Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಅವಳಿ ಮಕ್ಕಳಾಗುವುದು ಹೇಗೆ? ಅವಳಿ ಮಕ್ಕಳಿದ್ದರೆ ಗರ್ಭಾವಸ್ಥೆಯಲ್ಲಿರುವ ಸವಾಲುಗಳೇನು?
ಮೊದಲೆಲ್ಲಾ ಹೊಟ್ಟೆಯಲ್ಲಿರುವುದು ಒಂದು ಮಗುನಾ, ಅವಳಿನಾ ಅಥವಾ ತ್ರಿವಳಿ ಮಕ್ಕಳಿದ್ದಾರಾ? ಎಂಬುವುದು ಹೆರಿಗೆಯ ಬಳಿಕವಷ್ಟೇ ಗೊತ್ತಾಗುತ್ತಿತ್ತು. ಆದರೆ ಈಗ ಗರ್ಭಿಣಿ ಅಂತ ತಿಳಿಯುತ್ತಿದ್ದಂತೆ ಸ್ಕ್ಯಾನಿಂಗ್ ಮಾಡಲು ವೈದ್ಯರು ಹೇಳುವುದರಿಂದ ಹೊಟ್ಟೆಯೊಳಗಿನ ಮಗು ಅಥವಾ ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸಾಧ್ಯವಾಗುವುದು.
ಇತ್ತೀಚಿನ ದಿನಗಳಲ್ಲಿ ಅವಳ ಮಕ್ಕಳಿಗೆ ಜನ್ಮ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ಕಾರಣಗಳಿಂದಾಗಿ ಅವಳಿ ಮಕ್ಕಳಾಗುತ್ತಿವೆ, ಸಂತಾನೋತ್ಪತ್ತಿಗಾಗಿ ಚಿಕಿತ್ಸೆ ಪಡೆದರೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚುವುದು.
ಅವಳಿ ಮಕ್ಕಳಿಗೆ ಗರ್ಭಿಣಿಯಾದರೆ ಅದರಿಂದ ರಿಸ್ಕ್‌ಗಳು ಕೂಡ ಅಧಿಕ, ಕೆಲವರಿಗೆ ಗರ್ಭಾವಸ್ಥೆಯಲ್ಲಿ ಹಲವು ರೀತಿಯ ಸಮಸ್ಯೆಗಳು ಕಂಡು ಬರಬಹುದು. ಆದ್ದರಿಂದ ಅವಳಿ ಮಕ್ಕಳು ಹೊಟ್ಟೆಯಲ್ಲಿದ್ದರೆ ತುಂಬಾನೇ ಜಾಗ್ರತೆವಹಿಸಬೇಕು. ಅವಳಿ ಮಕ್ಕಳಿದ್ದಾರೆ ಯಾವೆಲ್ಲಾ ರಿಸ್ಕ್‌ಗಳಿವೆ, ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನೋಡೋಣ ಬನ್ನಿ:

ಅವಳಿ ಮಕ್ಕಳಾಗುವುದು ಹೇಗೆ?
ಫಲವತ್ತತೆಯಾದ ಅಂಡಾಣು ವಿಬ್ಭಾಗವಾಗಿ ಒಂದಕ್ಕಿಂತ ಹೆಚ್ಚು ಭ್ರೂಣಗಳಾದಾಗ ಅವು ಮಗುವಾಗಿ ರೂಪುಗೊಂಡು ಅವಳಿ ಮಕ್ಕಳಾಗುತ್ತವೆ.
ಸಾಮಾನ್ಯವಾಗಿ ಒಂದು ಫಲವತ್ತತೆಯ ಅಂಡಾಣು ಒಡೆದು ಎರಡು ಭಾಗಗಳಾಗಿ ಅವಳಿ ಮಕ್ಕಳಾಗುತ್ತವೆ. ಆದರೆ ಫರ್ಟಿಲಿಟಿ ಟ್ರೀಟ್ಮೆಂಟ್ ಪಡೆಯುತ್ತಿದ್ದರೆ ಅಂಡಾಣುಗಳನ್ನು, ವೀರ್ಯಾಣುಗಳ ಜೊತೆ ಸೇರಿಸಿ ಪ್ರತ್ಯೇಕವಾಗಿ ಫಲವತ್ತತೆ ಮಾಡಿ, ಗರ್ಭಕೋಶದೊಳಗಡೆ ಹಾಕಲಾಗುವುದು, ಹಾಗಾದಾಗ ಕೂಡ ಅವಳಿ ಮಕ್ಕಳ ಸಾಧ್ಯತೆ ಹೆಚ್ಚುವುದು.

ಅವಳಿ ಮಕ್ಕಳಿದ್ದರೆ ಎಚ್ಚರವಹಿಸಬೇಕು, ಏಕೆ?
ಹೊಟ್ಟೆಯೊಳಗೆ ಅವಳಿ ಮಕ್ಕಳಿದ್ದರೆ ಅವಧಿ ಪೂರ್ವ ಹೆರಿಗೆಯಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ 37 ವಾರಗಳು ತುಂಬುವ ಮುನ್ನವೇ ಹೆರಿಗೆಯಾಗಬಹುದು. ಅವಧಿ ಪೂರ್ವ ಮಕ್ಕಳ ಜನನವಾದರೆ ಬದುಕಿಳಿಯುವ ಸಾಧ್ಯತೆ ಕಡಿಮೆ, ಅದರಲ್ಲೂ ಅವಳಿ ಮಕ್ಕಳಾಗಿದ್ದರೆ ಮೈ ತೂಕ ತುಂಬಾನೇ ಕಡಿಮೆ ಇರುತ್ತದೆ. ಹಾಗಾಗಿ ಜನಿಸಿದ ಮಕ್ಕಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

ರಕ್ತ ಹೀನತೆ
ಒಂದು ಮಗು ಹೊಟ್ಟೆಯಲ್ಲಿರುವ ಗರ್ಭಿಣಿಗಿಂತ, ಎರಡು ಅಥವಾ ಅಧಿಕಿಂತ ಹೆಚ್ಚಿನ ಮಕ್ಕಳು ಹೊಟ್ಟೆಯಲ್ಲಿರುವ ಗರ್ಭಿಣಿಯರಲ್ಲಿ ರಕ್ತ ಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಗರ್ಭಿಣಿಯರಲ್ಲಿ ಹೈಪರ್ ಟೆನ್ಷನ್ (ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳಬಹುದು)
ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾನೇ ಹೆಚ್ಚು. ಅದರಲ್ಲೂ ಅವಳಿ ಮಕ್ಕಳಿದ್ದರೆ ಈ ಸಮಸ್ಯೆ ಇನ್ನೂ ಹೆಚ್ಚು, ಅದರಿಂದ ಕಸದ ಚೀಲ ಜಾರುವುದು ಮುಂತಾದ ಸಮಸ್ಯೆ ಕಾಣಿಸಬಹುದು.
ಜನಿಸುವ ಮಕ್ಕಳಲ್ಲಿ ನ್ಯೂನ್ಯತೆ
ಈ ರೀತಿಯ ಸಾಧ್ಯತೆ ಕಡಿಮೆಯಾಗುತ್ತಿದೆ, ಏಕೆಂದರೆ ಹೊಟ್ಟೆಯೊಳಗಿನ ಮಗುವಿನಲ್ಲಿ ಏನಾದರೂ ನ್ಯೂನ್ಯತೆ ಇದ್ದರೆ ಸ್ಕ್ಯಾನಿಂಗ್ ಮುಖಾಂತರ ತಿಳಿಯುವುದು. ಆಗ ವೈದ್ಯರು ನಿಮಗೆ ಸೂಕ್ತ ಮಾರ್ಗದರ್ಶನ ಸೂಚಿಸುತ್ತಾರೆ. ಆದರೆ ಮಗು ಶೇ. 100ರಷ್ಟು ಆರೋಗ್ಯವಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ, ಈ ಕಾರಣದಿಂದಾಗಿ ಕೆಲವೊಂದು ಮಗುವಿನಲ್ಲಿ ನ್ಯೂನ್ಯತೆ ಕಂಡು ಬರುವುದು. ಅವಳಿ ಮಕ್ಕಳಿದ್ದರೆ ಈ ರೀತಿಯ ಸಾಧ್ಯತೆ ಅಧಿಕ.
ಗರ್ಭಪಾತ
ಅವಳಿ ಮಕ್ಕಳಲ್ಲಿ ಗರ್ಭಪಾತದ ಸಾಧ್ಯತೆ ಕೂಡ ಹೆಚ್ಚಿದೆ. ಕೆಲವರಲ್ಲಿ ಮೊದಲ ತ್ರೈ ಮಾಸಿಕದಲ್ಲಿ ಎರಡು ಭ್ರೂಣ ಕಾಣಿಸಿ, ನಂತರದ ಸ್ಕ್ಯಾನಿಂಗ್‌ನಲ್ಲಿ ಒಂದೇ ಭ್ರೂಣ ಕಂಡು ಬಂದಿರುವುದೂ ಇದೆ. ಅವಳಿ ಮಕ್ಕಳಿಗೆ ಗರ್ಭಧಾರಣೆಯಾಗಿದ್ದರೆ ಮೊದಲ ತ್ರೈಮಾಸಿಕದಲ್ಲಿ ತುಂಬಾನೇ ಜಾಗ್ರತೆವಹಿಸಿ.
ಗರ್ಭಕೋಶ ದುರ್ಬಲವಾಗಿದ್ದರೆ
ಅವಳಿ ಮಕ್ಕಳಿದ್ದಾಗ ಗರ್ಭಕೋಶದ ಮೇಲೆ ಅಧಿಕ ಒತ್ತಡ ಬೀಳುತ್ತದೆ, ಆಗ ಗರ್ಭಪಾತವಾಗುವ ಸಾಧ್ಯತೆ ಅಥವಾ ಅವಧಿ ಪೂರ್ವ ಮಕ್ಕಳು ಜನಿಸುವ ಸಾಧ್ಯತೆ ಇರುವುದರಿಂದ ಸರ್ವಿಕಲ್ ಸ್ಟಿಚ್ ಹಾಕಿಸುವಂತೆ ಸೂಚಿಸುತ್ತಾರೆ. ಸರ್ವಿಕಲ್ ಸ್ಟಿಚ್ ಹಾಕಿದ ಮೇಲೆ ಅವಧಿ ಪೂರ್ವ ಮಗುವಿನ ಜನನ ಸಾಧ್ಯತೆ ಕಡಿಮೆಯಾಗುವುದರಿಂದ ಅಪಾಯ ಕೂಡ ಕಡಿಮೆ.
ಇತರ ಸಲಹೆ:
* ವೈದ್ಯರು ಸೂಚಿಸಿರುವ ಸಪ್ಲಿಮೆಂಟ್ಸ್ (ಫಾಲಿಕ್ ಆಮ್ಲ, ಐರನ್ ಸಪ್ಲಿಮೆಂಟ್ಸ್..) ಸರಿಯಾಗಿ ತೆಗೆದುಕೊಳ್ಳಿ, ಇದು ಮಗುವಿನಲ್ಲಿ ನ್ಯೂನ್ಯತೆ ಕಡಿಮೆ ಮಾಡಲು ಸಹಕಾರಿ.
* ಸರಿಯಾದ ಪೋಷಕಾಂಶವಿರುವ ಆಹಾರ ಸೇವಿಸಿ
* ವೈದ್ಯರು ಬೆಡ್‌ರೆಸ್ಟ್ ಸೂಚಿಸಿದ್ದರೆ ಪಾಲಿಸಿ
* ಮನಸ್ಸಿನಲ್ಲಿ ಯಾವುದೇ ಒತ್ತಡ ತೆಗೆದುಕೊಳ್ಳಬೇಡಿ
* ಧ್ಯಾನ ಮಾಡಿ



Click it and Unblock the Notifications