Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
3 ವಿಭಿನ್ನ ರುಚಿಯ ಮಜ್ಜಿಗೆ ರೆಸಿಪಿ: ಹಾಲಿದ್ದರೆ ಸಾಕು ಪಟ್ ಅಂತ ಮಾಡಬಹುದು ಮಜ್ಜಿಗೆ
ಬೇಸಿಗೆಯಲ್ಲಿ ದಿನಾ ಒಂದು ಅಥವಾ ಎರಡು ಲೋಟ ಮಜ್ಜಿಗೆ ಕುಡಿಯುವುದು ಒಳ್ಳೆಯದು, ಈ ಮಜ್ಜಿಗೆಯನ್ನು ನೀವು ಅನೇಕ ರುಚಿಯಲ್ಲಿ ಮಾಡಿ ಸವಿಯಬಹುದು. ನಾವಿಲ್ಲಿ 3 ವಿಭಿನ್ನ ಬಗೆಯ ಮಜ್ಜಿಗೆ ಹಾಗೂ ಒಂದು ವೇಳೆ ಮಜ್ಜಿಗೆ ಇಲ್ಲದಿದ್ದರೆ ಪಟ್ ಅಂತ ಮಜ್ಜಿಗೆ ಮಾಡುವುದು ಹೇಗೆ ಎಂದು ನೋಡೋಣ:

ಮಜ್ಜಿಗೆ ಮಾಡುವುದು ಹೇಗೆ?
ಮಜ್ಜಿಗೆಯನ್ನು ಹಲವಾರು ರೀತಿಯಲ್ಲಿ ತಯಾರಿಸಬಹುದು, ಕೆಲವರು ಹಾಲಿಗೆ ವಿನೆಗರ್ ಅಥವಾ ನಿಂಬೆರಸ ಸೇರಿಸಿ ಮಜ್ಜಿಗೆ ತಯಾರಿಸುತ್ತಾರೆ. ಆದರೆ ಹೀಗೆ ಮಾಡುವ ಮಜ್ಜಿಗೆಯಲ್ಲಿ ಕೆನೆ ಅಂಶ ಇರುತ್ತದೆ, ಭಾರತದಲ್ಲಿ ಕೆನೆ ತೆಗೆದು ಮಜ್ಜಿಗೆಯನ್ನು ಮಾಡುವ ಸಾಂಪ್ರದಾಯಕ ವಿಧಾನವಿದೆ. ಇದರಿಂದ ಅತ್ಯುತ್ತಮ ಗುಣ ಮಟ್ಟದ ಮಜ್ಜಿಗೆ ಸಿಗುವುದು ಹಾಗೂ ಮೈ ತಂಪಾಗಿಸುವ ಮಜ್ಜಿಗೆಯೂ ದೊರೆಯುವುದು.
ಬೇಕಾಗುವ ಸಾಮಗ್ರಿ
2 ಕಪ್ ಮೊಸರು
2 ಕಪ್ ನೀರು
ಬ್ಲ್ಯಾಕ್ ಸಾಲ್ಟ್, ಕಲ್ಲುಪ್ಪು
ರೋಸ್ಟ್ ಮಾಡಿದ ಜೀರಿಗೆ ಪುಡಿ 2 ಚಮಚ
1 ಕತ್ತರಿಸಿದ ಹಸಿ ಮೆಣಸು( ಬೇಕಿದ್ದರೆ ಹಾಕಬಹುದು)
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಒಂದು ಪಾತ್ರೆಗೆ ಗಟ್ಟಿ ಮೊಸರು ಹಾಕಿ, ನೀರು ಸೇರಿಸಿ ಚೆನ್ನಾಗಿ ಕಡಿಯಬೇಕು, ಕೈಯಿಂದಲೇ ಈ ರೀತಿ ಮಾಡಬಹುದು, ಈಗೀಗ ಕೆಲವರು ಮಿಕ್ಸರ್ನಲ್ಲಿ ಹಾಕಿಯೂ ಮಾಡುತ್ತಿದ್ದಾರೆ. ಅದರಿಂದ ಬೆಣ್ಣೆ ಬೇರ್ಪಡಿಸಿದರೆ ಮಜ್ಜಿಗೆ ಆಗುತ್ತದೆ.
ಈಗ ಈ ಮಜ್ಜಿಗೆ ನೀರಿಗೆ ಜೀರಿಗೆ ಪುಡಿ, ಕಲ್ಲುಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಮಜ್ಜಿಗೆ ರೆಡಿ.
ಥಟ್ ಅಂತ ಮಜ್ಜಿಗೆ ಮಾಡುವ ರೆಸಿಪಿ
ಬೇಕಾಗುವ ಸಾಮಗ್ರಿ
1 ಚಮಚ ತಾಜಾ ನಿಂಬೆರಸ ಅಥವಾ ವೈಟ್ ವಿನೆಗರ್
1/4 ಲೀಟರ್ ಹಾಲು
ಮಾಡುವ ವಿಧಾನ
ಹಾಲಿಗೆ ನಿಂಬೆರಸ ಅಥವಾ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ 5-10ನಿಮಿಷ ಬಿಟ್ಟರೆ ಮಜ್ಜಿಗೆ ರೆಡಿ.
ಬೇಕಾಗುವ ಸಾಮಗ್ರಿ
2 ಕಪ್ ಮೊಸರು
ಕೊತ್ತಂಬರಿ ಸೊಪ್ಪು
1ಇಂಚಿನಷ್ಟು ಶುಂಠಿ
ರುಚಿಗೆ ತಕ್ಕ ಉಪ್ಪು
ನೀರು
ಮಾಡುವ ವಿಧಾನ:
ನೀವು ಮಿಕ್ಸರ್ಗೆ ಈ ಎಲ್ಲಾ ವಸ್ತುಗಳನ್ನು ತಿರುಗಿಸಿ ಎರಡು ರೌಂಡ್ ತಿರುಗಿಸಿದರೆ ಶುಂಠಿ ಮಜ್ಜಿಗೆ ರೆಡಿ.
ಪುದೀನಾ, ಕೊತ್ತಂಬರಿ ಬೀಜ ಹಾಕಿ ಮಾಡುವ ಮಜ್ಜಿಗೆ
1 ಕಪ್ ಮೊಸರು
2 ಎಲೆ ಪುದೀನಾ ಎಲೆ
1 ಇಂಚಿನಷ್ಟು ದೊಡ್ಡದಿರುವ ಶುಂಠಿ
1/2 ಚಮಚ ಕೊತ್ತಂಬರಿ ಬೀಜ
(ರೋಸ್ಟ್ ಮಾಡಿ, ಪುಡಿ ಮಾಡಿದ್ದು)
ಪುದೀನಾ, ಕೊತ್ತಂಬರಿ ಬೀಜ ಹಾಕಿದ ಮಜ್ಜಿಗೆ
ನೀವು ಮೊದಲು ಮೊಸರು, ಶುಂಠಿ, ಮೊಸರು ಹಾಕಿ ರುಬ್ಬಿಕೊಳ್ಳಿ, ನಂತರ ರೋಸ್ಟ್ ಮಾಡಿ
ಮಾಡಿದ ಕೊತ್ತಂಬರಿ ಬೀಜ ಸೇರಿಸಿ.
ಮಜ್ಜಿಗೆಯನ್ನು ಎಷ್ಟು ಸಮಯದವರೆಗೆ ಬಳಸಬಹುದು?
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವಿರುತ್ತದೆ, ಆದ್ದರಿಂದ ಇದನ್ನು ಹೆಚ್ಚು ಸಮಯ
ಇಟ್ಟರೆ ಹುಳಿ ಹಾಗೂ ಕಹಿ ರಚಿ ಬರುವುದು.' ಆದ್ದರಿಂದ ಮಜ್ಜಿಗೆಯನ್ನು ತುಂಬಾ ಸಮಯ
ಇಟ್ಟು ಬಳಸುವಂತಿಲ್ಲ. ನೀವು ಮಜ್ಜಿಗೆಯನ್ನು ಇಂದು ಮಾಡಿದರೆ ನಾಳೆಯವರೆಗೆ
ಬಳಸಬಹುದು. ಹೆಚ್ಚು ಸಮಯ ಬಳಸಬೇಕೆಂದು ಬಯಸುದ್ದರೆ ಫ್ರಿಡ್ಜ್ನಲ್ಲಿಟ್ಟು 7-14
ದಿನದವರೆಗೆ ಬಳಸಬಹುದು. ಫ್ರೀಝರ್ನಲ್ಲಿ 3 ತಿಂಗಳವರೆಗೆ ಬಳಸಬಹುದು.
ಮಜ್ಜಿಗೆ ಯಾವಾಗ ಹಾಳಾಗಿದೆ ಎಂದು ತಿಳಿಯಬಹುದು?
ತುಂಬಾ ಹುಳಿ ವಾಸನೆ ಬರುತ್ತಿದ್ದರೆ
ದುರ್ವಾಸನೆ
ಬಣ್ಣ ಬದಲಾಗುವುದು
ಮಜ್ಜಿಗೆ ಪ್ರಯೋಜನಗಳು
ದೇಹವನ್ನು ತಂಪಾಗಿಸುತ್ತದೆ
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ
ಮೂಳೆ, ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು
ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ



Click it and Unblock the Notifications
