Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪದೇ ಪದೇ ಗರ್ಭಪಾತವಾಗುವುದಕ್ಕೆ ಕಾರಣವೇನು? ಜಂಜೆತನಕ್ಕೆ ಇದು ಕಾರಣವಾಗುತ್ತಾ?
ಹೆಣ್ಣು ತಾಯಿಯಾದರೆ ಆಕೆ ಪರಿಪೂರ್ಣ ಮಹಿಳೆ ಎನಿಸಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತೆ. ಆ ವಿಷಯ ಹಾಗಿರಲಿ, ಬಹುತೇಕ ಮಹಿಳೆಯರು ಪರಿಪೂರ್ಣರಾಗಿಯೇ ಇರುತ್ತಾರೆ.
ಆದರೆ ತಾಯ್ತನ ಅನ್ನುವುದು ಅನುಭವಿಸುವ ಒಂದು ಆಹ್ಲಾದಕರ ಅನುಭವ. ಅದನ್ನ ಪಡೆಯಲು ಪ್ರತಿಯೊಬ್ಬ ಮಹಿಳೆಯೂ ಆಸೆ ಪಡುತ್ತಾಳೆ.

ಆದರೆ ದುರಾದೃಷ್ಟವಶಾತ್ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಕೆಲವರಿಗೆ ಗರ್ಭಿಣಿ ಆಗುವ ಭಾಗ್ಯ ಇದ್ದರೂ, ಗರ್ಭಪಾತದಿಂದಾಗಿ ಗರ್ಭ ನಿಲ್ಲುವುದೇ ಇಲ್ಲ. ಹಾಗಾದರೆ ಇದಕ್ಕೆ ಕಾರಣ ಏನು? ಹಾಗಾದಾಗ ಏನು ಮಾಡಬೇಕು? ಗರ್ಭಪಾತ ಒಮ್ಮೆ ಆದರೆ ಮತ್ತೆ ಮಗು ಆಗೋದೇ ಇಲ್ವೇ? ಇದೆಲ್ಲದಕ್ಕೂ ತಜ್ಞರ ಉತ್ತರ ಇಲ್ಲಿದೆ.
ಮಹಿಳೆಯರಲ್ಲಿ ಗರ್ಭಪಾತವು ಸುಮಾರು ಮೂರು ತಿಂಗಳಿನಲ್ಲಿ ಅಥವಾ 20 ವಾರಗಳ ಮೊದಲು ಹೆಚ್ಚಾಗಿ ಸಂಭವಿಸುತ್ತದೆ ಕೆಲವು ಅಧ್ಯಯನದ ಪ್ರಕಾರ 20ರ ವಯೋಮಿತಿಯಲ್ಲಿ ಇರುವ ಮಹಿಳೆಯರಿಗೆ ಗರ್ಭಪಾತ ಆಗುವ ಸಾಧ್ಯತೆಗಳು 12 ರಿಂದ 15% ಮಾತ್ರ ಇದ್ರೆ 40 ವಯೋಮಿತಿಯಲ್ಲಿ ಇರುವ ಮಹಿಳೆಯರಲ್ಲಿ ಅದು 25% ಆಗಿರುತದೆ. ಅಂದರೆ ವಯಸ್ಸಾಗುತ್ತ ಹೋದಂತೆ ಕ್ರೋಮೋಸೋಮ್ ಅಸಹಜತೆಯಿಂದ ಗರ್ಭಪಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಗರ್ಭಪಾತಕ್ಕೆ ಕಾರಣಗಳೇನು?
ಇದಕ್ಕೆ ಹಲವಾರು ಕಾರಣಗಳು ಇವೆ. ಅವುಗಳಲ್ಲಿ ಮುಖ್ಯವಾದವುಗಳು:
ಮಹಿಳೆಯ ವಯಸ್ಸು ಹೆಚ್ಚಾಗಿದ್ದರೆ, ಅಥವಾ ಗಂಡು ಹೆಣ್ಣಿನ ನಡುವೆ ವಯಸ್ಸಿನ ಅಂತರ ಹತ್ತು ವರ್ಷಕ್ಕೂ ಅಧಿಕವಾಗಿದ್ದರೆ.
ಯಾವುದಾದರೂ ಸೋಂಕು ದೇಹದಲ್ಲಿ ಇದ್ದರೆ
ಹೆಚ್ಚು ಕೆಲಸದಲ್ಲಿ ತೊಡಗಿಕೊಳ್ಳುವಿಕೆ ಅಥವಾ ವಾತಾವರಣ
ವಿಕಿರಣ ಮತ್ತು ವಿಷಕಾರಿ ಅಂಶಗಳು ದೇಹದಲ್ಲಿ ಸೇರಿಕೊಂಡರೆ
ಕ್ರೋಮೋಸೋಮ್ ವೈಪರಿತ್ಯದಿಂದಾಗಿ
ಹಾರ್ಮೋನ್ ಗಳ ಅಸಮತೋಲನ
ನಿರಂತರ ಧೂಮಪಾನ, ಮಧ್ಯಪಾನ ಮೊದಲಾದ ಹಾನಿಕಾರಕ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರೆ
ಮೂತ್ರಪಿಂಡದ ಕಾಯಿಲೆ
ಮಧುಮೇಹ ಅಧಿಕವಾಗಿದ್ದರೆ
ಥೈರಾಯ್ಡ್ ಕಾಯಿಲೆ ಇದ್ದಾಗ
ಲೂಪಸ್ ನಂತಹ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆ ಇದ್ದರೆ.
ಗರ್ಭಪಾತದ ಲಕ್ಷಣಗಳೇನು?
ರಕ್ತಸ್ರಾವಕೈ ಕಾಲುಗಳಲ್ಲಿ ಸೆಳೆತ
ಕಿಬ್ಬೊಟ್ಟೆಯಲ್ಲಿ ನೋವು
ಹೊಟ್ಟೆ ನೋವು
ನಿಶ್ಯಕ್ತಿ
ಜೊತೆಗೆ ಜ್ವರ ಕೂಡ ಬರುವ ಸಾಧ್ಯತೆ ಇರುತ್ತದೆ.
ಗರ್ಭಪಾತದ ಬಳಿಕ ರಕ್ತಸ್ರಾವ ಉಂಟಾಗಿ ನೋವು ಕೂಡ ಕಾಣಿಸಿಕೊಳ್ಳಬಹುದು ಈ ಸಮಯದಲ್ಲಿ ನೀವು ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು ಇಲ್ಲವಾದರೆ ಇತರ ಸೋಂಕುಗಳು ಕೂಡ ಉಂಟಾಗಬಹುದು.
ಗರ್ಭಪಾತ ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಮೊದಲು ವೈದ್ಯರ ಬಳಿ ಹೋಗಬೇಕು. ಅಲ್ಲಿ ಗರ್ಭಕಂಠದ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ಮಗುವಿನ ಹೃದಯ ಬಡಿತವನ್ನು ತಿಳಿಯುವುದಕ್ಕೆ ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಲಾಗುತ್ತದೆ. ಹಾರ್ಮೋನ್ ಗಳನ್ನು ಪರೀಕ್ಷಿಸುವುದಕ್ಕಾಗಿ ರಕ್ತ ಪರೀಕ್ಷೆ ಮಾಡಿಸಲಾಗುತ್ತೆ. ಅಲ್ಲದೆ ಗರ್ಭಪಾತದ ಅಂಗಾಂಶವು ನಿಮ್ಮ ದೇಹದಿಂದ ಹೊರ ಹೋಗಿದೆಯೇ ಇಲ್ಲವೇ ಎಂಬುದನ್ನು ಕೂಡ ವೈದ್ಯರು ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸಿ ದೃಢೀಕರಣ ನೀಡುತ್ತಾರೆ. ಒಂದು ವೇಳೆ ಒಂದು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಗರ್ಭಪಾತ ಸಂಭವಿಸಿದರೆ ಆಗ ವೈದ್ಯರು ನಿಮ್ಮ ಸಂಗಾತಿಯ ವಂಶವಾಹಿಗಳನ್ನು ಕೂಡ ಪರೀಕ್ಷೆ ಮಾಡಿಸುವ ಸಲಹೆ ನೀಡಬಹುದು.
ಗರ್ಭಪಾತ ಆಗದಂತೆ ಆರೈಕೆ ಮಾಡುವುದು ಹೇಗೆ!
ನೀವು ಅಂದುಕೊಂಡ ಹಾಗೆ ಗರ್ಭಧಾರಣೆ ಆಗಬೇಕು, ನಂತರ ಯಾವುದೇ ಸಮಸ್ಯೆ ಆಗಬಾರದು ಅಂದ್ರೆ ಮೊದಲು ನಿಮ್ಮ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳಬೇಕು. ನಿಮ್ಮ ದಿನಚರಿಗಳಾಗಿರಲಿ ಆಹಾರ ಕ್ರಮವಾಗಿರಲಿ ಸೂಕ್ತ ರೀತಿಯಲ್ಲಿ ಇರಬೇಕು. ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವನ್ನು ಕೂಡ ಈ ಸಮಯದಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಎಷ್ಟು ಬಾರಿ ಗರ್ಭಪಾತ ಆದಾಗ ಗೊತ್ತೇ ಆಗುವುದಿಲ್ಲ. ಪಿರಿಯಡ್ಸ್ ರಕ್ತಸ್ರಾವವಾಗಿ ಗರ್ಭ ಹೋಗಿಬಿಡಬಹುದು. ಆದರೆ ನೀವು ಗರ್ಭ ಧರಿಸುವ ಯೋಜನೆ ಮಾಡಿದ್ದರೆ ನೀವು ಸರಿಯಾದ ರೀತಿಯ ಆಹಾರ ಕ್ರಮ ಜೀವನಶೈಲಿ ರೂಢಿಸಿಕೊಳ್ಳಬೇಕು ಅದಕ್ಕೆ ಮೊದಲು ಸಿದ್ಧರಾಗಬೇಕು. ಇನ್ನು ಯಾವುದೇ ಸಲಹೆಯ ಅಗತ್ಯವಿದ್ದರೆ ಗರ್ಭಧಾರಣೆಯ ಮೊದಲು ಹಾಗೂ ನಂತರ ವೈದ್ಯರ ಸಲಹೆಯನ್ನು ಪಡೆಯಬೇಕು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಾಗ ಗರ್ಭಪಾತ ಆಗುವ ಸಮಸ್ಯೆಯನ್ನು ತಪ್ಪಿಸಬಹುದು.
ಗರ್ಭಪಾತದ ನಂತರ ಮತ್ತೆ ಯಾವಾಗ ಗರ್ಭಧಾರಣೆ ಮಾಡಬಹುದು?
ಇದು ಹಲವರಲ್ಲಿ ಇರುವಂತಹ ಪ್ರಶ್ನೆ. ಸ್ವಾಭಾವಿಕ ಗರ್ಭಪಾತ ಉಂಟಾದರೆ ಮತ್ತೆ ಯಾವಾಗ ಗರ್ಭಧಾರಣೆ ಮಾಡಬಹುದು ಎಂದರೆ, ಗರ್ಭಪಾತ ಸಂಭವಿಸಿದ ಎರಡು ಮೂರು ವಾರಗಳ ನಂತರ ಪುನಃ ಗರ್ಭಾವಸ್ಥೆಗೆ ದೇಹ ಸಿದ್ಧವಾಗುತ್ತದೆ. ಎರಡು ವಾರಗಳ ನಂತರ ಅಂಡೋತ್ಪತ್ತಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತದೆ.
ಗರ್ಭಪಾತದ ಬಳಿಕ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೀವು ಸಿದ್ಧರಾಗಿದ್ದರೆ ವೈದ್ಯರ ಸಲಹೆ ಪಡೆದು ಗರ್ಭ ಧರಿಸಬಹುದು. ಗರ್ಭಪಾತವಾದರೆ ಹೆದರುವ ಅಗತ್ಯವಿಲ್ಲ ಅದರಿಂದ ಬಂಜೆತನ ಉಂಟಾಗುತ್ತದೆ ಎನ್ನುವುದಕ್ಕೆ ಯಾವುದೇ ಸಂಶೋಧನೆಯೂ ದೃಢಪಡಿಸಿಲ್ಲ. ಆದರೆ ಮತ್ತೆ ಮತ್ತೆ ಗರ್ಭಪಾತ ಆಗುತ್ತಿದ್ದರೆ ಗರ್ಭಕೋಶಕ್ಕೆ ತೊಂದರೆ ಉಂಟಾಗಬಹುದು ಹಾಗಾಗಿ ಈ ವಿಚಾರದಲ್ಲಿ ನೀವು ಹೆಚ್ಚು ಜಾಗೃತರಾಗಿರಬೇಕು ಜೊತೆಗೆ ವೈದ್ಯರ ಸೂಕ್ತ ಸಲಹೆಯನ್ನು ಪಡೆದುಕೊಳ್ಳಬೇಕು.



Click it and Unblock the Notifications