Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮಗು ಪಡೆಯಬೇಕೆಂದು ಕೆಲವು ವರ್ಷಗಳ ಹಿಂದೆಯೇ ಎಗ್ ಫ್ರೀಜ್ ಮಾಡಿದ್ದ ಪಿಗ್ಗಿ!
ಪ್ರಿಯಾಂಕಾ ಚೋಪ್ರಾ ವಿಶ್ವದಾದ್ಯಂತ ಹೆಸರು ಮಾಡಿರುವ ನಟಿ. ಇಂಗ್ಲೀಷ್ ಹಾಡುಗಾರ ನಿಕ್ ಜೋನಸ್ ರನ್ನು ಮದುವೆಯಾಗಿರುವ ಪ್ರಿಯಾಂಕಾ ಚೋಪ್ರಾ ವರ್ಷದ ಹಿಂದೆ ಸರೋಗೆಸಿ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ. ಆದರೆ ಆ ಮಗುವಿಗಾಗಿ ಅವರು 30 ವರ್ಷಕ್ಕೂ ಮೊದಲೇ ಎಗ್ ಫ್ರಿಜ್ ಮಾಡಿಕೊಂಡಿದ್ದರೂ ಎಂಬ ಸತ್ಯವನ್ನು ಇತ್ತೀಚಿಗೆ ಹೇಳಿಕೊಂಡಿದ್ದಾರೆ.
ಅಷ್ಟಕ್ಕು ಈ ಎಗ್ ಫ್ರೀಜಿಂಗ್ ಎಂದರೇನು? ಪ್ರಿಯಾಂಕಾ ಚೋಪ್ರಾ ಸೇರಿದಂತೆ ಸೆಲೆಬ್ರಿಟಿಗಳು ಎಗ್ ಫ್ರೀಜಿಂಗ್ ಮೊರೆ ಹೋಗೋದ್ಯಾಕೆ? ಎಗ್ ಫ್ರೀಜಿಂಗ್ ಬಗ್ಗೆ ಪ್ರಿಯಾಂಕಾ ಬಿಚ್ಚಿಟ್ಟ ಸತ್ಯ ಏನು ಅನ್ನೋದನ್ನು ತಿಳಿಯೋಣ.

ಎಗ್ ಫ್ರೀಜಿಂಗ್ ಎಂದರೇನು? (ಅಂಡಾಣು ಶೈಥಲೀಕರಣ)
ಮಹಿಳೆಯರ ದೇಹದಲ್ಲಿ ನೈಸರ್ಗಿಕವಾಗಿ ಬಿಡುಗಡೆಯಾಗುವ ಅಂಡಾಣುಗಳನ್ನು ಪ್ರತ್ಯೇಕಿಸಿ ಅದನ್ನು ಸುರಕ್ಷಿತವಾಗಿ ಸಂರಕ್ಷಿಸಿ ಇಡುವ ತಂತ್ರಜ್ಞಾನಕ್ಕೆ ಎಗ್ ಫ್ರೀಜಿಂಗ್ ಎಂದು ಕರೆಯುತ್ತಾರೆ. ಎಗ್ ಫ್ರೀಜಿಂಗ್ ನಿಂದ ಮಕ್ಕಳಾಗಬೇಕಂದ್ರೆ ಮಹಿಳೆಗೆ ಫಲವತ್ತತ್ತೆ ಸಾಮರ್ಥ್ಯ ಹೆಚ್ಚಿರಬೇಕಾದರೆ ಆಕೆಯ ಅಂಡಾಣುಗಳನ್ನು ಸಂಗ್ರಹಿಸಿ ಶೈಥಲೀಕರಿಸಿಡಬೇಕು.
ಪ್ರಿಯಾಂಕಾಗೆ ಮಕ್ಕಳೆಂದರೆ ಪಂಚಪ್ರಾಣ
ಪ್ರಿಯಾಂಕಾ ಚೋಪ್ರಾಗೆ ಮೊದಲಿನಿಂದಲೂ ಮಕ್ಕಳೆಂದರೆ ಪಂಚಪ್ರಾಣ. ಇದೇ ಕಾರಣಕ್ಕೆ ಪ್ರಿಯಾಂಕ ಕೆಲವು ಸಮಯಗಳ ಕಾಲ ನಿಕ್ ಜೋನಸ್ ಅವರನ್ನು ಡೇಟ್ ಮಾಡಿರಲಿಲ್ಲವಂತೆ. ನಿಕ್ ಬಗ್ಗೆ ನನಗೆ ಆಗ ಹೆಚ್ಚಾಗಿ ಗೊತ್ತಿರಲಿಲ್ಲ. ಒಂದು ವೇಳೆ ಅವನಿಗೆ 25 ವರ್ಷ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯೋದು ಬೇಡ ಎಂದಿದ್ದರೆ ಏನು ಮಾಡೋದು ಅಂತ ನಾನು ಭಯ ಪಟ್ಟಿದ್ದೆ.
ಅಮ್ಮನ ಸಲಹೆಯಂತೆ ಎಗ್ ಫ್ರೀಜ್ ಮಾಡಿದ್ದ ಪ್ರಿಯಾಂಕ!
ಪ್ರಿಯಾಂಕಾ ಚೋಪ್ರಾ ಅವರ ತಾಯಿ ಸ್ತ್ರೀ ರೋಗ ತಜ್ಞೆಯಾಗಿದ್ದರು. ಒಂದು ಕಡೆಯಿಂದ ಪ್ರಿಯಾಂಕ ತಮ್ಮ ವೃತ್ತಿ ಜೀವನದ ಕಡೆಗೆ ತುಂಬಾನೇ ಫೋಕಸ್ ಆಗಿದ್ರು. ಈ ಸಮಯದಲ್ಲಿ ಮದುವೆಯಾಗಿ ಮಕ್ಕಳು ಮಾಡಿಕೊಳ್ಳೋದು ಅವರಿಗೆ ಇಷ್ಟ ಇರಲಿಲ್ಲ. ತುಂಬಾ ತಡವಾಗಿ ಮದುವೆಯಾದ್ರೆ ಮಗು ಆಗುತ್ತೋ ಅಲ್ವೋ ಅನ್ನೋ ಭಯವು ಕಾಡಿತ್ತಂತೆ.
30 ವರ್ಷಕ್ಕೂ ಮೊದಲೇ ಎಗ್ ಫ್ರೀಜ್ ಮಾಡಿದ್ದ ಪ್ರಿಯಾಂಕಾ!
ಇಂತಹ ಸಮಯದಲ್ಲಿ ಪ್ರಿಯಾಂಕಾಗೆ ಅವರ ತಾಯಿ ಮಧು ಚೋಪ್ರಾ ಅವರು ಎಗ್ ಫ್ರೀಜ್ ಮಾಡೋದಕ್ಕೆ ಸಲಹೆ ನೀಡಿದ್ರಂತೆ. ಹೀಗಾಗಿ ಪ್ರಿಯಾಂಕಾ 30 ವರ್ಷಕ್ಕೂ ಮೊದಲೇ ಎಗ್ ಫ್ರೀಜ್ ಮಾಡಿದ್ರಂತೆ. ಇದಾದ ಬಳಿಕ ಅವರ ಆತಂಕ, ಭಯ ದೂರವಾಗಿತ್ತಂತೆ. ಎಗ್ ಫ್ರೀಜಿಂಗ್ ನಂತರ ಪ್ರಿಯಾಂಕಾ ತಮ್ಮ ಭವಿಷ್ಯದ ಕಡೆಗೆ ಹೆಚ್ಚು ಗಮನ ಕೊಟ್ಟು ಕೆಲಸ ಮಾಡೋದಕ್ಕೆ ಶುರು ಮಾಡಿದ್ರಂತೆ.
ಸೆಲೆಬ್ರಿಟಿಗಳಲ್ಲಿ ಹೆಚ್ಚಾಗ್ತಿದೆ ಎಗ್ ಫ್ರೀಸಿಂಗ್!
ಇತ್ತೀಚಿಗಷ್ಟೇ ನಟ ರಾಮ್ ಚರಣ್ ಅವರ ಪತ್ನಿ ಕೂಡ ಇದೇ ಎಗ್ ಫ್ರೀಜಿಂಗ್ ವಿಚಾರಕ್ಕೆ ಸುದ್ದಿಯಾಗಿದ್ರು. ಈ ಜೋಡಿ ಕೂಡ ಬರೋಬ್ಬರಿ ಹತ್ತು ವರ್ಷಗಳ ಹಿಂದೆನೇ ಎಗ್ ಫ್ರೀಜಿಂಗ್ ಮಾಡಿದ್ರಂತೆ. ಬಹು ಬೇಗ ಈ ಜೋಡಿಗೂ ಮಕ್ಕಳನ್ನು ಪಡೆಯೋದಕ್ಕೆ ಇಷ್ಟ ಇರಲಿಲ್ವಂತೆ. ಮಕ್ಕಳಾದ್ರೆ ಕೆಲಸದ ಕಡೆಗೆ ಗಮನ ಹರಿಸೋದಕ್ಕೆ ಸಾಧ್ಯವಾಗೋದಿಲ್ಲ ಅಂತ ಈ ರೀತಿ ಮಾಡಿದ್ರಂತೆ. ಹೀಗಾಗಿ 33ನೇ ವಯಸ್ಸಿನಲ್ಲಿ ಉಪಾಸನಾ ಗರ್ಭಿಣಿಯಾಗಿದ್ದಾರೆ.
ಬಾಲಿವುಡ್ ನಲ್ಲಿ ತನಿಷಾ ಮುಖರ್ಜಿ, ಏಕ್ತಾ ಕಪೂರ್, ಮೋನಾ ಸಿಂಗ್, ಡಯಾನಾ ಹೈಡೆನ್, ರಿದ್ಧಿಮಾ ಪಂಡಿತ್ ಹೀಗೆ ಅನೇಕ ಸೆಲೆಬ್ರಿಟಿಗಳು ಎಗ್ ಫ್ರೀಜಿಂಗ್ ಮೂಲಕವೇ ಮಕ್ಕಳನ್ನು ಪಡೆದುಕೊಂಡಿದ್ದಾರೆ.
ಈಗಲೇ ಮಕ್ಕಳು ಬೇಡ ವೃತ್ತಿ ಜೀವನದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಿ ಮುಂದೆ ಮಕ್ಕಳು ಮಾಡಿಕೊಳ್ಳಬೇಕು ಅನ್ನುತ್ತಿರುವವರಿಗೆ ಎಗ್ ಫ್ರೀಜಿಂಗ್ ಉತ್ತಮ ಆಯ್ಕೆ ಅಂತಾನೇ ಹೇಳಬಹುದು.



Click it and Unblock the Notifications

