Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳಲ್ಲಿ ಒಬೆಸಿಟಿ ತಡೆಗಟ್ಟಲು ಪೋಷಕರು ಏನು ಮಾಡಬೇಕು? ಒಬೆಸಿಟಿಯಿದ್ದರೆ ಆತ್ಮವಿಶ್ವಾಸ ಕುಗ್ಗುವುದು ಏಕೆ?
ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ಹೆಚ್ಚಾಗುತ್ತಿದೆ, ಕಾರಣ ಜೀವನಶೈಲಿ. ಎಷ್ಟೋ ಮಕ್ಕಳು ಮನೆಯಿಂದ ಹೊರಗಡೆ ಹೋಗಿ ಆಟ ಆಡುವುದಿಲ್ಲ, ಟಿವಿ ಮೊಬೈಲ್ ಅಂತ ಕಾಲ ಕಳೆಯುತ್ತಾರೆ. ಎಷ್ಟೋ ಶಾಲೆಗಳಲ್ಲಿ ಗ್ರೌಂಡ್ ಇರಲ್ಲ, ಕೆಲವು ಶಾಲೆಗಳಲ್ಲಿ ಗ್ರೌಂಡ್ ಇರುತ್ತದೆ, ಆದರೆ ಮಾರ್ಕ್ಸ್ ಗಳಿಸುವ ಒತ್ತಡದಲ್ಲಿ ಆಟದ ಕಡೆಗೆ ಗಮನ ನೀಡುತ್ತಿಲ್ಲ.
ಮಕ್ಕಳಿಗೂ ಆಟ ಆಡಲು ಟೈಮ್ ಸಿಗುತ್ತಿಲ್ಲ, ಶಾಲೆ, ಟ್ಯೂಷನ್, ಬ್ಯುಸ್‌ನೆಸ್ ಎಂದು ಫುಲ್ ಬ್ಯುಸಿ, ಹೀಗಾಗಿ ಮಕ್ಕಳಲ್ಲಿ ಈ ಒಬೆಸಿಟಿ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಆಹಾರಕ್ರಮ, ಕೆಲ ಆರೋಗ್ಯ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಒಬೆಸಿಟಿ ಸಮಸ್ಯೆ ಹೆಚ್ಚಾಗುತ್ತಿದೆ.

ಮಕ್ಕಳಲ್ಲಿ ಒಬೆಸಿಟಿಗೆ ಕಾರಣ
ಆಹಾರಕ್ರಮ: ಜಂಕ್‌ಫುಡ್ಸ್ ಅತಿಯಾಗಿ ಸೇವಿಸುವುದರಿಂದ ಮೈ ತೂಕ ತುಂಬಾನೇ ಹೆಚ್ಚಾಗುವುದು. ಅಲ್ಲದೆ ಅತಿಯಾದ ಮಾಂಸಾಹಾರ ಸೇವನೆ, ಎಣ್ಣೆಯಲ್ಲಿ ಕರಿದ ಆಹಾರಗಳು, ಚಿಪ್ಸ್ ಈ ಬಗೆಯ ಆಹಾರಗಳ ಸೇವನೆಯಿಂದ ಮೈ ತೂಕ ಹೆಚ್ಚಾಗುವುದು.
ವ್ಯಾಯಾಮ ಇಲ್ಲದಿರುವುದು: ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ವ್ಯಾಯಾಮ ತುಂಬಾನೇ ಅವಶ್ಯ. ಆದರೆ ಮಕ್ಕಳಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು.
ವಂಶವಾಹಿಯಾಗಿ ಬರುವುದು: ಕೆಲವು ಮಕ್ಕಳಿಗೆ ಈ ಒಬೆಸಿಟಿ ಸಮಸ್ಯೆ ವಂಶವಾಹಿಯಾಗಿ ಬರುವುದು. ಇನ್ನು ಕೆಲವು ಕುಟುಂಬದಲ್ಲಿನ ಆಹಾರಶೈಲಿ ಕೂಡ ಮಕ್ಕಳಲ್ಲಿ ಒಬೆಸಿಟಿಗೆ ಕಾರಣವಾಗುತ್ತಿದೆ.
ಕೆಲವೊಂದು ಔಷಧಗಳು: ಮಕ್ಕಳಿಗೆ ಆರೋಗ್ಯ ಸಮಸ್ಯೆಯಿದ್ದು ಅದಕ್ಕಾಗಿ ಔಷಧಿ ಸೇವಿಸುತ್ತಿದ್ದರೆ ಮೈ ತೂಕ ಹೆಚ್ಚಾಗುವುದು.
ಮೈ ತೂಕ ಹೆಚ್ಚಾದರೆ ಕಂಡು ಬರುವ ಸಮಸ್ಯೆ
ಮಧುಮೇಹದ ಸಮಸ್ಯೆ: ಒಬೆಸಿಟಿ ಇರುವ ಮಕ್ಕಳಿಗೆ ಚಿಕ್ಕ ಪ್ರಾಯದಲ್ಲಿಯೇ ಮಧುಮೇಹದ ಸಮಸ್ಯೆ ಕಂಡು ಬರುವುದು.
ಚಿಕ್ಕ ಪ್ರಾಯದಲ್ಲಿಯೇ ರಕ್ತದೊತ್ತಡ ಸಮಸ್ಯೆ: ಅತ್ಯಧಿಕ ಮೈ ತೂಕ ಇದ್ದರೆ ಆ ಮಕ್ಕಳು ಯೌವನ ಪ್ರಾಯಕ್ಕೆ ತಲುಪುವಾಗಲೇ ರಕ್ತದೊತ್ತಡ ಸಮಸ್ಯೆ ಕಾಡುವುದು.
ಸಂಧಿವಾತ: ಮೈ ತೂಕ ಹೆಚ್ಚಿದರೆ ಸಂಧಿವಾತದ ಸಮಸ್ಯೆ ಕಂಡು ಬರುವುದು.
ಫ್ಯಾಟಿ ಲಿವರ್ ಸಮಸ್ಯೆ: ಒಬೆಸಿಟಿ ಮೈಯಿಂದ ಫ್ಯಾಟಿ ಲಿವರ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚುವುದು.
ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
ಮುಖ್ಯವಾಗಿ ಆತ್ಮವಿಶ್ವಾಸ ಕುಗ್ಗುವುದು
ಮಕ್ಕಳಿಗೆ ಒಬೆಸಿಟಿ ಇದ್ದರೆ ಅದು ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುವುದು. ಸಹಪಾಠಿಗಳು ಚುಡಾಯಿಸುವುದು ಅಥವಾ ಅವರು ಹಾಕಿದಂಥ ಡ್ರೆಸ್ ನಮಗೆ ಹಾಕಲು ಸಾಧ್ಯವಿಲ್ಲ ಎಂಬ ಬೇಸರ ಹೀಗೆ ಮೈ ದಪ್ಪ ಹೆಚ್ಚಾದರೆ ಆತ್ಮವಿಶ್ವಾಸ ಕುಗ್ಗುವುದು. ಆದ್ದರಿಂದ ಮಕ್ಕಳಲ್ಲಿ ಮೈ ತೂಕ ಹೆಚ್ಚಾಗದಿರಲು ಪೋಷಕರು ಮಕ್ಕಳ ದೈಹಿಕ ವ್ಯಾಯಾಮದ ಕಡೆಗೆ ಹೆಚ್ಚಿನ ಗಮನಹರಿಸಬೇಕು.
ಒಬೆಸಿಟಿ ತಡೆಗಟ್ಟುವುದು ಹೇಗೆ?
ಮಕ್ಕಳಲ್ಲಿ ಒಬೆಸಿಟಿ ತಡೆಗಟ್ಟಲು ಪೋಷಕರು ಹೆಚ್ಚು ಗಮನಹರಿಸಬೇಕು. ಅವರ ಆಹಾರಕ್ರಮದ ಕಡೆಗೆ ಗಮನಹರಿಸಿ, ನೀವು ಮನೆಯಲ್ಲಿ ಆರೋಗ್ಯಕರ ಆಹಾರ ಸೇವಿಸಿ, ಆವಾಗ ಮಕ್ಕಳೂ ಅದನ್ನೆ ತಿನ್ನುತ್ತವೆ, ಅವರು ಕೇಳಿದರು ಎಂದು ಜಂಕ್ಸ್ ಫುಡ್ಸ್ ತರಬೇಡಿ, ಅಪರೂಪಕ್ಕೆ ಆ ಬಗೆಯ ಆಹಾರ ಕೊಡಿಸಿ
ಮಕ್ಕಳನ್ನು ಡ್ಯಾನ್ಸ್, ಯೋಗ ಅಥವಾ ಇತರ ಸ್ಪೋರ್ಟ್ಸ್‌ನಲ್ಲಿ ಅವರನ್ನು ಸೇರಿಸಿ. ನೀವು ಅವರ ಜೊತೆ ಆಟವಾಡಿ.
ಮಕ್ಕಳ ಜೊತೆ ಸೈಕ್ಲಿಂಗ್ ಮಾಡಿ, ಟ್ರಕ್ಕಿಂಗ್ ಹೋಗಿ ಇವೆಲ್ಲಾ ಅವರು ದೈಹಿಕವಾಗಿ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಮಕ್ಕಳನ್ನು ಹೊರಗಡೆ ಆಡಲು ಬಿಡಿ, ಸೈಕ್ಲಿಂಗ್ ಮಾಡಲು ಉತ್ತೇಜನ ನೀಡಿ, ಈ ರೀತಿ ಮಾಡುವುದರಿಂದ ಮೈ ತೂಕ ನಿಯಂತ್ರಣದಲ್ಲಿರುತ್ತದೆ.



Click it and Unblock the Notifications