Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರು ಸಹಜ ಹೆರಿಗೆ ಯಾವ ಸಮಯದಲ್ಲಿ ಯೋಗಾಭ್ಯಾಸ ಮಾಡಬೇಕು?
ಗರ್ಭಿಣಿಯರು ಯೋಗ ಮಾಡುವುದರಿಂದ ಗರ್ಭಾವಸ್ಥೆಯಲ್ಲಿ ಕಾಡುವ ಬಿಪಿ, ಶುಗರ್ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು, ಅಲ್ಲದೆ ಸಹಜ ಹೆರಿಗೆಗೆ ಈ ಯೋಗಾಸನಗಳು ಸಹಾಯ ಮಾಡುತ್ತದೆ, ಹಾಗಾಗಿ ತುಂಬಾ ಗರ್ಭಿಣಿಯರು ಎಕ್ಸ್‌ಪರ್ಟ್ ಬಳಿಯ ಸಲಹೆ ಸೂಚನೆಯಂತೆ ಯೋಗಾಭ್ಯಾಸ ಮಾಡುತ್ತಾರೆ.
ಈ ಯೋಗವನ್ನು ಗರ್ಭಿಣಿಯಾದ ಬಳಿಕ ಯಾವಾಗ ಪ್ರಾರಂಭಿಸಬೇಕು, ಯಾವ ಮುನ್ನೆಚ್ಚರಿಕೆವಹಿಸಬೇಕು ಎಂದು ನೋಡೋಣ ಬನ್ನಿ:

ಮೊದಲ ತ್ರೈ ಮಾಸಿಕದಲ್ಲಿ ಯೋಗ
ಮೊದಲ ತ್ರೈ ಮಾಸಿಕದಲ್ಲಿ ತುಂಬಾ ಯೋಗಾಭಂಗಿಗಳನ್ನು ಮಾಡಬಾರದು. ಈ ಸಮಯದಲ್ಲಿ ವೈದ್ಯರು ಕೂಡ ಹೆಚ್ಚು ಓಡಾಡಬೇಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸೂಚಿಸುತ್ತಾರೆ. ಹಾಗಾಗಿ ಈ ಅವಧಿಯಲ್ಲಿ ಯಾವುದೇ ವ್ಯಾಯಾಮ ಅಥವಾ ಕಠಿಣ ಯೋಗಾ ಭಂಗಿಗಳನ್ನು ಅಭ್ಯಾಸ ಮಾಡದಿರುವುದು ಒಳ್ಳೆಯದು, ಇಲ್ಲಾ ನಾನು ಮಾಡಿದ್ದೇನೆ ಎಂದು ಕೆಲವರು ಹೇಳಬಹುದು, ವ್ಯಕ್ತಿಯಿಂದ ವ್ಯಕ್ತಿಗೆ ಶರೀರದ ಆರೋಗ್ಯ ಭಿನ್ನವಾಗಿರುತ್ತದೆ.ಆದ್ದರಿಂದ ಈ ಅವಧಿಯಲ್ಲಿ ಆದಷ್ಟೂ ಸುರಕ್ಷತೆ ಕಡೆಗೆ ಗಮನಹರಿಸಬೇಕು.
ಈ ಸಮಯದಲ್ಲಿ ಧ್ಯಾನ, ನಾಡಿ ಶುದ್ಧಿಯಂಥ ವ್ಯಾಯಾಮ ಮಾಡಬಹುದು ಆದರ ಕಪಾಲಭಾತಿ ಈ ಬಗೆಯ ಉಸಿರಾಟದ ವ್ಯಾಯಾಮ ಮಾಡುವಂತಿಲ್ಲ. ಸ್ವಂತವಾಗಿ ಏನನ್ನೂ ಮಾಡಿದಿರಿ, ಯೋಗಾ ಎಕ್ಸ್‌ಪರ್ಟ್ ಇದರ ಬಗ್ಗೆ ಸಲಹೆ ನೀಡುತ್ತಾರೆ, ಅದನ್ನಷ್ಟೇ ಪಾಲಿಸಿ, ಟಿವಿ ನೋಡಿ, ಯೂಟ್ಯೂಬ್ ನೋಡಿ ಯೋಗಾ ಮಾಡಲು ಹೋಗದಿರಿ.
ಎರಡನೇ ತ್ರೈ ಮಾಸಿಕದಲ್ಲಿ
ಎರಡನೇ ತ್ರೈ ಮಾಸಿಕದಲ್ಲಿ ಯೋಗಾಭ್ಯಾಸ ಪ್ರಾರಂಭಿಸಬಹುದು, ಈ ಸಮಯದಲ್ಲಿ ವಾಂತಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುತ್ತದೆ, ಈ ಅವಧಿಯಲ್ಲಿ ಟ್ವಿಸ್ಟ್ ಮಾಡಬೇಡಿ, ಈ ಸಮಯದಲ್ಲಿ ಏನು ಮಾಡಬೇಕು ಎಂಬುವುದನ್ನು ಕೂಡ ವೈದ್ಯರನ್ನು ಕೇಳಿಯೇ ಮಾಡಬೇಕು.
ಮೂರನೇ ತ್ರೈ ಮಾಸಿಕದಲ್ಲಿ ಯೋಗ
ಈ ಸಮಯದಲ್ಲಿ ಬಿಪಿ, ಮಧುಮೇಹದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು ಹಾಗಾಗಿ ಈ ಅವಧಿಯಲ್ಲಿ ಅಧಿಕ ತಕ್ಕ ಯೋಗಾಭ್ಯಾಸ ಮಾಡಿಸುತ್ತಾರೆ, ಅಲ್ಲದೆ ಸಹಜ ಹೆರಿಗೆಗೆ ಕೂಡ ಕೆಲವೊಂದು ಭಂಗಿಗಳಿವೆ ಅದನ್ನು ಯೋಗಾ ಪರಿಣಿತರ ಸಲಹೆಯಂತೆ ಮಾಡಬಹುದು.
ಗರ್ಭಿಣಿಯರು ಎಲ್ಲಾ ಸಮಯದಲ್ಲಿ ಟ್ರೈ ಮಾಡಬಹುದಾದ ಸುರಕ್ಷಿತ ಯೋಗಾಭಂಗಿಗಳು
ಚಿಟ್ಟೆಯ ಪೋಸ್
ಬೆಕ್ಕು -ಹಸುವಿನ ಪೋಸ್
ವಜ್ರಾಸನ
ಮಾಲಾಸನ



Click it and Unblock the Notifications
