Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಅನಾನಸ್, ಪಪ್ಪಾಯಿ ಮಾತ್ರವಲ್ಲ ಈ ಹಣ್ಣುಗಳನ್ನು ಗರ್ಭಿಣಿಯರು ಸೇವಿಸಲೇಬಾರದು
ಗರ್ಭ ಧರಿಸುವುದು ಎಂದರೆ ಸುಲಭದ ಮಾತಲ್ಲ. ನಮ್ಮ ಜೀವದ ಒಳಗೆ ಇನ್ನೊಂದು ಜೀವವನ್ನು ಆರೋಗ್ಯಯುತವಾಗಿ ಬೆಳೆಸಬೇಕು ಎಂದರೆ ತಾಯಿಯಾದವಳು ಕೂಡ ಸಾಕಷ್ಟು ಜಾಗೃತೆ ವಹಿಸಬೇಕಾಗುತ್ತದೆ. ಕಾಲ ಕಾಲಕ್ಕೆ ವೈದ್ಯರ ತಪಾಸಣೆ ಮಾಡಿಸಿಕೊಳ್ಳುವುದು, ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ಸೇವಿಸುವುದು, ಆಹಾರ ಕ್ರಮ, ದಿನನಿತ್ಯದ ಚಟುವಟಿಕೆ ಹೀಗೆ ಪ್ರತಿಯೊಂದರ ಮೇಲೂ ಗಮನ ನೀಡಬೇಕಾಗುತ್ತದೆ.

ಗರ್ಭಿಣಿಯಾದವರು ಹಣ್ಣು ಸೇವಿಸಿದರೆ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ. ಇದು ನಿಜ ಕೂಡ. ಆದರೆ ಹಾಗೆಂದು ಎಲ್ಲಾ ಹಣ್ಣುಗಳನ್ನು ಸೇವಿಸಬಹುದೇ..? ಎಂದು ಕೇಳಿದರೆ ಇದಕ್ಕೆ ಉತ್ತರ ಇಲ್ಲ ಎಂದೇ ಹೇಳಬಹುದು. ಗರ್ಭಾವಸ್ಥೆಯಲ್ಲಿ ಕೆಲವು ಹಣ್ಣುಗಳನ್ನು ಸೇವನೆ ಮಾಡುವುದು ಗರ್ಭದಲ್ಲಿರುವ ಭ್ರೂಣದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಹಣ್ಣುಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ .
ಪಪ್ಪಾಯಿ :
ಇದು ಸಾಮಾನ್ಯವಾಗಿ ಬಹುತೇಕರಿಗೆ ತಿಳಿದಿರುವಂತಹ ವಿಚಾರ. ಗರ್ಭಾವಸ್ಥೆಯಲ್ಲಿ ಪಪ್ಪಾಯಿಯನ್ನು ಸೇವನೆ ಮಾಡದಂತೆ ಸಲಹೆ ನೀಡಲಾಗುತ್ತದೆ. ಪಪ್ಪಾಯಿ ಹಣ್ಣಿನಲ್ಲಿರುವ ಲ್ಯಾಟೆಕ್ಸ್ ಎಂಬ ಅಂಶವು ಗರ್ಭವನ್ನು ಸಂಕುಚಿತಗೊಳಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆಗಳು ತುಂಬಾನೇ ಇರುತ್ತದೆ. ಕೆಲವರು ಪಪ್ಪಾಯಿ ಹಣ್ಣನ್ನು 3 ತಿಂಗಳ ಬಳಿಕ ಸೇವನೆ ಮಾಡಬಹುದು ಎಂದು ಹೇಳುತ್ತಾರೆ.
ಅನಾನಾಸ್ :
ಇನ್ನು ಗರ್ಭಧರಿಸಿದ ಮಹಿಳೆಗೆ ಪಪ್ಪಾಯಿಯಂತೆಯೇ ಅನಾನಾಸ್ ಹಣ್ಣು ಸೇವಿಸದಂತೆಯೂ ಸಾಕಷ್ಟು ಜನರು ಸಲಹೆ ನೀಡುತ್ತಾರೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಅನಾನಾಸ್ ಹಣ್ಣುಗಳಲ್ಲಿ ಬ್ರೊಮಲೇನ್ ಎಂಬ ಅಂಶವಿದ್ದು ಇದು ನಮ್ಮ ಗರ್ಭಕಂಠವನ್ನು ಮೃದುವಾಗಿಸಿಬಿಡುತ್ತದೆ. ಇದರಿಂದರಲೂ ಗರ್ಭಪಾತವಾಗುವ ಸಾಧ್ಯತೆಗಳು ತುಂಬಾನೇ ಹೆಚ್ಚಿರುತ್ತದೆ. ಆದರೆ ಮೂರು ತಿಂಗಳ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಅನಾನಾಸ್ ಹಣ್ಣು ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೂ ಒಮ್ಮೆ ವೈದ್ಯರನ್ನು ಸಂಪರ್ಕಿಸಿಯೇ ಈ ಹಣ್ಣು ಸೇವನೆ ಮಾಡುವುದು ಉತ್ತಮ.
ದ್ರಾಕ್ಷಿ :
ದ್ರಾಕ್ಷಿ ಹಣ್ಣುಗಳ ಸೇವನೆ ಕೂಡ ಗರ್ಭಿಣಿಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ದ್ರಾಕ್ಷಿ ಹಣ್ಣುಗಳನ್ನು ಬೆಳೆಯುವಾಗ ಇದಕ್ಕೆ ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಕೆ ಮಾಡಲಾಗಿರುತ್ತದೆ. ಎಷ್ಟೇ ತೊಳೆದರೂ ದ್ರಾಕ್ಷಿ ಹಣ್ಣುಗಳಲ್ಲಿನ ರಾಸಾಯನಿಕವನ್ನು ಸಂಪೂರ್ಣ ಶುದ್ಧಗೊಳಿಸಲು ಸಾಧ್ಯವಿಲ್ಲ. ಈ ರಾಸಾಯನಿಕಗಳು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ದ್ರಾಕ್ಷಿ ಹಣ್ಣುಗಳ ಸೇವನೆ ಗರ್ಭಾವಸ್ಥೆಯಲ್ಲಿ ಅಷ್ಟೊಂದು ಪೂರಕ ಎಂದು ಪರಿಗಣಿಸುವುದಿಲ್ಲ.
ಕಲ್ಲಂಗಡಿ :
ಕಲ್ಲಂಗಡಿ ಹಣ್ಣಿಗೆ ಅಭಿಮಾನಿಗಳು ಹೆಚ್ಚು. ಬೇಸಿಗೆಕಾಲದಲ್ಲಂತೂ ಕಲ್ಲಂಗಡಿ ಹಣ್ಣು ಬೇಕೆ ಬೇಕು ಎನಿಸಿಬಿಡುತ್ತದೆ. ಆದರೆ ಗರ್ಭಿಣಿಯರಿಗೆ ಕಲ್ಲಂಗಡಿ ಹಣ್ಣಿನಿಂದ ಕೊಂಚ ದೂರ ಇರುವಂತೆ ಹೇಳಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಕಲ್ಲಂಗಡಿ ಗರ್ಭದ ಆರೋಗ್ಯಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೃತಕವಾಗಿ ಹಣ್ಣಾದ ಕಲ್ಲಂಗಡಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವಿದೆ. ಇವುಗಳು ಗರ್ಭಿಣಿಯರಲ್ಲಿ ಸಕ್ಕರೆ ಅಂಶದ ಪ್ರಮಾಣವನ್ನು ಹೆಚ್ಚಿಸುತ್ತವೆ. ಹೀಗಾಗಿ ಕಲ್ಲಂಗಡಿ ಹಣ್ಣನ್ನು ನಿಯಮಿತವಾಗಿ ಸೇವಿಸಬಹುದಾಗಿದೆ.
ತೊಳೆಯದ ಹಣ್ಣುಗಳು :
ಮಾರುಕಟ್ಟೆಯಿಂದ ತಂದು ಇನ್ನೂ ತೊಳೆಯದೇ ಹಾಗೆಯೇ ಇರುವ ಯಾವುದೇ ಹಣ್ಣುಗಳ ಸೇವನೆ ಗರ್ಭಿಣಿಯರಿಗೆ ಸೂಕ್ತವಲ್ಲ. ಹಣ್ಣುಗಳನ್ನು ಬೆಳೆಯಲು, ಅವುಗಳ ತಾಜಾತನ ಹಾಗೆಯೇ ಉಳಿಸಲು ಸಾಕಷ್ಟು ರಾಸಾಯನಿಕಗಳ ಬಳಕೆಯಾಗಿರುತ್ತದೆ. ಹಾಗೂ ಇವುಗಳನ್ನು ನೇರವಾಗಿ ತಿನ್ನುವುದು ಗರ್ಭಿಣಿ ಹಾಗೂ ಮಗುವಿನ ಆರೋಗ್ಯಕ್ಕೆ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಆದ್ದರಿಂದ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಗೂ ಅರಿಶಿಣವನ್ನು ಸೇರಿಸಿ ಇದರಲ್ಲಿ ಕೆಲ ನಿಮಿಷಗಳ ಕಾಲ ಹಣ್ಣನ್ನು ಹಾಕಿಟ್ಟು ಬಳಿಕ ಚೆನ್ನಾಗಿ ತೊಳೆದು ಸೇವಿಸಬೇಕು. ಇದರ ಜೊತೆಯಲ್ಲಿ ಫ್ರಿಡ್ಜ್ನಲ್ಲಿಟ್ಟು ಹಣ್ಣು ಸೇವನೆ ಮಾಡುವ ಬದಲು ಹೊರಗಿನ ವಾತಾವರಣದಲ್ಲಿಯೇ ಹಣ್ಣುಗಳನ್ನು ಇಟ್ಟು ಅವುಗಳನ್ನು ಸೇವಿಸುವುದು ಹೆಚ್ಚು ಒಳ್ಳೆಯದು ಎಂದು ಹೇಳಬಹುದಾಗಿದೆ. ಅಲ್ಲದೇ ಗರ್ಭಾವಸ್ಥೆಯ ಸಂದರ್ಭದಲ್ಲಿ ಏನನ್ನೇ ಸೇವಿಸುವ ಮುನ್ನ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಪಡೆದು ಆ ಬಳಿಕವೇ ಅದನ್ನು ಸೇವಿಸುದು ಉತ್ತಮ ಮಾರ್ಗವಾಗಿದೆ.



Click it and Unblock the Notifications
