ಎರಡನೇ ಮಗುವಿಗಾಗಿ ಮೊದಲ ಮಗುವಾದ ಎಷ್ಟು ಸಮಯದ ಬಳಿಕ ಪ್ಲಾನ್ ಮಾಡುವುದು ಒಳ್ಳೆಯದು?

ಮೊದಲ ಮಗು ಜನಿಸಿ ಸ್ವಲ್ಪ ವರ್ಷಗಳು ಕಳೆದ ಮೇಲೆ ಆ ಮಗುವಿಗೆ ಜತೆಯಾಗಿ ಮತ್ತೊಂದು ಮಗು ಬೇಕೆಂದು ಬಯಸುವುದು ಸಹಜ. ಇಲ್ಲ ಒಂದೇ ಮಗು ಸಾಕು, ಈ ಮಗುವನ್ನೇ ಚೆನ್ನಾಗಿ ಸಾಕಿ ದೊಡ್ಡದು ಮಾಡೋಣ ಎಂದು ದಂಪತಿ ನಿರ್ಧರಿಸಿದರೆ ಈ ಮಗುವಿಗೆ ಜತೆಯಾಗಿ ಇನ್ನೊಂದು ಮಗು ಇದ್ದರೆ ಒಳ್ಳೆಯದು, ಆಗ ಮಗುವಿನ ಒಂಟಿತನ ದೂರವಾಗುತ್ತದೆ ಎಂದು ಹಿರಿಯರು, ಆಪ್ತರು ಸಲಹೆ ನೀಡಲಾರಂಭಿಸುತ್ತಾರೆ.

ಇನ್ನು ಮೊದಲ ಮಗುವಿಗೆ 5-6 ವರ್ಷ ಆಗಿದ್ದರೆ ತನ್ನ ಸ್ನೇಹಿತರನ್ನು ನೋಡಿ ನನಗೆ ತಂಗಿ ಬೇಕು, ತಮ್ಮ ಬೇಕು ಎಂದು ಅನಿಸಿ ಅಪ್ಪ-ಅಮ್ಮನ ಬಳಿ ಹೇಳುತ್ತದೆ, ಎಷ್ಟೋ ದಂಪತಿಗಳು ತಮ್ಮ ಮೊದಲ ಮಗುವಿನ ಒತ್ತಾಯಕ್ಕೆ ಪುನಃ ಗರ್ಭಧಾರಣೆಗೆ ಮನಸ್ಸು ಮಾಡುತ್ತಾರೆ.

Second baby

ಚಿತ್ರಕೃಪೆ: ಇನ್‌ಸ್ಟಾಗ್ರಾಮ್

ಎರಡನೇ ಮಗುವನ್ನು ಬಯಸುವವರು ಕೆಲವರು ಮೊದಲ ಮಗು ಸ್ವಲ್ಪ ದೊಡ್ಡದಾಗಲಿ ನಂತರ ಮಾಡಿಕೊಳ್ಳುವ ಎಂದು ಬಯಸಿದರೆ ಮತ್ತೆ ಕೆಲವರು ಎರಡು ಮಕ್ಕಳ ನಡುವೆ ತುಂಬಾ ಅಂತರ ಬೇಡ ಎಂದು ಬಯಸಿ ಬೇಗ ಮಾಡಿಕೊಳ್ಳುತ್ತಾರೆ. ಹಾಗಾದರೆ ಎರಡನೇ ಮಗು ಮಾಡಿಕೊಳ್ಳಲು ಎಷ್ಟು ಅಂತರವಿದ್ದರೆ ಒಳ್ಳೆಯದು? ಎಂದು ನೋಡೋಣ ಬನ್ನಿ:

ಎರಡನೇ ಮಗು ಯಾವಾಗ ಬೇಕು ಎಂದು ನಿರ್ಧರಿಸುವುದು ನಿಮ್ಮ ವೈಯಕ್ತಿಕ ವಿಚಾರ, ಆದರೆ ಎರಡನೇ ಮಗು ಬೇಕೆಂದು ಬಯಸುವ ದಂಪತಿ ಮೊದಲ ಹೆರಿಗೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವಷ್ಟೇ ಎರಡನೇ ಮಗುವಿಗೆ ಪ್ಲಾನ್ ಮಾಡುವುದು ಒಳ್ಳೆಯದು. ಮಕ್ಕಳ ವಯಸ್ಸಿನ ನಡುವೆ ಅಂತರ ಕಡಿಮೆಯಿದ್ದರೆ ಕೆಲವೊಂದು ವಿಷಯದಲ್ಲಿ ಒಳ್ಳೆಯದು, ಕೆಲವೊಂದು ವಿಷಯಕ್ಕೆ ಒಳ್ಳೆಯದಲ್ಲ, ಇನ್ನು ಅಂತರ ಅಧಿಕವಾದರೂ ಮಕ್ಕಳನ್ನು ನಿಭಾಯಿಸುವುದು ಸುಲಭವಾದರೂ ಕೆಲವೊಂದು ಸಮಸ್ಯೆಗಳು ಎದುರಾಗಬಹುದು, ಅವುಗಳೇನು ಎಂದು ನೋಡೋಣ.

ಮೊದಲ ಮಗುವಾಗಿ 12-18 ತಿಂಗಳ ಒಳಗೆ ಮಕ್ಕಳಾದರೆ:

ಮೊದಲ ಮಗುವಾಗಿ 12-18 ತಿಂಗಳ ಒಳಗೆ ಮಕ್ಕಳಾದರೆ:

ಈ ಮಕ್ಕಳು ಜತೆ ಜತೆಯಾಗಿ ಬೆಳೆಯುವುದರಿಂದ ಒಬ್ಬರಿಗೊಬ್ಬರ ಮೇಲೆ ತುಂಬಾ ಪ್ರೀತಿ ಇರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಅಪ್ಪ-ಅಮ್ಮ ನನಗಿಂತ ತಮ್ಮ/ತಂಗಿಯನ್ನು ಅಧಿಕ ಕಾಳಜಿ ಮಾಡುತ್ತಿದ್ದಾರೆ ಎಂಬ ಹೊಟ್ಟೆಕಿಚ್ಚು ಉಂಟಾಗುವುದಿಲ್ಲ. ತಾಯಿಗೂ ಕೂಡ ಎರಡು ಮಕ್ಕಳು ಜತೆಯಲ್ಲಿ ಬೆಳೆಯುವಾಗ ಅವರನ್ನು ನೋಡಿಕೊಳ್ಳುವುದು ಸ್ವಲ್ಪ ಕಷ್ಟವಾದರೂ ಸ್ವಲ್ಪ ವರ್ಷ ಕಳೆಯುವಷ್ಟರಲ್ಲಿ ಇಬ್ಬರು ದೊಡ್ಡವರು ಆಗುವುದರಿಂದ ತೊಂದರೆ ಇರುವುದಿಲ್ಲ. ಆದರೆ ಒಂದು ಮಗುವಾಗಿ ವರ್ಷ ತುಂಬುವುದರೊಳಗೆ ಗರ್ಭಧರಿಸಿದರೆ ಮಗು ಅವಧಿಗೆ ಮುನ್ನವೇ ಹುಟ್ಟುವ ಸಾಧ್ಯತೆ ಇರುತ್ತದೆ, ಇನ್ನು ಎರಡನೇ ಮಗುವಿನ ತೂಕ ಕಡಿಮೆ ಇರುವ ಸಾಧ್ಯತೆ ಇದೆ.

ಮಕ್ಕಳ ವಯಸ್ಸಿನ ನಡುವೆ ಎರಡು ವರ್ಷದ ಅಂತರವಿದ್ದರೆ

ಮಕ್ಕಳ ವಯಸ್ಸಿನ ನಡುವೆ ಎರಡು ವರ್ಷದ ಅಂತರವಿದ್ದರೆ

ಎರಡು ವರ್ಷಗಳ ನಂತರ ಗರ್ಭಧಾರಣೆಗೆ ಸೂಕ್ತವಾಗಿದೆ. ಮೊದಲ ಮಗು ಸ್ವಲ್ಪ ದೊಡ್ಡಗಾಗಿರುತ್ತದೆ, ಅದು ಅದರ ಭಾವನೆಗಳನ್ನು ವ್ಯಕ್ತ ಪಡಿಸಲಾರಂಭಿಸಿರುತ್ತದೆ. ಈ ಸಮಯದಲ್ಲಿ ಗರ್ಭಧಾರಣೆಯಾದರೆ ಎರಡು ಮಕ್ಕಳ ನಡುವೆ ಉತ್ತಮ ಬಾಂಧವ್ಯ ಕೂಡ ಉಂಟಾಗುವುದು. ಎರಡು ಮಕ್ಕಳು ಜತೆ-ಜತೆಯಲ್ಲಿ ಆಡುತ್ತಾ ಬೆಳೆಯುವುದೇ ಗೊತ್ತಾಗುವುದಿಲ್ಲ.

ಮಕ್ಕಳ ವಯಸ್ಸಿನ ನಡುವೆ 3 ವರ್ಷಕ್ಕಿಂತ ಅಧಿಕವಿದ್ದರೆ

ಮಕ್ಕಳ ವಯಸ್ಸಿನ ನಡುವೆ 3 ವರ್ಷಕ್ಕಿಂತ ಅಧಿಕವಿದ್ದರೆ

ಈ ಸಮಯದಲ್ಲಿ ದೇಹ ಸಂಪೂರ್ಣವಾಗಿ ಚೇತರಿಸಿಕೊಂಡಿರುತ್ತದೆ. ಮಗು ಸ್ವಲ್ಪ ದೊಡ್ಡದಾಗಿರುವ ಕಾರಣ ಎರಡನೇ ಮಗು ಕಡೆ ಹೆಚ್ಚು ಗಮನ ಕೊಡಬಹುದು. ಅದರೆ ಒಂದು ಮಗು ಸ್ವಲ್ಪ ದೊಡ್ಡದಾದ ಮೇಲೆ ಇನ್ನೊಂದು ಮಗುವಾದರೆ ಮೊದಲನೇ ಮಗು ಎರಡನೇ ಮಗುವಿನ ಆಗಮನವನ್ನು ಇಷ್ಟ ಪಡಬಹುದು, ಇಲ್ಲಾ ದ್ವೇಷಿಸಬಹುದು, ಆದ್ದರಿಂದ ಎರಡನೇ ಮಗು ಬರುವಾಗ ಮೊದಲ ಮಗುವನ್ನು ಮಾನಸಿಕವಾಗಿ ಸಿದ್ಧಪಡಿಸಬೇಕು. ಇನ್ನು ಈ ಮಗು ದೊಡ್ಡದಾಗಿ ಸ್ವಲ್ಪ ಆರಾಮ ಅನಿಸಿದಾಗ ಮತ್ತೆ ನಿದ್ದೆಯಿಲ್ಲದ ರಾತ್ರಿಗೆ ಮರಳ ಬೇಕಾಗುವುದು.

ಇನ್ನು ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?

ಇನ್ನು ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?

ವಿಶ್ವ ಆರೋಗ್ಯ ಸಂಸ್ಥೆಯು ಎರಡು ಮಕ್ಕಳ ನಡುವೆ 24 ತಿಂಗಳ ಅಂತರವಿದ್ದರೆ ಒಳ್ಳೆಯದು ಎಂದು ಹೇಳಿದೆ. ಈ ಸಮಯದಲ್ಲಿ ತಾಯಿ ಮೊದಲ ಹೆರಿಗೆಯಿಮದ ಚೇತರಿಸಿಕೊಂಡಿರುತ್ತಾಳೆ, 24 ತಿಂಗಳು ಅಲ್ಲದಿದ್ದರೆ ಕನಿಷ್ಠ 18 ತಿಂಗಳ ಅಂತರವಿರುವುದು ತಾಯಿ ಹಾಗೂ ಎರಡನೇಯ ಮಗುವಿನ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದೆ.

English summary

Planning To Have A Second Baby? What Is The Ideal Gap To Maintain

After first baby Some may want give a gap for second pregnancy, some think it is better to have another child after one or two year. Here we have a listed a few points which will help you in deciding the ideal gap for second pregnancy.
Story first published: Monday, November 4, 2019, 19:01 [IST]
X
Desktop Bottom Promotion