Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಮಗು ಬೇಕೆನ್ನುವವರು, ಈಗ ಬೇಡ ಎಂದು ಹೇಳುವವರು ಈ ಓವ್ಯೂಲೇಷನ್ ಸೈಕಲ್ ತಿಳಿದರೆ ಒಳ್ಳೆಯದು
ಮುಟ್ಟಿನ ಚಕ್ರದ ಬಗ್ಗೆ ಮದುವೆಗೆ ಮೊದಲು ಹೆಣ್ಮಕ್ಕಳು ಅಷ್ಟಾಗಿ ತಲೆ ಕೆಡಿಸಿಕೊಳ್ಳಲ್ಲ, ಕೆಲವರಿಗೆ ಹಾರ್ಮೋನ್‌ಗಳ ಸಮಸ್ಯೆಯಿಂದಾಗಿ ನಿಯಮಿತ ಮುಟ್ಟು ಆಗಲ್ಲ, ಅಂಥವರು ಅನಿಯಮಿತ ಮುಟ್ಟಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಾರೆ.
ಅದೇ ನಿಯಮಿತ ಮುಟ್ಟು ಆಗುತ್ತಿದ್ದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ, ಇನ್ನು ಓವ್ಯೂಲೇಷನ್ ಅಂದರೆ ಅಂಡಾಣು ಉತ್ಪತ್ತಿ ಬಗ್ಗೆ ಅಲೋಚನೆ ಕೂಡ ಮಾಡಲ್ಲ. ಅದೇ ಮದುವೆ ಬಳಿಕ ಈ ಓವ್ಯೂಲೇಷನ್ ಸೈಕಲ್ ಅಂದರೆ ಅಂಡಾಣು ಉತ್ಪತ್ತಿ ಬಗ್ಗೆ ಗೊತ್ತಿರುವುದು ತುಂಬಾನೆ ಮುಖ್ಯವಾಗಿರುತ್ತದೆ.

ಮಗು ಬೇಕೆಂದರೂ, ಮಗು ಬೇಡ ಅಂತಿದ್ದರೂ ಇದರ ಬಗ್ಗೆ ತಿಳಿದಿರಲೇಬೇಕು
ಮದುವೆಯ ಬಳಿಕ ಕೆಲವರು ಬೇಗನೆ ಗರ್ಭಧಾರಣೆಯಾದರೆ ತೊಂದರೆಯಿಲ್ಲ ಅಂತಿದ್ದರೆ, ಇನ್ನು ಕೆಲವರು ಇನ್ನು ಕೆಲವು ವರ್ಷ ಬೇಡ್ವೆ ಬೇಡ, ಮೊದಲು ಸೆಟ್ಲ್ ಆಗಬೇಕು, ನಂತರ ಮಗು-ಮಕ್ಕಳು ಅಂತ ನೋಡೋಣ ಎಂದಿರುತ್ತಾರೆ. ಇನ್ನು ಕೆಲ ದಂಪತಿ ಕೆಲಸದ ಕಾರಣದಿಂದ ದೂರ-ದೂರ ಇರುತ್ತಾರೆ, ತಿಂಗಳಿನಲ್ಲಿ ಕೆಲವು ದಿನಗಳಷ್ಟೇ ಜೊತೆಗೊರುತ್ತಾರೆ ಅಥವಾ ವರ್ಷದಲ್ಲಿ ಕೆಲ ಸಮಯವಷ್ಟೇ ಜೊತೆಗಿರುತ್ತಾರೆ, ಇವರು ಕೂಡ ಈ ಅಂಡಾಣು ಉತ್ಪತ್ತಿ ಬಗ್ಗೆ ತಿಳಿದರೆ ಮಗುವನ್ನು ಪಡೆಯಲು ಸಾಧ್ಯವಾಗುವುದು.
ವರ್ಷಗಳಾಯ್ತು ನಮಗ್ಯಾಕೆ ಮಕ್ಕಳಾಗಿಲ್ಲ ಎಂದು ಚಿಂತೆ ಮಾಡುತ್ತಿರುವವರು ಈ ಮುಟ್ಟಿನ ಚಕ್ರ ಹಾಗೂ ಅಂಡಾಣು ಉತ್ಪತ್ತಿ ಬಗ್ಗೆ ತಿಳಿದಿದ್ದರೆ ಒಳ್ಳೆಯದು. ಏಕೆಂದರೆ ಪತಿ-ಪತ್ನಿ ದೈಹಿಕವಾಗಿ ಒಂದಾದ ತಕ್ಷಣ ಮಗುವಾಗುತ್ತದೆ ಎಂಬುವುದು ತಪ್ಪು ಕಲ್ಪನೆಎ , ಅವಳಲ್ಲಿ ಅಂಡಾಣು ಉತ್ಪತ್ತಿಯಾಗುವ ಸಮಯದಲ್ಲಿ ವೀರ್ಯಾಣು ಸೇರಿದರೆ ಮಾತ್ರ ಮಕ್ಕಳಾಗುವುದು, ಇಲ್ಲದಿದ್ದರೆ ಮಕ್ಕಳಾಗಲ್ಲ.
ಯಾವಾಗ ಅಂಡಾಣು ಉತ್ಪತ್ತಿಯಾಗುತ್ತದೆ?
ಯಾವಾಗ ಅಂಡಾಣು ಉತ್ಪತ್ತಿಯಾಗುತ್ತದೆ ಎಂದು ತಿಳಿಯಲು ಮುಟ್ಟಾದ ದಿನವನ್ನು ಲೆಕ್ಕವಿಡಬೇಕು. ಅನಿಯಮಿತ ಮುಟ್ಟಾಗುತ್ತಿದ್ದರೆ ಯಾವಾಗ ಅಂಡಾಣು ಉತ್ಪತ್ತಿಯಾಗುವುದು ಎಂದು ಹೇಳುವುದು ಕಷ್ಟ, ಅದೇ ಪ್ರತಿ ತಿಂಗಳು ಮುಟ್ಟಾಗುತ್ತಿದ್ದರೆ ಮುಟ್ಟಾದ 14ನೇ ದಿನಕ್ಕೆ ಅಂಡಾಣು ಉತ್ಪತ್ತಿಯಾಗುತ್ತದೆ, ಈ ಸಮಯದಲ್ಲಿ ವೀರ್ಯಾಣುವಿನ ಸಂಪರ್ಕಕ್ಕೆ ಅಂಡಾಣು ಬಂದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚು.
ಅಂಡಾಣು ಉತ್ಪತ್ತಿಯಾಗುವ ಸಮಯದಲ್ಲಿ ವೀರ್ಯಾಣು ಇದ್ದರೆ ಅಂದರೆ ಅದಕ್ಕಿಂತ ವಾರದ ಮುಂಚೆ ಲೈಂಗಿಕ ಸಂಪರ್ಕ ನಡೆದಿದ್ದರೂ ವೀರ್ಯಾಣು ಜೀವಂತವಾಗಿರುತ್ತದೆ, ಅವಾಗ ಅಂಡಾಣು ಬಿಡುಗಡೆಯಾದಾಗ ಅಂಡಾಣುವಿನ ಸಂಪರ್ಕಕ್ಕೆ ಬರುವ ವೀರ್ಯಾಣುವಿನಿಂದಾಗಿ ಗರ್ಭ ನಿಲ್ಲುತ್ತದೆ. ನೀವು ಮುಟ್ಟಾದ ದಿನದಿಂದ 10-15 ದಿನದದೊಳಗಿನ ಸಮಯವನ್ನು ಫಲವತ್ತತೆಯ ಸಮಯವೆಂದು ಪರಿಗಣಿಸಬಹುದು. ಮಗು ಬೇಕೆಂದು ಬಯಸುವವರು ಈ ಸಮಯದಲ್ಲಿ ಲೈಂಗಿಕ ಸಂಪರ್ಕಕ್ಕೆ ಬಂದರೆ ಗರ್ಭಧಾರಣೆಯಾಗುವುದು.
ಅಂಡಾಣು ಉತ್ಪತ್ತಿಯ ಸಮಯದಲ್ಲಿ ದೇಹದಲ್ಲಿ ಲಕ್ಷಣಗಳು ಕಂಡು ಬರುತ್ತದೆ:
ದೇಹದ ಉಷ್ಣಾಂಶ ಅಧಿಕವಿರುತ್ತದೆ
ಅಂಡಾಣು ಉತ್ಪತ್ತಿ ಸಮಯದಲ್ಲಿ ದೇಹದಲ್ಲಿ ಉಷ್ಣಾಂಶ ಸಾಮಾನ್ಯಗಿಂತ ಅಧಿಕವಿರುತ್ತದೆ, ಅಂಡಾಣು ಉತ್ಪತ್ತಿಯಾಗುವ2-3 ದಿನದ ಮುನ್ನವೇ ಮೈ ಉಷ್ಭಾಂಶ ಹೆಚ್ಚಾಗುವುದು.
ಬಿಳುಪು ಹೋಗುವುದರಲ್ಲಿ ವ್ಯತ್ಯಾಸವಾಗುವುದು
ಬಿಳುಪು ಹೋಗುವುದು ಸಹಜ ಪ್ರಕ್ರಿಯೆ, ಸಾಮಾನ್ಯವಾಗಿ ಸ್ವಲ್ಪ ಗಟ್ಟಿಯಾದ ಬಿಳುಪು ಹೋಗುವುದು, ಆದರೆ ಈ ಸಮಯದಲ್ಲಿ ಬಿಳುಪು ಮೊಟ್ಟೆಯ ಬಿಳಿಯಂತೆ ಕ್ಲಿಯರ್ ಆಗಿರುತ್ತದೆ.
ಸ್ತನಗಳಲ್ಲಿ ನೋವು ಕಾಣಿಸುವುದು
ಸ್ತನಗಳು ಬಿಗಿದಂತೆ ಅನಿಸುವುದು, ನೋವು ಉಂಟಾಗುವುದು, ಸಾಮಾನ್ಯವಾಗಿ ಈ ರೀತಿಯಾದಾಗ ಮುಟ್ಟು ಸಮೀಪಿಸುತ್ತಿದೆ ಎಂದು ಭಾವಿಸುತ್ತಾರೆ, ಅದರೆ ಅಂಡಾಣು ಉತ್ಪತ್ತಿ ಸಮಯವಾಗಿರುತ್ತದೆ.
ಹೊಟ್ಟೆ ಉಬ್ಬಿದಂತಾಗುವುದು
ಅಂಡಾನು ಉತ್ಪತ್ತಿ ಸಮಯದಲ್ಲಿ ಹೊಟ್ಟೆ ಉಬ್ಬಿದಂತಾಗುವುದು, ಅಲ್ಲದೆ ಕಿಬ್ಬೊಟ್ಟ ಸ್ವಲ್ಪ ಊದಿ ಕೊಂಡಂತೆ ಅನಿಸುವುದು.
ಇತರ ಲಕ್ಷಣಗಳು
ಈ ಸಮಯದಲ್ಲಿ ಲಯಂಗಿಕ ಬಯಕೆ ಅಧಿಕವಿರುತ್ತದೆ
ಸ್ವಲ್ಪ ರಕ್ತಸ್ರಾವದಂತೆ ಕೂಡ ಕಂಡು ಬರುವುದು
ಅಲ್ಲದೆ ಜನನೇಂದ್ರೀಯ ಭಾಗ ಇತರ ಸಮಯಕ್ಕಿಂತ ಮೃದುವಾದಂತೆ ಅನಿಸುವುದು.
ಇನ್ನು ಓವ್ಯೂಲೇಷನ್ ಕಿಟ್ ಅಂತ ಸಿಗುವುದು, ಅದನ್ನು ಬಳಸಿ ಕೂಡ ಅಂಡಾಣು ಉತ್ಪತ್ತಿ ಸಮಯ ತಿಳಿಯಬಹುದು.
ಈ ಅಂಡಾಣು ಉತ್ಪತ್ತಿ ಬಗ್ಗೆ ತಿಳಿದರೆ ಮಗು ಬೇಕೆಂದು ಬಯಸುವವರು ಈ ಸಮಯದಲ್ಲಿ ತಿನ್ನುವುದು ಒಳ್ಳೆಯದು, ಬೇಡವೆಂದು ಬಯಸುವರು ಈ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡದಿದ್ದರೆ ಹೆಚ್ಚು ಸುರಕ್ಷಿತ.



Click it and Unblock the Notifications