Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮುದ್ದು ಮಗಳಿಗೆ ಬಾರ್ಬಿ ಡಾಲ್ ಆಟಿಕೆಯಾಗಿ ಕೊಡಿಸಲೇಬೇಡಿ ಈ ಅಪಾಯಗಳಿವೆ ಗೊತ್ತಾ?
ನೀವು ನಿಮ್ಮ ಮಕ್ಕಳಿಗೆ ಬಾರ್ಬಿ ಡಾಲ್ ಕೊಡಿಸುತ್ತಿದ್ದೀರಾ? ಹಾಗಾದರೆ ಈ ಬಗ್ಗೆ ಆಲೋಚಿಸುವುದರೆ ಒಳ್ಳೆಯದು. ಚೆಂದದ ಬಾರ್ಬಿಯನ್ನು ನೋಡಿದರೆ ಸಾಕು ಮಕ್ಕಳು ಅದು ಬೇಕೆಂದು ತುಂಬಾನೇ ಹಠ ಮಾಡಲಾರಂಭಿಸುತ್ತಾರೆ.ಪೋಷಕರು ಅಷ್ಟೇ ಮಗಳು ಅದರ ಜೊತೆ ಆಟವಾಡುತ್ತಿರುತ್ತಾಳೆ ಎಂದು ಕೊಡಿಸುತ್ತಾರೆ ಕೂಡ, ಆದರೆ ನೀವು ಇನ್ನು ಮುಂದೆ ಈ ವಿಷಯ ತಿಳಿದರೆ ಬಾರ್ಬಿ ಡಾಲ್ ಕೊಡಿಸಲು ಖಂಡಿತ ಮುಂದಾಗಲ್ಲ:
ಬಾರ್ಬಿ ಡಾಲ್ ಕೊಡಿಸುವುದರಿಂದ ಮಕ್ಕಳ ಆಲೋಚನೆ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ಎಂದು ಅಧ್ಯಯನ ವರದಿಗಳು ಹೇಳಿವೆ ಹೇಗೆ ಎಂದು ನೋಡುವುದಾದರೆ:

ಮಕ್ಕಳಲ್ಲಿ ಬಾಡಿ ಇಮೇಜ್ ಪರಿಕಲ್ಪನೆ ಮೂಡಿಸುತ್ತದೆ: ನೀವು ಬಾರ್ಬಿ ಡಾಲ್ ನೋಡಿರಬಹುದು ಅದರ ದೇಹದ ಆಕಾರ ಹುಡುಗಿಯೆಂದರೆ ಹೀಗಿರಬೇಕು ಎನ್ನುವಂತಿರುತ್ತದೆ. ಬಳಕುವ ಮೈ ಮಾಟ, ಆಕರ್ಷಕ ಕೂದಲು, ಹೊಳೆಯುವ ಕಣ್ಣು, ಅದರಲ್ಲೂ ಕಿರಿದಾದ ಸೊಂಟ ಇವೆಲ್ಲ ತುಂಬಾನೇ ಅತ್ಯಾಕರ್ಷಕವಾಗಿರುತ್ತದೆ. ಇದರ ಜೊತೆ ಆಡುವ ಪುಟ್ಟ ಹೆಣ್ಮಗು ತಾನು ಕೂಡ ಬಾರ್ಬಿಯಂತೆಯೇ ಕಾಣಬೇಕೆಂದು ಕನಸು ಕಾಣಲಾರಂಭಿಸುತ್ತಾಳೆ. ಮುಂದೆ ಅವಳ ಮನಸ್ಸಿನ ಮೇಲೆ ಈ ಇಮೇಜ್ ನೆಗೆಟಿವ್ ರೀತಿಯಲ್ಲಿ ಪ್ರಭಾವ ಬೀಳಬಹುದು. ಅವಳು ತೆಳ್ಳಗಿದ್ದು ಅವಳ ಸ್ನೇಹಿತರು ದಪ್ಪಗಿದ್ದರೆ ಅದು ಸೌಂದರ್ಯವಲ್ಲ ಎಂದು ಭಾವಿಸುವಷ್ಟರ ಮಟ್ಟಿಗೆ ತಪ್ಪಾದ ಕಲ್ಪನೆ ಮೂಡಿಸುವುದು.
ನೈಜತೆಯಿಂದ ತುಂಬಾ ದೂರ... ದೂರ
ಬಾರ್ಬಿ ಇಮೇಜ್ ನೈಜತೆಗೆ ಹತ್ತಿರವಾಗಿರಲ್ಲ, ಅದರ ಫ್ಯಾಷನ್ ಸ್ಟೈಲ್ ನಿಜ ಜೀವನಕ್ಕೆ ಸೂಕ್ತವಾದದ್ದು ಅಲ್ಲ, ಅಲ್ಲದೆ ಬಾರ್ಬಿ ಜೊತೆ ಆಡುತ್ತಾ ಮಗಳು ತುಂಬಾ ಚಿಕ್ಕ ಪ್ರಾಯದಲ್ಲಿ ಮೇಕಪ್ ಕಡೆ ತುಂಬಾನೇ ಆಸಕ್ತಿ ಬೆಳೆಸಿಕೊಳ್ಳುತ್ತಾಳೆ.
ಬಾರ್ಬಿಯನ್ನು ಅಷ್ಟೇನು ಬುದ್ಧಿವಂತೆಯಲ್ಲ ಎಂಬಂತೆ ಬಿಂಬಿಸಲಾಗುವುದು
ಬಾರ್ಬಿ ಕತೆಗಳಲ್ಲಿಯೂ ಅಷ್ಟೇ ಆಕೆಯ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆಯೇ ಹೊರತು ಆಕೆಯ ಬುದ್ಧಿವಂತಿಕೆಗೆ ನೀಡಲಾಗುವುದು. ಆಕೆ ಸದಾ ತನ್ನ ಪುರುಷ ಸಹೋದ್ಯೋಗಿಯಿಂದ ಸಹಾಯ ಕೇಳುವಂತೆಯೇ ಚಿತ್ರ-ಕತೆ ಹೆಣಿಯಲಾಗಿರುತ್ತದೆ.
ವರ್ಣ ಬೇಧದ ಬಗ್ಗೆ ಮಕ್ಕಳ ತಲೆಯಲ್ಲಿ ತುಂಬಲಾಗುವುದು
ಬಾರ್ಬಿ ಡಾಲ್‌ಗಳು ಬೆಳ್ಳಗೆ ಇರುತ್ತದೆ. ಬೆಳಗ್ಗೆ ಇದ್ದರೆ ಮಾತ್ರ ಸೌಂದರ್ಯ, ಕಪ್ಪು ಸೌಂದರ್ಯವಲ್ಲ ಎಂದು ವರ್ಣ ಬೇಧದ ಬಗ್ಗೆ ಮಕ್ಕಳ ತಲೆಯಲ್ಲಿ ತುಂಬಲಾಗುವುದು.
ಮಕ್ಕಳ ವಯಸ್ಸಿಗೂ ಅದು ಸೂಕ್ತವಲ್ಲ
ಬಾರ್ಬಿ ಡಾಲ್ ಅನ್ನು ಮಕ್ಕಳಿಗೆ ಯಾಕೆ ಪ್ರಮುಖ ಆಟಿಕೆಯಾಗಿ ನೀಡುತ್ತಾರೋ ಗೊತ್ತಿಲ್ಲ, ಬಾರ್ಬಿ ಡಾಲ್ ಡ್ರೆಸ್ಸಿಂಗ್ ಮಾಡುವ ಉಬ್ಬಿದ ಎದೆ, ಆಕರ್ಷಕ ಸೊಂಟ ಇವೆಲ್ಲಾ ಮಕ್ಕಳಲ್ಲಿ ಬೇಡದ ಪರಿಕಲ್ಪನೆ ಮೂಡಿಸುವಂತಿದೆ. ಆದ್ದರಿಂದ ಮಕ್ಕಳಿಗೆ ಬಾರ್ಬಿ ಡಾಲ್ ಬದಲಿಗೆ ಇತರ ಆಟಿಕೆಗಳನ್ನು ನೀಡುವುದೇ ಸೂಕ್ತ, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications
