Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಗರ್ಭಿಣಿಯರನ್ನು ಕಾಡುವ ಮೂತ್ರಸೋಂಕಿಗೆ ಮನೆಮದ್ದೇನು? ನಿರ್ಲಕ್ಷ್ಯ ಮಾಡಿದರೆ ಕಿಡ್ನಿಗೆ ಅಪಾಯ
ಗರ್ಭಾವಸ್ಥೆಯಲ್ಲಿ UTI ಅಂದರೆ ಮೂತ್ರ ಸೋಂಕಿನ ಸಮಸ್ಯೆ ಸರ್ವೇ ಸಾಮಾನ್ಯ. ಕೆಲವರಂತೂ ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಒಂದು ವೇಳೆ ಮೂತ್ರ ಸೋಂಕು ನಿರ್ಲಕ್ಷ್ಯ ಮಾಡಿದರೆ ಗರ್ಭಿಣಿಗೆ ಹಾಗೂ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯ ಉಂಟಾಗಬಹುದು, ಆದ್ದರಿಂದ ಗರ್ಭಾವಸ್ಥೆಯಲ್ಲಿ ಮೂತ್ರ ಸೋಂಕು ನಿರ್ಲಕ್ಷ್ಯ ಮಾಡಲೇಬಾರದು.

ಗರ್ಭಾವಸ್ಥೆಯಲ್ಲಿ ಮೂತ್ರ ಸೋಂಕಿಗೆ ಕಾರಣವೇನು?
ಗರ್ಭಿಣಿಯಾದಾಗ ಗರ್ಭಕೋಶದ ಗಾತ್ರ ದೊಡ್ಡದಾಗುವುದು, ಭ್ರೂಣವು ಬ್ಲೇಡರ್ ಹಾಗೂ ಗರ್ಭಕೋಶದ ಮೇಲೆ ಒತ್ತಡ ಹಾಕುವುದು. ಗರ್ಭಕೋಶದ ಟ್ಯೂಬ್‌ನ ಮುಖಾಂತರ ಕಿಡ್ನಿಯಿಂದ ಮೂತ್ರವು ಬ್ಲೇಡರ್‌ಗೆ ಸಂಚರಿಸುವುದು. ಗರ್ಭಾವಸ್ಥೆಯಲ್ಲಿ ಮೂತ್ರದಲ್ಲಿ ಆಮ್ಲದಂಶ ಕಡಿಮೆ ಇರುತ್ತದೆ, ಪ್ರೊಟೀನ್, ಸಕ್ಕರೆಯಂಶ ಅಧಿಕವಿರುತ್ತದೆ, ಹಾರ್ಮೋನ್‌ಗಳ ಬದಲಾವಣೆಯಾಗುವುದು, ಈ ಎಲ್ಲಾ ಕಾರಣಗಳಿಂದ ಮೂತ್ರ ಸೋಂಕಿನ ಅಪಾಯ ಹೆಚ್ಚಾಗುವುದು.
ಕೆಲವರಿಗೆ ಹೆರಿಗೆಯ ಬಳಿಕ ಕೂಡ ಮೂತ್ರ ಸೋಂಕು ಉಂಟಾಗುವುದು. ಹೆರಿಗೆಯ ಸಮಯದಲ್ಲಿ ಮೂತ್ರನಾಳದ ಬ್ಯಾಕ್ಟಿರಿಯಾಗಳ ಸೋಂಕಿನಿಂದ ಮೂತ್ರ ಸೋಂಕು ಉಂಟಾಗುವುದು.
ಗರ್ಭಾವಸ್ಥೆಯಲ್ಲಿ ಮೂತ್ರ ಸೋಂಕಿನ ಲಕ್ಷಣಗಳೇನು?
* ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು
* ಮೂತ್ರ ಮಾಡುವಾಗ ತುಂಬಾ ಉರಿ
* ಮೂತ್ರ ಕೆಟ್ಟ ವಾಸನೆ ಬೀರುವುದು
* ಮೂತ್ರದಲ್ಲಿ ರಕ್ತ ಕಂಡು ಬರುವುದು
* ಸೊಂಟನೋವು, ಕೆಳಹೊಟ್ಟೆಯಲ್ಲಿ ನೋವು ಕಂಡು ಬರುವುದು
ಪ್ರಾರಂಭದಲ್ಲಿಯೇ ಮೂತ್ರ ಸೋಂಕಿಗೆ ಮದ್ದು ತೆಗೆದುಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ಕಿಡ್ನಿಗೆ ಸೋಂಕು ಹರಡಿ ಪರಿಸ್ಥಿತಿ ಗಂಭೀರವಾಗುವುದು.
ಕಿಡ್ನಿಗೆ ಸೋಂಕು ತಗುಲಿದರೆ ಈ ಬಗೆಯ ಸಮಸ್ಯೆಗಳು ಬರುವುದು
*ಬೆನ್ನುನೋವು
* ಜ್ವರ
* ವಾಂತಿ
ಮೂತ್ರ ಸೋಂಕು ತಡೆಗಟ್ಟಲು ಏನು ಮಾಡಬೇಕು?
* ಸಾಕಷ್ಟು ನೀರು ಕುಡಿಯಬೇಕು
* ಕ್ರ್ಯಾನ್‌ಬೆರ್ರಿ ಜ್ಯೂಸ್ ಕುಡಿಯುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಕಡಿಮೆ ಮಾಡುವುದು. ಈ ಜ್ಯೂಸ್ ಕುಡಿಯುವುದರಿಂದ ತುರಿತ ಬೇಗನೆ ಕಡಿಮೆಯಾಗಲಿದೆ.
* ಮೂತ್ರವನ್ನು ತಡೆಗಟ್ಟಬೇಡಿ: ಗರ್ಭಿಣಿಯರು ಮೂತ್ರ ಬಂದ ತಕ್ಷಣ ಮೂತ್ರ ವಿಸರ್ಜನೆಗೆ ಹೋಗಬೇಕು, ಮೂತ್ರವನ್ನು ತಡೆಗಟ್ಟಬಾರದು
* ಸಪ್ಲಿಮೆಂಟ್ಸ್: ವಿಟಮಿನ್ ಸಿ, ಕ್ರ್ಯಾನ್‌ಬೆರ್ರಿ, ಪ್ರೊಬಯೋಟಿಕ್ಸ್ ತೆಗೆದುಕೊಳ್ಳುವುದರಿಮದ ಮೂತ್ರ ಸೋಂಕು ತಡೆಗಟ್ಟಬಹುದು.
ಮೂತ್ರ ಸೋಂಕು ಕಿಡ್ನಿಗೆ ತಗುಲಿದರೆ ಉಂಟಾಗುವ ಅಪಾಯವೇನು?
* ರಕ್ತಹೀನತೆ
* ರಕ್ತದೊತ್ತಡ ಹೆಚ್ಚಾಗುವುದು
* ಕೆಂಪು ರಕ್ತಕಣ ವಿಭಾಗವಾಗುವುದು ಅಥವಾ hemolysis
* ಪ್ಲೇಟ್‌ಲೆಟ್ ಕಡಿಮೆಯಾಗುವುದು
* ರಕ್ತದಲ್ಲಿ ಬ್ಯಾಕ್ಟಿರಿಯಾ ಸೇರಿಕೊಳ್ಳುವುದು
* ಉಸಿರಾಟದಲ್ಲಿ ತೊಂದರೆ ಕಂಡು ಬರುವುದು
ತಡೆಗಟ್ಟಲು ಏನು ಮಾಡಬೇಕು
* ಸಾಕಷ್ಟು ನೀರು ಕುಡಿಯಿರಿ
* ದಿನಾ ಎಳನೀರು ಅಥವಾ ಕ್ರ್ಯಾನ್‌ಬೆರ್ರಿ ಜ್ಯೂಸ್ ಕುಡಿಯುವುದರಿಂದ ಕೂಡ ಮೂತ್ರ ಸೋಂಕು ತಡೆಗಟ್ಟಬಹುದು
* ಗುಪ್ತಾಂಗವನ್ನು ನೀರು ಹಾಕಿ ಚೆನ್ನಾಗಿ ತೊಳೆಯಬೇಕು, ಸೋಪು ಅಥವಾ ಇತರ ಸುವಾಸನೆಯ ಸಾಧನಗಳನ್ನು ಬಳಸಬೇಡಿ
* ಲೈಂಗಿಕಕ್ರಿಯೆಯ ಮೊದಲು ಹಾಗೂ ನಂತರ ಮೂತ್ರ ವಿಸರ್ಜನೆ ಮಾಡುವುದರಿಂದ ಮೂತ್ರ ಸೋಂಕು ತಡೆಗಟ್ಟಬಹುದು.



Click it and Unblock the Notifications
