Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಐವಿಎಫ್ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಈ ಪ್ರಶ್ನೆಗಳಿಗೆ ಸ್ತ್ರೀ ರೋಗ ತಜ್ಞೆ ನೀಡಿದ ಮಾಹಿತಿ
ಎಷ್ಟೋ ಮಕ್ಕಲಿಲ್ಲದ ದಂಪತಿ ಬಾಳಲ್ಲಿ ದೊಡ್ಡ ಆಶಾ ಕಿರಣವೆಂದರೆ ಐವಿಎಫ್. ಎಷ್ಟೋ ದಂಪತಿ ಮಕ್ಕಳಿಲ್ಲದೆ ವರ್ಷಗಟ್ಟಲೆ ಕಾದು , ಎಷ್ಟೋ ಚಿಕಿತ್ಸೆ ಮಾಡಿ ಮಕ್ಕಳು ಆಗದೇ ಇದ್ದಾಗ ಕೊನೆಗೆ ಮೊರೆ ಹೋಗುವುದು ಐವಿಎಫ್, ಎಷ್ಟೋ ಕುಟುಂಬಗಳನ್ನು ಬೆಳಗಿರುವುದು ಈ ಐವಿಎಫ್ ತಂತ್ರಜ್ಞಾನ. ಜುಲೈ 25ರಂದು ವಿಶ್ವ ಐವಿಎಫ್ ದಿನವನ್ನು ಕೂಡ ಆಚರಿಸಲಾಗುವುದು. ಐವಿಎಫ್ ಕುರತು ಜಾಗ್ರತೆ ಮೂಡಿಸಲು, ಇದರ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.

ಐವಿಎಫ್ ಎಂದಾಗ ನಮ್ಮಲ್ಲಿ ಈ ಚಿಕಿತ್ಸೆ ಬಗ್ಗೆ ಹಲವು ಪ್ರಶ್ನೆಗಳು ಮೂಡುವುದು. ಕನ್ನಡ ಬೋಲ್ಡ್‌ಸ್ಕೈ ಓದುಗರಿಗೆ ಐವಿಎಫ್ ಕುರಿತು ಹೆಚ್ಚಿನ ಮಾಹಿತಿ ನೀಡಲು ನಾವು ಪರಿಣಿತರನ್ನು ಸಂಪರ್ಕಿಸಿದೆವು, ಐವಿಎಫ್ ಜನರಿಗೆ ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳ ಬಗ್ಗೆ ವೈದ್ಯರನ್ನು ಕೇಳಿದಾಗ ಸ್ತ್ರೀ ರೋಗ ತಜ್ಞೆ ಡಾ ಮನೀಶಾ ಸಿಂಗ್
(ಸ್ತ್ರೀರೋಗ ಹಾಗೂ ರಿಪ್ರೊಡಕ್ಟೀವ್ ಮೆಡಿಸಿನ್ ತಜ್ಞೆ ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು) ನಮ್ಮ ಓದುಗರಿಗೆ ಅವರು ಈ ಕುರಿತು ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ್ದಾರೆ.
ಅವರಿಗೆ ಕೇಳದಾದ ಪ್ರಶ್ನೆಗಳಿವು
ದಂಪತಿ ಯಾವಾಗ ಐವಿಎಫ್ ಚಿಕಿತ್ಸೆ ಬಗ್ಗೆ ಯೋಚಿಸಬಹುದು?
ಐವಿಫ್ ಚಿಕಿತ್ಸೆಗೆ ದಂಪತಿಯ ಆರ್ಥಿಕ ಹಾಗು ಮಾನಸಿಕ ಸಿದ್ಧತೆ ಹೇಗಿರಬೇಕು?
ಅತ್ಯಧಿಕ ಮೈ ತೂಕವಿದ್ದರೆ ಐವಿಎಫ್‌ಗೆ ಮುನ್ನ ಮೈ ತೂಕ ಕಡಿಮೆ ಮಾಡಬೇಕೆ?
ಐವಿಎಫ್ ಚಿಕಿತ್ಸೆಗೆ ಸಿದ್ಧತೆ ಮಾಡುವ ಅವಧಿಯಲ್ಲಿ ವ್ಯಾಯಾಮ ಮಾಡಬಹುದೇ?
ಐವಿಎಫ್ ಚಿಕಿತ್ಸೆ ಬಳಿಕ ಗರ್ಭಧಾರಣೆಯಾದಾಗ ಇತರ ಗರ್ಭಿಣಿಯರಂತೆ ಓಡಾಡಿಕೊಂಡು, ತಮ್ಮ ಕೆಲಸ ಕಾರ್ಯವನ್ನು ಮಾಡಿಕೊಂಡು ಇರಬಹುದೇ?
ಒಂದು ವೇಳೆ ಐವಿಎಫ್ ಫೇಲ್ ಆದರೆ ಮತ್ತೊಮ್ಮೆ ಐವಿಎಫ್‌ಗೆ ಪ್ರಯತ್ನ ಮಾಡಲು ಎಷ್ಟು ಸಮಯ ಬೇಕು?
ಮೊದಲ ಮಗು ಐವಿಎಫ್ ಮೂಲಕ ಪಡೆದ ಬಳಿಕ ಸಹಜ ಗರ್ಭಧಾರಣೆಯ ಸಾಧ್ಯತೆ ಇದೆಯೇ?
ವೈದ್ಯೆ ಡಾ ಮನೀಶಾ ಸಿಂಗ್ ನೀಡಿದ ಮಾಹಿತಿಗಳಿವು
ಹೆಚ್ಚಿನ ಮಾಹಿತಿ?
ಯಾರು ಮಗುವಿಗಾಗಿ ಈ ಐವಿಎಫ್ ಚಿಕಿತ್ಸೆ ಪಡೆದರೆ ಒಳ್ಳೆಯದು?
ವಯಸ್ಸು 40 ದಾಟಿದ್ದರೆ (ಈ ಅವಧಿಯಲ್ಲಿ ಮಹಿಳೆಯರಲ್ಲಿ ಫಲವತ್ತತೆ ಕಡಿಮೆಯಾಗುವುದು)
ಫಾಲೋಪಿಯನ್ ಟ್ಯೂಬ್ಸ್ (fallopian tubes) ಬ್ಲಾಕ್ ಆಗಿದ್ದರೆ
ಅಂಡಾಣು ಉತ್ಪತ್ತಿ ಕಡಿಮೆಯಾಗಿದ್ದಾಗ
ಯುಟ್ರೈನ್ ಫೈಬ್ರೋಯ್ಡ್
ಪುರುಷರಲ್ಲಿ ವೀರ್ಯಾಣು ಕಡಿಮೆಯಾಗಿದ್ದರೆ
ಮಕ್ಕಳಾಗದಿರುವುದಕ್ಕೆ ಕಾರಣವೇನು ಎಂದು ತಿಳಿಯದಿದ್ದಾಗ
ಐವಿಎಫ್ ಚಿಕಿತ್ಸೆ ಹೇಗೆ ನೀಡಲಾಗುವುದು?
ಪತಿ-ಪತ್ನಿಯ ಸಂತಾನೋತ್ಪತ್ತಿ ಸಾಮರ್ತ್ಯ ಪರೀಕ್ಷಿಸಿ ನೀಡಲಾಗುವುದು
ಪತಿಯ ಅಂಡಾಣು, ಪತಿಯ ವೀರ್ಯಾಣು ಟ್ಯೂಬ್‌ನಲ್ಲಿ ಹಾಕಿ ಫಲವತ್ತತೆ ಮಾಡಲಾಗುವುದು
ಹೆಣ್ಣಿನ ಅಂಡಾಣು ದಾನಿಯ ವೀರ್ಯಾಣು (ಪತಿಯಲ್ಲಿ ವೀರ್ಯಾಣು ತುಂಬಾ ಕಡಿಮೆಯಿದ್ದಾಗ ವೈದ್ಯರು ಕ್ಲೈಂಟ್ಸ್ ಅಭಿಪ್ರಾಯ ಕೇಳಿ ಈ ವಿಧಾನ ಅನುಸರಿಸಲಾಗುವುದು)
ದಾನಿಯ ಅಂಡಾಣು ಪತಿಯ ವೀರ್ಯಾಣು(ಪತ್ನಿಯಲ್ಲಿ ಅಂಡಾಣು ಉತ್ಪತ್ತಿ ತುಂಬಾ ಕಡಿಮೆ ಇದ್ದಾಗ ಈ ವಿಧಾನ ಅನುಸರಿಸಲಾಗುವುದು)
ಅಂಡಾಣು ಹಾಗೂ ವಿರ್ಯಾಣು ದಾನಿಗಳಿಂದ ಪಡೆದು (ಪತಿ ಪತ್ನಿ ಇಬ್ಬರಲ್ಲಿಯೂ ಸಮಸ್ಯೆ ಇದ್ದಾಗ ಈ ವಿಧಾನ ಅನುಸರಿಸಲಾಗುವುದು)
ಭ್ರೂಣವನ್ನು ದಾನ ಪಡೆಯುವುದು (ಬೇರೆ ಗರ್ಭದಲ್ಲಿ ಭ್ರೂಣ ಮಾಡಿ ನಂತರ ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸುವುದು)



Click it and Unblock the Notifications
