Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮೊದಲ ಹೆರಿಗೆಯಾದ ಬಳಿಕ ಕಾಡುವ ಬಂಜೆತನದ ಬಗ್ಗೆ ಗೊತ್ತಿದೆಯೇ?
ಸೆಕೆಂಡರಿ ಇನ್‌ಫರ್ಟಿಲಿಟಿ ಬಗ್ಗೆ ಕೇಳಿದ್ದೀರಾ? ಅಂದರೆ ಅದನ್ನು ಮೊದಲಿನ ಹೆರಿಗೆಯ ಬಳಿಕ ಕಾಡುವ ಬಂಜೆತನ ಎಂದು ಕರೆಯಲಾಗುವುದು. ಎಷ್ಟೋ ದಂಪತಿಗೆ ಇದರ ಬಗ್ಗೆ ತಿಳಿದರುವುದೇ ಇಲ್ಲ.
ಒಂದು ಮಗುವಾಗಿರುತ್ತೆ, ಆದ್ದರಿಂದ ಬಂಜೆತನ ಸಮಸ್ಯೆ ಇರಲ್ಲ ಎಂದು ಭಾವಿಸುತ್ತರೆತ್ತಾರೆ. ಆದರೆ ಕೆಲವರಿಗೆ ಒಂದು ಮಗುವಾದ ಬಳಿಕ ಬಂಜೆತನ ಉಂಟಾಗುವುದು.
ಆದ್ದರಿಂದ ಒಂದು ಮಗುವಾದ ಬಳಿಕ ಎರಡನೇ ಮಗುವಿಗೆ ಪ್ರಯತ್ನ ಮಾಡಿದಾಗ ಫಲ ಸಿಕ್ಕಿರುವುದಿಲ್ಲ. ಆದರೆ ಹೆಚ್ಚಿನವರು ವೈದ್ಯರ ಬಳಿ ಹೋಗುವುದೇ ಇಲ್ಲ, ಮೊದಲು ಏನೂ ತೊಂದರೆಯಾಗಿಲ್ಲ, ಆದ್ದರಿಂದ ಏನೂ ತೊಂದರೆ ಇರಲ್ಲ, ಆದರೆ ಗರ್ಭಧಾರಣೆಗೆ ಎನೂ ತೊಂದರೆಯಿಲ್ಲ, ನಿಧಾನಕ್ಕೆ ಆಗಬಹುದು ಎಂದು ಭಾವಿಸುತ್ತಾರೆ, ಕೊನೆಗೆ ಮಗುವಾಗುವ ಸಾಧ್ಯತೆ ಕಡಿಮೆಯಾಗುವುದು. ಅದೇ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಎರಡನೇ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.
ಬಂಜೆತನ ಪುರುಷ ಹಾಗೂ ಮಹಿಳೆಯರಲ್ಲೂ ಉಂಟಾಗಬಹುದು. ಒಂದು ಹೆರಿಗೆಯಾದ ಬಳಿಕ ಬಂಜೆತನ ಸಾಮಾನ್ಯವಾಗಿ ಈ ಕಾರಣಗಳಿಂದ ಉಂಟಾಗುತ್ತದೆ:

1. ವಯಸ್ಸು
ಪುರುಷ ಹಾಗೂ ಮಹಿಳೆಯರ ವಯಸ್ಸು ಕೂಡ ಬಂಜೆತನಕ್ಕೆ ಕಾರಣವಾಗುವುದು. ಮೊದಲ ಮಗುವಾಗಿ ಎರಡನೇ ಮಗುವಿಗೆ ತುಂಬಾ ಗ್ಯಾಪ್ ಕೊಟ್ಟಾಗ ವಯಸ್ಸು ಕೂಡ ಹೆಚ್ಚಿರುತ್ತೆ. ಆಗ ಮಗುವಿಗಾಗಿ ಪ್ರಯತ್ನಿಸಿದರೆ ಗರ್ಭಧಾರಣೆಯಾಗುವ ಸಾಧ್ಯತೆ ಕಡಿಮೆ.

2. ವೀರ್ಯಾಣು ಅಥವಾ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು
ವಯಸ್ಸಾಗುತ್ತಿದ್ದಂತೆ ಪುರುಷರಲ್ಲಿ ವೀರ್ಯಾಣು, ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಕಡಿಮೆಯಾಗುವುದು. ಇದರಿಂದಾಗಿ ಕೂಡ ಗರ್ಭಧಾರಣೆ ಸಾಧ್ಯತೆ ಕಡಿಮೆಯಾಗುವುದು.

3. ಫಾಲೋಪಿಯನ್ ಟ್ಯೂಬ್ ಬ್ಲಾಕ್ ಆಗಿದ್ದರೆ
ಲೈಂಗಿಕ ಸೋಂಕಾದ gonorrhea and chlamydiaದಿಂದಾಗಿ ಫಾಲೋಪಿಯನ್ ಟ್ಯೂಬ್ ಬ್ಲಾಕ್ ಆಗಿ ಅಂಡಾಣು ಮತ್ತು ವೀರ್ಯಾಣು ಸೇರದೆ ಬಂಜೆತನ ಉಂಟಾಗುವುದು.

4. ಸಂತಾನೋತ್ಪತ್ತಿ ಅಂಗಕ್ಕೆ ಪೆಟ್ಟಾಗಿದ್ದರೆ
ಪಿಸಿಒಎಸ್ ಮತ್ತು ಥೈರಾಯ್ಡ್ ಸಮಸ್ಯೆ ಉಂಟಾದರೆ ಅಥವಾ ಪ್ರೊಗೆಸ್ಟಿರೋನ್ ಉತ್ಪತ್ತಿ ಕಡಿಮೆಯಾದರೆ ಅಥವಾ ಅನಿಯಮಿತ ಮುಟ್ಟಿನ ಸಮಸ್ಯೆ ಅಥವಾ ಅಂಡಾಣು ಉತ್ಪತ್ತಿ ಕಡಿಮೆಯಾದರೆ ಬಂಜೆತನ ಉಂಟಾಗುವುದು.

5. ಜೀವನಶೈಲಿ ಬದಲಾದರೆ
ಮೈ ತೂಕ ಹೆಚ್ಚುವುದು, ವಿಪರೀತ ಮಾನಸಿಕ ಒತ್ತಡ ಇವೆಲ್ಲಾ ಬಂಜೆತನಕ್ಕೆ ಕಾರಣವಾಗುವುದು.
ಮೊದಲ ಮಗುವಾದ ಬಳಿಕ ಬಂಜೆತನ ಉಂಟಾದರೆ ಸಂತಾನೋತ್ಪತ್ತಿ ಚಿಕಿತ್ಸೆ
ನೀವು ಒಂದು ವರ್ಷದಿಂದ ಎರಡನೇ ಮಗುವಿಗಾಗಿ ಪ್ರಯತ್ನಿಸುತ್ತಿದ್ದು ಅದರಿಂದ ಫಲ ಸಿಗದಿದ್ದರೆ ತುಂಬಾ ಲೇಟ್ ಮಾಡಬೇಡಿ, ವೈದ್ಯರನ್ನು ಕಾಣಿ. ಅವರು ಸಮಸ್ಯೆಯೇನು ಏನು ಪತ್ತೆ ಮಾಡಿ ಚಿಕಿತ್ಸೆ ನೀಡುತ್ತಾರೆ. ಇದರ ಜೊತೆ ಮೈ ತೂಕ ಹೆಚ್ಚಾದರೆ ಮೈ ತೂಕ ಕಡಿಮೆ ಮಾಡಿಕೊಳ್ಳಿ, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಇವೆಲ್ಲಾ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು.



Click it and Unblock the Notifications
