Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಸಮ್ಮರ್‌ಕ್ಯಾಂಪ್ ಹೀಗಿದ್ದರೆ ಮಾತ್ರ ಹೆಚ್ಚಿನ ಪ್ರಯೋಜನ ಸಿಗಲು ಸಾಧ್ಯ
ಮಕ್ಕಳಿಗೆ ಬೇಸಿಗೆ ರಜೆ ಬಂತೆಂದರೆ ಸಮ್ಮರ್ ಕ್ಯಾಂಪ್‌ಗಳು ಶುರುವಾಗುತ್ತವೆ. ಮಕ್ಕಳಿಗೆ ಮನೆಯಲ್ಲಿದ್ದರೆ ಸುಮ್ಮನೆ ಗಲಾಟೆ, ಹೋಗಿ ಏನಾದರೂ ಹೊಸತು ಕಲಿಯಲಿ ಎಂದು ಪೋಷಕರು ಸಮ್ಮರ್‌ಕ್ಯಾಂಪ್‌ಗೆ ಕಳುಹಿಸುತ್ತಾರೆ. ನೀವು ನಿಮ್ಮ ಮಕ್ಕಳನ್ನು ಸಮ್ಮರ್‌ಕ್ಯಾಂಪ್‌ಗೆ ಕಳುಹಿಸುವಾಗ ಆ ಕ್ಯಾಂಪ್‌ನಲ್ಲಿ ಏನು ವಿಶೇಷತೆಯಿದೆ ಎಂದು ವಿಚಾರಿಸಿ ಕಳುಹಿಸಿದರೆ ಒಳ್ಳೆಯದು.
ಸಮ್ಮರ್ ಕ್ಯಾಂಪ್ ಎಂದ ಮೇಲೆ ಅಲ್ಲಿ ಏನೋ ಹೊಸತನ ಇರಬೇಕು. ಶಾಲೆಯಲ್ಲಿ ಕಲಿತಿರುವುದನ್ನೇ ಅಲ್ಲಿಯೂ ಕಲಿಸಿದರೆ ಮಕ್ಕಳಿಗೆ ಸಮ್ಮರ್‌ಕ್ಯಾಂಪ್ ವಿಶೇಷ ಅನಿಸುವುದೇ ಇಲ್ಲ.

ಸಮ್ಮರ್‌ಕ್ಯಾಂಪ್‌ನಿಂದ ಮಕ್ಕಳು ಕಲಿಯುವಂತಿರಬೇಕು
ಸಮ್ಮರ್‌ಕ್ಯಾಂಪ್‌ನಲ್ಲಿ ಮಕ್ಕಳಲ್ಲಿ ಲೀಡರ್‌ಶಿಪ್ ಕ್ವಾಲಿಟಿಗೆ ಪ್ರಮುಖ ಒತ್ತು ಕೊಡುವಂತಿರಬೇಕು. ಶಾಲೆಯಲ್ಲಿಯೂ ಇದೆಲ್ಲಾ ಮಾಡಿಸುವುದಾದರೂ ಶಾಲೆಯಲ್ಲಿ ಪಠ್ಯನೂ ಬೋಧಿಸಬೇಕಾಗಿರುವುದರಿಂದ ಅಷ್ಟು ಫೋಕಸ್ ಮಾಡಲು ಸಾಧ್ಯವಾಗುವುದಿಲ್ಲ. ಅದೇ ಸಮ್ಮರ್‌ಕ್ಯಾಂಪ್ ಮಕ್ಕಳಿಗೆ ಪರೀಕ್ಷೆಯ ಒತ್ತಡವಿರಲ್ಲ, ಖುಷಿ-ಖುಷಿಯಾಗಿಯೇ ಈ ಸಮಯವನ್ನು ಕಳೆಯುತ್ತಾರೆ. ಮಕ್ಕಳಿಗೆ ನೃತ್ಯ ಇಷ್ಟವಾದರೆ ನೃತ್ಯ, ಹಾಡುವುದು ಇಷ್ಟವಾದರೆ ಸಂಗೀತ ಹೀಗೆ ಕಲಿಯುವಂತಿರಬೇಕು, ನಮ್ಮಲ್ಲಿ ಡ್ಯಾನ್ಸ್, ಸಂಗೀತ, ಕರಾಟೆ, ಯೋಗ ಎಲ್ಲಾ ಕಲಿಸುತ್ತೇವೆ ಎಂದು ಸಮ್ಮರ್‌ಕ್ಯಾಂಪ್‌ನವರು ಹೇಳುತ್ತಿದ್ದರೆ ಅದರ ಬದಲಿಗೆ ಎಕ್ಸ್‌ಪರ್ಟ್‌ಗಳಿರುವ ಸಮ್ಮರ್‌ಕ್ಯಾಂಪ್‌ಗೆ ಸೇರಿಸಿ.
ನಿಮ್ಮ ಮಗುವಿನ ಆಸಕ್ತಿಗೆ ತಕ್ಕ ಸಮ್ಮರ್‌ಕ್ಯಾಂಪ್ ಆಯ್ಕೆ ಮಾಡಿ
ಕೆಲವು ಸಮ್ಮರ್ ಕ್ಯಾಂಪ್‌ಗಳಲ್ಲಿ ನೃತ್ಯಕ್ಕೆ ಒತ್ತು ನೀಡಿದರೆ, ಇನ್ನು ಕೆಲವು ಕ್ಯಾಂಪ್‌ಗಳಲ್ಲಿ ಸಾಹಸ ಚಟುವಟಿಕೆಗಳು, ಕಲೆ ಇವುಗಳಿಗೆ ಹೆಚ್ಚಿನ ಒತ್ತು ನೀಡಲಾಗಿರುತ್ತದೆ. ನಿಮ್ಮ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ತುಂಬಾನೇ ಆಸಕ್ತಿ ಇದೆ ಅದಕ್ಕೆ ತಕ್ಕಂತೆ ಬಿಟ್ಟರೆ ಅವರು ಆ ಕ್ಯಾಂಪ್‌ನಿಂದ ಮತ್ತಷ್ಟು ಪ್ರಯೋಜನ ಪಡೆಯುತ್ತಾರೆ.
ಟೈಮ್ ಟೇಬಲ್ ರೀತಿ ಇರುವ ಸಮ್ಮರ್ ಕ್ಯಾಂಪ್ ಆಯ್ಕೆ ಬೇಡ
ಕೆಲವು ಸಮ್ಮರ್ ಕ್ಯಾಂಪ್‌ಗಳಲ್ಲಿ 9-10 ಯೋಗ, 10-11 ಹಾಡು, ನೃತ್ಯ ಈ ರೀತಿ ಟೈಮ್ ಟೇಬಲ್ ರೀತಿ ಹಾಕಿರುತ್ತಾರೆ. ಇಂಥ ಸಮ್ಮರ್‌ಕ್ಯಾಂಪ್‌ಗಳಿಗೆ ಶಾಲೆಗೆ ಹೋದ ಅನುಭವವೇ ಉಂಟಾಗುವುದು. ಸಮ್ಮರ್ ಕ್ಯಾಂಪ್ ಬೆಳಗ್ಗೆ 9-3 ಗಂಟೆಯವರೆಗೆ ಇದೆ ಎಂದಾದರೆ ಆ ಸಮ್ಮರ್ ಕ್ಯಾಂಪ್‌ನಲ್ಲಿ ಮಕ್ಕಳು ಕಲೆಯಲ್ಲಿ ಆಸಕ್ತಿ ಹೊಂದಿದ್ದರೆ ಆ ಜ್ಞಾನ ಹೆಚ್ಚಾಗುವ ಅವಕಾಶಗಳಿರಬೇಕು. ಅಲ್ಲಿ ಕಟ್ಟುನಿಟ್ಟಿನ ನಿಯಮಗಳಿರಬಾರದು. ಅವರು ಖುಷಿಯಾಗಿ ಸಮಯ ಕಳೆಯುವಂತಿರಬೇಕು.
ಅಡ್ವೆಂಚರ್ ಗೇಮ್‌ಗಳು:
ಮಕ್ಕಳು ಹೊಸ ಅನುಭವಗಳಿಗೆ ತೆರೆದುಕೊಳ್ಳಬೇಕು. ಔಟ್‌ಡೋರ್ ಕ್ಯಾಂಪ್, ಅಧಿಕ ಸೌಕರ್ಯಗಳಿಲ್ಲದೆ ಬದುಕುವುದು ಹೇಗೆ, ನಮ್ಮ ಕೆಲಸವನ್ನು ನಾವೇ ಪೂರ್ಣಗೊಳಿಸುವುದು ಹೇಗೆ ಅಂದರೆ ತಿಂದ ತಟ್ಟೆ ತೊಳೆಯುವುದು, ಆಹಾರವನ್ನು ಸಿದ್ಧಪಡಿಸುವುದು ಹೀಗೆ ಮಕ್ಕಳು ಹೊಸ ಅನುಭವ ಪಡೆಯಬೇಕು.
ಸಾಕಷ್ಟು ಮನೆಯಲ್ಲಿ ತುಂಬಾ ಮುದ್ದಿನಿಂದ ಬೆಳೆಸಿರುತ್ತಾರೆ ಅಂಥವರು ಇಂಥ ಕ್ಯಾಂಪ್‌ಗಳಿಗೆ ಬಂದರೆ ತಮ್ಮ ಕೆಲಸ ತಾವೇ ಮಾಡಿಕೊಳ್ಳುವುದು ಕಲಿಯುತ್ತಾರೆ.
ಎಕ್ಸ್‌ಪರ್ಟ್ಸ್ ಇದ್ದಾರೆಯೇ?
ಸಮ್ಮರ್‌ಕ್ಯಾಂಪ್ ಯಾರು ಬೇಕಾದರೂ ಮಾಡಬಹುದು, ಆದರೆ ಆ ಸಮ್ಮರ್ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಕಲಿಸಲು ಎಷ್ಟು ಜನ ಎಕ್ಸ್‌ಪರ್ಟ್ ಇದ್ದಾರೆ ಎಂಬುವುದು ಕೂಡ ನೋಡಿ. ನೃತ್ಯ ಕ್ಲಾಸ್ ಮಾಡುತ್ತಿದ್ದಾರೆ ಎಂದರೆ ಸಾಮಾನ್ಯ ನೃತ್ಯ ಶಿಕ್ಷಕರಿದ್ದರೆ ಸಾಕಾಗಲ್ಲ, ಎಕ್ಸ್‌ಪರ್ಟ್‌ಗಳಿದ್ದಾರೆಯೇ ಎಂದು ಗಮನಿಸಿ.
ಬಜೆಟ್ ಕಡೆಯೂ ಗಮನ ಕೊಡಿ
ನಮ್ಮ ನಿರೀಕ್ಷೆಗೆ ತಕ್ಕ ಕ್ಯಾಂಪ್ ನಮ್ಮ ಬಜೆಟ್ ಒಳಗಡೆ ಸಿಗುವುದೇ ಎಂದು ವಿಚಾರಿಸಿ. ಕೆಲವೊಂದು ಸಮ್ಮರ್‌ಕ್ಯಾಂಪ್ ತುಂಬಾ ಚೆನ್ನಾಗಿರುತ್ತದೆ , ಬಜೆಟ್ ಕೂಡ ಕಡಿಮೆ ಇರುತ್ತದೆ. ಇನ್ನು ಕೆಲವು ಕ್ಯಾಂಪ್‌ಗಳಲ್ಲಿ ತುಂಬಾ ಚಾರ್ಜ್ ಹಾಕಲಾಗುತ್ತದೆ. ಆದ್ದರಿಂದ ನಿಮ್ಮ ಬಜೆಗೆ ಸೂಕ್ತವಾದ ಸಮ್ಮರ್‌ಕ್ಯಾಂಪ್ ಆಯ್ಕೆ ಮಾಡಿ.
ಸಮ್ಮರ್ ಕ್ಯಾಂಪ್‌ನ ಪ್ರಯೋಜನಗಳು
* ಸಮ್ಮರ್‌ಕ್ಯಾಂಪ್‌ನಿಂದ ಮಕ್ಕಳಿಗೆ ಹೊಸತನ್ನು ಕಲಿಯಲು ಸಾಧ್ಯವಾಗುವುದು.
* ಮನೆಯಲ್ಲಿಯೇ ಇದ್ದು ಟಿವಿ, ಮೊಬೈಲ್ ಮುಂದೆ ಸಮಯ ಕಳೆಯುವುದು ತಪ್ಪುತ್ತದೆ.
*ಸಮ್ಮರ್‌ಕ್ಯಾಂಪ್‌ನಲ್ಲಿ ಡ್ಯಾನ್ಸ್, ಯೋಗ, ಅಂತೆಲ್ಲಾ ಇರುವುದರಿಂದ ಮಕ್ಕಳಿಗೆ ದೈಹಿಕ ವ್ಯಾಯಾಮ ಕೂಡ ಸಿಗುವುದು.
* ಇತರ ಮಕ್ಕಳ ಜೊತೆ ಖುಷಿ-ಖುಷಿಯಾಗಿ ಬೆರೆತು ಕಲಿಯುವುದರಿಂದ ಒಂಟಿತನ ದೂರಾಗುವುದು (ಒಂದೇ ಮಗುವಾಗಿದ್ದರೆ)
* ಹೊಸ ಕೌಶಲ್ಯ ರೂಢಿಸಿಕೊಳ್ಳಲು ಸಾಧ್ಯವಾಗುವುದು.



Click it and Unblock the Notifications
