಹಾಕಿ, ಬೆಳ್ಳುಳ್ಳಿ ಕಂದು ಬಣ್ಣ ಬರುವಾಗ ಫ್ರೈ ಮಾಡಿ, ನಂತರ ಮಿಕ್ಸ್ ಮಾಡಿಟ್ಟ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ
- ಆಗ ಈ ಪೇಸ್ಟ್ ಒಳ್ಳೆಯ ಸುವಾಸನೆ ಬೀರುತ್ತದೆ, ಈಗ ನೀವು ಜೋಡಿಸಿಟ್ಟ ಚಿಕನ್ ಮೇಲೆ ಈ ಮಸಾಲೆ ಸುರಿಯಿರಿ, ಅದರ ಪ್ಯಾನ್ ತೊಳೆದ ನೀರು ಸೇರಿಸಿ, ನಂತರ ನಿಮಗೆ ಯಾವ ಹದದಲ್ಲಿ ಸಾರು ಬೇಕು, ಅಷ್ಟು ನೀರು ಸೇರಿಸಿ.
- ನಂತರ ಮೆಲ್ಲನೆ ಮಿಕ್ಸ್ ಮಾಡಿ, ಕೆಳಗಿಟ್ಟ ಕರಿಬೇವು ಹಾಗೆ ಇರಲಿ, ಆ ರೀತಿ ಮೆಲ್ಲನೆ ಮಿಕ್ಸ್ ಮಾಡಿ
- ನಂತರ ಮೀನನ್ನು ಬೇಯಿಸಿ (ಒಂದೊಂದು ಮೀನಿಗೆ ಬೇಯಲು ಅರ್ಧ ಗಂಟೆಬೇಕು, ಅದೇ ಚಿಕ್ಕ ಬೂತಾಯಿ ಆದರೆ 10-15 ನಿಮಿಷ ಸಾಕಾಗುತ್ತೆ)
- ಸಲಹೆ
- ಗ್ಯಾಸ್ ಉರಿ ಮೀಡಿಯಂ ಫ್ಲೇಮ್ನಲ್ಲಿಟ್ಟು ಮೀನು ಬೇಯಿಸಿ
- ಮೀನು ಬೆಂದ ಬಳಿಕ ಉಪ್ಪು ಸೆರಿಯಾಗಿದೆಯೇ ನೋಡಿ, ಹುಳಿ ಇನ್ನೂ ಬೇಕೆನಿಸಿದರೆ ಸ್ವಲ್ಪ ನಿಂಬೆರಸ ಸೇರಿಸಬಹುದು.
ಈಗ ನೀವು ರೆಡಿಯಾದ ಮೀನಿನ ಸಾರು ಟೇಸ್ಟ್ ಮಾಡಿ ನೋಡಿ, ಮೀನು ಪ್ರಿಯರ ಖುಷಿ ಹೇಳತೀರದು ಅಷ್ಟು ಚೆನ್ನಾಗಿರುತ್ತೆ.



Click it and Unblock the Notifications