Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
1 ನಿಮಿಷದಲ್ಲಿ ದೋಸೆ ಇಡ್ಲಿಗೆ ಈ ಚಟ್ನಿ ಮಾಡಬಹುದು..! ಹೇಗೆ ಗೊತ್ತಾ?
ಪ್ರತಿದಿನ ನೀವು ಬೆಳಗ್ಗೆಯ ತಿಂಡಿಗೆ ಯಾವಾಗಲೂ ಒಂದೇ ರೀತಿಯ ಕಾಯಿ ಚಟ್ನಿ ಮಾಡುತ್ತಿದ್ದಿರಾ? ಏಕೆಂದರೆ ಬಹುಪಾಲು ಎಲ್ಲರ ಮನೆಯಲ್ಲೂ ಸುಲಭವಾಗಿ ಕಡಿಮೆ ಸಮಯದಲ್ಲಿ ಕಾಯಿ ಚಟ್ನಿ ಮಾಡುತ್ತಾರೆ. ಹೀಗಾಗಿ ದೋಸೆ, ಇಡ್ಲಿ ಜೊತೆ ಕಾಯಿ ಚಟ್ನಿ ಸಾಮಾನ್ಯವಾಗಿ ಜಾಗ ಪಡೆದಿರುತ್ತೆ.
ಆದ್ರೆ ಎಷ್ಟು ದಿನ ಅಂತ ಅದೇ ಕಾಯಿ ಚಟ್ನಿ ತಿಂಡಿ ಮಾಡೋದು. ಇದಕ್ಕಾಗಿ ಮಸಾಲೆಯುಕ್ತ ಚಟ್ನಿ ಮಾಡಿ ಒಮ್ಮೆ ಪ್ರಯತ್ನಿಸಿ ನೋಡಿ. ಹಾಗಾದರೆ ನೀವು ಮನೆಯಲ್ಲಿ ಮಸಾಲೆ ಚಟ್ನಿ ಮತ್ತು ಟೊಮೆಟೊ ಚಟ್ನಿ ಟ್ರೈ ಮಾಡಿ. ದೋಸೆ ಅಥವಾ ಇಡ್ಲಿ ಮಾಡುವಾಗ ಒಂದೇ ರುಚಿಯಲ್ಲಿ ಚಟ್ನಿ ಮಾಡುವುದಕ್ಕಿಂತ ಭಿನ್ನ ರುಚಿಯ ಚಟ್ನಿ ದೋಸೆ, ಇಡ್ಲಿ ಸೇರಿ ಬ್ರೇಕ್‌ಫಾಸ್ಟ್‌ಗಳ ಸ್ವಾದ ಹೆಚ್ಚಿಸುವುದು. ನೀವು ಇಡ್ಲಿ, ದೋಸೆ ಜೊತೆ ಸವಿಯಲು ಈ ಚಟ್ನಿ ಟ್ರೈ ಮಾಡಿ.

1 ನಿಮಿಷದ ಮಸಾಲೆ ಚಟ್ನಿ ಮಾಡುವುದು ಹೇಗೆ ಎಂದು ತಿಳಿಯಬೇಕೆ? 1 ನಿಮಿಷದ ಮಸಾಲೆಯುಕ್ತ ಚಟ್ನಿ ಪಾಕವಿಧಾನವನ್ನು ಈ ಕೆಳಗೆ ನೀಡಲಾಗಿದೆ. ಅದಕ್ಕೆ ಬೇಕಾಗುವ ವಸ್ತುಗಳೇನು? ಮಾಡುವ ಪಾಕವಿಧಾನ ಇಲ್ಲಿದೆ ನೋಡಿ.
1 ನಿಮಿಷದ ಚಟ್ನಿಗೆ ಅಗತ್ಯವಿರುವ ವಸ್ತುಗಳು:
- ದೊಡ್ಡ ಈರುಳ್ಳಿ - 2
- ಟೊಮ್ಯಾಟೊ - 3
- ಬೆಳ್ಳುಳ್ಳಿ - 5
- ಒಣ ಮೆಣಸು-5
- ಹುಣಸೆಹಣ್ಣು - ನೆಲ್ಲಿಕಾಯಿ ಗಾತ್ರ
- ಉಪ್ಪು - ರುಚಿಗೆ ತಕ್ಕಂತೆ
- ತುಪ್ಪ - 1 ಟೇಬಲ್ಸ್ಪೂನ್
- ಸಾಸಿವೆ - 1/2 ಟೀಸ್ಪೂನ್
- ಉದ್ದಿನಬೇಳೆ- 1/2 ಟೀಸ್ಪೂನ್
- ಕರಿಬೇವಿನ ಎಲೆಗಳು - ಸ್ವಲ್ಪ
ಪಾಕವಿಧಾನ:
ಮೊದಲು ಈರುಳ್ಳಿ ಮತ್ತು ಟೊಮೆಟೊ ಕತ್ತರಿಸಿ. ನಂತರ ಮಿಕ್ಸರ್ ಜಾರ್ ನಲ್ಲಿ
ಕತ್ತರಿಸಿದ ಈರುಳ್ಳಿ, ಟೊಮೆಟೊ, ಮೆಣಸು, ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು
ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ
ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ.
ನಂತರ ರುಬ್ಬಿದ ಚಟ್ನಿಯನ್ನು ಬಾಣಲೆಗೆ ಹಾಕಿ ಅದಕ್ಕೆ ಬೇಕಾದಷ್ಟು ನೀರು ಹಾಕಿ
ಕುದಿಸಿದರೆ 1 ನಿಮಿಷದ ಮಸಾಲೆ ಚಟ್ನಿ ರೆಡಿ.
ಇದರ ಜೊತೆ ದೋಸೆ ಮತ್ತು ಇಡ್ಲಿಗೆ ಬೆಳ್ಳುಳ್ಳಿ ಚಟ್ನಿಯೂ ರುಚಿ ನೀಡಲಿದೆ. ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ ನೋಡಿ
ಬೆಳ್ಳುಳ್ಳಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿ
- ತೆಂಗಿನತುರಿ
- ಬೆಳ್ಳುಳ್ಳಿ
- ಒಣ ಮೆಣಸು
- ಉಪ್ಪು
- ಹುಣಸೆಹಣ್ಣು
- ಒಗ್ಗರಣೆಗೆ ಎಣ್ಣೆ
- ಸಾಸಿವೆ
- ಕರಿಬೇವು
- ಒಣಮೆಣಸು
ಚಟ್ನಿ ತಯಾರಿಯ ವಿಧಾನ
ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಬೆಳ್ಳುಳ್ಳಿ, ಒಣ ಮೆಣಸು ಹಾಕಿ
ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ, ಒಣ ಮೆಣಸು ರೋಸ್ಟ್ ಆಗಬೇಕು.
ನಂತರ ತೆಂಗಿನತುರಿ ಸೇರಿಸಿ ರೋಸ್ಟ್ ಮಾಡಿ, ತೆಂಗಿನ ತುರಿ, ಹುಣಸೆ ಹಣ್ಣು ಸ್ವಲ್ಪ
ಕೆಂಪು ಬಣ್ಣಕ್ಕೆ ತಿರುಗುವಾಗ ಸ್ಟೌವ್‌ನಿಂದ ತೆಗೆಯಿರಿ
ಹುರಿದ ಮಸಾಲೆ ತಣ್ಣಗಾಗಲು ಪ್ಲೇಟ್‌ಗೆ ಹಾಕಿ.
ನಂತರ ಮಿಕ್ಸಿ ಬ್ಲೆಂಡರ್‌ಗೆ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಗಟ್ಟಿಯಾಗಿ
ಅಥವಾ ಸ್ವಲ್ಪ ನೀರು ನೀರಾಗಿ ನಿಮಗೆ ಹೇಗೆ ಬೇಕೋ ಹಾಗೆ ರುಬ್ಬಿ, ನಂತರ ಒಗ್ಗರಣೆ
ಹಾಕಿದರೆ ಇಡ್ಲಿ, ದೋಸೆ ಜೊತೆ ಸವಿಯಲು ಬೆಳ್ಳುಳ್ಳಿ ಚಟ್ನಿ ರೆಡಿ.



Click it and Unblock the Notifications
