Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಗರ್ಭಧಾರಣೆ ತಡೆಗಟ್ಟಲು 20 ಮಾರ್ಗಗಳು
ನಮ್ಮ ದೇಶದಲ್ಲಿ ಆರ್ಥಿಕತೆ ಅಥವಾ ಬೇರೆ ಇನ್ಯಾವುದೇ ವಿಷಯ ಮೇಲಿನ ಮಟ್ಟಕ್ಕೆ ಹೋಗುತ್ತದೆ ಗೊತ್ತಿಲ್ಲ, ಆದರೆ ದಿನೇ ದಿನೇ ಜನಸಂಖ್ಯೆ ಮಾತ್ರ ಮಿತಿ ಮೀರಿ ಹೋಗುತ್ತಿದೆ. ಜನಸಂಖ್ಯೆಯ ವಿಚಾರದಲ್ಲಿ ನಾವು ಚೀನಾಗಿಂತ ತುಂಬಾ ಕಡಿಮೆ ಅಂತರದಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. ಇನ್ನು ಕೇವಲ ಕೆಲವೇ ದಿನಗಳಲ್ಲಿ ನಾವು ಚೀನಾ ದೇಶವನ್ನು ಹಿಂದೆ ಹಾಕಿ ಮುಂದೆ ಹೋಗುತ್ತೇವೆ. ಆರ್ಥಿಕತೆಯಲ್ಲಿ ನಾವು ಅವರಿಗಿಂತ ಬಹಳಷ್ಟು ಅಸಮರ್ಥರು. ಆದರೆ ಜನಸಂಖ್ಯೆ ಮಾತ್ರ ಈ ರೀತಿ ಹೆಚ್ಚುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆಯವರ ಭವಿಷ್ಯ ಕತ್ತಲಿನಲ್ಲಿ ನರಳುವುದು ಖಂಡಿತ.
ಆದ್ದರಿಂದ ಈಗಿನ ಪೀಳಿಗೆಯ ಜನರು ಕನಿಷ್ಠ ಈಗಲಾದರೂ ಎಚ್ಚೆತ್ತು ಗರ್ಭನಿರೋಧಕ ವಿಧಾನಗಳನ್ನು ಅನುಸರಿಸುವ ಮೂಲಕ ಮನೆಗೊಂದು ಮಗು ಮನೆ ತುಂಬಾ ನಗು ಎನ್ನುವ ಆಶಾಭಾವನೆಯೊಂದಿಗೆ ಮುಂದುವರೆದರೆ ನಮ್ಮ ಭಾರತದ ಆರ್ಥಿಕತೆಯ ತಳಪಾಯ ಗಟ್ಟಿಯಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳಬಹುದು.
ಈ ಲೇಖನದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಗರ್ಭನಿರೋಧಕ ವ್ಯವಸ್ಥೆಗಳು, ಅವುಗಳ ಸಾಧಕ-ಭಾದಕಗಳ ಬಗ್ಗೆ ತಿಳಿಸಿಕೊಡಲಾಗಿದೆ

1. ವೀರ್ಯನಾಶಕ : -
ಹೆಸರೇ ಹೇಳುವಂತೆ ಇದು ಪುರುಷರ ವೀರ್ಯಾಣುಗಳನ್ನು ನಾಶ ಪಡಿಸುತ್ತದೆ ಮತ್ತು ಮಕ್ಕಳಾಗುವ ಸಂಭವವನ್ನು ತಪ್ಪಿಸುತ್ತದೆ. ಇದು ನೋಡಲು ತೆಳ್ಳಗಿನ ಜೆಲ್ ಅಥವಾ ಕ್ರೀಮ್ ರೀತಿ ಇದ್ದು ಮಹಿಳೆಯರು ತಮ್ಮ ಯೋನಿ ಭಾಗದಲ್ಲಿ ಲೈಂಗಿಕ ಕ್ರಿಯೆ ನಡೆಸುವ ಮುಂಚೆ ಇದನ್ನು ಹಂಚಿಕೊಳ್ಳಬೇಕಾಗಿ ಬರುತ್ತದೆ. ಇದರಲ್ಲಿರುವ ರಾಸಾಯನಿಕ ವೀರ್ಯಾಣುಗಳನ್ನು ಕೊಲ್ಲುತ್ತದೆ ಎಂದು ಹೇಳುತ್ತಾರೆ. ಕೆಲವು ಪ್ರಕಾರಗಳ ವೀರ್ಯನಾಶಕಗಳನ್ನು ಲೈಂಗಿಕ ಕ್ರಿಯೆ ನಡೆಸುವ ಸುಮಾರು ಅರ್ಧ ಗಂಟೆಗಳ ಮುಂಚೆ ಬಳಸಬೇಕು. ಆಗಾಗ ಬಳಸುವುದರಿಂದ ಯೋನಿ ಭಾಗದಲ್ಲಿ ಸೋಂಕುಗಳು ಮತ್ತು ಕಿರಿಕಿರಿ ಉಂಟಾಗುವ ಸಂಭವವಿದೆ. ಹಾಗಾಗಿ ಮಕ್ಕಳಾಗುವಿಕೆ ಸಂಭವವನ್ನು ತಪ್ಪಿಸಲು ಜನರು ವೀರ್ಯನಾಶಕದ ಜೊತೆಗೆ ಬೇರೆ ಬಗೆಯ ವಿಧಾನವನ್ನು ಅನುಸರಿಸುತ್ತಾರೆ.
ವೀರ್ಯನಾಶಕದ ಪ್ರಯೋಜನಗಳು : -
ಸುಲಭವಾಗಿ ಬಳಸಬಹುದು, ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ.
ವೀರ್ಯನಾಶಕದ ತೊಂದರೆಗಳು : -
ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ಗರ್ಭಿಣಿಯಾಗುವ ಸಾಧ್ಯತೆ ಕೂಡ ಜಾಸ್ತಿ ಇದೆ.

2. ಪುರುಷರ ಕಾಂಡೊಮ್ : -
ಕಾಂಡೋಮ್ ಬಳಕೆಯಿಂದ ಸ್ವತಹ ಪುರುಷರು ತಮ್ಮ ವೀರ್ಯಾಣುಗಳನ್ನು ಮಹಿಳೆಯ ದೇಹ ಪ್ರವೇಶ ಮಾಡದಂತೆ ತಡೆಯಬಹುದು. ಕಾಂಡೋಮ್ ಗರ್ಭ ನಿರೋಧಕವಾಗಿ ಕೆಲಸ ಮಾಡುತ್ತದೆ ಮತ್ತು ಲೈಂಗಿಕ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಮಕ್ಕಳಾಗುವಿಕೆಯನ್ನು ನಿಯಂತ್ರಣ ಮಾಡಲು ಇದೊಂದು ಒಳ್ಳೆಯ ವಿಧಾನ ಎಂದು ಈಗಾಗಲೇ ತಿಳಿದಿದೆ. ಕಾಂಡೊಮ್ ಬಳಕೆಯಿಂದ ವರ್ಷದಲ್ಲಿ ಕೇವಲ 15% ಮಾತ್ರ ಮಕ್ಕಳಾಗುವ ಸಾಧ್ಯತೆ ಇರುತ್ತದೆ.
ಕಾಂಡೋಮ್ ಪ್ರಯೋಜನಗಳು : -
ಎಲ್ಲಾ ಕಡೆಯೂ ಸುಲಭವಾಗಿ ಸಿಗುತ್ತದೆ
ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ
ಲೈಂಗಿಕ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ
ತೊಂದರೆಗಳು : -
ಒಮ್ಮೆ ಬಳಸಿದ ನಂತರ ಮತ್ತೊಮ್ಮೆ ಬಳಸುವ ಹಾಗಿಲ್ಲ
ಪ್ರತಿ ಬಾರಿ ಸರಿಯಾಗಿ ಬಳಸಿದರೆ ಮಾತ್ರ ಪ್ರಯೋಜನ ಉಂಟು

3. ಮಹಿಳೆಯರ ಕಾಂಡೋಮ್ : -
ಇದು ಮಹಿಳೆಯರ ಬಳಕೆಗಾಗಿ ಸಿದ್ಧಪಡಿಸಿದ ಕಾಂಡೊಮ್. ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುಂಚೆ ಮಹಿಳೆಯರು ತಮ್ಮ ಯೋನಿ ಭಾಗದಲ್ಲಿ ಇದನ್ನು ಧರಿಸಬೇಕು. ಸುಮಾರು ಎಂಟು ಗಂಟೆಗಳಿಗಿಂತ ಮುಂಚೆ ಬೇಕಾದರೂ ಪ್ಲಾಸ್ಟಿಕ್ ರಿಂಗ್ ಹೊರಗೆ ಮಾಡಿ ಇದನ್ನು ಬಳಕೆ ಮಾಡಬಹುದು. ಆದರೆ ಪುರುಷರ ಕಾಂಡೊಮ್ ಕೆಲಸ ಮಾಡುವಷ್ಟು ಪರಿಣಾಮಕಾರಿಯಾಗಿ ಇದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳುತ್ತಾರೆ.
ಪ್ರಯೋಜನಗಳು : -
ಎಲ್ಲಾ ಕಡೆ ಸುಲಭವಾಗಿ ಸಿಗುತ್ತದೆ
ಕಡಿಮೆ ಪ್ರಮಾಣದಲ್ಲಿ ಲೈಂಗಿಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.
ಅಡ್ಡ ಪರಿಣಾಮಗಳು : -
ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಶಬ್ದ ಬರುತ್ತದೆ
ಒಮ್ಮೆ ಬಳಸಿದ ನಂತರ ಮತ್ತೊಮ್ಮೆ ಬಳಸುವ ಹಾಗಿಲ್ಲ
ಪುರುಷರ ಕಾಂಡೋಮ್ ಜೊತೆಗೆ ಬಳಕೆ ನಿಷಿದ್ಧ
ಶೇಕಡ 21% ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಇದೆ.

4. ಡಯಾಫ್ರಂ : -
ಇದೊಂದು ರಬ್ಬರ್ ಕ್ಯಾಪ್ ಆಗಿದ್ದು, ಲೈಂಗಿಕ ಪ್ರಕ್ರಿಯೆಯ ಮುಂಚೆ ಗರ್ಭಕಂಠದ ಭಾಗದಲ್ಲಿ ಮಹಿಳೆ ಇದನ್ನು ಬಳಸಬೇಕು. ವೀರ್ಯನಾಶಕವನ್ನು ಇದರೊಂದಿಗೆ ಬಳಸಬೇಕಾಗುತ್ತದೆ. ಈ ವಿಧಾನದಲ್ಲಿ ವರ್ಷಕ್ಕೆ ಅಂದಾಜು 100 ಮಹಿಳೆಯರಲ್ಲಿ ಸುಮಾರು 16 ಮಹಿಳೆಯರು ಗರ್ಭಾವಸ್ಥೆಗೆ ಜಾರುತ್ತಾರೆ.
ಪ್ರಯೋಜನ : -
ಕಡಿಮೆ ಖರ್ಚಿನಲ್ಲಿ ಸಿಗುತ್ತದೆ
ದೀರ್ಘಕಾಲ, ಅಂದರೆ ಸುಮಾರು ಎರಡು ವರ್ಷಗಳ ಕಾಲ ಬಳಕೆ ಮಾಡಬಹುದು
ತೊಂದರೆಗಳು : -
ಲೈಂಗಿಕ ರೋಗಗಳ ತಡೆಗಟ್ಟುವಿಕೆಯ ವಿರುದ್ಧ ಕೆಲಸ ಮಾಡುವುದಿಲ್ಲ
ಸ್ವತಃ ವೈದ್ಯರು ಅಳವಡಿಸಬೇಕು
ಮುಟ್ಟಿನ ಅವಧಿಯಲ್ಲಿ ಇದನ್ನು ಬಳಕೆ ಮಾಡಲು ಸಾಧ್ಯವಿಲ್ಲ.

5. ಗರ್ಭಕಂಠದ ಕ್ಯಾಪ್ : -
ಇದು ಥೇಟ್ ನೋಡಲು ಡಯಾಫ್ರಂ ರೀತಿ ಕಂಡರೂ ಗಾತ್ರದಲ್ಲಿ ಅದಕ್ಕಿಂತ ಚಿಕ್ಕದಿರುತ್ತದೆ. ಗರ್ಭಕಂಠದ ಮೇಲ್ಭಾಗದ ಸ್ಥಳದಲ್ಲಿ ಇದನ್ನು ಧರಿಸಬೇಕು. ವೀರ್ಯನಾಶಕದ ಜೊತೆ ಇದನ್ನು ಬಳಕೆ ಮಾಡಬಹುದು. ಸಂಶೋಧನೆಗಳ ಮೂಲದ ಪ್ರಕಾರ ಮಕ್ಕಳಿಲ್ಲದ ಸುಮಾರು 15 % ಮಹಿಳೆಯರು ಗರ್ಭಕಂಠದ ಕ್ಯಾಪ್ ಬಳಕೆ ಮಾಡಿ ಗರ್ಭ ಧರಿಸಿದ್ದಾರೆ. ಅದೇ ರೀತಿ ಈಗಾಗಲೇ ಮಕ್ಕಳನ್ನು ಪಡೆದಿರುವ ಶೇಕಡ 30 % ಮಹಿಳೆಯರು ಗರ್ಭಕಂಠದ ಕ್ಯಾಪ್ ಬಳಸಿದ ನಂತರ ತಾಯಿಯಾಗಿದ್ದಾರೆ.
ಪ್ರಯೋಜನಗಳು : -
ಕಡಿಮೆ ಹಣದಲ್ಲಿ ಸಿಗುತ್ತದೆ
ಸುಮಾರು 48 ಗಂಟೆಗಳ ಸಕ್ರಿಯ ಬಳಕೆ ಸಾಧ್ಯ
ತೊಂದರೆಗಳು : -
ನೀವಾಗಿ ಧರಿಸಲು ಸಾಧ್ಯವಿಲ್ಲ, ವೈದ್ಯರ ನೆರವು ಅಗತ್ಯ.
ಲೈಂಗಿಕ ರೋಗಗಳ ವಿರುದ್ಧ ರಕ್ಷಣೆ ಸಿಗುವುದಿಲ್ಲ
ಋತುಸ್ರಾವದ ಅವಧಿಯಲ್ಲಿ ಬಳಕೆ ಮಾಡುವಂತಿಲ್ಲ.

6. ಜನನ ನಿಯಂತ್ರಣ ಸ್ಪಾಂಜ್ : -
ಇದು ಫೋಮ್ನಿಂದ ಮಾಡಲ್ಪಟ್ಟಿದೆ ಮತ್ತು ತನ್ನಲ್ಲಿ ವೀರ್ಯನಾಶಕವನ್ನು ಹೊಂದಿರುತ್ತದೆ. ಲೈಂಗಿಕ ಕ್ರಿಯೆಯ ಮುಂಚೆ ಮಹಿಳೆ ತನ್ನ ಗರ್ಭಕಂಠದ ಭಾಗದಲ್ಲಿ ಸುಮಾರು 24 ಗಂಟೆಗಳ ಕಾಲ ಬಳಕೆ ಮಾಡಬಹುದು. ಗರ್ಭಕಂಠದ ಕ್ಯಾಪ್ ತರಹವೇ ಇದು ಗರ್ಭಾವಸ್ಥೆಯನ್ನು ತಡೆಗಟ್ಟುತ್ತದೆ.
ಪ್ರಯೋಜನಗಳು : -
ಬಳಸಿದ ತಕ್ಷಣವೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ
ವೈದ್ಯರು ಅಳವಡಿಸುವ ಅಗತ್ಯತೆ ಇಲ್ಲ.
ತೊಂದರೆಗಳು : -
ಸ್ವಲ್ಪ ಗಟ್ಟಿ ಇರುವುದರಿಂದ ಸುಲಭ ಬಳಕೆ ಅಸಾಧ್ಯವಾಗಬಹುದು
ಲೈಂಗಿಕ ಕಾಯಿಲೆಗಳ ವಿರುದ್ಧ ರಕ್ಷಣೆ ಇರುವುದಿಲ್ಲ
ಮುಟ್ಟಿನ ಅವಧಿಯಲ್ಲಿ ಬಳಕೆ ನಿಷಿದ್ಧ

7. ಜನನ ನಿಯಂತ್ರಣ / ಗರ್ಭನಿರೋಧಕ ಮಾತ್ರೆಗಳು : -
ಲೈಂಗಿಕ ಕ್ರಿಯೆಯ ಬಳಿಕ ಗರ್ಭ ಧರಿಸುವುದನ್ನು ತಡೆಗಟ್ಟಲು ಗರ್ಭನಿರೋಧಕ ಮಾತ್ರೆಗಳನ್ನು ಮಹಿಳೆಯರು ಸೇವಿಸಬಹುದು. ವೈದ್ಯರ ಬಳಿ ಪ್ರೆಸ್ಕ್ರಿಪ್ಷನ್ ಪಡೆದುಕೊಂಡು ಸಮಯಕ್ಕೆ ಸರಿಯಾಗಿ ಈ ಮಾತ್ರೆಗಳನ್ನು ಸೇವಿಸುವುದರಿಂದ ಗರ್ಭ ಧರಿಸುವುದನ್ನು ತಡೆಗಟ್ಟಬಹುದು. ಅಂದಾಜಿನ ಪ್ರಕಾರ ಶೇಕಡ 8% ಮಹಿಳೆಯರು ಜನನ ನಿಯಂತ್ರಣ ಮಾತ್ರೆಗಳ ಸೇವನೆಯ ಬಳಿಕವೂ ಗರ್ಭಾವಸ್ಥೆಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಯೋಜನಗಳು : -
ಹಗುರ ಬಳಕೆ, ಕಡಿಮೆ ಸೆಳೆತ, ನಿಯಮಿತ ಮುಟ್ಟಿನ ಸಮಯ ಅಥವಾ ಮುಟ್ಟು ನಿಂತು ಹೋಗುವುದು
ತೊಂದರೆಗಳು : -
ಸ್ವಲ್ಪ ದುಬಾರಿ, ಲೈಂಗಿಕ ರೋಗಗಳ ವಿರುದ್ಧ ರಕ್ಷಣೆ ಇಲ್ಲ, ಸ್ತನಗಳ ತೀವ್ರ ಮೃದುತ್ವಕ್ಕೆ ಕಾರಣವಾಗಬಹುದು, ರಕ್ತ ಹೆಪ್ಪುಗಟ್ಟಬಹುದು, ದೇಹದಲ್ಲಿ ರಕ್ತದ ಒತ್ತಡ ಜಾಸ್ತಿಯಾಗಬಹುದು. ಈ ಎಲ್ಲಾ ಕಾರಣಗಳಿಂದ ಬಹುತೇಕ ಮಹಿಳೆಯರು ಬಳಸಲು ಹಿಂದೇಟು ಹಾಕುತ್ತಾರೆ.

8. ಜನನ ನಿಯಂತ್ರಣ ಪ್ಯಾಚ್ : -
ಪ್ರತಿ ದಿನ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಲು ಹಿಂಜರಿಯುವ ಮಹಿಳೆಯರು ಇದರ ಬಳಕೆ ಮಾಡಬಹುದು. ಸುಮಾರು ಮೂರು ವಾರಗಳ ತನಕ ಇದನ್ನು ಚರ್ಮದ ಮೇಲೆ ಧರಿಸಿ ನಂತರ ಒಂದು ವಾರ ಇದನ್ನು ಬಳಕೆ ಮಾಡದೆ ಇರಬಹುದು. ಗರ್ಭನಿರೋಧಕ ಮಾತ್ರೆಗಳ ರೀತಿ ದೇಹದಲ್ಲಿ ಹಾರ್ಮೋನುಗಳ ಸ್ರವಿಸುವಿಕೆ ಉಂಟು ಮಾಡಿ ಅದೇ ರೀತಿ ಕೆಲಸ ಮಾಡುತ್ತದೆ.
ಪ್ರಯೋಜನಗಳು :-
ಬಳಸಲು ಹಗುರ, ಕಡಿಮೆ ಸೆಳೆತದ ಜೊತೆಗೆ ಹೆಚ್ಚು ನಿಯಮಿತವಾದ ಮುಟ್ಟಿನ ಅವಧಿ, ಪ್ರತಿ ದಿನ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.
ತೊಂದರೆಗಳು : -
ಕೊಳ್ಳಲು ದುಬಾರಿ, ಲೈಂಗಿಕ ರೋಗಗಳ ವಿರುದ್ಧ ರಕ್ಷಣೆ ಅಸಾಧ್ಯ, ಚರ್ಮದ ಕಿರಿಕಿರಿ ಅಥವಾ ಇನ್ನಿತರ ಅಡ್ಡ ಪರಿಣಾಮಗಳು.

9. ಯೋನಿಯ ರಿಂಗ್ : -
ಇದೊಂದು ಯೋನಿಯ ಒಳಹೋಗುವ ಮೃದುವಾದ ಪ್ಲಾಸ್ಟಿಕ್ ರಿಂಗ್. ಗರ್ಭನಿರೋಧಕ ಮಾತ್ರೆಗಳ ಮತ್ತು ಪ್ಯಾಚ್ ಬಳಕೆಯಿಂದ ಸ್ರವಿಸುವ ಹಾರ್ಮೋನುಗಳು ಯೋನಿಯ ರಿಂಗ್ ಬಳಕೆಯಿಂದಲೂ ಸ್ರವಿಸುತ್ತವೆ. ಪರಿಣಾಮಕಾರಿ ಪ್ರಯೋಜನ ಇದರಿಂದ ಸಾಧ್ಯ.
ಉಪಯೋಗಗಳು: -
ಬಳಸಲು ಹಗುರ, ಹೆಚ್ಚು ನಿಯಮಿತ ಮುಟ್ಟಿನ ಅವಧಿಗಳು, ಆಗಾಗ ಬದಲಿಸುವ ಅವಶ್ಯಕತೆ ಇಲ್ಲ.
ತೊಂದರೆಗಳು : -
ಕೊಂಡುಕೊಳ್ಳಲು ದುಬಾರಿ, ಯೋನಿಯ ಭಾಗದಲ್ಲಿ ಕಿರಿಕಿರಿ ಅಥವಾ ಅಡ್ಡ ಪರಿಣಾಮಗಳು, ಲೈಂಗಿಕ ರೋಗಗಳ ವಿರುದ್ಧ ರಕ್ಷಣೆ ಸಿಗುವುದಿಲ್ಲ.

10 . ಜನನ ನಿಯಂತ್ರಣ ಶಾಟ್ : -
ಇದು ಹಾರ್ಮೋನ್ ಇಂಜೆಕ್ಷನ್ ಆಗಿದ್ದು, ಒಬ್ಬ ಮಹಿಳೆಯನ್ನು ಲೈಂಗಿಕ ಕ್ರಿಯೆಯ ಬಳಿಕ ಆರಂಭಿಕ ಮೂರು ತಿಂಗಳು ಗರ್ಭಿಣಿ ಆಗದಂತೆ ತಡೆಯುತ್ತದೆ. ಗರ್ಭನಿರೋಧಕ ಮಾತ್ರೆಗಿಂತ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಸಂಶೋಧನೆಯ ಪ್ರಕಾರ ಹಾರ್ಮೋನ್ ಇಂಜೆಕ್ಷನ್ ಬಳಕೆಯ ನಂತರ ವರ್ಷದಲ್ಲಿ ಶೇಕಡ 3 % ಮಹಿಳೆಯರು ಮಾತ್ರ ಗರ್ಭ ಧರಿಸುವ ಸಾಧ್ಯತೆ ಇದೆ.
ಪ್ರಯೋಜನಗಳು : -
ವರ್ಷದಲ್ಲಿ ನಾಲ್ಕು ಬಾರಿ ಮಾತ್ರ ಇಂಜೆಕ್ಟ್ ಮಾಡಲಾಗುತ್ತದೆ, ತುಂಬಾ ಪರಿಣಾಮಕಾರಿ.
ತೊಂದರೆಗಳು : -
ಸುಮಾರು 240 ಡಾಲರ್ ಖರ್ಚಾಗುತ್ತದೆ ಜೊತೆಗೆ ಅಡ್ಡಪರಿಣಾಮಗಳು ಬೇರೆ ಉಂಟಾಗುತ್ತವೆ. ಲೈಂಗಿಕ ರೋಗಗಳ ವಿರುದ್ಧ ರಕ್ಷಣೆ ಇರುವುದಿಲ್ಲ.

11. ಜನನ ನಿಯಂತ್ರಣ ಇಂಪ್ಲಾಂಟ್ : -
ಲೈಂಗಿಕ ತಜ್ಞರು ಒಂದು ಬೆಂಕಿಕಡ್ಡಿ ಗಾತ್ರದ ನೆಕ್ಸ್ಪ್ಲಾನಾನ್ ಎಂಬ ರಾಡನ್ನು ಮಹಿಳೆಯ ತೋಳಿನ ಚರ್ಮದ ಒಳಗೆ ಸೇರಿಸುತ್ತಾರೆ. ದೇಹದಲ್ಲಿ ಜನನ ನಿಯಂತ್ರಣ ಇಂಜೆಕ್ಷನ್ ಸ್ರವಿಸುವ ಹಾರ್ಮೋನ್ ಇದರಿಂದಲೂ ಸ್ರವಿಸುತ್ತದೆ. ಬೇರೆ ಎಲ್ಲಾ ಮಾರ್ಗಗಳಿಗಿಂತ ಇದರಲ್ಲಿ ಹೆಚ್ಚು ಸಫಲತೆಯನ್ನು ಕಾಣಬಹುದು.
ಉಪಯೋಗಗಳು : -
ತುಂಬಾ ಪರಿಣಾಮಕಾರಿಯಾಗಿ ಸುಮಾರು 3 ವರ್ಷ ಗರ್ಭ ನಿರೋಧಕವಾಗಿ ಕೆಲಸ ಮಾಡುತ್ತದೆ.
ತೊಂದರೆಗಳು : -
ವಿಪರೀತ ದುಬಾರಿ, ಹೆಚ್ಚು ಅಡ್ಡಪರಿಣಾಮಗಳು, ಅನಿಯಮಿತ ರಕ್ತಸ್ರಾವ, ಲೈಂಗಿಕ ರೋಗಗಳ ವಿರುದ್ಧ ಯಾವುದೇ ರಕ್ಷಣೆ ಇರುವುದಿಲ್ಲ.

12. IUD : -
ಮಹಿಳೆಯರ ಗರ್ಭಕೋಶದ ಒಳಗೆ ಇದನ್ನು ಇರಿಸಲಾಗುತ್ತದೆ. ಇದೊಂದು ಹಾರ್ಮೋನ್ ರಹಿತ ತಾಮ್ರದ ವಸ್ತುವಾಗಿದ್ದು, ಸುಮಾರು ಹತ್ತು ವರ್ಷಗಳವರೆಗೆ ಮಕ್ಕಳಾಗುವಿಕೆಯನ್ನು ಇದು ತಡೆಗಟ್ಟುತ್ತದೆ. ಒಂದು ವೇಳೆ ಹಾರ್ಮೋನ್ ಸಹಿತವಾಗಿದ್ದರೆ ಮೂರರಿಂದ ಐದು ವರ್ಷಗಳಲ್ಲಿ ಬದಲಾವಣೆ ಅಗತ್ಯವಿದೆ. ಬಹಳಷ್ಟು ಪರಿಣಾಮಕಾರಿಯಾಗಿ ಇದು ಕೆಲಸ ಮಾಡುವ ಕಾರಣ ಅಂದಾಜಿನ ಪ್ರಕಾರ ಸುಮಾರು 1000 ಮಹಿಳೆಯರಲ್ಲಿ ಕೇವಲ ಎಂಟು ಮಂದಿ ಮಾತ್ರ ಗರ್ಭ ಧರಿಸಬಹುದು.
ಸಾಧಕಗಳು : -
ದೀರ್ಘಕಾಲದ ಬಳಕೆ, ಕಡಿಮೆ ನಿರ್ವಹಣೆ, ಮುಟ್ಟಿನ ಅವಧಿ ಕಡಿಮೆಯಾಗುತ್ತದೆ
ಭಾದಕಗಳು : -
ಕೆಲವೊಮ್ಮೆ ಮುಟ್ಟಿನ ಅವಧಿ ಅನಿಯಮಿತ ಅಥವಾ ಹೆಚ್ಚಾಗಬಹುದು. ತಾಮ್ರದ ವಸ್ತುವಾಗಿರುವುದರಿಂದ ಹೊಟ್ಟೆಯಲ್ಲಿ ನೋವು ಕಂಡು ಬರಬಹುದು, ವಿಪರೀತ ದುಬಾರಿ ಬೇರೆ, ಒಂದು ವೇಳೆ ಸ್ಲಿಪ್ ಆದರೆ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು.

13. ಟ್ಯೂಬಲ್ ಬಂಧನ : -
ಶಾಶ್ವತವಾಗಿ ಗರ್ಭನಿರೋಧಕ ವ್ಯವಸ್ಥೆಯನ್ನು ಬಳಸುವ ಇಚ್ಛೆ ನಿಮ್ಮದಾಗಿದ್ದರೆ, ಈ ವಿಧಾನ ನಿಮಗಾಗಿ ಇದೆ. ಲೈಂಗಿಕ ತಜ್ಞರು ಮಹಿಳೆಯರಲ್ಲಿ ಆಪರೇಷನ್ ಮಾಡಿ ಫೆಲೋಪಿಯನ್ ಟ್ಯೂಬ್ ಗಳನ್ನು ನಿರ್ಬಂಧಿಸುತ್ತಾರೆ. ಇದರಿಂದ ಅಂಡಾಶಯಗಳಿಂದ ಮೊಟ್ಟೆಗಳು ಜಾರುವುದನ್ನು ತಪ್ಪಿಸಬಹುದು.
ಉಪಯೋಗಗಳು : -
ಶಾಶ್ವತವಾಗಿ ಶೇಕಡ 100% ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ತೊಂದರೆಗಳು : -
ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಶ್ಯಕತೆ ಇದೆ, ದುಬಾರಿಯಾಗಬಹುದು, ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಮಕ್ಕಳಾಗುವ ಸಾಧ್ಯತೆ ಎಂದಿಗೂ ಇಲ್ಲ, ಲೈಂಗಿಕ ರೋಗಗಳ ವಿರುದ್ಧ ಯಾವುದೇ ರಕ್ಷಣೆ ಇರುವುದಿಲ್ಲ.

14. ವಸೆಕ್ಟಮಿ : -
ಇದು ಪುರುಷರಿಗೆ ಕಾಂಡೋಮ್ ಬಿಟ್ಟರೆ ಜನನ ನಿಯಂತ್ರಣ ಮಾಡಲು ಇರುವ ಒಂದೇ ಒಂದು ಪರ್ಯಾಯ ಮಾರ್ಗ. ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು vas deferens ಟ್ಯೂಬನ್ನು ಮುಚ್ಚುತ್ತಾರೆ. ಇದರಿಂದ ಪುರುಷರ ವೀರ್ಯಾಣು ವೃಷಣಗಳ ಭಾಗಕ್ಕೆ ಪ್ರವೇಶ ಮಾಡುವುದು ನಿರ್ಬಂಧವಾಗುತ್ತದೆ.
ಪ್ರಯೋಜನಗಳು : -
ಶಾಶ್ವತ ಪರಿಹಾರ, ಕಡಿಮೆ ಖರ್ಚು, ಶೇಕಡ 100 % ರಷ್ಟು ಪರಿಣಾಮಕಾರಿ
ತೊಂದರೆಗಳು : -
ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ, ತಕ್ಷಣವೇ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ, ಲೈಂಗಿಕ ರೋಗಗಳ ವಿರುದ್ಧ ರಕ್ಷಣೆ ಅಸಾಧ್ಯ. ಮುಂದೆ ಎಂದಿಗೂ ಮಕ್ಕಳಾಗುವ ಸಾಧ್ಯತೆ ಇರುವುದಿಲ್ಲ.

15. ತುರ್ತು ಗರ್ಭನಿರೋಧಕ : -
ಲೈಂಗಿಕ ಕ್ರಿಯೆಯ ಬಳಿಕ ಗರ್ಭ ನಿರೋಧಕವಾಗಿ ಈ ವಿಧಾನವನ್ನು ಅನುಸರಿಸಬಹುದು. ಮಹಿಳೆಯರು ಗರ್ಭನಿರೋಧಕ ವ್ಯವಸ್ಥೆಯನ್ನು ಇಷ್ಟಪಡದಿದ್ದರೆ ಈ ವಿಧಾನ ಕೆಲಸಕ್ಕೆ ಬರುತ್ತದೆ. ಇದರಲ್ಲಿ ಮಾತ್ರೆಗಳು ಔಷಧಿ ಅಂಗಡಿಗಳಲ್ಲಿ ಹಲವು ಪ್ರಕಾರಗಳಲ್ಲಿ ದೊರೆಯುತ್ತವೆ.

16. ವಯಸ್ಸಾದ ಮಹಿಳೆಯರಿಗೆ : -
ಒಂದು ವೇಳೆ ಮಹಿಳೆಯ ವಯಸ್ಸು 35 ವರ್ಷ ದಾಟಿದ್ದರೆ, ಧೂಮಪಾನದಂತಹ ಚಟಗಳು ಇದ್ದರೆ, ಅಥವಾ ಬೊಜ್ಜಿನ ಸಮಸ್ಯೆ ಇದ್ದರೆ, ಗರ್ಭನಿರೋಧಕ ಮಾತ್ರೆ, ಪ್ಯಾಚ್ ಅಥವಾ ಗರ್ಭಕಂಠದ ರಿಂಗ್ ಗಳನ್ನು ವೈದ್ಯರು ಶಿಫಾರಸು ಮಾಡುವುದಿಲ್ಲ. ಹಾಗಾಗಿ ಬೇರೆ ಪರ್ಯಾಯ ಮತ್ತು ಸುರಕ್ಷಿತ ಮಾರ್ಗಗಳ ಬಗ್ಗೆ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಋತುಸ್ರಾವದ ಅವಧಿಯ ಹತ್ತಿರವಿದ್ದರೆ ಹಾರ್ಮೋನ್ ಇಂಜೆಕ್ಷನ್ ಕೊಡಬಹುದು.

17. ವಿತ್ಡ್ರಾವಲ್ : -
ಮೇಲಿನ ಯಾವುದೇ ವಿಧಾನವನ್ನು ಅನುಸರಿಸಲು ಬಯಸದ ಪುರುಷರು ಮತ್ತು ಮಹಿಳೆಯರು ಈ ವಿಧಾನವನ್ನು ಅನುಸರಿಸಬಹುದು. ಲೈಂಗಿಕ ಪರಾಕಾಷ್ಟೆಗೆ ತಲುಪುವ ಸಮಯದಲ್ಲಿ ಹೊರಬರುವ ವೀರ್ಯಾಣುಗಳನ್ನು ತಡೆಗಟ್ಟಲು ಪುರುಷರು ಮಹಿಳೆಯರ ಯೋನಿ ಪ್ರದೇಶದಿಂದ ತಮ್ಮ ಶಿಶ್ನವನ್ನು ಹೊರತೆಗೆಯುವುದು ಈ ವಿಧಾನ ಎಂದು ಹೇಳಬಹುದು. ಸಂಶೋಧನೆಗಳು ತಮ್ಮ ಅಂದಾಜಿನಲ್ಲಿ ವರ್ಷಕ್ಕೆ ಶೇಕಡ 4% ಮಹಿಳೆಯರು ಮಾತ್ರ ಇದರಿಂದ ಗರ್ಭ ಧರಿಸಬಹುದು ಎಂದು ಹೇಳುತ್ತವೆ. ಆದರೆ ಪ್ರತಿ ಬಾರಿ ಹೀಗೆ ಮಾಡುವುದರಿಂದ ಶೇಕಡ 18 % ರಷ್ಟು ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಇದೆ.
ಪ್ರಯೋಜನಗಳು : -
ಯಾವುದೇ ಖರ್ಚಿಲ್ಲ, ಯಾವುದೇ ಉಪಕರಣಗಳ ಅಥವಾ ಹಾರ್ಮೋನ್ ಗಳ ಬಳಕೆ ಇಲ್ಲ
ತೊಂದರೆಗಳು : -
ಸರಿಯಾದ ಸಮಯಕ್ಕೆ ಈ ವಿಧಾನದ ಅನುಸರಣೆ ಕಷ್ಟಕರ, ಲೈಂಗಿಕ ರೋಗಗಳ ವಿರುದ್ಧ ರಕ್ಷಣೆ ಅಸಾಧ್ಯ.

18. ಅಂಡೋತ್ಪತ್ತಿ ಮುನ್ಸೂಚಕ ಕಿಟ್ಗಳು : -
ಬಹುತೇಕ ಮಹಿಳೆಯರು ತಾವು ಗರ್ಭಧರಿಸುವ ಸಂದರ್ಭದಲ್ಲಿ ಈ ವಿಧಾನವನ್ನು ಅನುಸರಿಸುತ್ತಾರೆ ಎಂದು ತಿಳಿದುಬಂದಿದೆ. ಮೂತ್ರ ಪರೀಕ್ಷೆಯ ಮೂಲಕ ಮಹಿಳೆಯರ ದೇಹದಲ್ಲಿ luteinizing harmone (LH) ಹಾರ್ಮೋನ್ ಯಾವ ಪ್ರಮಾಣದಲ್ಲಿದೆ ಎಂಬುದು ಇದರಿಂದ ಗೊತ್ತಾಗಲಿದೆ.
ಪ್ರಯೋಜನಗಳು : -
ಯಾವುದೇ ಔಷಧಿಗಳ ಬಳಕೆ ಇಲ್ಲ, ಸ್ವಲ್ಪವೂ ಖರ್ಚಿಲ್ಲ.
ತೊಂದರೆಗಳು : -
ಲೈಂಗಿಕ ಕ್ರಿಯೆಯನ್ನು ತಡೆಗಟ್ಟಬೇಕಾಗುತ್ತದೆ, ಗರ್ಭಧರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

19. ಕಡಿಮೆ ಪರಿಣಾಮಕಾರಿ ಅನಿಸಿದ ವಿಧಾನಗಳು : -
ಯಾವುದೇ ಬಗೆಯ ಗರ್ಭನಿರೋಧಕ ವಿಧಾನವನ್ನು ಅನುಸರಿಸದೆ ಶೇಕಡ 85% ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯವಾಗಿರುವ ಪುರುಷರು ಮತ್ತು ಮಹಿಳೆಯರು ಒಂದು ವರ್ಷದಲ್ಲಿ ತಂದೆ-ತಾಯಿಯರಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಗರ್ಭನಿರೋಧಕ ವ್ಯವಸ್ಥೆಯಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಿದ ವಿಧಾನಗಳು ಕೆಲಸಕ್ಕೆ ಬಾರದೇ ಇರುವ ಉದಾಹರಣೆಗಳು ಸಾಕಷ್ಟಿವೆ.
20.ಹೆಚ್ಚು ಪರಿಣಾಮಕಾರಿ ವಿಧಾನಗಳು : -
ಒಂದು ವೇಳೆ ನೀವು ಗರ್ಭ ಧರಿಸಲು ಮನಸ್ಸು ಮಾಡದಿದ್ದರೆ ಗರ್ಭನಿರೋಧಕ ವಿಧಾನಗಳನ್ನು ನೀವು ಹೇಗೆ ಬಳಕೆ ಮಾಡುವಿರಿ ಎಂಬುದರ ಮೇಲೆ ನಿಮಗೆ ಮಕ್ಕಳಾಗುವಿಕೆಯ ಸಂಭವ ನಿಂತಿರುತ್ತದೆ.



Click it and Unblock the Notifications











