Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ದೇಹದಲ್ಲಿ ಒಂದೇ ತಿಂಗಳಿನಲ್ಲಿ ಈ ಬದಲಾವಣೆಯಾಗಿದ್ದರೆ ನೀವು ಗರ್ಭವತಿಯಾಗಿದ್ದೀರಿ
ಗರ್ಭಿಣಿಯಾದಾಗಲೇ ನಾವು ಗರ್ಣಿಯ ಆಗಿದ್ದೇವೆ ಎಂದು ಕೇಳುವುದಾದರೆ ಹೌದು ಗರ್ಭಿಣಿಯಾದ ಕೂಡಲೇ ದೇಹದಲ್ಲಿ ಕೆಲ ಬದಲಾವಣೆಯಾಗುವುದು, ದೇಹದಲ್ಲಿನ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ಗರ್ಭಧಾರಣೆಯಾಗಿದೆ ಎಂಬುವುದು ತಿಳಿಯುತ್ತದೆ. ಬನ್ನಿ ಗರ್ಭಿಣಿಯಾದಾಗ ದೇಹದಲ್ಲಿ ಪ್ರಾರಂಭದಲ್ಲಿಯೇ ಕಂಡು ಬರುವ ಲಕ್ಷಣವೇನು ಎಂದು ನೋಡೋಣ ಬನ್ನಿ:

ಗರ್ಭಧಾರಣೆಯಾದ ತಕ್ಷಣ ದೇಹದಲ್ಲಿ ಈ ಬದಲಾವಣೆಯಾಗುವುದು
- ಸಾಮಾನ್ಯವಾಗಿ ಮುಟ್ಟಿನ ಚಕ್ರ 28 ದಿನಗಳು. ಮುಟ್ಟಾದ 28 ದಿನಕ್ಕೆ ಮತ್ತೆ ಋತು ಚಕ್ರ ಶುರುವಾಗುವುದು.
- ಮುಟ್ಟಾದ 14 ದಿನದಲ್ಲಿ ಗರ್ಭಧಾರಣೆಯಾಗುವುದು, ಏಕೆಂದರೆ ಈ ಸಮಯದಲ್ಲಿ ಅಂಡೋತ್ಪತ್ತಿಯಾಗುತ್ತದೆ. ಈ ಅವಧಿಯಲ್ಲಿ ವೀರ್ಯಾಣುಗಳು ಅಂಡಾಣುಗಳನ್ನು ಸೇರಿದರೆ ಗರ್ಭಧಾರಣೆಯಾಗುವುದು.
- ಮುಟ್ಟಾದ 17 ದಿನದಲ್ಲಿ ಸ್ತನಗಳು ಬಿಗಿಯಾದಂತೆ ಅನಿಸುವುದು, ಅಲ್ಲದೆ ಮೈ ಉಷ್ಣಾಂಶ ಹೆಚ್ಚಾಗುವುದು.
- ಮುಟ್ಟಾದ 20ರಿಂದ 26 ದಿನಗಳಲ್ಲಿ ಸ್ವಲ್ಪ ರಕ್ತಸ್ರಾವ ಕಂಡು ಬಂದರೂ ಬರಬಹುದು
- ಮುಟ್ಟಾದ 28-35 ದಿನಗಳಾದ ಮೇಲೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು.
- ಮುಟ್ಟಾಗಿ 35 ದಿನಗಳಿಗಿಂತ ಹೆಚ್ಚಾದರೆ ಗರ್ಭಧಾರಣೆಯ ಲಕ್ಷಣಗಳು ಕಂಡು ಬರುವುದು.
ಗರ್ಭಧಾರಣೆಯ ಲಕ್ಷಣಗಳು
ಮುಟ್ಟಾಗದಿರುವುದು
ತಲೆಸುತ್ತು
ದೇಹದ ಉಷ್ಣಾಂಶ ಹೆಚ್ಚಾಗುವುದು
ಆಹಾರ, ಮತ್ತಿತರ ವಾಸನೆ ಮೂಗಿಗೆ ಬಿದ್ದರೆ ಸಹಿಸಲು ಸಾಧ್ಯವಾಗದಿರುವುದು
ಅಲ್ಪ ರಕ್ತ ಕಲೆ
ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಉಂಟಾಗುವುದು
ಮೂಡ್ ಸ್ವಿಂಗ್
ಹೊಟ್ಟೆ ಉಬ್ಬಿದಂತಾಗುವುದು
ಎದೆಯುರಿ
ವಾಂತಿ
ತುಂಬಾ ಹಸಿವು ಅಥವಾ ಹಸಿವು ಇಲ್ಲದೇ ಇರುವುದು
ಈ ಲಕ್ಷಣಗಳು ಕಂಡು ಬಂದರೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿ.
ಮೈ ಉಷ್ಣಾಂಶ ಹೆಚ್ಚಾಗುವುದು: ಗರ್ಭಧಾರಣೆಯಾದಾಗ ಮೈ ಉಷ್ಣಾಂಶ ತುಂಬಾ ಹೆಚ್ಚಾಗುವುದು. ಆದ್ದರಿಂದ ಮೈ ಉಷ್ಣಾಂಶ ಹೆಚ್ಚಾಗಿದೆ ಎಂದು ನಿಮಗನಿಸಿದಾಗ ಪ್ರೆಗ್ನೆನ್ಸಿ ಕಿಟ್ ತಂದು ಪರೀಕ್ಷಿಸಿ. ಅಲ್ಲದೆ ಗರ್ಭಧಾರಣೆಯ ಸಮಯದಲ್ಲಿ ತುಂಬಾನೇ ಮೂಡ್ ಸ್ವಿಂಗ್ ಆಗುವುದು.
ಅಲ್ಪ ರಕ್ತಸ್ರಾವ ಕಂಡರೆ ಅದು ಮುಟ್ಟಲ್ಲ: ಎಷ್ಟೋ ಜನರಿಗೆ ಈ ಕಾರಣಕ್ಕೆ ತಾನು ಗರ್ಭಿಣಿ ಎಂಬುವುದು ತಡವಾಗಿ ಗೊತ್ತಾಗುವುದು. ಕೆಲವರಿಗೆ ಗರ್ಭಿಣಿಯಾದಾಗ ಕೂಡ ಸ್ವಲ್ಪ ರಕ್ತಸ್ರಾವ ಕಂಡು ಬರುವುದು. ಆದರೆ ರಕ್ತಸ್ರಾವ ತುಂಬಾನೇ ಇರಲ್ಲ, ಈ ಅಲ್ಪ ರಕ್ತಸ್ರಾವವನ್ನು ನೋಡಿ ಮುಟ್ಟಾಗಿದೆ ಎಂದು ಭಾವಿಸಬಾರದು. ಗರ್ಭಾವಸ್ಥೆಯ ಇತರ ಲಕ್ಷಣಗಳ ಜೊತೆಗೆ ಈ ರೀತಿ ಸ್ವಲ್ಪ ರಕ್ತಸ್ರಾವವಾದರೆ ಅದು ಗರ್ಭಧಾರಣೆಯ ಲಕ್ಷಣವಾಗಿದೆ.
ಮಹಿಳೆಯರಲ್ಲಿ ಫಲವತ್ತತೆಯ ಸಮಯ: ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿಯ ಸಮಯವನ್ನು ಫಲವತ್ತತೆಯ ಸಮಯ. ಈ ಅವಧಿಯಲ್ಲಿ ವೀರ್ಯಾಣು ಅಂಡಾಣು ಸಂಪರ್ಕಕಕ್ಕೆ ಬಂದಾಗ ಮಾತ್ರ ಗರ್ಭಧಾರಣೆಯಾಗುವುದು. ವೀರ್ಯಾಣು ಮಹಿಳೆಯ ದೇಹದಲ್ಲಿ ಒಂದು ವಾರದವರೆಗೆ ಜೀವಂತ ಇರುತ್ತದೆ, ವೀರ್ಯಾಣು ಇದ್ದ ಸಮಯದಲ್ಲಿ ಅಂಡಾಣು ವೀರ್ಯಾಣುವಿನ ಸಂಪರ್ಕಕ್ಕೆ ಬಂದು ಗರ್ಭಧಾರಣೆಯಾಗುವುದು.



Click it and Unblock the Notifications
