Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ರೆಸಿಪಿ: ಮಕ್ಕಳಿಗೆ ಧೈರ್ಯವಾಗಿ ಕೊಡಬಹುದು ಈ ಮೂರು ಬಗೆಯ ಮ್ಯಾಂಗೋ ಐಸ್ ಕ್ಯಾಂಡಿ
ಐಸ್ಕ್ಯಾಂಡಿ, ಐಸ್ಕ್ರೀಮ್ ಗಾಡಿ ನೋಡಿದರೆ ಸಾಕು ಮಕ್ಕಳು ಕೊಡಿಸು ಎಂದು ಹಠ ಮಾಡುತ್ತಾರೆ. ಆದರೆ ಮಕ್ಕಳು ಕೇಳಿದಾಗ ಕೊಡಿಸಲು ಸ್ವಲ್ಪ ಭಯವಾಗುತ್ತೆ, ಏಕೆಂದರೆ ಅದನ್ನು ತಿಂದಾಗ ಗಂಟಲು ಹಾಳಾದರೆ, ಶೀತವಾದರೆ ಈ ರೀತಿಯ ಭಯ ಪೋಷಕರದ್ದು. ಆದರೆ ಅವರು ಕೇಳಲ್ಲ ಬೇಕು ಎಂದು ಹಠ ಮಾಡುತ್ತಾರೆ. ನೀವು ಐಸ್ಕ್ಯಾಂಡಿಯನ್ನು ಮನೆಯಲ್ಲಿಯೇ ಮಾಡಿಕೊಡಿ.
ಅದರಲ್ಲೂ ಮಾವಿನಹಣ್ಣಿನಿಂದ ಐಸ್ಕ್ಯಾಂಡಿ ಸುಲಭವಾಗಿ ಮಾಡಬಹುದು, ಇಲ್ಲಿ ನಾವು 3 ಮಾವಿನ ಹಣ್ಣಿನ ಕ್ಯಾಂಡಿ ರೆಸಿಪಿ ನೀಡಿದ್ದೇವೆ ನೋಡಿ:

ರೆಸಿಪಿ 1
ಬೇಕಾಗುವ ಸಾಮಾಗ್ರಿ
2 ಮಾವಿನ ಹಣ್ಣು
1/2 ಕಪ್ ನೀರು
1 ಚಮಚ ಸಕ್ಕರೆ
ಇತರ ಸಾಮಗ್ರಿ
1/2 ಕಪ್ ತೆಂಗಿನಕಾಯಿ ಹಾಲು
1 ಚಮಚ ಸಕ್ಕರೆ
1 ಚಮಚ ಸಕ್ಕರೆ
ಸ್ವಲ್ಪ ನಟ್ಸ್(ಬಾದಾಮಿ, ಪಿಸ್ತಾ)
ಮಾಡುವ ವಿಧಾನ
- ಮಾವಿನ ಹಣ್ಣು ಮತ್ತು ಸಕ್ಕರೆಯನ್ನು ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ.
- ನಂತರ 1/2 ಕಪ್ ನೀರು ಸೇರಿಸಿ (ಮಕ್ಕಳಿಗೆ ನೀಡುವುದರಿಂದ ಫಿಲ್ಟರ್ ನೀರು ಸೇರಿಸಿ)
- ನಂತರ ಐಸ್ ಕ್ಯಾಂಡಿ ಮೌಲ್ಡ್ಗೆ ಮಾವಿನಹಣ್ಣಿನ ರಸವನ್ನು ಮುಕ್ಕಾಲು ಭಾಗದಷ್ಟು ತುಂಬಿ 30 ನಿಮಿಷ ಫ್ರೀಝರ್ನಲ್ಲಿ ಇಡಿ.
- ನಂತರ ನೀವು ತೆಂಗಿನ ಹಾಲಿಗೆ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.
- ನಟ್ಸ್ ಪುಡಿ ಮಾಡಿ
- ನೀವು ನಟ್ಸ್ ಪುಡಿಯನ್ನು ಐಸ್ ಕ್ಯಾಂಡಿ ಮೌಲ್ಡ್ಗೆ ಹಾಕಿ.
- ಈಗ ನೀವು ತೆಂಗಿನ ಹಾಲನ್ನು ಸುರಿಯಿರಿ
- ನಂತರ ಕವರ್ ಮಾಡಿ 8 ಗಂಟೆ ಫ್ರೀಜ್ ಮಾಡಿ
- ಈಗ ನೀವು ಐಸ್ಕ್ಯಾಂಡಿ ಮೌಲ್ಡ್ ಅನ್ನು ಬಿಸಿ ನೀರಿಗೆ 2 ಸೆಕೆಂಡ್ ಡಿಪ್ ಮಾಡಿದರೆ ಕ್ಯಾಂಡಿ ಬಿಟ್ಟು ಬರುತ್ತದೆ
- ರೆಡಿಯಾದ ಐಸ್ಕ್ಯಾಂಡಿಯನ್ನು ಸವಿಯಿರಿ. ಈ ಐಸ್ ಕ್ಯಾಂಡಿ ಮಾಡಿದರೆ 2-3 ತಿಂಗಲು ಇಟ್ಟು ಕೂಡ ಬಳಸಬಹುದು.
ರೆಸಿಪಿ 2
ಐಸ್ ಕ್ಯಾಂಡಿ
ಮಾವಿನ ಹಣ್ಣಿನ ತಿರುಳು 1 ಕಪ್
4 ಚಮಚ ಸಕ್ಕರೆ (ಮಾವಿನಹಣ್ಣು ತುಂಬಾ ಸಿಹಿಯಾಗಿದ್ದರೆ ಸ್ವಲ್ಪ ಕಡಿಮೆ ಸಕ್ಕರೆ
ಹಾಕಿ)
1ಕಪ್ ಫಿಲ್ಟರ್
ಮಾಡುವುದು ಹೇಗೆ?
- ಮಾವಿನಹಣ್ಣು ಮತ್ತು ಸಕ್ಕರೆ ಹಾಕಿ ಬ್ಲೆಂಡ್ ಮಾಡಿ, ನಂತರ ನೀರು ಸೇರಿಸಿ ಮತ್ತೆ ಬ್ಲೆಂಡ್ ಮಾಡಿ
- ನಂತರ ಐಸ್ಕ್ಯಾಂಡಿ ಮೌಲ್ಡ್ಗೆ ಹಾಕಿ
- ನಂತರ ಅದನ್ನು 5-6 ಗಂಟೆ ಫ್ರೀಜ್ ಮಾಡಿ
- ನಂತರ ಐಸ್ಕ್ಯಾಂಡಿ ಮೋಲ್ಡ್ ಅನ್ನು ಬಿಸಿ ನೀರಿನಲ್ಲಿ ಒಂದು ಕ್ಷಣ ಹಾಕಿ ತೆಗದು ಬಿಡಿ, ಅದರಲ್ಲಿಯೇ ಹಾಕಿಡಬೇಡಿ, ಐಸ್ಕ್ಯಾಂಡಿ ನೀರಾಗುವುದು, ಇಲ್ಲದಿದ್ದರೆ 2-3 ಸೆಕೆಂಡ್ ಟ್ಯಾಪ್ ನೀರಿನಲ್ಲಿ ಹಿಡಿದರೆ ಸಾಕು.
- ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ಈ ಕ್ಯಾಂಡಿಯನ್ನು ಸವಿಯಲು ನೀಡಬಹುದು. ನೀವೇ ಮಾಡುವುದರಿಂದ ಮಕ್ಕಳಿಗೆ ಐಸ್ಕ್ಯಾಂಡಿಯನ್ನು ಭಯವಿಲ್ಲದೆ ಕೊಡಬಹುದು.
ರೆಸಿಪಿ 3
ಬೇಕಾಗುವ ಸಾಮಗ್ರಿ
1/2 ಕಪ್ ಫಿಲ್ಟರ್ ವಾಟರ್
2 ಚಮಚ ಕಾರ್ನ್ಸ್ಟ್ರಾಚ್
3-4 ಮಾವಿನಹಣ್ಣು(ನಾರು ಕಡಿಮೆ ಇರುವ ಮಾವಿನಹಣ್ಣು ಬಳಸಬೇಕು)
1 ಕಪ್ ಹಾಲು (ಅರ್ಧ ಲೀಟರ್ ಕಾಯಿಸಿ, 1/4 ಲೀಟರ್ ಆಗುವಷ್ಟು ಹೊತ್ತು ಕಡಿಮೆ
ಉರಿಯಲ್ಲಿ ಕಾಯಿಸಬೇಕು)
ಮಾಡುವ ವಿಧಾನ
- ಮಾವಿನ ಹಣ್ಣಿನ ತಿರುಳು, ಹಾಲು, ಸಕ್ಕರೆ ಹಾಕಿ ಬ್ಲೆಂಡ್ ಮಾಡಿ
- ಈಗ ಜೋಳದ ಹಿಟ್ಟನ್ನು ನೀರಿನಲ್ಲಿ ಹಾಕಿ ಗಂಟು ಕಟ್ಟದಂತೆ ಕಲೆಸಿ, ನಂತರ ಕಡಿಮೆ ಉರಿಯಲ್ಲಿ ಸ್ಪೂನ್ನಿಂದ ಮಿಕ್ಸ್ ಮಾಡುತ್ತಾ ಕಾಯಿಸಿ, ನಂತರ ಅದಕ್ಕೆ ಬ್ಲೆಂಡ್ ಮಾಡಿದ ಮಾವಿನಹಣ್ಣಿನ ರಸ ಸೇರಿಸಿ.
- ಮಿಶ್ರಣ ಸ್ವಲ್ಪ ಗಟ್ಟಿಯಾಗುವಾಗ ಸ್ಟೌವ್ ಆಫ್ ಮಾಡಿ
- ನಂತರ ಮಿಶ್ರಣ ಸ್ವಲ್ಪ ತಣ್ಣಗಾದ ಮೇಲೆ ಐಸ್ಕ್ಯಾಂಡಿ ಮೌಲ್ಡ್ಗೆ ಹಾಕಿ ಫ್ರೀಝರ್ನಲ್ಲಿ ಇಟ್ಟು 8 ಗಂಟೆ ಇಡಿ
- ಕ್ಯಾಂಡಿ ಸವಿಯಲು ರೆಡಿ.



Click it and Unblock the Notifications