Latest Updates
-
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ
ಐವಿಎಫ್ ಟ್ರೀಟ್ಮೆಂಟ್ ಪಡೆಯುತ್ತಿದ್ದಾರಾ? ಈ ಯೋಗ ಭಂಗಿ ತುಂಬಾನೇ ಸಹಕಾರಿ
ದಶಕದ ಹಿಂದೆ ಈಗ ಇರುವಷ್ಟು ಬಂಜೆತನದ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಐವಿಎಫ್ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಯಾರು ಐವಿಎಫ್ ಚಿಕಿತ್ಸೆ ಪಡೆಯುತ್ತಿದ್ದಾರೋ ಅವರು ಯೋಗ ಕೂಡ ಅಭ್ಯಾಸ ಮಾಡುವುದರಿಂದ ಒಳ್ಳೆಯ ಫಲಿತಾಂಶ ಪಡೆಯುವ ಸಾಧ್ಯತೆ ಹೆಚ್ಚುವುದು.
ಐವಿಎಫ್ ಚಿಕಿತ್ಸೆ ಮಾಡುತ್ತಿರುವವರಿಗೆ ಯಾವೆಲ್ಲಾ ಯೋಗಾಸನಗಳು ಒಳ್ಳೆಯದು ಎಂದು ನೋಡೋಣ ಬನ್ನಿ:

ಐವಿಎಫ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಯೋಗ ಒಳ್ಳೆಯದು, ಏಕೆ?
ನೀವು ಐವಿಎಫ್ ಮಾಡುವ ಮುಂಚಿನಿಂದಲೇ ಯೋಗ ಅಭ್ಯಾಸ ಮಾಡುತ್ತಿದ್ದರೆ ಮಾನಸಿಕ ಒತ್ತಡ, ಬೇಸರ, ಖಿನ್ನತೆ, ಅಸಮಧಾನ ಈ ರೀತಿಯ ಎಲ್ಲಾ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದು. ಏಕೆಂದರೆ ಈ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಿಗೆ ಈ ಹಂತ ಮಾನಸಿಕವಾಗಿ ತುಂಬಾ ಸವಾಲಿನಿಂದ ಕೂಡಿರುತ್ತದೆ, ಟೆನ್ಷನ್ ಕಡಿಮೆ ಮಾಡಲು ಯೋಗ ಬೆಸ್ಟ್.

ಐವಿಎಫ್ ಯಶಸ್ವಿಯಾಗದ್ದರೆ ಆ ಹಂತ ನಿಭಾಯಿಸಲು ಸಹಕಾರಿ
ನೀವು ಐವಿಎಫ್ ಮಾಡುವ ಮುಂಚಿನಿಂದಲೇ ಯೋಗ ಅಭ್ಯಾಸ ಮಾಡುತ್ತಿದ್ದರೆ ಮಾನಸಿಕ ಒತ್ತಡ, ಬೇಸರ, ಖಿನ್ನತೆ, ಅಸಮಧಾನ ಈ ರೀತಿಯ ಎಲ್ಲಾ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದು. ಏಕೆಂದರೆ ಈ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಿಗೆ ಈ ಹಂತ ಮಾನಸಿಕವಾಗಿ ತುಂಬಾ ಸವಾಲಿನಿಂದ ಕೂಡಿರುತ್ತದೆ, ಟೆನ್ಷನ್ ಕಡಿಮೆ ಮಾಡಲು ಯೋಗ ಬೆಸ್ಟ್.
ಐವಿಎಫ್ ಯಶಸ್ವಿಯಾಗದ್ದರೆ ಆ ಹಂತ ನಿಭಾಯಿಸಲು ಸಹಕಾರಿ
ಎಲ್ಲಾ ಐವಿಎಫ್ ಯಶಸ್ವಿಯಾಗಲ್ಲ ಇದು ಮಾನಸಿಕವಾಗಿ ತುಂಬಾನೇ ಕುಗ್ಗಿಸುತ್ತೆ, ಕೆಲವರಿಗೆ ಇದರಿಂದ ಹೊರಬರುವುದು ತುಂಬಾನೇ ಕಷ್ಟವಾಗುವುದು. ಮಧ್ಯಮ ವರ್ಗದ ಕುಟುಂಬವಾಗಿದ್ದರೆ ಐವಿಎಫ್‌ಗೆ ಖರ್ಚಾದ ಹಣ, ಅದು ಸಕ್ಸಸ್ ಆಗದೇ ಹೋದಾಗ ಆಗುವ ನಿರಾಸೆ, ಹಣ ಹೊಂದಿಸಲು ಮುಂದೇನು ಮಾಡುವುದು, ನನ್ನ ಮಡಿಲು ತುಂಬುವುದು ಯಾವಾಗ? ಎಂಬೆಲ್ಲಾ ಪ್ರಶ್ನೆಗಳು ಕಾಡಿ ಖಿನ್ನತೆ ಜಾರುತ್ತಾರೆ. ಅದನ್ನು ತಡೆಯುವಲ್ಲಿ ಯೋಗ ಸಹಕಾರಿಯಾಗಿದೆ.
ಒಳ್ಳೆಯ ನಿದ್ದೆಗೆ ಸಹಾಯ ಮಾಡುತ್ತೆ
ಐವಿಎಫ್ ಚಿಕಿತ್ಸೆಯಲ್ಲಿ ಆ ಹೆಣ್ಣಿನ ಮನಸ್ಸಿನಲ್ಲಿ ತುಂಬಾನೇ ಆತಂಕವಿರುತ್ತದೆ, ಒಂದು ಕಡೆಯಿಂದ ದುಬಾರಿ ಚಿಕಿತ್ಸೆ, ಮತ್ತೊಂದೆಡೆ ಈ ಚಿಕಿತ್ಸೆ ಫಲಕಾರಿಯಾಗದಿದ್ದರೆ ಎಂಬ ಆತಂಕ ಬರುವುದು ಸಹಜ. ಇದರಿಂದಾಗಿ ಚೆನ್ನಾಗಿ ನಿದ್ದೆ ಬರುವುದಿಲ್ಲ, ನಿದ್ದೆ ಸರಿಯಿಲ್ಲದಿದ್ದರೆ ವ್ಯಕ್ತಿ ಖಿನ್ನತೆಗೆ ಜಾರುತ್ತಾರೆ. ಆದ್ದರಿಂದ ಯೋಗ ಅಭ್ಯಾಸ ಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತೆ, ಮನಸ್ಸಿನಲ್ಲಿರುವ ಆತಂಕ, ಚಿಂತೆ, ದುಗುಡ ಎಲ್ಲವೂ ದೂರಾಗುವುದು.

ಐವಿಎಫ್ ಚಿಕಿತ್ಸೆ ಪಡೆಯುವವರಿಗೆ ಈ ಯೋಗ ಭಂಗಿಗಳು ಒಳ್ಳೆಯದು:
1. ಸೂರ್ಯ ನಮಸ್ಕಾರ
2. ಭ್ರಮರಿ ಪ್ರಾಣಯಾಮ
3. ಪಶ್ಚಿಮುತ್ತಾನ ಆಸನ
4. ಹಸ್ತ ಪಾದಾಸನ
5. ಜಾನು ಶಿರಸಾನ
6. ಬದ್ಧ ಕೋನಾಸನ
7. ಸುಪ್ರ ಬದ್ಧಕೋನಾಸನ
8. ನಾಡಿ ಶೋಧನಾ ಪ್ರಾಣಯಾಮ
9. ಬಾಲಾಸನ
10. ಸೇತುಬಂಧಾಸನ
11. ಹಾಲಾಸನ

ಐವಿಎಫ್ ಚಿಕಿತ್ಸೆ ಪಡೆಯುವ ಸಂದರ್ಭದಲ್ಲೂ ಯೋಗ ಅಭ್ಯಾಸ ಮಾಡಬಹುದೇ?
* ಐವಿಎಫ್ ಚಿಕಿತ್ಸೆ ಸಮಯದಲ್ಲಿ ಯೋಗ ಅಭ್ಯಾಸ ಮಾಡುವುದು ಸಂಪೂರ್ಣ ಸುರಕ್ಷಿತವಾಗಿದೆ. ಮೇಲೆ ಹೇಳಿದ ಭಂಗಿಗಳನ್ನಷ್ಟೇ ಮಾಡಿ, ಕ್ಲಿಷ್ಟಕರವಾದ ಭಂಗಿ ಬೇಡ.
* ಆರೋಗ್ಯಕರ ಮೈ ತೂಕ, ಟೆನ್ಷನ್ ಹೊರ ಹಾಕಲು, ಮನಸ್ಸನ್ನು ಶಾಂತವಾಗಿ ಇಡಲು ಯೋಗ ಸಹಕಾರಿ.
* ಗರ್ಭಧಾರಣೆಯಾದ ಬಳಿಕ ಎಕ್ಸ್‌ಪರ್ಟ್ ಸಲಹೆ ಮೇರೆಗೆ ಅವರು ಸೂಚಿಸುವ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ.

ಯೋಗವನ್ನು ಯಾವ ಹೊತ್ತಿನಲ್ಲಿ ಅಭ್ಯಾಸ ಮಾಡಬೇಕು?
ಯೋಗವನ್ನು ಬೆಳಗ್ಗೆ ಹೊತ್ತಿನಲ್ಲಿ ಮಾಡಿದರೆ ಒಳ್ಳೆಯದು, ಆದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕಾದರೂ ಮಾಡಬಹುದು, ಆದರೆ ಯೋಗ ಅಭ್ಯಾಸ ಮಾಡುವ ಎರಡು ಗಂಟೆ ಮುಂಚೆ ಏನೂ ತಿನ್ನಬೇಡಿ. ಸಂಜೆ ಹೊತ್ತಿನಲ್ಲಿ ಅರ್ಧ ಗಂಟೆ ಅಭ್ಯಾಸ ಮಾಡಿ.
ಯೋಗ ಅಭ್ಯಾಸದಿಂದ ಫಲವತ್ತತೆ ಸಾಧ್ಯತೆ ಹೆಚ್ಚಾಗುವುದು: ಅಧ್ಯಯನ ವರದಿ
ವೈದ್ಯರೇ ನಿಮಗೆ ಯೋಗ ಅಭ್ಯಾಸ ಮಾಡುವಂತೆ ಸೂಚಿಸುತ್ತಾರೆ. ಯೋಗ ಅಭ್ಯಾಸ ಮಾಡುವುದರಿಂದ ಫಲವತ್ತತೆ ಸಾಧ್ಯತೆ ಹೆಚ್ಚುವುದಾಗಿ ಅಧ್ಯಯನಗಳು ಹೆಳುತ್ತವೆ. ಆದ್ದರಿಂದ ಯೋಗ ಅಭ್ಯಾಸ ನಮ್ಮ ಮಾನಸಿಕ, ದೈಹಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಐವಿಎಫ್ ಚಿಕಿತ್ಸೆ ಪಡೆಯುತ್ತಿದ್ದರೆ ಪ್ರತಿನಿತ್ಯ ಮೇಲೆ ಹೇಳಿರುವ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ, ಇದರಿಂದ ನಿಮ್ಮ ಫಲವತ್ತತೆ ಸಾಧ್ಯತೆ ಹೆಚ್ಚುವುದು, ಜೊತೆಗೆ ಆ ಸಮಯದಲ್ಲಿ ಅನುಭವಿಸುತ್ತಿರುವ ಮಾನಸಿಕ ಒತ್ತಡದಿಂದ ಹೊರ ಬರಲು ತುಂಬಾನೇ ಸಹಾಯ ಮಾಡುತ್ತೆ.
ಯೋಗ ಎಂಬುವುದು ನಮ್ಮ ಯೋಗ ಗುರುಗಳು ನೀಡಿರುವ ಅತ್ಯಾಧ್ಭುತವಾದ ಕಲೆಯಾಗಿದ್ದು ಇದನ್ನು ಅಭ್ಯಾಸ ಮಾಡಿ, ಇದರಿಂದ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ.



Click it and Unblock the Notifications