Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
ಗರ್ಭನಿರೋಧಕ ಮಾತ್ರೆ ನಿಲ್ಲಿಸಿದಾಗ ಕಂಡು ಬರುವ ಅಡ್ಡಪರಿಣಾಮಗಳಿವು
ಬಾಲ್ಯ, ಯೌವನ, ಮದುವೆ, ಸಂಸಾರ, ಮಕ್ಕಳು ಇದು ಪ್ರತಿಯೊಬ್ಬ ಮನುಷ್ಯನ ಒಂದೊಂದು ಕಾಲಘಟ್ಟದ ಪ್ರಕ್ರಿಯೆ. ಯಾವ ವಯಸ್ಸಿನಲ್ಲಿ ಏನಾಗಬೇಕು, ಅದು ನಡೆದರೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಆಧುನಿಕ ಜೀವನ ಕ್ರಮದಿಂದ ಪ್ರಭಾವಿತವಾಗಿರುವ ನಮ್ಮ ಜನರು ತಾವು ಮತ್ತಷ್ಟು ದಿನಗಳು ಖುಷಿಯಾಗಿ, ಆರಾಮವಾಗಿ ಇರಬೇಕು ಎಂದು ತಮ್ಮ ಖಾಸಗಿ ಬದುಕಿನಲ್ಲಿ ಮದುವೆ ಮತ್ತು ಆನಂತರದ ಪ್ರಕ್ರಿಯೆಗಳಿಗೆ ಸ್ವಲ್ಪ ದಿನಗಳವರೆಗೆ ಬ್ರೇಕ್ ಹಾಕುತ್ತಾರೆ.
ಕೆಲವರು ಮದುವೆಯಾದರೂ ಸಹ ತಮ್ಮ ಗ್ಲಾಮರ್ ರಕ್ಷಣೆಗಾಗಿ ಈಗಲೇ ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಇರುವ ಗರ್ಭನಿರೋಧಕ ಪ್ರಕ್ರಿಯೆಗಳನ್ನು ಅನುಸರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಉಂಟಾಗುವ ದೇಹದ ಬದಲಾವಣೆಗಳು ಕೇವಲ ಐದು ದಿನಗಳು ಮಾತ್ರ ಉಳಿಯುತ್ತವೆ ಎಂದು ಹೇಳುತ್ತಾರೆ. ಅಂದರೆ ಇದಕ್ಕೆಲ್ಲ ಕಾರಣವಾಗಿರುವ ಹಾರ್ಮೋನುಗಳ ಪ್ರಭಾವ ಗರ್ಭನಿರೋಧಕ ಪ್ರಕ್ರಿಯೆಗಳನ್ನು ಕೈ ಬಿಟ್ಟ ನಂತರ ದೇಹದಲ್ಲಿ ಕೆಲವೊಂದು ರೋಗಲಕ್ಷಣಗಳನ್ನು ಬದಲಾವಣೆಗಳ ರೂಪದಲ್ಲಿ ಉಂಟುಮಾಡುತ್ತವೆ. ತಕ್ಕಮಟ್ಟಿಗೆ ಇವುಗಳ ಪ್ರಭಾವ ನಿಮಗೆ ಸ್ವಲ್ಪ ಆಶ್ಚರ್ಯ ಎನಿಸಬಹುದು. ಆದರೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ.
ಮಕ್ಕಳಾಗದಂತೆ ತಡೆಯಲು ನೀವು ತೆಗೆದುಕೊಳ್ಳುತ್ತಿದ್ದ ಗರ್ಭನಿರೋಧಕ ಔಷಧಿಗಳು ಮಗುವಿನ ಜನನಕ್ಕೆ ಸಹಕಾರಿಯಾಗಿ ಉತ್ಪತ್ತಿ ಆಗಬೇಕಾಗಿದ್ದ ಹಾರ್ಮೋನುಗಳನ್ನು ನಿಯಂತ್ರಣ ಮಾಡಿ ನಿಮ್ಮ ದೇಹದ ನೈಸರ್ಗಿಕ ಬದಲಾವಣೆಗಳನ್ನು ತಡೆ ಹಾಕಿರುತ್ತವೆ. ನೀವು ಗರ್ಭ ನಿರೋಧಕ ವ್ಯವಸ್ಥೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿದರೆ ಒಂದೆರಡು ತಿಂಗಳು ಕೆಲವೊಂದು ರೋಗಲಕ್ಷಣಗಳನ್ನು ನಿಮ್ಮ ದೇಹ ಕಂಡುಕೊಳ್ಳುವಂತೆ ಆಗಬಹುದು.

ಮುಖದ ಮೇಲೆ ಮೊಡವೆಗಳು ಮೂಡಿಬರಬಹುದು
ಸ್ವಲ್ಪ ದಿನಗಳ ಕಾಲ ಗರ್ಭ ನಿಲ್ಲುವಂತೆ ಮಾಡಿ ಆನಂತರ ಮಗು ಪಡೆಯಬೇಕು ಎನ್ನುವ ಬಯಕೆಯೊಂದಿಗೆ ನಿಮ್ಮ ಸಂಗಾತಿಯ ಜೊತೆ ಯಶಸ್ವಿ ಲೈಂಗಿಕ ಪ್ರಕ್ರಿಯೆ ನಡೆಸಿದ ಬಳಿಕ ನಿಮ್ಮ ಮುಖದ ಭಾಗದ ಮೇಲೆ ಹತ್ತು ಹಲವಾರು ಮೊಡವೆಗಳು ಇದ್ದಕ್ಕಿದ್ದಂತೆ ಮೂಡಿಬರಬಹುದು. ಹಾರ್ಮೋನುಗಳನ್ನು ನಿಯಂತ್ರಣ ಮಾಡಿ ಆನಂತರದಲ್ಲಿ ಮಗು ಪಡೆಯಬೇಕು ಎನ್ನುವ ಪ್ರಕ್ರಿಯೆಯ ನಂತರದಲ್ಲಿ ಉಂಟಾಗುವ ಮೊಟ್ಟಮೊದಲ ಬದಲಾವಣೆ ಇದು ಎಂದು ಹೇಳಬಹುದು.

ಮಾನಸಿಕವಾದ ತೊಳಲಾಟ ಹೆಚ್ಚಾಗಬಹುದು
ಮಗು ಪಡೆಯಬೇಕು ಎಂದು ಹೇಳುವುದು ಬಹಳ ಸುಲಭ. ಆದರೆ ಮಹಿಳೆಯರಿಗೆ ಇದಕ್ಕೆ ಸಂಬಂಧಪಟ್ಟಂತೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಇದುವರೆಗೂ ನೀವು ತೆಗೆದುಕೊಳ್ಳುತ್ತಿದ್ದ ಗರ್ಭನಿರೋಧಕ ಔಷಧಿಗಳು ನಿಮ್ಮ ದೇಹದಲ್ಲಿ ಹಾರ್ಮೋನುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಈಗ ಇದ್ದಕ್ಕಿದ್ದಂತೆ ಮಗು ಪಡೆಯಲು ಸಹಕಾರಿ ಆಗಿರುವಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಇದು ಮಾನಸಿಕವಾಗಿ ನಿಮ್ಮ ಮೇಲೆ ಪ್ರಭಾವ ಬೀರಲಿದೆ. ಇದರಿಂದ ಮಾನಸಿಕವಾದ ಗೊಂದಲಗಳು, ಮಾನಸಿಕ ತಳಮಳ ಪ್ರತಿ ತಿಂಗಳು ಸುಮಾರು ಮೂರು ವಾರಗಳವರೆಗೆ ಕಂಡುಬರುವಂತೆ ಮಾಡುತ್ತವೆ.

ಸ್ತನಗಳು ಅತಿ ಹೆಚ್ಚು ಸೂಕ್ಷ್ಮ ಎನಿಸುತ್ತವೆ
ಇದನ್ನು ಸಹ ಹಾರ್ಮೋನುಗಳ ಬದಲಾವಣೆಯಿಂದ ಉಂಟಾದ ಪ್ರಕ್ರಿಯೆ ಎಂದು ಭಾವಿಸಬಹುದು. ಮಕ್ಕಳು ಬೇಡ ಎನ್ನುವ ಭಾವನೆಯಿಂದ ನೀವು ತೆಗೆದುಕೊಳ್ಳುತ್ತ ಇದ್ದಂತಹ ಗರ್ಭ ನಿರೋಧಕ ಔಷಧಿಗಳು ನಿಮ್ಮ ದೇಹವನ್ನು ಒಂದು ಹಂತದವರೆಗೆ ಮಕ್ಕಳಾಗದ ಹಾಗೆ ತಡೆದು ನಿಲ್ಲಿಸಿರುತ್ತವೆ. ಆದರೆ ಈಗ ಮಕ್ಕಳು ಬೇಕು ಎಂದುಕೊಳ್ಳುವ ಸಮಯದಲ್ಲಿ ದೇಹದಲ್ಲಿ ನಾನಾ ಬದಲಾವಣೆಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಂಟಾಗುತ್ತವೆ. ಈ ಸಮಯದಲ್ಲಿ ಸ್ತನಗಳು ಅತ್ಯಂತ ಸೂಕ್ಷ್ಮವಾಗಿ ಕಂಡುಬರಲು ಪ್ರಾರಂಭವಾಗುತ್ತವೆ. ಕೆಲವು ಮಹಿಳೆಯರಿಗೆ ಸ್ತನಗಳು ಊದಿಕೊಳ್ಳಲೂಬಹುದು. ಇದು ಗರ್ಭಾವಸ್ಥೆಯ ಆರಂಭಿಕ ಲಕ್ಷಣ ಎನ್ನಬಹುದು.

ಬೆನ್ನು ನೋವು ಮತ್ತು ಸೆಳೆತ ಕಂಡುಬರಬಹುದು
ಗರ್ಭಾವಸ್ಥೆಯ ಪ್ರಕ್ರಿಯೆಯ ಆರಂಭದಲ್ಲಿ ಕೆಲವು ಮಹಿಳೆಯರಿಗೆ ಇದ್ದಕ್ಕಿದ್ದಂತೆ ಮೈ ಕೈ ನೋವು ಮತ್ತು ಬೆನ್ನು ನೋವು ಕಂಡುಬರುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ದೇಹದಲ್ಲಿ ಪ್ರತಿತಿಂಗಳು ಅಂಡಾಶಯಗಳ ಉತ್ಪತ್ತಿ ನಡೆಯಲು ಪ್ರಾರಂಭವಾಗುತ್ತದೆ. ಅಂಡಾಶಯಗಳಲ್ಲಿ ಇರುವ ಮೊಟ್ಟೆಗಳ ಮೂಲಕ ಪುರುಷರ ವೀರ್ಯಾಣುವಿನ ಸಹಯೋಗದ ನಂತರದಲ್ಲಿ ನಿಮ್ಮ ದೇಹದಲ್ಲಿ ಮಗುವಿನ ಬೆಳವಣಿಗೆ ಉಂಟಾಗಲು ಪ್ರಾರಂಭವಾಗುತ್ತದೆ.

ಕಾಮಾಸಕ್ತಿ ಹೆಚ್ಚಾಗಬಹುದು
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಿದಾಗ ಕೆಲವು ದಿನಗಳ ನಂತರ ನಿಮಗೆ ಇದ್ದಕ್ಕಿದ್ದಂತೆ ಮಕ್ಕಳನ್ನು ಪಡೆಯಬೇಕು ಎನ್ನುವ ಭಾವನೆ ಹೆಚ್ಚಾದಂತೆ ಲೈಂಗಿಕ ಕ್ರಿಯೆಯ ಮೇಲೆ ಆಸಕ್ತಿ ಸಹ ಹೆಚ್ಚಾಗಬಹುದು. ಆದರೆ ಇದು ತಾತ್ಕಾಲಿಕವಾಗಿ ಕೆಲವು ದಿನಗಳವರೆಗೆ ಮಾತ್ರ ಇರುತ್ತದೆ. ಆನಂತರದಲ್ಲಿ ನಿಮ್ಮ ದೇಹಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ.

ಮುಟ್ಟಿನ ಪ್ರಕ್ರಿಯೆ ಹೆಚ್ಚಾಗಬಹುದು
ಮಕ್ಕಳಾಗದಂತೆ ತಡೆಯಲು ಇದುವರೆಗೂ ತೆಗೆದುಕೊಳ್ಳುತ್ತಿದ್ದ ಗರ್ಭನಿರೋಧಕ ಔಷಧಿಗಳು ಒಂದು ವೇಳೆ ನೀವು ಅಂದುಕೊಂಡ ಹಾಗೆ ಸರಿಯಾಗಿ ಕೆಲಸ ಮಾಡುವ ಹಂತದಲ್ಲಿದ್ದರೆ, ಅತ್ಯಂತ ಕಡಿಮೆ ರಕ್ತಸ್ರಾವ ಉಂಟಾಗುತ್ತಿರುತ್ತದೆ. ಆದರೆ ಇವುಗಳನ್ನು ನಿಲ್ಲಿಸಿದ ಬಳಿಕ ನಿಮ್ಮ ದೇಹ ತನ್ನ ಪ್ರಕ್ರಿಯೆಯ ಮೂಲಕ ಅಧಿಕ ರಕ್ತಸ್ರಾವ ಉಂಟಾಗುವಂತೆ ಮಾಡಬಹುದು. ಆದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ. ಇದನ್ನು ಸಹ ಗರ್ಭಾವಸ್ಥೆಯ ಆರಂಭಿಕ ಲಕ್ಷಣ ಎಂದುಕೊಳ್ಳಬಹುದು.

ಫಲವತ್ತತೆಯ ಸಮಯದಲ್ಲಿ ಕಂಡುಬರುವ ಸ್ರವಿಸುವಿಕೆ
ಇದೊಂದು ಸಹಜ ಪ್ರಕ್ರಿಯೆ. ಬಹುತೇಕ ಮಹಿಳೆಯರಿಗೆ ತಾವು ಗರ್ಭ ಧರಿಸಿದ ನಂತರ ಅಂದರೆ ಫಲವತ್ತತೆ ಕೂಡಿ ಬಂದ ಸಂದರ್ಭದಲ್ಲಿ ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಯಿಂದ ಮುಟ್ಟಿನ ಪ್ರಕ್ರಿಯೆ ನಿಯಮಿತವಾಗಿ ಮತ್ತು ಹಗುರವಾಗಿ ಕಡಿಮೆ ಸಮಯಕ್ಕೆ ಬದಲಾಗುತ್ತದೆ. ಯಾವುದಕ್ಕೂ ಈ ಸಮಯದಲ್ಲಿ ಮಹಿಳೆಯರು ಪ್ಯಾಡ್ ಗಳನ್ನು ಮೊದಲೇ ಇಟ್ಟುಕೊಂಡಿರುವುದು ಒಳ್ಳೆಯದು.

ವಾಸನೆ ಕಂಡುಹಿಡಿಯುವ ಚಾಕಚಕ್ಯತೆ ಹೆಚ್ಚಾಗುತ್ತದೆ
ಹಾರ್ಮೋನುಗಳ ಪ್ರಭಾವದಿಂದ ಮನುಷ್ಯನ ದೇಹದಲ್ಲಿ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆ. ಮಹಿಳೆಯರ ದೇಹದಲ್ಲಿ ಗರ್ಭನಿರೋಧಕ ಔಷಧಿಗಳು ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರದಲ್ಲಿ ಲೈಂಗಿಕತೆಗೆ ಹಾಗೂ ಮಗುವಿನ ಜನನಕ್ಕೆ ಸಂಬಂಧಪಟ್ಟಂತಹ ಇಸ್ಟ್ರೋಜನ್ ಮತ್ತು ಪ್ರೊಜೆಸ್ಟಿರೋನ್ ಹಾರ್ಮೋನುಗಳ ಪ್ರಭಾವ ಹೆಚ್ಚಾಗಿ ನಡೆಯುವುದರಿಂದ ಮಹಿಳೆಯರಿಗೆ ಮೂಗಿನ ಸಾಮರ್ಥ್ಯ ಹೆಚ್ಚಾಗುತ್ತದೆ. ಅಂದರೆ ಬೇರೆ ಮಹಿಳೆಯರಿಗೆ ಹೋಲಿಸಿದರೆ ಗರ್ಭ ಧರಿಸಲು ಮುಂದಾಗಿರುವ ಮಹಿಳೆಯರ ದೇಹದಲ್ಲಿ ಕಂಡುಬರುವ ಬದಲಾವಣೆಗಳು ಯಾವುದೇ ಬಗೆಯ ವಾಸನೆಯನ್ನು ಅತ್ಯಂತ ಸುಲಭವಾಗಿ ಗುರುತಿಸುವ ಶಕ್ತಿಯನ್ನು ಮಹಿಳೆಯರಿಗೆ ಈ ಸಮಯದಲ್ಲಿ ಕೊಡುತ್ತವೆ ಎಂದು ಹೇಳುತ್ತಾರೆ.

ನಿಮ್ಮ ಋತುಚಕ್ರದ ಅವಧಿ ಸಂಪೂರ್ಣವಾಗಿ ಬದಲಾಗಬಹುದು
ಗರ್ಭನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಮ್ಮ ದೇಹದ ಸಾಕಷ್ಟು ಸಹಜ ಪ್ರಕ್ರಿಯೆಗಳು ಔಷಧಿಗಳ ನಿಯಂತ್ರಣದಲ್ಲಿ ಉಳಿದಿರುತ್ತವೆ. ಆದರೆ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟನಂತರ ಕೆಲವೊಂದು ಬದಲಾವಣೆಗಳನ್ನು ಊಹಿಸುವುದು ಕೂಡ ಕಷ್ಟವಾಗುತ್ತದೆ. ಅದರಲ್ಲಿ ಋತುಚಕ್ರವು ಕೂಡ ಒಂದು. ಕೆಲವು ತಿಂಗಳವರೆಗೆ ಇದು ಹಾಗೆ ನಡೆಯುತ್ತದೆ. ಇದು ಮಹಿಳೆಯರ ದೇಹದ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದನ್ನು ಗಮನಿಸಬೇಕು. ಕೆಲವರಿಗೆ ಕೇವಲ ಮೂರು ತಿಂಗಳಲ್ಲಿ ದೇಹ ಸಹಜ ಸ್ಥಿತಿಗೆ ಮರಳಿದರೆ ಇನ್ನು ಕೆಲವರಿಗೆ ಒಂದು ಅಥವಾ ಎರಡು ವರ್ಷಗಳು ಹಿಡಿಯಬಹುದು. ನೀವು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುಂಚೆ ನಿಮ್ಮ ದೇಹ ಹೇಗೆ ಕೆಲಸ ಮಾಡುತ್ತಿತ್ತು ಮತ್ತು ಆ ಸಮಯದಲ್ಲಿ ಋತುಚಕ್ರ ಯಾವ ಅವಧಿಯಲ್ಲಿ ಕಂಡುಬರುತ್ತಿತ್ತು ಅದೇ ರೀತಿ ಮತ್ತೊಮ್ಮೆ ಬದಲಾಗುತ್ತದೆ. ಒಂದು ವೇಳೆ ನಿಮ್ಮ ಋತುಚಕ್ರದ ಸಂದರ್ಭ ಸುಮಾರು ಎರಡು ತಿಂಗಳಿಗಿಂತ ಹೆಚ್ಚು ಅನಿಯಮಿತವಾಗಿದ್ದರೆ, ನೀವು ನಿಮ್ಮ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು.

ಮಾತ್ರೆ ನಿಲ್ಲಿಸಿದ ಬಳಿಕ ಕಂಡುಬರುವ ರೋಗಲಕ್ಷಣಗಳನ್ನು ನೀವು ಯಾವ ರೀತಿ ನಿರ್ವಹಣೆ ಮಾಡಬಹುದು ಗೊತ್ತಾ?
ಗರ್ಭನಿರೋಧಕ ಮಾತ್ರೆಗಳನ್ನು ಅಥವಾ ಔಷಧಿಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಒಂದು ರೀತಿಯ ಹೊಸ ಅನುಭವ ಉಂಟಾಗಬಹುದು. ಇವುಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಸಂದರ್ಭದಲ್ಲೂ ಸಹ ಇದೇ ರೀತಿಯ ಅನುಭವ ಕಂಡುಬರಬಹುದು. ಆದರೆ ಇದಕ್ಕೆಲ್ಲಾ ಪ್ರಮುಖ ಕಾರಣ ನಿಮ್ಮ ದೇಹದಲ್ಲಿ ನಡೆಯುವ ಹಾರ್ಮೋನುಗಳ ಬದಲಾವಣೆ ಎಂದು ನೀವು ತಿಳಿದುಕೊಳ್ಳಬೇಕು. ಆದರೆ ನಿಮ್ಮ ದೇಹ ಬಹಳ ಬೇಗನೆ ಇದಕ್ಕೆ ಸ್ಪಂದನೆ ನೀಡುತ್ತದೆ. ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಈ ವಿಷಯದಲ್ಲಿ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಲಿದೆ.
ಈ ಮಧ್ಯೆ ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕತೆ ವಹಿಸಬೇಕು. ಮಾನಸಿಕ ಒತ್ತಡ ಹೆಚ್ಚಾಗದಂತೆ ನೋಡಿಕೊಂಡು ಅದರಿಂದ ಉಂಟಾಗುವ ರೋಗಲಕ್ಷಣಗಳ ನಿರ್ವಹಣೆಯ ಕಡೆಗೆ ಗಮನ ಕೊಡಬೇಕು. ಹಾಗಾಗಿ ಇಂತಹ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕು.
ನಿಮ್ಮ ಜೊತೆ ಸದ್ಯದ ನಿಮ್ಮ ಆರೋಗ್ಯ ಸ್ಥಿತಿಯ ಮತ್ತು ದೈಹಿಕ ಬದಲಾವಣೆಗಳು ಕುರಿತು ಮಾತನಾಡಿ. ಇದರಿಂದ ಅವರು ಸಹ ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಸಾಧ್ಯವಾದರೆ ಈ ಸಮಯದಲ್ಲಿ ನಿಮ್ಮ ಬೆನ್ನಿನ ಭಾಗಕ್ಕೆ ಆಯಿಲ್ ಮಸಾಜ್ ಮಾಡಲು ಹೇಳಿ. ಇದರಿಂದ ನಿಮ್ಮ ಬೆನ್ನಿನ ಭಾಗದಲ್ಲಿ ಕಂಡುಬರುವ ನೋವು ಮತ್ತು ಸೆಳೆತ ದೂರವಾಗುತ್ತದೆ.

ವೈದ್ಯರನ್ನು ಯಾವಾಗ ನೋಡಬೇಕು?
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರದಲ್ಲಿ ಕಂಡುಬರುವ ರೋಗಲಕ್ಷಣಗಳ ವಿಚಾರದಲ್ಲಿ ವೈದ್ಯರನ್ನು ಯಾವಾಗ ನೋಡಬೇಕು?
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ಮೊದಲ ಕೆಲವು ವಾರಗಳಲ್ಲಿ ಎಲ್ಲ ಮಹಿಳೆಯರಂತೆ ನಿಮಗೂ ಸಹ ಕೆಲವೊಂದು ಮೇಲೆ ಹೇಳಿದ ಹಾಗೆ ಆರೋಗ್ಯದ ಅಸ್ವಸ್ಥತೆಗಳು ಕಂಡುಬರುತ್ತವೆ. ಇದೊಂದು ಸಹಜ ಪ್ರಕ್ರಿಯೆ ಆಗಿರುತ್ತದೆ. ಇದಕ್ಕಾಗಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಒಂದು ವೇಳೆ ನಿಮಗೆ ಕನಿಷ್ಠ ಮೂರು ತಿಂಗಳವರೆಗೆ ಋತುಸ್ರಾವ ಆಗಿಲ್ಲ ಎಂದರೆ ಆಗ ನಿಮ್ಮ ದೇಹ ಅಂಡಾಶಯಗಳ ಉತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಲ್ಲ ಎಂದರ್ಥ. ಇಂತಹ ಸಂದರ್ಭದಲ್ಲಿ ತಪ್ಪದೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.
ಇದರ ಜೊತೆಗೆ ನಿಮ್ಮ ಪ್ರತಿದಿನದ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟಾಗುವಂತೆ ಯಾವುದಾದರೂ ಈ ಕೆಳಗಿನ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ರೋಗಲಕ್ಷಣಗಳು ಕಂಡುಬಂದರೆ ಅದನ್ನು ನಿಮ್ಮ ಸ್ತ್ರೀರೋಗ ತಜ್ಞರ ಬಳಿ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಅತಿಯಾದ ರಕ್ತಸ್ರಾವ ಉಂಟಾಗುವುದು
ಒಂದು ವೇಳೆ ನಿರಂತರವಾಗಿ ಸುಮಾರು ಒಂದು ವಾರಗಳವರೆಗೆ ವಿಪರೀತ ರಕ್ತಸ್ರಾವ ಕಂಡು ಬಂದು ನಿಮ್ಮ ಪ್ಯಾಡ್ ಗಳು ಕಲೆಗಳ ಸಹಿತ ಒದ್ದೆಯಾದರೆ ಮತ್ತು ಒಂದು ದಿನಕ್ಕೆ ಸುಮಾರು ನಾಲ್ಕೈದು ಪ್ಯಾಡ್ ಗಳಿಗಿಂತ ಹೆಚ್ಚು ಬದಲಿಸಬೇಕಾದ ಪರಿಸ್ಥಿತಿ ಇದ್ದರೆ ಆಗ ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.
ಇದರ ಜೊತೆಗೆ ವಿಪರೀತ ಮತ್ತು ಆಗಾಗ ಕಾಡುವ ಹೊಟ್ಟೆಯ ಸೆಳೆತ
ವಿಪರೀತ ಆಯಾಸ ಮತ್ತು ಉಸಿರಾಟದ ತೊಂದರೆ ಎದುರಾಗುವುದು
ಸಂಪೂರ್ಣ ಅನಿಯಮಿತ ಋತುಚಕ್ರ
ಇಂತಹ ರೋಗಲಕ್ಷಣಗಳು ಒಂದು ವೇಳೆ ನಿಮಗೆ ಕಂಡುಬಂದರೆ ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಆದಷ್ಟು ಬೇಗನೆ ನೆಮ ಸಂಗಾತಿಯ ಜೊತೆಗೆ ವೈದ್ಯರನ್ನು ಭೇಟಿಯಾಗಿ ಅಗತ್ಯವಾದ ಮಾಹಿತಿಯನ್ನು ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಿ.
ಗರ್ಭನಿರೋಧಕ ಔಷಧಿಯನ್ನು ತೆಗೆದುಕೊಳ್ಳುವುದನ್ನು ಹಠಾತ್ತನೆ ನಿಲ್ಲಿಸುವುದರಿಂದ ದೇಹದಲ್ಲಿ ಹಾರ್ಮೋನುಗಳ ಬದಲಾವಣೆ ಸಹ ಅತ್ಯಂತ ವೇಗವಾಗಿ ನಡೆಯುತ್ತದೆ. ಈ ಸಮಯದಲ್ಲಿ ಕಂಡುಬರುವ ರೋಗಲಕ್ಷಣಗಳು ಕೇವಲ ತಾತ್ಕಾಲಿಕ ಮಾತ್ರ ಆಗಿರುತ್ತವೆ. ಆದರೆ ಕೆಲವು ಬಾರಿ ನಿಮ್ಮನ್ನು ಅತಿಯಾದ ಕಾಳಜಿ ವಹಿಸುವಂತೆ ಇವುಗಳು ಮಾಡಬಹುದು. ಇಂತಹ ಸಂದರ್ಭದಲ್ಲಿ ನಿರ್ಲಕ್ಷ ಬಗ್ಗೆ ಸದ್ಯ ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳುವುದು ಒಳ್ಳೆಯದು.



Click it and Unblock the Notifications











