Latest Updates
-
ನಿಮ್ಮ ಅತ್ತಿಗೆಗೆ ಈ ಹಾರ್ಟ್ ಟಚಿಂಗ್ ಶಾಯರಿ ಕಳಿಸಿ! ಲವ್ & ಕನೆಕ್ಷನ್ ಡಬಲ್ ಆಗುತ್ತೆ - Happy Holi 2026 -
ಸಿಸ್ಟರ್.. 40ರ ಬಳಿಕ ಪಿಸ್ತಾ ಒಂದು ವರ! ಮೂಳೆ, ಹೃದಯ & ಹಾರ್ಮೋನ್ ಬ್ಯಾಲೆನ್ಸ್.. ಪಿಸ್ತಾನೇ ಏಕೆ ಬೇಕು? -
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ?
ಗಂಡು ಮಗುವಿಗೆ ಹೆಸರಿಡಲು ಶಿವನ 75 ಹೆಸರುಗಳು ಪಟ್ಟಿ ಇಲ್ಲಿದೆ
ಹಿಂದೂ ಧರ್ಮದ ತ್ರಿಮೂರ್ತಿ ದೇವರುಗಳಲ್ಲಿ ಶಿವನು ರಕ್ಷಕನೂ ಹೌದು ವಿನಾಶಕನೂ ಹೌದು. ಶಿವ ಎಂದರೆ ಆದಿಯೋಗಿ. ಎಲ್ಲಾ ಯೋಗಗಳಿಗಿಂತಲೂ ಮೊದಲು ಬಂದವನು. ನಿರಾಕಾರ ಉಪಾಸನೆ ಎಂದರೆ ಅದು ಶಿವನೇ. ಶಿವನೇ ಪರಬ್ರಹ್ಮನೂ ಶಿವನೇ. ಹೀಗೆ ವಿವಿಧ ರೀತಿಯಲ್ಲಿ ಶಕ್ತಿಶಾಲಿ ಆಗಿರುವ ಶಿವನಿಗೆ ಅವನ ಸಾಹಸ, ಶಕ್ತಿಗಳು ಮತ್ತು ಗುಣಗಳಿಗೆ ಅನುಸಾರವಾಗಿ ಹಲವು ಹೆಸರುಗಳಿವೆ.

ಒಂದೊಂದು ಹೆಸರು ಕೂಡ ಶಿವನ ಒಂದೊಂದು ಕಥೆ ಅಥವಾ ಶಿವನ ಮೂಲಗುಣಗಳನ್ನು ಹೇಳುತ್ತದೆ. ಶಿವನ ಭಕ್ತರು ಅನೇಕ. ಶಿವನ ಶಕ್ತಿಗಳಿಗೆ ಮೆಚ್ಚಿಯೋ ನಾಟ್ಯರಾಜನಾಗಿಯೋ, ಗಂಗಾಧರನಾಗಿಯೋ, ವಿಷಕಂಠನಾಗಿಯೋ ಹಲವರಿಗೆ ಶಿವ ಬಹಳ ಪ್ರೀತಿಪಾತ್ರ. ಶಿವ ಭಕ್ತರಿರಲಿ ಅಥವಾ ಶಿವ ಇಷ್ಟನಾಗುವ ಜನರೇ ಇರಲಿ ತಮ್ಮ ಮಕ್ಕಳಿಗೆ ಶಿವನ ಯಾವುದಾದರೂ ಒಂದು ಹೆಸರಿಡಬೇಕು ಎಂಬ ಹಂಬಲ ಇರುತ್ತದೆ. ಇಲ್ಲಿ ಶಿವನ ಹಲವು ಹೆಸರು ಗಳನ್ನು ಅದರ ಅರ್ಥದೊಂದಿಗೆ ನೀಡಿದ್ದೇವೆ.
1. ಅಜ - ಇದು ಶಾಶ್ವತ ಎನ್ನುವ ಅರ್ಥವನ್ನು ಕೊಡುತ್ತದೆ.
2. ಅಭಯ- ಅಭಯ ಎಂದರೆ ಭಯವಿಲ್ಲದವನು ಎಂದರ್ಥ. ಇದು ದುಷ್ಟ ಶಕ್ತಿಗಳಿಂದ ಜಗತ್ತನ್ನು ಕಾಪಾಡುವ ಶಿವನಿಗೆ ಕರೆಯುವ ಹೆಸರಾಗಿದೆ.
3. ಅಚಿಂತ್ಯ - ಊಹೆಗೂ ನಿಲುಕದ ಎಂದರ್ಥ.
4. ಅಲೋಕ- ಪ್ರಪಂಚವನ್ನು ಮೀರಿದ.
5. ಅಮೃತು - ಅನಂತ ಜೀವನ ಮತ್ತು ಅಮರತ್ವದಿಂದ ಆಶೀರ್ವದಿಸಲ್ಪಟ್ಟವನು ಎಂಬ ಅರ್ಥ.
6. ಅನಿಕೇತ್ - ಇದು 'ಜಗತ್ತಿನ ಅಧಿಪತಿ' ಎಂಬ ಅರ್ಥವನ್ನು ನೀಡುತ್ತದೆ.
7. ಆದಿಕಾರ - ಇದು ಜಗತ್ತಿನ ಮೊದಲ ಸೃಷ್ಟಿಕರ್ತನನ್ನು ಸೂಚಿಸುತ್ತದೆ.
8. ಆಯುಧಿ - ತ್ರಿಶೂಲವನ್ನು ತನ್ನ ಏಕೈಕ ಆಯುಧವಾಗಿ ಹಿಡಿದಿರುವ ಭಗವಂತ ಅಂದರೆ ಶಿವ.
9. ಅನಿರುದ್ಧ - ಯಾರಿಂದಲೂ ತಡೆಯಲಾಗದ ಅಥವಾ ಅನಿಯಂತ್ರಿತ ಎನ್ನುವ ಅರ್ಥ.
10. ಆಶುತೋಷ - ಸಂಸ್ಕೃತದಲ್ಲಿ ಅಶು ಎಂದರೆ ವೇಗವಾಗಿ ಮತ್ತು ತೋಷ ಎಂದರೆ ತೃಪ್ತಿ ಎಂದರ್ಥ. ಬೇಡಿದ ವರವನ್ನು ಕೂಡಲೇ ನೀಡುವ ದೇವರು ಎನ್ನುವ ಅರ್ಥ.
11. ಇಶಾನ್ - ಆಡಳಿತ ಮಾಡುವವನು
12. ಈಶ್ವರ - ಶ್ರೇಷ್ಠ ದೇವರು
13. ಬಲವಾನ್ - ಶಕ್ತಿಶಾಲಿ.
14. ಭೈರವ - ಭಯವನ್ನು ದೂರಮಾಡುವ ಮತ್ತು ಅಸಾಧಾರಣ ಶಕ್ತಿಉಳ್ಳವನು.
15. ಭೋಲೇನಾಥ್ - ಕರುಣಾಮಯಿ ಮತ್ತು ಪ್ರತಿಯೊಬ್ಬರ ಕಡೆಗೆ ದಯೆತೋರಿಸುವ ಭಗವಂತ.
16. ಭೂದೇವ - ಭೂಮಿಯ ಅಧಿಪತಿ ಶಿವ ಎನ್ನುವ ಅರ್ಥ.
17. ಬ್ರಹ್ಮಕೃತ್ - ಶಿವ ಕೇವಲ ಸೃಷ್ಟಿಕರ್ತನಲ್ಲ ವೇದಗಳನ್ನು ರಚಿಸಿದವನು ಕೂಡ ಹೌದು. ಬ್ರಹ್ಮಕೃತ್ ಎಂದರೆ ಇದೇ ಅರ್ಥ
18. ಬ್ರಹ್ಮನ್ - ಸಮಯ ಮತ್ತು ಸ್ಥಳದಿಂದ ಸೀಮಿತವಾಗಿಲ್ಲದ ವ್ಯಕ್ತಿ.
19. ಭಾವೇಶ್- ಜಗತ್ತಿನ ಒಡೆಯ
20. ಚಂದ್ರಮೌಳಿ - ಚಂದ್ರನನ್ನು ಕಿರೀಟದ ಹಾಗೆ ಧಾರಣೆ ಮಾಡಿದವನು.
21. ಚಂದ್ರಶೇಖರ- ಇದು ಶಿವನ ಅವತಾರಗಳ ಹೆಸರುಗಳಲ್ಲಿ ಒಂದು. ಇದೇ ಅವತಾರದಲ್ಲಿ ಶಿವನು ಪಾರ್ವತಿಯನ್ನು ಮದುವೆಯಾಗಿರುವುದು ಎಂದು ಹೇಳಲಾಗುತ್ತದೆ.
22. ಚಾರುಲಿಂಗ - ಆಕರ್ಷಕ
23. ಚಾರುವಿಕ್ರಮ - ಅಲೆದಾಡುವ ಯಾತ್ರಿಕರ ಕಾವಲುಗಾರ
24. ಚಿರಂಜೀವಿ- ಸಾವಿಲ್ಲದವನು
25. ಚಂದ್ರಪಾಲ - ಚಂದ್ರನನ್ನು ನಿಯಂತ್ರಿಸುವವನು.
26. ದಯಾಳು - ದಯೆಯುಳ್ಳವನು
27. ದೇವೇಶ್ - ದೇವರು ಮತ್ತು ರಾಜರಿಂದ ಸ್ತುತಿಸಲ್ಪಡುವ ದೇವರು
28. ಧನದೀಪ- ಸಂಪತ್ತಿನ ಅಧಿಪತಿ
29. ಧ್ರುವ - ಅಚಲನಾಗಿರುವವನು
30. ದಿಗಂಬರ - ಆಕಾಶವನ್ನು ತನ್ನ ಬಟ್ಟೆಯನ್ನಾಗಿಸಿದವನು
31. ದುರ್ಜಯ - ಸೋಲಿಸಲಾಗದ ವ್ಯಕ್ತಿ
32. ಧ್ಯಾನದೀಪ - ಶಿವನು ಧ್ಯಾನಸ್ಥ ಸ್ಥಿಗೆ ಹೆಸರಾದ ದೇವರು ಧ್ಯಾನದೀಪ ಎಂದರೆ ಧ್ಯಾನದ ಬೆಳಕು
33. ಗಜೇಂದ್ರ - ಆನೆಗಳ ದೇವರಿಂದ ಆಗುವ ಅಪಾಯಗಳನ್ನು ತಡೆದವನು
34. ಗಂಗಾಧರ - ಗಂಗಾ ನದಿಯ ಅಧಿಪತಿ
35. ಗಿರೀಶ - ಪರ್ವತಗಳ ರಾಜ ಅಥವಾ ದೇವ.
36. ಹರ - ಇದು ಶಿವನ ವಿನಾಶಕಾರಿ ಸ್ವಭಾವವನ್ನು ತೋರಿಸುತ್ತದೆ.
37. ಹರಿಹರ - ಇದು ಶಿವ ಮತ್ತು ವಿಷ್ಣುವಿನ ಏಕತೆಯನ್ನು ಸೂಚಿಸುವ ಹೆಸರು.
38. ಜಗದೀಶ - ಜಗತ್ತಿನ ಒಡೆಯ
39. ಜತಿನ್ - ಜಡೆ ಕೂದಲನ್ನು ಹೊಂದಿದ ವ್ಯಕ್ತಿ ಅಥವಾ ಸಂತ
40. ಜಯಂತ್ - ಜಯಶಾಲಿಯಾದವನು
41. ಕೈಲಾಸ್ - ಕೈಲಾಸ ಪರ್ವತದಲ್ಲಿ ಸ್ಥಿತನಾದ ದೇವರು
42. ಕೈಲಾಶನಾಥ್ - ಕೈಲಾಸ ಪರ್ವತದ ಒಡೆಯ
43. ಕಲಾಧರಾಯ - ಅರ್ಧಚಂದ್ರನನ್ನು ತಲೆಯ ಮೇಲೆ ಕೂರಿಸಿಕೊಂಡವನು.
44. ಕಮಲಾಕ್ಷ - ಕಮಲದ ಕಣ್ಣುಗಳುಳ್ಳ ದೇವರು.
45. ಖಟ್ವಾಂಗಿನ್ - ಶಕ್ತಿಶಾಲಿಯಾದ ಖಂಟ್ವಾಂಗಿನ್ ಕ್ಷಿಪಣಿಯನ್ನು ಚಲಾಯಿಸುವ ದೇವರು
46. ಕಾಂತ - ತೇಜಸ್ವಿಯಾದ ಮತ್ತು ಸುಂದರನಾದ ದೇವರು
47. ಲಲತಾಕ್ಷ - ತನ್ನ ಹಣೆಯ ಮೇಲೆ ಎಲ್ಲವನ್ನೂ ನೋಡುವ ಕಣ್ಣು ಹೊಂದಿರುವವನು.
48. ಲಿಂಗಾಧ್ಯಕ್ಷ - ಗ್ರಹದಲ್ಲಿ ನೆಲೆಸಿರುವ ಎಲ್ಲಾ ಲಿಂಗಗಳ ಅಧಿಪತಿ.
49. ಲೋಕಂಕರ - ಮೂರು ಲೋಕಗಳ ಸೃಷ್ಟಿಗೆ ಕಾರಣನಾದವನು.
50. ಲೋಕಪಾಲ್ - ಪ್ರಪಂಚ ಮತ್ತು ಅದರ ಯೋಗಕ್ಷೇಮವನ್ನು ನೋಡಿಕೊಳ್ಳುವವನು.
51. ಮಹಾಕಾಲ - ಎಲ್ಲಾ ಕಾಲಗಳ ಅಧಿಪತಿ.
52. ಮದನ- ಪ್ರೀತಿಯ ದೇವರು ಎಂದು ಕರೆಯಲ್ಪಡುವವನು.
53. ಮಹಾದೇವ - ಎಲ್ಲರಿಗಿಂತ ಮೇಲಿರುವ ಭಗವಂತ.
54. ಮಹಾಮೃತುಂಜಯ - ಸಾವಿನ ಮೇಲೆ ವಿಜಯಶಾಲಿಯಾಗಿ ಹೊರಹೊಮ್ಮಿದವನು.
55. ಮಹೇಶ್ವರ - ಮಹಾನ್ ದೇವರು.
56. ಮೃತ್ಯುಂಜಯ - ಸಾವನ್ನು ಜಯಿಸಲು ಸಮರ್ಥನಾದ ಭಗವಂತ.
57. ಮಹೇಶ - ಸಂಸ್ಕೃತದಲ್ಲಿ ಮಹಾ ಎಂದರೆ ದೊಡ್ಡ ಅಥವಾ ಶ್ರೇಷ್ಠ ಈಶ ಎಂದರೆ ದೇವರು ಅಥವಾ ಆಡಳಿತಗಾರ ಎಂದರ್ಥ
58. ನಾಗಭೂಷಣ - ಹಾವುಗಳನ್ನು ಆಭರಣವಾಗಿ ಧರಿಸಿದವನು.
59. ನಟರಾಜ - ಶಿವ ತನ್ನ ನೃತ್ಯಕ್ಕೆ ಹೆಸರಾದ ದೇವರು. ನಟರಾಜ ಎಂದರೆ ನೃತ್ಯಗಳ ರಾಜ ಎಂದರ್ಥ.
60. ನೀಲಕಂಠ - ಜಗತ್ತಿಗೆ ಕಂಟಕವಾದ ವಿಷವನ್ನು ಶಿವ ಕುಡಿದು ಜಗತ್ತನ್ನು ಕಾಪಾಡಿದ ಎನ್ನುವ ಕಥೆಯಂತೆ ನೀಲ ಎಂದರೆ ವಿಷ ಮತ್ತು ಕಂಠ ಎಂದರೆ ಗಂಟಲು ಎಂದರ್ಥ. ವಿಷವನ್ನು ಗಂಟಲಲ್ಲಿ ಇಟ್ಟುಕೊಂಡ ದೇವರು ಎನ್ನುವ ಅರ್ಥ ಈ ಹೆಸರಿಗಿದೆ.
61. ನಿತ್ಯಸುಂದರ - ಸೌಂದರ್ಯ ಮತ್ತು ಕಾಂತಿಯಿಂದ ಹೊಳೆಯುವವನು.
62. ನಿರಂಜನ - ಇದರ ಅರ್ಥ ನಿರ್ಮಲವಾದ ಅಥವಾ ಶುದ್ಧ ಎಂಬುದಾಗಿದೆ.
63. ಓಂಕಾರ - ಓಂ ಎನ್ನುವುದು ಭೂಮಿಯನ್ನು ಸೃಷ್ಟಿಸಿದ ಮೂಲಶಬ್ದ ಎನ್ನಲಾಗಿದೆ. ಇದು ವಿಸ್ತಾರ ಮತ್ತು ತೆರೆದುಕೊಳ್ಳುವಿಕೆಯನ್ನು ಸೂಚಿಸುತ್ತದೆ.
64. ಪಾಲನ್ಹಾರ್ - ಎಲ್ಲರನ್ನೂ ರಕ್ಷಿಸುವ ಮತ್ತು ಅದನ್ನು ನೋಡಿಕೊಳ್ಳುವವನು.
65. ಪಂಚವಕ್ತ್ರ - ನೋಡುವ, ಕೇಳುವ, ಅನುಭವಿಸುವ ಮತ್ತು ಎಲ್ಲವನ್ನೂ ತಿಳಿದಿರುವ ಐದು ಮುಖದ ಮನುಷ್ಯ.
66. ಪರಮ - ಪರಮ ಜೀವಿ.
67. ಪರಮಾತ್ಮ - ಮೂರು ಲೋಕಗಳನ್ನು ಸುತ್ತುವ ಆತ್ಮ.
68. ಪರಿವೃದ್ಧ - ಎಲ್ಲರನ್ನೂ ರಕ್ಷಿಸುವವನು.
69. ಪಶುಪತಿ - ಎಲ್ಲಾ ಜೀವಿಗಳನ್ನು ಮುನ್ನಡೆಸುವ ಭಗವಂತ.
70. ಪಿನಾಕಿ - ಸರ್ವೋಚ್ಚ ಧನುಸ್ಸನ್ನು ಹೊಂದಿದವನು.
71. ಪ್ರಣವ - 'ಓಂ' ನ ಅತ್ಯಂತ ಪವಿತ್ರ ಚಿಹ್ನೆಯನ್ನು ಹುಟ್ಟುಹಾಕಿದವನು.
72. ರವಿಲೋಚನ - ಇದರರ್ಥ ಸೂರ್ಯನನ್ನು ನೇತ್ರನಾಗಿ ಹೊಂದಿದ್ದಾನೆ.
73. ರುದ್ರ - ಇದು ಭಗವಾನ್ ಶಿವನ ಭಯಂಕರ ರೂಪವಾಗಿದೆ.
74. ಸದಾಶಿವ - ಇದರರ್ಥ 'ಶಾಶ್ವತ ದೇವರು'.
75. ಯೋಗೇಶ್ - ಯೋಗದ ಒಡೆಯ



Click it and Unblock the Notifications











