ಮಕ್ಕಳ ಅಲರ್ಜಿ ಸಮಸ್ಯೆಗೆ ಮನೆಮದ್ದುಗಳು

ಕೆಲವೊಮ್ಮೆ, ನಿಮ್ಮ ಮಗು ಹೊರಗಿನ ಉದ್ಯಾನದಲ್ಲಿ ಮನೆಗೆ ಹಿಂದಿರುಗಿದ ಬಳಿಕ ಚರ್ಮದ ಯಾವುದೋ ಭಾಗದ ಮೇಲೆ ಚಿಕ್ಕ ಕೆಂಪು ಗುಳ್ಳೆ ಎದ್ದಿರುವುದನ್ನು ನೀವು ಗಮನಿಸಿರಬಹುದು.

ನಿಮ್ಮ ಪುಟ್ಟ ಮಗಳು ನೆರೆಯವರ ಮನೆಯ ಸಾಕು ಬೆಕ್ಕಿನೊಂದಿಗೆ ಆಡಿ ಮನೆಗೆ ಬಂದ ಬಳಿಕ ಸತತವಾಗಿ ಸೀನುತ್ತಿರುವುದನ್ನೂ ನೀವು ಗಮನಿಸಿರಬಹುದು

ಅಥವಾ, ಹದಿಹರೆಯದ ಮಗ ಹುಲ್ಲು ಕತ್ತರಿಸುವ ಯಂತ್ರದ ಕೆಲಸ ಮುಗಿದ ಬಳಿಕ ಸತತವಾಗಿ ಕಣ್ಣುಜ್ಜಿಕೊಳ್ಳುತ್ತಿರುವುದನ್ನೂ ನೀವು ಗಮನಿಸಿರಬಹುದು.

ಈ ಎಲ್ಲಾ ಸಂದರ್ಭಗಳಲ್ಲಿ ಸಮಾನವಾದ ಅಂಶ ಯಾವುದು? ಇದಕ್ಕೆ ಪಾಲಕರಾಗಿ ನೀವೇನು ಮಾಡಬಲ್ಲಿರಿ?
ಸರಳ ಉತ್ತರ ಎಂದರೆ, ಈ ಮಕ್ಕಳಿಗೆ ಅಲರ್ಜಿಕಾರಕ ಕಣಗಳು ಎದುರಾಗಿದ್ದು ಇವರ ದೇಹ ಸೂಕ್ತ ಪ್ರತಿರೋಧ ವ್ಯವಸ್ಥೆ ಮಾಡುತ್ತಿದೆ.

ಅಲರ್ಜಿ ಎಂದರೇನು?

ಅಲರ್ಜಿ ಎಂದರೇನು?

ನಮ್ಮ ದೇಹಕ್ಕೆ ಒಗ್ಗದ ಯಾವುದೇ ಕಣ ದೇಹ ಪ್ರವೇಶಿಸಿದರೆ ಇದನ್ನು ತಡೆಯಲು ದೇಹದ ರೋಗ ನಿರೋಧಕ ಶಕ್ತಿ ಕೈಗೊಳ್ಳುವ ಪ್ರತಿಕ್ರಿಯೆಯೇ ಅಲರ್ಜಿ. ಈ ಅಲರ್ಜಿಗೆ ಕಾರಣವಾಗುವ ಕಣಗಳನ್ನು allergen ಅಥವಾ ಅಲರ್ಜಿಕಾರಕ ಎಂದು ಕರೆಯಲಾಗುತ್ತದೆ.

ಸಾಮಾನ್ಯ ಅಲರ್ಜಿಕಾರಕಗಳೆಂದರೆ:

ಸಾಮಾನ್ಯ ಅಲರ್ಜಿಕಾರಕಗಳೆಂದರೆ:

ಧೂಳು

ಹೂವಿನ ಪರಾಗ

ಪ್ರಾಣಿಗಳ ಕೂದಲು ಅಥವಾ ಚರ್ಮ ಒಣಗಿದ ಬಳಿಕ ಗಾಳಿಗೆ ತೂರುವ ಸತ್ತ ಜೀವಕೋಶಗಳು

ಕೀಟಗಳ ಕಡಿತ

ಕೆಲವು ಔಷಧಿಗಳು

ಕೆಲವು ಆಹಾರಗಳು

ಇತ್ಯಾದಿ.

ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕಣದಿಂದ ಅಲರ್ಜಿ ಇದ್ದೇ ಇರುತ್ತದೆ. ನಿಮ್ಮ ಮಗುವಿಗೆ ಅಲರ್ಜಿಕಾರಕವಾದ ಯಾವುದೇ ಕಣ ಎದುರಾದರೆ ಇದನ್ನು ಎದುರಿಸಲು ದೇಹದ ರೋಗ ನಿರೋಧಕ ವ್ಯವಸ್ಥೆ ಹಿಸ್ಟಮೈನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಅಲರ್ಜಿಯ ಪರಿಣಾಮಕ್ಕೆ ಈ ಹಿಸ್ಟಮೈನ್ ಗಳೇ ಕಾರಣ.

ನಿಮ್ಮ ಮಗು ಸ್ಪರ್ಶಿಸಿದ, ತಿಂದ ಅಥವಾ ಉಸಿರಾಡಿದ ಯಾವುದೇ ಅಲರ್ಜಿಕಾರಣ ಕಣ ಅಲರ್ಜಿ ಉಂಟು ಮಾಡಬಹುದು. ಇದು ಮಗುವಿನ ಚರ್ಮ, ಶ್ವಾಸವ್ಯವಸ್ಥೆ ಅಥವಾ ಇತರ ಪ್ರಮುಖ ಅಂಗಗಳ ಮೇಲೆ ಪರಿಣಾಮ ಉಂಟು ಮಾಡಬಹುದು.

ಎಲ್ಲಾ ಕಣಗಳು ಎಲ್ಲಾ ವ್ಯಕ್ತಿಗಳಿಗೆ ಏಕಸಮಾನವಾಗಿ ಅಲರ್ಜಿಕಾರಕವಲ್ಲ! ಉದಾಹರಣೆಗೆ ಓರ್ವ ವ್ಯಕ್ತಿಗೆ ಅನಾನಾಸು ಅಲರ್ಜಿಕಾರಕವಾಗಿದ್ದರೆ, ಇದೇ ಅನಾನಾಸು ಉಳಿದವರಿಗೆ ಅಲರ್ಜಿಕಾರಕವಲ್ಲ!

ಮಗುವಿನ ಚರ್ಮಕ್ಕೆ ಎದುರಾಗುವ ಅಲರ್ಜಿಕಾರಕ ಹೇಗೆ ಬಾಧಿಸುತ್ತದೆ?

ಮಗುವಿನ ಚರ್ಮಕ್ಕೆ ಎದುರಾಗುವ ಅಲರ್ಜಿಕಾರಕ ಹೇಗೆ ಬಾಧಿಸುತ್ತದೆ?

ಚರ್ಮಕ್ಕೆ ಎದುರಾಗುವ ಅಲರ್ಜಿಕಾರಕಕ್ಕೆ ಪ್ರತಿರೋಧ ವ್ಯವಸ್ಥೆಯಾಗಿ ದೇಹದ ಚರ್ಮ ಪ್ರತಿಕ್ರಿಯೆ ನೀಡುತ್ತದೆ. ಸಾಮಾನ್ಯವಾಗಿ ಈ ಪ್ರತಿಕ್ರಿಯೆಗೆ contact dermatitis (ಸ್ಪರ್ಶ ಡರ್ಮಟೈಟಿಸ್) ಎಂದು ಕರೆಯಲಾಗುತ್ತದೆ. ಇದರ ಲಕ್ಷಣಗಳೆಂದರೆ:

* ಚರ್ಮ ಕೆಂಪಗಾಗುವುದು

* ತುರಿಕೆ

* ಪಕಳೆ ಏಳುವುದು

* ದದ್ದು ಕಾಣಿಸಿಕೊಳ್ಳುವುದು

ಕೆಲವು ಅಲರ್ಜಿಕಾರಕಗಳನ್ನು ಮಕ್ಕಳು ಮುಟ್ಟಿದಾಗ, ಉಸಿರಾಡಿದಾಗ ಅಥವಾ ಆಹಾರದ ಮೂಲಕ ಸೇವಿಸಿದಾಗ ದೊಡ್ಡ ಗಾತ್ರದ ದದ್ದುಗಳು (hives) ಸಹಾ ಕಾಣಿಸಿಕೊಳ್ಳಬಹುದು. ಇವು ಸತತವಾಗಿ ತುರಿಕೆಯನ್ನು ಉಂಟು ಮಾಡುತ್ತವೆ.

ಕೆಲವು ಮಕ್ಕಳಲ್ಲಿ ಈ ಅಲರ್ಜಿ ಎಕ್ಸಿಮಾ ಎಂಬ ಚರ್ಮರೋಗಕ್ಕೂ ಕಾರಣವಾಗಬಹುದು. ಪರಿಣಾಮವಾಗಿ ಅಲರ್ಜಿ ಎದುರಾದ ಭಾಗದ ಚರ್ಮ ವಿಪರೀತ ಕೆಂಪಗಾಗಿ, ಭಾರೀ ತುರಿಕೆ ಮತ್ತು ಬೆಂಕಿ ಬಿದ್ದಂತಹ ಉರಿಯೂ ಕಾಣಿಸಿಕೊಳ್ಳಬಹುದು.

ಶ್ವಾಸವ್ಯವಸ್ಥೆಯಲ್ಲಿ ಎದುರಾಗುವ ಅಲರ್ಜಿಯ ಲಕ್ಷಣಗಳೇನು?

ಶ್ವಾಸವ್ಯವಸ್ಥೆಯಲ್ಲಿ ಎದುರಾಗುವ ಅಲರ್ಜಿಯ ಲಕ್ಷಣಗಳೇನು?

ಶ್ವಾಸದ ಮೂಲಕ ಅಲರ್ಜಿಕಾರಕ ಮಗುವಿನ ದೇಹ ಪ್ರವೇಶಿಸಿದರೆ ಶ್ವಾಸವ್ಯವಸ್ಥೆಯ ಯಾವುದೇ ಭಾಗದಲ್ಲಿ ಹಾಗೂ ಕುಹರ ಅಥವಾ ಸೈನಸ್ ಭಾಗದಲ್ಲಿಯೂ ಪರಿಣಾಮ ಕಾಣಿಸಿಕೊಳ್ಳಬಹುದು. ಇವುಗಳೆಂದರೆ:

* ಸತತ ಸೀನುವಿಕೆ

* ತುಂಬಿಕೊಂಡ ಅಥವಾ ಕಟ್ಟಿಕೊಂಡ ಮೂಗು

* ಕೆಂಪಗಾದ ಮತ್ತು ತುರಿಕೆಯುಳ್ಳ ಕಣ್ಣುಗಳು

* ಮುಖದ ಮೇಲೆ ಒತ್ತಡ ಹೇರಿದಂತಹ ಭಾವನೆ

* ಸತತ ಕೆಮ್ಮು, ಉಸಿರಾಡುವಾಗ ಸೀಟಿ ಹೊಡೆದಂತಹ ದನಿ, ಉಸಿರಾಟ ಕಷ್ಟಕರವಾಗುವುದು

ಒಂದು ವೇಳೆ ಅಲರ್ಜಿ ತೀವ್ರತರನಾಗಿದ್ದರೆ ಮಗುವಿಗೆ anaphylaxis ಎಂಬ ಸ್ಥಿತಿಯೂ ಎದುರಾಗಬಹುದು. ಇದು ಮಾರಣಾಂತಿಕವಾದ ಅಲರ್ಜಿಯ ಪರಿಣಾಮವಾಗಿದೆ. ಈ ತೊಂದರೆ ಎದುರಾದರೆ ಶ್ವಾಸವ್ಯವಸ್ಥೆಯೇ ಬಹುತೇಕ ಮುಚ್ಚಿಹೋಗಿ ಮಗುವಿಗೆ ಉಸಿರೇ ಸಿಗದಷ್ಟು ಕಷ್ಟಕರವಾಗುತ್ತದೆ.

ಅಲರ್ಜಿಯ ಇತರ ಪರಿಣಾಮಗಳು:

ಅಲರ್ಜಿಯ ಇತರ ಪರಿಣಾಮಗಳು:

ಮಗು ಇತರ ಪರಿಣಾಮಗಳನ್ನೂ ತೋರ್ಪಡಿಸಬಹುದು, ಕೆಲವು ಗಂಭೀರವೂ ಆಗಿರಬಹುದು. ಇವುಗಳಲ್ಲಿ ಪ್ರಮುಖವಾದವು ಎಂದರೆ:

* ತಲೆ ಸುತ್ತುವಿಕೆ

* ವಾಂತಿ ಬಂದಂತಹ ಭಾವನೆ, ಆದರೆ ವಾಂತಿ ಆಗದೇ ಇರುವುದು

* ಸ್ನಾಯುಗಳ ಸೆಡೆತ

* ಅತಿಸಾರ

* ವಾಂತಿ

* ಬಾಯಿಯಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಭಾವನೆ

* ನಾಲಿಗೆ ಮತ್ತು ಮುಖದ ಭಾಗಗಳು ಊದಿಕೊಳ್ಳುವುದು

ಒಂದು ವೇಳೆ ಅಲರ್ಜಿಯ ಪರಿಣಾಮಗಳು ವಿಪರೀತವಾದರೆ ಮಗು ಪ್ರಜ್ಞೆಯನ್ನೂ ಕಳೆದುಕೊಳ್ಳಬಹುದು

ಒಂದು ವೇಳೆ ನಿಮ್ಮ ಮಗುವಿಗೆ ಯಾವುದೇ ಅಲರ್ಜಿ ಎದುರಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರಲ್ಲಿ ಕರೆದೊಯ್ಯಬೇಕು. ವಿಪರೀತ ಲಕ್ಷಣಗಳು ಕಂಡುಬಂದರೆ ತಕ್ಷಣದ ಚಿಕಿತ್ಸೆಗಾಗಿ epinephrine ಎಂಬ ಔಷಧಿಯನ್ನು ನೀಡಬೇಕು ಮತ್ತು ತಕ್ಷಣ ತುರ್ತು ಪರಿಸ್ಥಿತಿಯ ನೆರವಿಗೆ ಕರೆ ಮಾಡಿ.

ಅಲರ್ಜಿಕಾರಕ ಪರಿಣಾಮಗಳನ್ನು ತಡೆಗಟ್ಟುವುದು ಹೇಗೆ?

ಅಲರ್ಜಿಕಾರಕ ಪರಿಣಾಮಗಳನ್ನು ತಡೆಗಟ್ಟುವುದು ಹೇಗೆ?

ಅತಿ ಪರಿಣಾಮಕಾರಿಯಾದ ವಿಧಾನ ಎಂದರೆ ಈ ಅಲರ್ಜಿಕಾರಕಗಳಿಂದ ಆದಷ್ಟೂ ತಪ್ಪಿಸಿಕೊಳ್ಳುವುದು. ನಿಮ್ಮ ಮಗುವಿಗೆ ಏನು ಅಲರ್ಜಿಕಾರಕ ಎಂದು ಕಂಡುಕೊಂಡ ಬಳಿಕ ಮಗುವನ್ನು ಆ ಅಲರ್ಜಿಯಿಂದ ತಪ್ಪಿಸುವುದು ಹಾಗೂ ಈ ಅಲರ್ಜಿ ಎದುರಾದರೆ ಏನು ಮಾಡಬೇಕೆಂದು ವೈದ್ಯರಲ್ಲಿ ಸಲಹೆ ಪಡೆಯುವುದು ಅಗತ್ಯ.

ಉದಾಹರಣೆಗೆ ನಿಮ್ಮ ಮಗುವಿಗೆ ಹುಲ್ಲಿನ ಅಲರ್ಜಿ ಇದೆ ಎಂದರೆ ವೈದ್ಯರು ಮಗು ಹೊರಗಿದ್ದಾಗ ನೀಳ ಶರಾಯಿ ಮತ್ತು ಕಾಲುಚೀಲಗಳನ್ನು ಹಾಕಿಕೊಂಡೇ ಹೋಗುವಂತೆ ಸಲಹೆ ಮಾಡಬಹುದು.

ನಾಯಿಗಳ ಅಲರ್ಜಿ ಇದ್ದರೆ ನಾಯಿಗಳಿಂದ ದೂರವಿರುವಂತೆ ವೈದ್ಯರು ಸಲಹೆ ಮಾಡಬಹುದು.

ಕೆಲವು ಆಹಾರಗಳಿಗೆ ಅಲರ್ಜಿ ಇದ್ದರೆ ಈ ಆಹಾರಗಳನ್ನು ಮತ್ತೆಂದೂ ಸೇವಿಸದಂತೆ ವೈದ್ಯರು ಸೂಚಿಸಬಹುದು. ಉದಾಹರಣೆಗೆ ನಿಮ ಮಗುವಿಗೆ ಅನಾನಾಸಿನ ಅಲರ್ಜಿ ಇದ್ದರೆ, ಮನೆಯಲ್ಲಂತೂ ಇದನ್ನು ತಪ್ಪಿಸಬಹುದು. ಆದರೆ ಹೊರಗೆ ಹೋದಾದ ಯಾವುದಾದರೂ ಆಹಾರದಲ್ಲಿ (ಉದಾಹರಣೆಗೆ ಕೇಸರಿ ಬಾತು) ಅನಾನಾಸು ಇಲ್ಲವೆಂದು ಖಚಿತಪಡಿಸಿಕೊಂಡೇ ತರಿಸಿಕೊಳ್ಳಬೇಕು. ಅಲ್ಲದೇ ಹೊರಗಿನ ಸ್ಥಳಗಳಲ್ಲಿ ಅಲರ್ಜಿಕಾರಕಗಳಿಂದ ತಪ್ಪಿಸಿಕೊಳ್ಳಲು ಮಲಿನ ವಸ್ತುಗಳು, ತಟ್ಟೆ ಲೋಟಗಳನ್ನು ಮುಟ್ಟದೇ ಇರುವಂತೆ ಎಚ್ಚರಿಕೆ ವಹಿಸಬೇಕು.

ನಮ್ಮ ಎಷ್ಟೇ ಪ್ರಯತ್ನಕ್ಕೂ ಮೀರಿ, ಕೆಲವೊಮ್ಮೆ ಅರಿವೇ ಇಲ್ಲದಂತೆ ಯಾವುದೋ ಅಲರ್ಜಿಕಾರಕ ಕಣ ಎದುರಾಗಿಯೇ ಹೋಗಬಹುದು. ಆಗ ಧೃತಿಗೆಡದೇ ಮುಂದಿನ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು.

ಅಲರ್ಜಿಗೆ ನೈಸರ್ಗಿಕ ಪರಿಹಾರಗಳಿವೆಯೇ?

ಅಲರ್ಜಿಗೆ ನೈಸರ್ಗಿಕ ಪರಿಹಾರಗಳಿವೆಯೇ?

ಅಲರ್ಜಿ ನಿವಾರಣೆಗೆ ವೈದ್ಯರು ಕೆಲವಾರು ಔಷಧಿಗಳನ್ನು ಸೂಚಿಸಬಹುದು. ಉದಾಹರಣೆಗೆ ಅಲರ್ಜಿನಿವಾರಕ (antihistamines) ಅಥವಾ ಎಪಿನೆಫ್ರಿನ್ (epinephrine) ಔಷಧಿಗಳನ್ನು ಸೂಚಿಸಬಹುದು.

ಅಲರ್ಜಿಯ ಲಕ್ಷಣಗಳನ್ನು ಶಮನಗೊಳಿಸಲು ಕೆಲವು ನೈಸರ್ಗಿಕ ಪರಿಹಾರಗಳೂ ಲಭ್ಯವಿವೆ. ಆದರೆ ಈ ಪರಿಣಾಮಗಳು ತೀವ್ರವಾಗಿದ್ದರೆ ಈ ಪರಿಹಾರಗಳನ್ನು ಪ್ರಯತ್ನಿಸದಿರಿ. ಕೇವಲ ತಜ್ಞ ವೈದ್ಯರು ಮಾತ್ರವೇ ಇದಕ್ಕೆ ಚಿಕಿತ್ಸೆ ನೀಡಬಲ್ಲರು.

ಯಾವುದೇ ಪರಿಹಾರವನ್ನು ನೀವಾಗಿ ಪ್ರಯತ್ನಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

ಕೆಲವಾರು ನೈಸರ್ಗಿಕ ಸಾಮಾಗ್ರಿಗಳಿಗೆ ಅಲರ್ಜಿನಿವಾರಕ ಗುಣಗಳಿವೆ ಹಾಗೂ ಇವುಗಳನ್ನು ಬಳಸಿ ತಯಾರಿಸಿದ ನೈಸರ್ಗಿಕ ಔಷಧಿಗಳೂ ಔಷಧಿ ಅಂಗಡಿಗಳಲ್ಲಿ ಲಭ್ಯವಿವೆ. ಕೆಲವು ನಿಜವಾಗಿಯೂ ಅಲರ್ಜಿಯನ್ನು ಶಮನಗೊಳಿಸಲು ಪರಿಣಾಮಕಾರಿಯಾಗಿವೆ.

ಉದಾಹರಣೆಗೆ, ಡರ್ಮಟೈಟಿಸ್ ಸ್ಥಿತಿಯ ಚಿಕಿತ್ಸೆಗೆ ಉಗುರು ಬೆಚ್ಚನೆಯ ನೀರಿನ ಸ್ನಾನ ಮತ್ತು ಸೌಮ್ಯ ಸೋಪಿನಿಂದ ತೊಳೆದುಕೊಂಡು ಒಣಗಿಸಬಹುದು. ಬಳಿಕ ಲೋಳೆಸರ ಅಥವಾ ಆಲೋವೆರಾದದ ತಿರುಳು ಅಥವಾ ಕ್ಯಾಲೆಂಡುಲಾ ಕ್ರೀಂ ಸಹಾ ಹಚ್ಚಬಹುದು.

ಆದರೆ, ಕೆಲವು ವ್ಯಕ್ತಿಗಳು ಈ ನೈಸರ್ಗಿಕ ಪರಿಹಾರಗಳಿಗೂ ಸೂಕ್ಷ್ಮ ಸಂವೇದಿಯಾಗಿರಬಹುದು. ನಿಮ್ಮ ಮಗುವಿನ ಚರ್ಮ ಒಣಚರ್ಮವಾಗಿದ್ದರೆ ಸುಗಂಧರಹಿತ ತೇವಕಾರಕ ಕ್ರೀಂ (moisturizing cream) ಅಥವಾ ಮುಲಾಮು ನೆರವಿಗೆ ಬರಬಹುದು.

ದದ್ದುಗಳು ಎದುರಾದರೆ ತಕ್ಷಣ ತಣ್ಣೀರಿನಿಂದ ಒದ್ದೆಯಾದ ಬಟ್ಟೆಯನ್ನು ಇದರ ಮೇಲೆ ಆವರಿಸಿ. ಮಗು ಸ್ನಾನ ಮಾಡುವ ನೀರಿನಲ್ಲಿ ಅಡುಗೆ ಸೋಡಾ ಅಥವಾ ಓಟ್ಸ್ ರವೆಯನ್ನು ಬೆರೆಸಿ ಸ್ನಾನ ಮಾಡಿಸುವುದೂ ಶಮನಕಾರಿ ವಿಧಾನವಾಗಿದೆ.

ಸೈನಸ್ ಅಥವಾ ಕುಹರದ ಅಲರ್ಜಿಗೆ ನೈಸರ್ಗಿಕ ಪರಿಹಾರಗಳು:

ಸೈನಸ್ ಅಥವಾ ಕುಹರದ ಅಲರ್ಜಿಗೆ ನೈಸರ್ಗಿಕ ಪರಿಹಾರಗಳು:

ನಿಮ್ಮ ಹವಾ ನಿಯಂತ್ರಣಕ್ಕೆ ಫಿಲ್ಟರ್ ಹಾಕಿಸಿದರೂ ಕೆಲವಾರು ಅಲರ್ಜಿಕಾರಕ ಕಣಗಳು ಕಾಣಿಸಿಕೊಳ್ಳಬಹುದು. ಗಾಳಿಯಲ್ಲಿ ಅಲರ್ಜಿಕಾರಕ ಕಣಗಳು ಅಥವಾ ಪರಾಗಗಳಿದ್ದರೆ ಇವು ಮಗುವಿನಲ್ಲಿ ಸೈನಸ್ ಅಲರ್ಜಿಗೆ ಕಾರಣವಾಗಬಹುದು.

ಈ ಅಲರ್ಜಿ ಅಲ್ಪ ಮಟ್ಟದಲ್ಲಿದ್ದರೆ ಔಷಧಿ ಅಂಗಡಿಗಳಲ್ಲಿ ಸಿಗುವ ಅಲರ್ಜಿ ನಿವಾರಕ ಔಷಧಿಗಳನ್ನು ಕೊಳ್ಳಬಹುದು.

ಒಂದು ಪಾತ್ರೆಯಲ್ಲಿ ನೀರು ಕುದಿಸಿ ದಪ್ಪ ಟವೆಲ್ ಹೊದ್ದು ಇದರ ಹಬೆಯನ್ನು ಉಸಿರಾಡುವಂತೆ ಮಾಡಿದರೂ ಸಾಕಷ್ಟು ಪರಿಹಾರ ಪಡೆಯಬಹುದು.

ಕೆಲವರ ಅನುಭವದ ಪ್ರಕಾರ ಮೂಗನ್ನು ಸ್ವಚ್ಛಗೊಳಿಸಿದರೂ (nasal lavage) ಈ ತೊಂದರೆಯನ್ನು ಸಾಕಷ್ಟು ಮಟ್ಟಿಗೆ ಪರಿಹರಿಸಬಹುದು. ಇದಕ್ಕಾಗಿಯೇ ಲಭ್ಯವಿರುವ ಉಪಕರಣ (neti pot) ವನ್ನು ಉಪಯೋಗಿಸಬಹುದು. ಆದರೆ ಈ ವಿಧಾನವನ್ನು, ಕೇವಲ ಸಹಕರಿಸುವ, ಕೊಂಚ ದೊಡ್ದ ಮಕ್ಕಳಲ್ಲಿ ಮಾತ್ರವೇ ಪ್ರಯತ್ನಿಸಿ.

ಹೊಟ್ಟೆಯ ಅಲರ್ಜಿಗೆ ನೈಸರ್ಗಿಕ ಪರಿಹಾರಗಳು

ಅತಿಸಾರ ಎದುರಾದರೆ ಮಗುವಿಗೆ ಹಾಲು ಮತ್ತು ಬೇಯಿಸಿದ ತರಕಾರಿಗಳ ಅಹಾರ ಸೇವಿಸಲು ನೀಡಿ (bland diet). ಅನ್ನ, ಟೋಸ್ಟ್, ಬಾಳೆಹಣ್ಣು, ಸೇಬಿನ ಸಾಸ್ ಮೊದಲಾದವುಗಳನ್ನು ಸೇವಿಸಲು ನೀಡಿ. ಜೊತೆಗೇ ಸಾಕಷ್ಟು ನೀರು ಮತ್ತು ಇತರ ದ್ರವಾಹಾರಗಳನ್ನೂ ನೀಡಿ.

ಮಗುವಿಗೆ ವಾಕರಿಕೆ ಎದುರಾದರೆ ಸಾಕಷ್ಟು ವಿಶ್ರಾಂತಿ ಪಡೆಯಲು ಹಾಗೂ ಎಲ್ಲೂ ಹೋಗದೇ ಒಂದೇ ಕಡೆ ಇರುವಂತೆ ಪ್ರೋತ್ಸಾಹಿಸಿ. ಈ ಭಾಗದಲ್ಲಿ ಯಾವುದೇ ಪ್ರಬಲ ಪರಿಮಳ ಅಥವಾ ವಾಸನೆ ಇದ್ದರೆ ಈ ವಾಕರಿಕೆ ಇನ್ನಷ್ಟು ಉಲ್ಬಣಗೊಳ್ಳಬಹುದು. ಉದಾಹರಣೆಗೆ, ಸುವಾಸಿತ ಮೇಣದ ಬತ್ತಿ, ಏರ್ ಫ್ರೆಶನರ್ ಮೊದಲಾದ ಯಾವುದೂ ಮಗುವಿನ ವಾಕರಿಕೆಯನ್ನು ಹೆಚ್ಚಿಸಬಹುದು. ಹಾಗಾಗಿ ಮಗುವನ್ನು ಕಿಟಕಿ ಹತ್ತಿರ, ತಾಜಾ ಹವೆ ಬರುವಲ್ಲಿಯೇ ಕೂರಿಸಿ ಅಥವಾ ಮಲಗಿಸಿ.

English summary

Natural Remedies for Children's Allergies in Kannada

Here are natural remedies for children's allergies, read on...
X
Desktop Bottom Promotion