Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪೋಷಕರೇ, ನಿಮ್ಮ ಮಕ್ಕಳಲ್ಲಿ ದೊಡ್ಡ ಮಗುವಿಗೆ ಈ ಮಾತುಗಳನ್ನು ಹೇಳಲೇಬೇಡಿ
ಒಂದಕ್ಕಿಂತ ಹೆಚ್ಚು ಮಕ್ಕಳನ್ನು ನೀವು ಹೊಂದಿದ್ದರೆ ಆ ಮಕ್ಕಳನ್ನು ಬೆಳೆಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಒಂದೇ ಮಗು ಇದ್ದಾಗ ಅದನ್ನು ಬೆಳೆಸುವ ರೀತಿಗೂ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದಾಗ ಅವರುಗಳನ್ನು ಬೆಳೆಸುವ ರೀತಿಗೂ ಬಹಳ ವ್ಯತ್ಯಾಸವಿರುತ್ತದೆ. ನೀವು ಯಾವ ರೀತಿ ನಡೆದುಕೊಳ್ಳುತ್ತೀರಿ ಆ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರಿತವಾಗಿರುತ್ತದೆ ಎಂಬುದನ್ನು ಮರೆಯಬೇಡಿ.

ಹೌದು, ಎಷ್ಟೋ ಬಾರಿ ಮನೆಯಲ್ಲಿ ಎರಡು ಮಕ್ಕಳಿದ್ದರೆ ಮೊದಲನೆಯ ಮಗು ಅಣ್ಣ ಅಥವಾ ಅಕ್ಕ ಆಗಿದ್ದರೆ ಎರಡನೆಯ ಮಗು ತಂಗಿ ಅಥವಾ ತಮ್ಮ ಆಗಿದ್ದು, ಅಂತಹ ಸಂದರ್ಭದಲ್ಲಿ ಅಣ್ಣ ಅಥವಾ ಅಕ್ಕ ಎರಡನೇ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನ ನೋಡಿಕೊಳ್ಳಬೇಕು ಎನ್ನುವಂತೆ ತಂದೆ ತಾಯಿ ವರ್ತಿಸುತ್ತಾರೆ ಅಷ್ಟೇ ಅಲ್ಲದೆ ಮೊದಲು ಮಗುವಿನ ಮೇಲೆ ಸಾಕಷ್ಟು ಒತ್ತಡವನ್ನು ಹೇರುತ್ತಾರೆ ಇಂತಹ ಸಂದರ್ಭದಲ್ಲಿ ದೊಡ್ಡ ಮಗುವಿನ ಮನಸ್ಸಿನ ಮೇಲೆ ಬೇರೆಯದೆ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಇಂತಹ ಕೆಲವು ವಿಚಾರಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ದೊಡ್ಡ ಮಗುವಿನ ಎದುರಿನಲ್ಲಿ ಹೇಳಬೇಡಿ.
ಏನು ಆಗುವುದಿಲ್ಲ!
ಎಷ್ಟೋ ಬಾರಿ ಚಿಕ್ಕ ಮಗು, ಅಣ್ಣ ಅಥವಾ ಅಕ್ಕನ ಜೊತೆಗೆ ಫೈಟಿಂಗ್ ಮಾಡುತ್ತ ಅವರನ್ನು ಬೀಳಿಸಬಹುದು, ದೊಡ್ಡ ಮಗುವಿಗೂ ಕೂಡ ಏಟಾಗಬಹುದು. ಆ ಸಂದರ್ಭದಲ್ಲಿ ದೊಡ್ಡ ಮಗು ಬಂದು ನಿಮ್ಮ ಬಳಿ ದೂರುವುದು ಸಹಜ. ಆತ ನಿನ್ನ ತಮ್ಮ ಅಥವಾ ತಂಗಿ ತಾನೇ? ಆತ ಏನಾದರೂ ಮಾಡಿದರೆ ಕಂಪ್ಲೇಂಟ್ ತೆಗೆದುಕೊಂಡು ಬರಬೇಡ ನಿನಗೆ ಏನು ಆಗುವುದಿಲ್ಲ ಎನ್ನುವಂತಹ ಮಾತುಗಳನ್ನು ದೊಡ್ಡ ಮಗುವಿನ ಜೊತೆಗೆ ಎಂದಿಗೂ ಹೇಳಬೇಡಿ ಇದರಿಂದ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ನೀನೇ ಸ್ವಲ್ಪ ಅಡ್ಜಸ್ಟ್ ಮಾಡ್ಕೋ!
'ಅವನು ಚಿಕ್ಕವನು ತಾನೆ ನೀನು ದೊಡ್ಡವನು. ನೀನೇ ಸ್ವಲ್ಪ ಅಡ್ಜಸ್ಟ್ ಮಾಡ್ಕೋ', ಸಾಮಾನ್ಯವಾಗಿ ಎಲ್ಲಾ ತಂದೆ ತಾಯಿಯರು ಹೇಳಿಯೇ ಹೇಳುತ್ತಾರೆ. ಆದರೆ ನೆನಪಿಟ್ಟುಕೊಳ್ಳಿ, ಮೊದಲನೆಯ ಮಗು ಅಣ್ಣ ಅಥವಾ ಅಕ್ಕ ಆಗಿರಬಹುದು ಆದರೆ ಅವರು ಕೂಡ ಮಕ್ಕಳು ಎಂಬುದನ್ನು ಮರೆಯದಿರಿ. ಯಾಕೆಂದರೆ ಪ್ರತಿ ಬಾರಿ ಅವರ ಬಳಿಯೇ ಹೊಂದಾಣಿಕೆ ಮಾಡಿಕೋ ನಿನ್ನ ತಮ್ಮ ಆತ ಎಂದು ಮತ್ತೆ ಮತ್ತೆ ಹೇಳುವುದು ಅಂತಹ ಮಕ್ಕಳ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಈ ಬಾರಿ ಯಾಕೆ ನಾನೇ ಹೊಂದಾಣಿಕೆ ಮಾಡಿಕೊಳ್ಳಬೇಕು. ನನ್ನ ಅಪ್ಪ ಅಮ್ಮನಿಗೆ ನನ್ನ ಬಗ್ಗೆ ಪ್ರೀತಿ ಇಲ್ಲವೇ ಎನ್ನುವಂತಹ ಭಾವನೆ ಮೂಡಬಹುದು.
ನೀನು ದೊಡ್ಡವನು ಅಳಬೇಡ;
ನೋವಾದಾಗ ಬೇಸರವಾದಾಗ ಅಳುವುದಕ್ಕೆ ದೊಡ್ಡವನು ಚಿಕ್ಕವನು ಎನ್ನುವ ಭೇದವಿಲ್ಲ. ಆದರೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಮಕ್ಕಳು ಇರುವ ಮನೆಯಲ್ಲಿ ಸದಾ ದೊಡ್ಡವನು ಅಥವಾ ದೊಡ್ಡವಳು ಅತ್ತಾಗ ನೀನು ದೊಡ್ಡವನು ಚಿಕ್ಕವರ ಹಾಗೆ ಅಳಬೇಡ ಎಂದು ತಂದೆ ತಾಯಿಗಳು ಮತ್ತೆ ಗದರಿ ಅವರ ಬಾಯಿ ಮುಚ್ಚಿಸುತ್ತಾರೆ. ಹೀಗೆ ಮಾಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಅದರ ಬದಲು ನಿಮ್ಮ ದೊಡ್ಡ ಮಗು ಯಾಕೆ ಅಳುತ್ತಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ ಅವರ ಸಮಸ್ಯೆಯನ್ನು ಪರಿಹರಿಸಿ ಸುಖ ಸುಮ್ಮನೆ ಯಾವ ಮಕ್ಕಳು ಅಳುವುದಿಲ್ಲ ಅದರಲ್ಲೂ ದೊಡ್ಡ ಮಗು ಅಳುತ್ತಿದೆ ಎಂದರೆ ಅದಕ್ಕೆ ಏನೂ ಸಮಸ್ಯೆ ಆಗಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಿ.
ನೀನು ಚಿಕ್ಕವನಂತೆ ಆಡಬೇಡ;
ಅದೆಷ್ಟು ಸಂದರ್ಭದಲ್ಲಿ ಎರಡು ಮಕ್ಕಳಿದ್ದರೆ ಹೆಚ್ಚು ಅಂದರೆ ಅವರಿಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ 2 ರಿಂದ 3 ವರ್ಷಗಳು ಇರಬಹುದು. ಅಂದರೆ ನಿಮ್ಮ ಮೊದಲ ಮಗುವಿಗೆ ಐದರಿಂದ ಆರು ವರ್ಷ ವಯಸ್ಸಿರಬಹುದು. ಪ್ರತಿ ಬಾರಿ ದೊಡ್ಡ ಮಗು ನಿಮ್ಮ ಬಳಿ ಮಾತನಾಡಲು ಬಂದಾಗ ನೀನು ಕೂಡ ಚಿಕ್ಕವನಂತೆ ಆಡಬೇಡ ಅವನಂತೆ ಕಿರಿಕಿರಿ ಮಾಡಬೇಡ ಎಂದು ಮಕ್ಕಳ ಬಳಿ ಮತ್ತೆ ಮತ್ತೆ ಹೇಳುವುದು ಒಳ್ಳೆಯದಲ್ಲ ಇದರಿಂದ ತನ್ನ ತಂದೆ ತಾಯಿಗೆ ಚಿಕ್ಕ ಮಗು ಕಿರಿಕಿರಿ ಉಂಟು ಮಾಡುತ್ತಿದೆ ಎನ್ನುವ ಭಾವನೆ ದೊಡ್ಡ ಮಗುವಿನಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ ಸಾಧ್ಯವಾಗುತ್ತಿಲ್ಲ ಎನ್ನುವ ಬೇಸರವೂ ಉಂಟಾಗಬಹುದು ಇದು ಮಗುವಿನ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನಿನ್ನನ್ನೇ ನೋಡಿ ನಿನ್ನ ತಮ್ಮ ಕಲಿಯುತ್ತಾನೆ!
ಈ ಮಾತನ್ನು ನೀವು ಪಾಸಿಟಿವ್ ಆಗಿ ಹೇಳಿದರೆ ತೊಂದರೆ ಇಲ್ಲ ಆದರೆ ನಿಮ್ಮ ದೊಡ್ಡ ಮಗು ಯಾವುದೇ ಸಣ್ಣಪುಟ್ಟ ತಪ್ಪುಗಳನ್ನ ಮಾಡಿದಾಗಲೂ ಕೂಡ ಅದನ್ನ ಬೆರಳು ಮಾಡಿ ತೋರಿಸಿ ನಿನ್ನಂತೆ ನಿನ್ನ ತಮ್ಮನು ಆಗುತ್ತಾನೆ. ನಿನ್ನಂತೆ ಕೆಟ್ಟ ಬುದ್ಧಿ ಕಲಿಯುತ್ತಾನೆ ಎನ್ನುವಂತಹ ಮಾತುಗಳನ್ನು ಆಡುವುದು ಸರಿಯಲ್ಲ ಈ ರೀತಿ ಬೇಧಭಾವ ಮಾಡುತ್ತಿರುವ ಬಗ್ಗೆ ನಿಮ್ಮ ಮಗುವಿನ ಮನಸ್ಸಿನಲ್ಲಿ ಆಳವಾಗಿ ಭಾವನೆಗಳು ಬೇರೂರಿದರೆ ಅದನ್ನ ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಇದು ಅಣ್ಣ-ತಮ್ಮಂದಿರ ನಡುವೆ ಅಕ್ಕ ತಂಗಿಯರ ನಡುವೆ ದ್ವೇಷಕ್ಕೂ ಕೂಡ ಕಾರಣವಾಗಬಹುದು. ಹಾಗಾಗಿ ನೀವು ಇಬ್ಬರು ಮಕ್ಕಳ ನಡುವೆ ಯಾವ ರೀತಿಯ ಭಾಂದವ್ಯ ಬೆಳೆಸಬೇಕು ಯಾವ ರೀತಿ ಸರಿ ತಪ್ಪುಗಳನ್ನು ಅರ್ಥ ಮಾಡಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಇಲ್ಲವಾದರೆ ನಿಮ್ಮ ಮಕ್ಕಳ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಸದಾ ಕಾಲಕ್ಕೆ ಉಳಿದು ಹೋಗುತ್ತದೆ ನೆನಪಿರಲಿ.



Click it and Unblock the Notifications











