Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಮಗುವಿಗೆ ಆಹಾರ ನೀಡಲು ಬೆಳ್ಳಿ ಸಾಮಾಗ್ರಿ ಬಳಸುವುದು ಏಕೆ ಗೊತ್ತಾ?
ನವಜಾತ ಶಿಶುಗಳಿಗೆ ಅಥವಾ ಗರ್ಭಿಣಿ ತಾಯಂದಿರಿಗೆ ಬೆಳ್ಳಿ ವಸ್ತುಗಳನ್ನು ಉಡುಗೊರೆಯಾಗಿ ಸಾಮಾನ್ಯವಾಗಿ ನೀಡುವುದನ್ನು ಗಮನಿಸಿರುತ್ತೀರಿ. ಆದರೆ, ಎಂದಾದರೂ ಬೆಳ್ಳಿಯನ್ನೇ ನೀಡುತ್ತಾರೆ ಎಂಬುದನ್ನು ಯೋಚಿಸಿದ್ದೀರಾ?.. ಮಗುವಿನ ಅನ್ನಪ್ರಾಶನ ಸಮಯದಲ್ಲಿ ಹಾಗೂ ಮಗು ಎದೆಹಾಲು ಬಿಟ್ಟು ಬೇರೆ ಆಹಾರ ಸೇವಿಸಲು ಪ್ರಾರಂಭಿಸುವಾಗ ಬೆಳ್ಳಿ ತಟ್ಟೆ, ಬಟ್ಟಲು, ಪಿಂಗಾಣಿಗಳನ್ನೇ ಬಳಸುತ್ತಾರೆ. ಇದ್ಯಾಕೆ? ಇಲ್ಲಿದೆ ಉತ್ತರ. ನಮ್ಮ ಹಿರಿಯರು ಮಾಡಿದಂತಹ ಈ ಸಂಪ್ರದಾಯದ ಹಿಂದಿರುವ ವೈಜ್ಞಾನಿಕ ಕಾರಣ ಏನೆಂಬುದನ್ನು ತಿಳಿದುಕೊಳ್ಳೋಣ.
ಮಗುವಿಗೆ ಆಹಾರ ನೀಡಲು ಬೆಳ್ಳಿಯ ಸಾಮಾನುಗಳನ್ನು ಏಕೆ ಬಳಸುತ್ತೇವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಬೆಳ್ಳಿಯ ಪಾತ್ರೆಗಳ ಬಳಸುವ ಔಷಧೀಯ ಪ್ರಯೋಜನಗಳು:
ಸಂಪ್ರದಾಯ ಮತ್ತು ಶ್ರೀಮಂತಿಕೆಯ ಸಂಕೇತಕ್ಕಿಂತ ಹೆಚ್ಚಾಗಿ, ಶಿಶುಗಳಿಗೆ ಆಹಾರಕ್ಕಾಗಿ ಬೆಳ್ಳಿಯ ಪಾತ್ರೆಗಳನ್ನು ಬಳಸುವುದು ಔಷಧೀಯ ಮತ್ತು ಆರೋಗ್ಯದ ಕಾರಣಗಳನ್ನು ಹೊಂದಿದೆ. ಅವುಗಳೆಂದರೆ,
ಬೆಳ್ಳಿಯ ಸಾಮಾಗ್ರಿಗಳು ಬ್ಯಾಕ್ಟೀರಿಯಾ ಮುಕ್ತ:
ಬೆಳ್ಳಿಯು 100 ಪ್ರತಿಶತ ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿದ್ದು, ಇದೇ ಕಾರಣಕ್ಕಾಗಿ ನಮ್ಮ ಹಿರಿಯರು ಬೆಳ್ಳಿಯ ಪಾತ್ರೆಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ನೀಡಲು ಸಲಹೆ ನೀಡುತ್ತಾರೆ. ಜೊತೆಗೆ ಇದನ್ನು ಕ್ರಿಮಿನಾಶಕ ಬಳಸಿ, ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಬದಲಾಗಿ, ಬೆಚ್ಚಗಿನ ನೀರಿನಿಂದ ಸಾಮಾನ್ಯವಾಗಿ ತೊಳೆದರೆ ಸಾಕು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು:
ಬೆಳ್ಳಿಯು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಗುಣಲಕ್ಷಣಗಳ ಜೊತೆಗೆ, ಶಿಶುಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಹೊಸ ಅಮ್ಮಂದಿರಿಗೆ ತಮ್ಮ ಶಿಶುವಿಗೆ ಬೆಳ್ಳಿಯ ಚಮಚದಿಂದ ಆಹಾರ ನೀಡಲು ಸಲಹೆ ನೀಡುವುದು. ಈ ಲೋಹದ ಇತರ ಗುಣವೆಂದರೆ, ಬೆಚ್ಚಗಿನ ಆಹಾರವನ್ನು ಸೇವಿಸಿದಾಗ ಲೋಹವು ಆಹಾರದೊಂದಿಗೆ ಸೇರಿಕೊಂಡು, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಆಹಾರದಲ್ಲಿ ಬಿಡುಗಡೆ ಮಾಡುತ್ತದೆ. ಆದ್ದರಿಂದ ಶಿಶುಗಳು ಮತ್ತು ಅಂಬೆಗಾಲಿಡುವವರಿಗೆ ಬೆಳ್ಳಿಯ ಪಾತ್ರೆಯಿಂದ ಆಹಾರವನ್ನು ನೀಡಲು ಆದ್ಯತೆ ನೀಡಲಾಗುತ್ತದೆ.
ಬೆಳ್ಳಿ ಪಾತ್ರೆಗಳು ವಿಷಕಾರಿಯಲ್ಲ:
ಶುದ್ಧ ಬೆಳ್ಳಿಯನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ, ಆದರೆ, ಶುದ್ಧ ಲೋಹವನ್ನು ಪರಿವರ್ತಿಸುವ ಕಾರ್ಯವಿಧಾನದಲ್ಲಿ ಒಳಗೊಳ್ಳುವುದರಿಂದ ಬೆಳ್ಳಿಯ ಪಾತ್ರೆಗಳು ವಿಷಕಾರಿಯಲ್ಲ. ಆದ್ದರಿಂದ ಬೆಳ್ಳಿಯ ತಟ್ಟೆಯಲ್ಲಿ ತಿನ್ನುವುದು ವಿಷಕಾರಿಯಲ್ಲ ಮತ್ತು ಮಗುವಿನ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆಹಾರವನ್ನು ಹೆಚ್ಚು ಕಾಲ ತಾಜಾವಾಗಿರಿಸುವುದು:
ಬೆಳ್ಳಿಯು ಅದರಲ್ಲಿ ಸಂಗ್ರಹವಾಗಿರುವ ದ್ರವಗಳು ಮತ್ತು ಆಹಾರಗಳ ತಾಜಾತನವನ್ನು ಉಳಿಸಿಕೊಳ್ಳುತ್ತದೆ. ಇದೇ ಕಾರಣಕ್ಕಾಗಿ, ಪ್ರಾಚೀನ ಕಾಲದಲ್ಲಿ, ರಾಜಮನೆತನದವರು ಬೆಳ್ಳಿಯ ಪಾತ್ರೆ, ಫ್ಲಾಸ್ಕ್‌ನಲ್ಲಿ ನೀರು ಮತ್ತು ವೈನ್‌ಗಳನ್ನು ಸಂಗ್ರಹಿಸಿರುತ್ತಿದ್ದು.
ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುವುದು:
ಬೆಳ್ಳಿಯ ಪ್ರಮುಖ ಗುಣವೆಂದರೆ, ಅದು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕಾಗಿ ನವಜಾತ ಶಿಶುಗಳ ಪರಿಕರಗಳು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ನಾವು ಬೆಳ್ಳಿಯ ಕಾಲುಂಗುರ ಮತ್ತು ಇತರ ಆಭರಣಗಳನ್ನು ಧರಿಸಲು ಕಾರಣವೂ ಹೌದು.
ಮಗುವಿಗೆ ಬೆಳ್ಳಿ ಪಾತ್ರೆಯಲ್ಲಿ ಆಹಾರ ನೀಡುವುದರ ಕುರಿತು ಇರುವ ಸಾಮಾನ್ಯ ಗೊಂದಲಗಳಿಗೆ ಇಲ್ಲಿವೆ ಪರಿಹಾರ:

ಮಗುವಿಗೆ ಬೆಳ್ಳಿ ಪಾತ್ರೆಗಳಲ್ಲಿ ಆಮ್ಲೀಯ ಆಹಾರವನ್ನು ನೀಡಬಹುದೇ?:
ಟೊಮ್ಯಾಟೊ ಮತ್ತು ಸಿಟ್ರಸ್ ಹಣ್ಣುಗಳನ್ನು ಬೆಳ್ಳಿಯ ಪಾತ್ರೆಗಳಲ್ಲಿ ನೀಡುವುದು ಸುರಕ್ಷಿತವೇ ಎಂದು ಅನೇಕ ಪೋಷಕರು ಚಿಂತಿಸುತ್ತಾರೆ. ಬೆಳ್ಳಿ ಆಮ್ಲೀಯ ಆಹಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದ್ದರಿಂದ ಇದು ಸುರಕ್ಷಿತವಾಗಿದೆ. ಆದಾಗ್ಯೂ, ಬೆಳ್ಳಿಯು ಆಹಾರಗಳಲ್ಲಿರುವ ಗಂಧಕಕ್ಕೆ ಪ್ರತಿಕ್ರಿಯಿಸಬಹುದು. ಆದ್ದರಿಂದ ಬೆಳ್ಳಿ ಪಾತ್ರೆಯಲ್ಲಿ ಮೊಟ್ಟೆ ತಿನ್ನುವಾಗ ಅದರ ರುಚಿ ಬದಲಾಗುವುದು. ಆದ್ದರಿಂದ ಬೆಳ್ಳಿ ಪಾತ್ರೆಯಲ್ಲಿ ಮೊಟ್ಟೆ ನೀಡಬೇಡಿ.

ಮಗುವಿಗೆ ಬೆಳ್ಳಿಯ ಪಾತ್ರೆಗಳನ್ನು ಹೇಗೆ ಬಳಸಬಹುದು?:
ನೀವು ಮಗುವಿನ ಆಹಾರವನ್ನು ತಯಾರಿಸಿದ ನಂತರ, ಬೆಳ್ಳಿಯ ಬಟ್ಟಲಿನಲ್ಲಿ ಬೆಳ್ಳಿಯ ಚಮಚದೊಂದಿಗೆ ಮಗುವಿಗೆ ನೀಡಿ. ಮಗುವಿಗೆ ನೀರು ಮತ್ತು ಇತರ ರಸವನ್ನು ನೀಡಲು ಸೂಕ್ತವಾದ ಗ್ಲಾಸನ್ನು ಬಳಸಿ. ಬೆಳ್ಳಿಯ ಒಳಲೆಯನ್ನು ಔಷಧಗಳನ್ನು ನೀಡಲು ಬಳಸಬಹುದು.
ಮಗುವಿಗೆ ಆಹಾರ ನೀಡಲು ಬಳಸುವ ಬೆಳ್ಳಿ ಪಾತ್ರೆಗಳನ್ನು ಹೇಗೆ ಸ್ವಚ್ಛಗೊಳಿಸುವುದು?:
ಬೆಳ್ಳಿಯ ಪಾತ್ರೆಗಳನ್ನು ಪ್ಲಾಸ್ಟಿಕ್ ಬೇಬಿ ಫೀಡಿಂಗ್ ಬೌಲ್‌ಗಳು ಮತ್ತು ಸ್ಪೂನ್‌ಗಳಂತೆ ಸ್ವಚ್ಛಗೊಳಸಬೇಕಾಗಿಲ್ಲ. ಬೇಬಿಕೇರ್ ಶುಚಿಗೊಳಿಸುವ ಏಜೆಂಟ್ ಮತ್ತು ನೀರಿನಿಂದ ಅವುಗಳನ್ನು ಸುಲಭವಾಗಿ ತೊಳೆದು ಸ್ವಚ್ಛಗೊಳಿಸಿ, ಶುದ್ಧವಾದ ಬಟ್ಟೆಯಿಂದ ಒರೆಸಿ ಮತ್ತು ಅಗತ್ಯವಿದ್ದಾಗ ಅವುಗಳನ್ನು ಬಳಸಿ.
ಮಗುವಿಗೆ ಬೆಳ್ಳಿ ಪಾತ್ರೆಗಳನ್ನು ಖರೀದಿಸುವುದು ಹೇಗೆ?:
ನೀವು ಪ್ರತಿಷ್ಠಿತ ಶೋರೂಮ್‌ಗಳಿಂದ ಖರೀದಿಸಿ, ಇದರಿಂದ ವಂಚನೆಗೊಳಗಾಗುವುದು ತಪ್ಪುವುದು.
ಚಮಚಗಳನ್ನು ಆಯ್ಕೆಮಾಡುವಾಗ, ದುಂಡಾದ ಅಂಚುಗಳನ್ನು ಹೊಂದಿರುವ ಮತ್ತು ಮಗುವಿಗೆ ನೋವು ಮಾಡದೇ ಇರುವಂತಹುಗಳನ್ನ ಆರಿಸಿಕೊಳ್ಳಿ.
ಪ್ಲೇಟ್‌ಗಳು ಮತ್ತು ಬೌಲ್‌ಗಳನ್ನು ಕಡಿಮೆ ಡಿಸೈನ್ ಇರುವಂತೆ ನೋಡಿ, ಖರೀದಿಸಿ ಏಕೆಂದರೆ ಅವುಗಳು ಸ್ವಚ್ಛಗೊಳಿಸಲು ಸುಲಭವಾಗುತ್ತದೆ.



Click it and Unblock the Notifications