Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹೈ ಹೀಲ್ಡ್‌ನಲ್ಲಿ ಮಿಂಚಿದ ಡಿಪ್ಪಿ: ಗರ್ಭಾವಸ್ಥೆಯಲ್ಲಿ ಹೈ ಹೀಲ್ಡ್ ಸುರಕ್ಷತೇ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ, ಇತ್ತೀಚೆಗೆ ಅವರೊಂದು ಈವೆಂಟ್‌ಗೆ ಬಂದಿದ್ದರು, ತಾಯಿ ಕಳೆಯ ದೀಪಿಕಾ ಆಕರ್ಷಕವಾಗಿ ಡ್ರೆಸ್ಸಿಗ್ ಮಾಡಿದ್ದರು, ಜೊತೆಗೆ ಹೈ ಹೀಲ್ಡ್ ಚಪ್ಪಲಿ ಧರಿಸಿದ್ದರು, ಅದರಲ್ಲಿಯೂ ಪಾಯಿಂಟೆಡ್ ಹೀಲ್ ಚಪ್ಪಲಿ ಧರಿಸಿದ್ದರು.
ಅವರು ನಡೆದಾಡುವಾಗ ಅಲ್ಲಿದ್ದ ದೊಡ್ಡ-ದೊಡ್ಡ ಸೆಲೆಬ್ರಿಟಿಗಳು ಕೂಡ ಸ್ಟೇಜ್ ಇಳಿಯಲು ಕೈ ಹಿಡಿದು ಸಹಾಯ ಮಾಡಿದ್ದರು. ಸೆಲೆಬ್ರಿಟಿಗಳನ್ನು ನೋಡಿ ಅವರ ಫ್ಯಾನ್ಸ್ ಫಾಲೋ ಮಾಡುವ ಸಾಧ್ಯತೆ ಹೆಚ್ಚು, ದೀಪಿಕಾ ಗರ್ಭಿಣಿ, ಆಕೆ ಹೈ ಹೀಲ್ಡ್ ಚಪ್ಪಲಿ ಧರಿಸಿದ್ದಾಳೆ, ನಾನೂ ಧರಿಸುತ್ತೇನೆ ಎಂದು ನೀವು ಕೂಡ ಹೈ ಹೀಲ್ಡ್ ಚಪ್ಪಲಿ ಧರಿಸುವ ಮುನ್ನ ಈ ಅಂಶಗಳತ್ತ ಗಮನಹರಿಸಿ:

ಕಂಫರ್ಟ್ ತುಂಬಾನೇ ಮುಖ್ಯ
ಗರ್ಭಿಣಿಯಾಗಿರಿ ಅಥವಾ ಇಲ್ಲದಿರಿ ಆದರೆ ನೀವು ಹೈ ಹೀಲ್ಡ್ ಚಪ್ಪಲಿ ಧರಿಸುತ್ತಿದ್ದೀರಿ ಎಂದಾದರೆ ಕಂಫರ್ಟ್ ತುಂಬಾನೇ ಮುಖ್ಯ, ಬೀಳದಂತೆ ಜಾಗ್ರತೆ ವಹಿಸಬೇಕು, ನಡೆದಾಡುವಾಗ ಒಂದಿಷ್ಟು ಸ್ಲಿಪ್ ಆದರೂ ಬಿದ್ದು ಬಿಡುತ್ತೇವೆ, ಗರ್ಭಿಣಿಯರು ಬಿದ್ದರೆ ತುಂಬಾನೇ ಕಷ್ಟ, ಆದ್ದರಿಂದ ಗರ್ಭಿಣಿಯರು ಹೈ ಹೀಲ್ಡ್ ಧರಿಸುವ ಸಾಹಸ ಬೇಡ. ಸೆಲೆಬ್ರಿಟಿಗಳಿಗೆ ಅವರು ಒಂದೊಂದು ಹೆಜ್ಜೆ ಇಡುವಾಗ ಸಹಾಯ ಮಾಡಲು ಸುತ್ತ ಜನ ಇರುತ್ತಾರೆ, ಅಲ್ಲದೆ ಅವರು ದಿನವಿಡೀ ಧರಿಸಲ್ಲ, ಆ ಕಾರ್ಯಕ್ರಮ ಮುಗಿದ ತಕ್ಷಣ ತಮಗೆ ಕಂಫರ್ಟ್ ಆದ ಚಪ್ಪಲಿ ಧರಿಸುತ್ತಾರೆ, ಹಾಗಾಗಿ ಗರ್ಭಿಣಿಯರೇ ಸೆಲೆಬ್ರಿಟಿಗಳನ್ನು ನೋಡಿ ನಿವು ಹೈ ಹೀಲ್ಡ್ ಧರಿಸಲು ಹೋಗಬೇಡಿ.
ಗರ್ಭಿಣಿಯರು ಹೈ ಹೀಲ್ಡ್ ಚಪ್ಪಲಿ ಧರಿಸಿದರೆ ದೇಹದ ಮೇಲಾಗುವ ಪರಿಣಾಮ
ಗರ್ಭಿಣಿಯರು ಹೈಹೀಲ್ಡ್ ಚಪ್ಪಲಿ ಧರಿಸಿದಾಗ ಇದರಿಂದ ಕಾಲುಗಳಲ್ಲಿ ಸ್ನಾಯು ಸೆಳೆತ, ಬೆನ್ನು ನೋವು, ಸೊಂಟ ನೋವು ಉಂಟಾಗುವುದು. ಪೆಲ್ವಿಕ್ ಸ್ಬಾಯುಗಳು ಮುಂದೆಕ್ಕೆ ಬಾಗುವುದು, ಹೀಗಾಗಿ ಬೆನ್ನುನೋವು, ಸೊಂಟ ನೋವು ಉಂಟಾಗುವುದು, ಕಾಲುಗಳಲ್ಲಿ ನೋವು ಕಂಡು ಬರುವುದು ಆದ್ದರಿಂದ ಗರ್ಭಿಣಿಯರಿಗೆ ಹೈ ಹೀಲ್ಡ್ ಚಪ್ಪಲಿ ಒಳ್ಳೆಯದಲ್ಲ.
ಗರ್ಭಧಾರಣೆಯಾದಾಗ ದೇಹದಲ್ಲಿ ಆಗುವ ಬದಲಾವಣೆಗಳು
ಗರ್ಭಧಾರಣೆಯಾದಾಗ ದೇಹದಲ್ಲಿ ಮೈ ತೂಕ ಹೆಚ್ಚಾಗುವುದು, ಕೆಲವರಿಗೆ ಕಾಲುಗಳಲ್ಲಿ ಊತ ಕಂಡು ಬರುವುದು, ವೇಗವಾಗಿ ನಡೆದಾಡಲು ಕಷ್ಟವಾಗುವುದು, ಈ ಸಮಯದಲ್ಲಿ ಹೈ ಹೀಲ್ಡ್ ಚಪ್ಪಲಿ ಧರಿಸಿದರೆ ದೇಹ ಬ್ಯಾಲೆನ್ಸ್ ತಪ್ಪುವ ಸಾಧ್ಯತೆ ಹೆಚ್ಚು ಹಾಗಾಗಿ ಗರ್ಭಾವಸ್ಥೆಯಲ್ಲಿ ಹೈ ಹೀಲ್ಡ್ ಚಪ್ಪಲಿ ಧರಿಸುವುದು ಒಳ್ಳೆಯದಲ್ಲ.
ಗರ್ಭದ ಮೇಲೆ ಹೆಚ್ಚು ಒತ್ತಡ ಉಂಟಾಗುವುದು
ನಾವು ಹೈ ಹೀಲ್ಡ್ ಚಪ್ಪಲಿ ಧರಿಸಿದಾಗ ನಮ್ಮ ದೇಹ ಮುಂದೆಕ್ಕೆ ಬಾಗುವುದು, ಇದರಿಂದ ಗರ್ಭದ ಮೇಲೆ ಒತ್ತಡ ಉಂಟಾಗುವುದು, ಇದರಿಂದಾಗಿ ಕಾಲುಗಳಲ್ಲಿ ತುಂಬಾನೇ ನೋವುಂಟಾಗುವುದು.
ಆರೋಗ್ಯ ತಜ್ಞರ ಸಲಹೆ ಪಡೆಯದೆ ಹೈ ಹೀಲ್ಡ್ ಧರಿಸಬೇಡಿ
ಸೆಲೆಬ್ರಿಟಿಗಳಿಗೆ ಪ್ರತಿಯೊಂದು ವಿಷಯದಲ್ಲಿಯೂ ಎಕ್ಸ್‌ಪರ್ಟ್ ಇರುತ್ತಾರೆ, ಅಲ್ಲದೆ ಅವರು ಬಳಸುವ ದುಬಾರಿ ಚಪ್ಪಲಿ ಕಾಲು ನೋವು ಉಂಟಾಗದಂತೆ ಡಿಸೈನ್ ಮಾಡಲಾಗಿರುತ್ತದೆ, ಆದರೆ ಅವರನ್ನು ನೋಡಿ ನಾವು ಗರ್ಭಧಾರಣೆಯಲ್ಲಿ ಹೀಲ್ಡ್ ಧರಿಸಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಒಂದು ವೇಳೆ ಹೈ ಹೀಲ್ಡ್ ಧರಿಸಿದರೆ ತುಂಬಾ ಹೊತ್ತು ನಿಂತುಕೊಳ್ಳಬಾರದು
ಫ್ಯಾಷನ್ ಹೆಸರಿನಲ್ಲಿ ಹೈ ಹೀಲ್ಡ್ ಚಪ್ಪಲಿ ಧರಿಸಿದರೆ ನೀವು ತುಂಬಾ ಹೊತ್ತು ನಿಲ್ಲಬಾರದು, ಹೆಚ್ಚು ಹೊತ್ತು ನಿಂತರೆ ಕಾಲುಗಳಲ್ಲಿ ನೋವು ಕಂಡು ಬರುವುದು. ಗರ್ಭಿಣಿಯರು ಆದಷ್ಟೋ ಫ್ಲ್ಯಾಟ್ ಚಪ್ಪಲಿ ಧರಿಸಬೇಕು. ಈ ಸಮಯದಲ್ಲಿ ಫ್ಯಾಷನ್‌ಗಿಂತ ತಾಯಿ ಮಗುವಿನ ಆರೋಗ್ಯ ಮುಖ್ಯ.



Click it and Unblock the Notifications
