Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಗರ್ಭಿಣಿಯಾದಾಗ ಗೊರಿಕೆ ಹೊಡೆದರೆ ಏನಾದರೂ ತೊಂದರೆ ಇದೆಯೇ?
ಒಬ್ಬ ಮಹಿಳೆ ಗರ್ಭಿಣಿ ಆದಾಗ ಆಕೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ದೈಹಿಕವಾಗಿಯೂ, ಮಾನಸಿಕವಾಗಿಯೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾರ್ನಿಂಗ್ ಸಿಕ್ನೆಸ್, ತಲೆ ತಿರುಗುವುದು, ಹೊಟ್ಟೆ ಉಬ್ಬಸ, ಉಸಿರಾಡಲು ಕಷ್ಟವಾಗುವುದು, ತೂಕ ಹೆಚ್ಚಾಗುವುದು, ವಾಂತಿ ಹೀಗೆ ಮೊದಲಾದ ಸಮಸ್ಯೆಗಳನ್ನು ಒಂಬತ್ತು ತಿಂಗಳ ಕಾಲ ನಿರಂತರವಾಗಿ ಅನುಭವಿಸಬೇಕಾಗುತ್ತದೆ. ಇನ್ನು ಗರ್ಭಾವಸ್ಥೆಯ ಸಮಸ್ಯೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ ಕೆಲವರಿಗೆ ಗೊರಕೆ ಹೊಡೆಯುವ ಸಮಸ್ಯೆ ಆರಂಭವಾಗುತ್ತದೆ.

ಗೊರಕೆ ಯಾವಾಗ ಪ್ರಾರಂಭವಾಗುತ್ತದೆ?
ಸಾಮಾನ್ಯವಾಗಿ ಎರಡನೇ ತ್ರೈಮಾಸಿಕದಿಂದ ಗೊರಕೆ ಹೊಡೆಯುವುದು (16ನೇ ವಾರ) ಆರಂಭವಾಗುತ್ತದೆ. ಹಾರ್ಮೋನ್ ಗಳು ಮೂಗಿನ ದಟ್ಟಣೆಯನ್ನು ಉಂಟುಮಾಡಿದಾಗ ಮೂಗಿನ ನರಗಳು ಹಿಗ್ಗುತ್ತವೆ. ಇದರಿಂದ ಉಸಿರಾಡಿಸಲು ಕಷ್ಟವಾಗಿ ಬಾಯಿಯಿಂದ ಉಸಿರಾಡಿಸಬೇಕಾಗುತ್ತದೆ ಅಂತಹ ಸಮಯದಲ್ಲಿ ಗೊರಕೆ ಸೌಂಡ್ ಕೇಳಿಸುತ್ತದೆ. ಸಾಮಾನ್ಯವಾಗಿ ರಾತ್ರಿ ಮಲಗಿರುವಾಗ ಗೊರಕೆ ಹೆಚ್ಚಾಗಿ ಕೇಳಿಸುತ್ತದೆ.
ಗೊರಕೆಗೆ ಮೂಲ ಕಾರಣ ಏನು?
ಗರ್ಭಧಾರಣೆಯ ಸಂದರ್ಭದಲ್ಲಿ ಗೊರಕೆಗೆ ಮುಖ್ಯವಾದ ಕಾರಣ ಎಂದರೆ ಹಾರ್ಮೋನ್ ಗಳ ಬದಲಾವಣೆ ಹಾಗೂ ತೂಕದ ಹೆಚ್ಚಳ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಮಟ್ಟ ಹೆಚ್ಚಿದಾಗ ಮೂಗಿನಲ್ಲಿರುವ ಲೋಳೆಯ ಪೊರೆಗಳು ಊದಿಕೊಳ್ಳುತ್ತದೆ ಇದರಿಂದ ಮಲಗಿದಾಗ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದು ಅತಿಯಾದ ತೂಕದಿಂದ ಕೂಡ ಗರ್ಭವಸ್ಥೆಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಕುತ್ತಿಗೆ ಭಾಗದಲ್ಲಿ ಕೊಬ್ಬು ತುಂಬಿಕೊಂಡಾಗ ಸಮಸ್ಯೆ ಕಾಣಿಸುತ್ತದೆ.
ಮಗುವಿಗೆ ತೊಂದರೆ ಆಗುತ್ತದೆಯೇ?
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ನಿದ್ರೆಯಲ್ಲಿರುವಾಗ ಉಸಿರುಗಟ್ಟುವಿಕೆಯಿಂದಾಗಿ ಬಾಯಲ್ಲಿ ಉಸಿರಾಡಿಸುವುದರಿಂದ ಮಗುವಿಗೆ ಆಮ್ಲಜನಕದ ಕೊರತೆ ಉಂಟಾಗಬಹುದು. ಗೊರಕೆ ಸಮಸ್ಯೆ ಹೆಚ್ಚಾಗುತ್ತಿದ್ದರೆ ನೀವು ಕೂಡಲೇ ವೈದ್ಯರನ್ನ ಸಂಪರ್ಕಿಸಬೇಕು. ಇಲ್ಲವಾದರೆ ಹೃದ್ರೋಗ ಮತ್ತು ಪಲ್ಮನರಿ ಎಂಬಾಲಿಸಂ ಎನ್ನುವ ಆರೋಗ್ಯ ಸಮಸ್ಯೆ ಕಾಡಬಹುದು. ಇನ್ನು ಹೆಚ್ಚು ಗೊರಕೆ ಹೊಡೆದರೆ ಮಗುವಿನ ತೂಕ ಸರಿಯಾಗಿ ಆಗಿಲ್ಲ ಎಂದು ಅರ್ಥ. ಉಳಿದ ಗರ್ಭಿಣಿಯರಿಗೆ ಹಾಗೂ ಗರ್ಭಾವಸ್ಥೆಯಲ್ಲಿ ಗೊರಕೆ ಹೊಡೆಯುವ ಗರ್ಭಿಣಿಯರಿಗೆ ಹೋಲಿಸಿದರೆ ಮಗುವಿನ ಬೆಳವಣಿಗೆಯ ಪ್ರಮಾಣ 10%ಕಡಿಮೆ ಇರುತ್ತದೆ. ಜೊತೆಗೆ ನಾರ್ಮಲ್ ಡೆಲಿವರಿ ಬದಲು ಸಿ ಸೆಕ್ಷನ್ ಮಾಡಿಸಿಕೊಳ್ಳುವ ಸಮಸ್ಯೆಯು ಎದುರಾಗಬಹುದು. ಹಾಗಾಗಿ ಗೊರಕೆ ಹೆಚ್ಚಾದರೆ ನೀವು ವೈದ್ಯರನ್ನ ಸಂಪರ್ಕಿಸಿ ಅವರಿಂದ ಸಲಹೆ ಪಡೆದುಕೊಳ್ಳಬೇಕು.
ಗರ್ಭಿಣಿಯಾಗಿದ್ದಾಗ ಗೊರಕೆ ಸಮಸ್ಯೆ ನಿವಾರಿಸುವುದು ಹೇಗೆ?
* ವಾರದಲ್ಲಿ ಮೂರು ನಾಲ್ಕು ದಿನ ನಿರಂತರವಾಗಿ ಗೊರಕೆ ಹೊಡೆಯುವ ಅಭ್ಯಾಸ ಶುರುವಾದರೆ ವೈದ್ಯರನ್ನ ಭೇಟಿ ಮಾಡಬೇಕು.
* 24 ಮತ್ತು 28ನೇ ವಾರಗಳ ನಡುವೆ ಗ್ಲುಕೋಸ್ ಸ್ಕ್ರೀನಿಂಗ್ ಪರೀಕ್ಷೆಯನ್ನು ವೈದ್ಯರ ಸಲಹೆ ಮೇರೆಗೆ ಮಾಡಿಸಿಕೊಳ್ಳಬೇಕಾಗುತ್ತದೆ.
* ಮಲಗುವಾಗ ಔಷಧಿ ಮುಕ್ತವಾಗಿರುವ ಮೂಗಿನ ಪಟ್ಟಿಯನ್ನು ಕೂಡ ಬಳಸಬಹುದು.
* ರಕ್ತ ಪರಿಚಲನೆ ನಿಮ್ಮ ಎಡ ಭಾಗದಲ್ಲಿ ಸರಿಯಾಗಿ ಆಗೋದ್ರಿಂದ ಆ ಭಾಗದಲ್ಲಿಯೇ ಮಲಗುವುದು ಒಳ್ಳೆಯದು.
* ಗರ್ಭಾವಸ್ಥೆಯಲ್ಲಿ ಕ್ಯಾಲೋರಿ ಸೇವನೆಯ ಬಗ್ಗೆ ಗಮನವಿರಲಿ ಏಕೆಂದರೆ ತೂಕ ಹೆಚ್ಚಾದರೆ ಗೊರಕೆಯು ಹೆಚ್ಚಾಗುತ್ತದೆ.
* ಗರ್ಭಿಣಿಯಾಗಿದ್ದಾಗ ಆಲ್ಕೋಹಾಲ್, ತಂಬಾಕು ಮೊದಲಾದವುಗಳನ್ನು ಸೇವಿಸಲೇಬಾರದು. ಇದು ಗೊರಕೆಯ ಸಮಸ್ಯೆಗೆ ಕಾರಣವಾಗುತ್ತದೆ ಜೊತೆಗೆ ಮಗುವಿನ ಆರೋಗ್ಯಕ್ಕೂ ಹಾನಿಮಾಡುತ್ತದೆ.
* ಗೊರಕೆ ಹೊಡೆಯುವುದನ್ನು ತಪ್ಪಿಸಲು ತಲೆಯನ್ನು ಸ್ವಲ್ಪ ಎತ್ತರ ಭಾಗದಲ್ಲಿ ಇಟ್ಟು ಮಲಗಿ. ದಿಂಬಿನ ಮೇಲೆ ತಲೆಯನ್ನು ಇಟ್ಟು ಮಲಗಿದರೆ ಗೊರಕೆ ಅಷ್ಟಾಗಿ ಕಾಡುವುದಿಲ್ಲ.
ದೀರ್ಘಕಾಲದ ಸಮಸ್ಯೆಯೆ?
ಗರ್ಭವಸ್ಥೆಯಲ್ಲಿ ಗೊರಕೆ ಹೊಡೆಯಲು ಶುರು ಮಾಡಿದರೆ ಅದು ದೀರ್ಘಕಾಲದ ಸಮಸ್ಯೆ ಆಗಬೇಕು ಎಂದೇನು ಇಲ್ಲ. ಒಮ್ಮೆ ಮಗು ಹೆತ್ತ ನಂತರ ಗೊರಕೆ ಸಮಸ್ಯೆ ಸಂಪೂರ್ಣವಾಗಿ ನಿಲ್ಲಬಹುದು ಗರ್ಭಾವಸ್ಥೆಯಲ್ಲಿ ಇರುವಾಗ ಕೆಲವೊಮ್ಮೆ ಡಯಾಬಿಟಿಸ್ ಅಥವಾ ಸಕ್ಕರೆ ಮಟ್ಟ ದೇಹದಲ್ಲಿ ಜಾಸ್ತಿ ಆಗುತ್ತದೆ. ಆದರೆ ಹೆರಿಗೆ ಆದ ನಂತರ ಇದು ಸಂಪೂರ್ಣವಾಗಿ ಕಡಿಮೆ ಆಗುತ್ತದೆ ಅದೇ ರೀತಿ ಗೊರಕೆ ಕೂಡ ದೀರ್ಘಾವಧಿಯ ಸಮಸ್ಯೆ ಅಲ್ಲ ಹಾಗೂ ನಿಮಗೆ ಈ ಸಮಸ್ಯೆ ನಂತರವೂ ಕಾಡಿದರೆ ವೈದ್ಯರನ್ನ ಸಂಪರ್ಕಿಸಿ.



Click it and Unblock the Notifications











