Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಅವಳಿ ಮಕ್ಕಳಿಗೆ ಗರ್ಭಿಣಿಯಾದರೆ ಕಂಡು ಬರುವ ಲಕ್ಷಣಗಳಿವು
ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದೇನೆ ಎಂದು ತಿಳಿಯುತ್ತಿದ್ದಂತೆ ಆ ತಾಯಿಗೆ ಡಬಲ್ ಖುಷಿ ಅಲ್ಲದೆ ಅಷ್ಟೇ ಆತಂಕ ಕೂಡ ಉಂಟಾಗುವುದು. ಹೊಟ್ಟೆಯಲ್ಲಿ ಎರಡು ಜೀವಗಳಿದೆ ಎಂದು ಖುಷಿಯಾದರೂ ಅವುಗಳ ಆರೋಗ್ಯದ ಬಗ್ಗೆ ಚಿಂತೆ ಕಾಡುವುದು. ಏಕೆಂದರೆ ಅವಳಿ ಮಕ್ಕಳಾದರೆ ಅವಧಿ ಪೂರ್ವ ಹೆರಿಗೆ, ಕಡಿಮೆ ಮೈ ತೂಕದ ಮಕ್ಕಳು ಜನಿಸುವ ಸಾಧ್ಯತೆ ಅಧಿಕವಿರುವುದರಿಂದ ಆತಂಕವೂ ಕಾಡುವುದು.

ಅವಳಿ ಮಕ್ಕಳಿಗೆ ಗರ್ಭಿಣಿಯಾದರೆ ಗರ್ಭಾವಸ್ಥೆಯ ಲಕ್ಷಣಗಳು ಭಿನ್ನವಾಗಿರುವುದೇ? ಅವಳಿ ಮಕ್ಕಳಿದೆ ಎಂದು ಸೂಚಿಸುವ ಲಕ್ಷಣಗಳೇನು ಎಂದು ನೋಡೋಣ ಬನ್ನಿ:
ಪ್ರಾರಂಭದಲ್ಲಿಯೇ ಈ ಲಕ್ಷಣಗಳು ಕಂಡು ಬಂದರೆ ಅಲ್ಟ್ರಾಸೌಂಡ್‌ಗೆ ಮುನ್ನವೇ ಗರ್ಭದಲ್ಲಿ ಎರಡು ಜೀವಗಳಿವೆ ಎಂಬ ಸೂಚನೆ ಸಿಗುತ್ತದೆ ನೋಡಿ
* ಬೇಗನೆ ಚಲನೆ ಗೊತ್ತಾಗುವುದು
* ಎರಡು ಮಕ್ಕಳ ಚಲನೆಯ ಅನುಭವವಾಗುವುದು
* ಹೊಟ್ಟೆ ಸಾಮಾನ್ಯವಾಗಿರುವುದಕ್ಕಿಂತ ಅಧಿಕವಿರುತ್ತದೆ
* ಬೇಗನೆ ಮೈ ತೂಕ ಹೆಚ್ಚಾಗುವುದು
* hCG, ಪ್ರೆಗ್ನೆನ್ಸಿ ಹಾರ್ಮೊನ್ ಅಧಿಕವಿರುವುದು
* ಒಂದಕ್ಕಿಂತ ಅಧಿಕ ಹಾರ್ಟ್‌ಬೀಟ್ ಕೇಳಿಸುವುದು.
ಜೊತೆಗೆ ಈ ಲಕ್ಷಣಗಳು ಕಂಡು ಬರುವುದು
* ಸ್ತನಗಳು ತುಂಬಾ ಬಿಗಿಯಾಗುವುದು
* ತಲೆಸುತ್ತು
* ಆಗಾಗ ಮೂತ್ರವಿಸರ್ಜನೆ
* ಮಾರ್ನಿಂಗ್ ಸಿಕ್‌ನೆಸ್
ಅವಳಿ ಮಕ್ಕಳಿದೆ ಎಂದು ಖಚಿತ ಪಡಿಸುವುದು ಹೇಗೆ?
ಅಲ್ಟ್ರಾಸೌಂಡ್ ಮಾಡಿಸಿದಾಗ ಅವಳಿ ಮಕ್ಕಳಿರುವುದು ಖಚಿತವಾಗುವುದು.
ಅವಳಿ ಗರ್ಭಿಣಿಯ ಹೊಟ್ಟೆ ಒಂದೇ ಮಗುವಿರುವ ಹೊಟ್ಟೆಗಿಂತ ಹೇಗೆ ಭಿನ್ನವಾಗಿರುತ್ತದೆ?
ಅವಳಿ ಮಕ್ಕಳಿದ್ದರೆ ಬೇಗನೆ ಹೊಟ್ಟೆ ಕಾಣಿಸಲಾರಂಭಿಸುತ್ತದೆ. ಬೇಗನೆ ಹೊಟ್ಟೆಯ ಗಾತ್ರ ದೊಡ್ಡದಾಗುವುದರಿಂದ ಮೈ ತೂಕ ಕೂಡ ತುಂಬಾನೇ ಅಧಿಕವಾಗುವುದು.
ಅವಳಿ ಮಕ್ಕಳಲ್ಲಿ ಎರಡು ವಿಧಗಳು
ಫ್ರೆಟರ್ನಲ್ ಟ್ವಿನ್(Fraternal twins): ಎರಡು ವೀರ್ಯಾಣು ಎರಡು ಅಂಡಾಣು ಜೊತೆ ಸೇರಿ ಒಂದೇ ಸಮಯದಲ್ಲಿ ಗರ್ಭಧಾರಣೆಯಾಗುವುದು. ಇವರ ಗರ್ಭಚೀಲ ಭಿನ್ನವಾಗಿರುತ್ತದೆ. ಇವರು ನೋಡಲು ಒಂದೇ ರೀತಿ ಇರಬಹುದು ಅಥವಾ ಭಿನ್ನವಾಗಿ ಕಾಣಬಹುದು.
ಐಡೆಂಟಿಕಲ್ ಟ್ವಿನ್ (Identical twins): ಇದರಲ್ಲಿ ಒಂದೇ ಅಂಡಾಣು, ಒಂದೇ ವೀರ್ಯಾಣು ಜೊತೆಯಾಗಿ ಭ್ರೂಣ ರೂಪವಾಗಿ ಎರಡಾಗಿ ವಿಭಾಗವಾಗುವುದು. ಐಡೆಂಟಿಕಲ್ ಟ್ವಿನ್ ಮಕ್ಕಳಾದರೆ ಒಂದೋ ಎರಡು ಹೆಣ್ಣು ಅಥವಾ ಎರಡೂ ಗಂಡಾಗಿರುತ್ತದೆ. ನೋಡಲು ಕೂಡ ಒಂದೇ ರೀತಿ ಇರುತ್ತದೆ.
ಯಾರಿಗೆ ಅವಳಿ ಮಕ್ಕಳ ಸಾಧ್ಯತೆ ಹೆಚ್ಚು?
* ವಯಸ್ಸು 30 ದಾಟಿದ್ದರೆ
* ಕುಟುಂಬದ ಇತಿಹಾಸ
* ಫರ್ಟಿಲಿಟಿ ಚಿಕಿತ್ಸೆ ಪಡೆದಿದ್ದರೆ
* ಒಬೆಸಿಟಿ
* ಈ ಮೊದಲು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ
ಫರ್ಟಿಲಿಟಿ ಚಿಕಿತ್ಸೆಯಿಂದ ಅವಳಿ ಮಕ್ಕಳ ಸಾಧ್ಯತೆ ಹೆಚ್ಚು, ಏಕೆ?
* ಸಂತಾನೋತ್ಪತ್ತಿಗೆ ಔಷಧಿ ಪಡೆಯುತ್ತಿದ್ದರೆ ಇದರಿದ ಒಂದಕ್ಕಿಂತ ಅಧಿಕ ಅಂಡಾಣು ಉತ್ಪತ್ತಿಯಾಗುತ್ತದೆ
* ಐವಿಎಫ್ ಮಾಡಿಸಿದಾಗ ಒಂದಕ್ಕಿಂತ ಅಧಿಕ ಭ್ರೂಣ ಹೊಟ್ಟೆಯೊಳಗೆ ಸೇರಿಸಲಾಗುವುದು
* ಐವಿಎಫ್‌ನಿಂದ ಭ್ರೂಣ ಎರಡು ಭಾಗಗಳಾಗಿ ವಿಭಾಗವಾದಾಗ
ಅವಳಿ ಮಕ್ಕಳಾದರೆ ಯಾವಾಗ ಹೆರಿಗೆಯಾಗುತ್ತಾರೆ?
ತುಂಬು ಗರ್ಭಿಣಿಯೆಂದರೆ 37 ವಾರಕ್ಕೆ ಹೇಳಲಾಗುವುದು, ಆದರೆ ಅವಳಿ ಮಕ್ಕಳಿದ್ದರೆ 37 ವಾರ ತುಂಬುವುದು ತುಂಬನೇ ಕಷ್ಟ, ಬಹುತೇಕರು 36ನೇ ವಾರದಲ್ಲಿ ಜನ್ಮ ನೀಡುತ್ತಾರೆ.
ಅವಳಿ ಮಕ್ಕಳಾದರೆ ಗರ್ಭಾವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳೇನು?
* ರಕ್ತಹೀನತೆ
* ಗರ್ಭಾವಸ್ಥೆಯಲ್ಲಿ ಮಧುಮೇಹ
* ಅತ್ಯಧಿಕ ರಕ್ತದೊತ್ತಡ
* IUGR, ಮಕ್ಕಳ ಬ ಮೈ ತೂಕ ಕಡಿಮೆಯಾಗಿರುವುದು
* ಅಮೈನಾಟಿಕ್ ದ್ರವ ಕಡಿಮೆ ಇರುವುದು
* ಗರ್ಭಚೀಲ ಬೇರ್ಪಡುವುದು
* ಗರ್ಭದಲ್ಲಿ ಅತ್ಯಧಿಕ ನೀರು ತುಂಬುವುದು
* ಒಂದು ಮಗುವಿಗೆ ಮತ್ತೊಂದು ಮಗು ಅಂಟಿಕೊಂಡಿರುವುದು
ಮಕ್ಕಳು ಅವಧಿ ಪೂರ್ವ ಜನಿಸಿದರೆ ಈ ಸಾಧ್ಯತೆಗಳಿವೆ
* ಮೆದುಳಿನಲ್ಲಿ ರಕ್ತಸ್ರಾವ
* ಉಸಿರಾಟದ ತೊಂದರೆ
* ಮಕ್ಕಳನ್ನು ಬೆಚ್ಚಗಿಡಲು ಕಷ್ಟವಾಗುವುದು
* ಕಡಿಮೆ ಮೈ ತೂಕ
* ಮಕ್ಕಳ ಕಣ್ಣು ದೃಷ್ಟಿಗೆ ತೊಂದರೆ
ಒಂದೇ ಮಗುವಿರುವ ಗರ್ಭಧಾರಣೆಗಿಂತ ಎರಡು ಮಕ್ಕಳಿರುವ ಗರ್ಭಧಾರಣೆಯಲ್ಲಿ ರಿಸ್ಕ್ ಅಧಿಕ. ಅವಳಿ ಮಕ್ಕಳಿರುವ ಗರ್ಭಿಣಿಯರು ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ. ಅಲ್ಲದೆ ಹೆರಿಗೆ ಸಮಯದಲ್ಲಿ ಕೆಲವರಿಗೆ ಸಹಜ ಹೆರಿಗೆಯಾದರೆ, ಬಹುತೇಕರಿಗೆ ಸಿ ಸೆಕ್ಷನ್ ಮಾಡಬೇಕಾಗುತ್ತದೆ. ಹೆರಿಗೆಯ ಬಳಿಕ ಕೂಡ ಕೆಲವು ತಿಂಗಳವರೆಗೆ ಹೆಚ್ಚಿನ ಜಾಗ್ರತೆಯಿಂದ ನೋಡಿಕೊಳ್ಳಬೇಕು.



Click it and Unblock the Notifications
