Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
ಥೈರಾಯ್ಡ್ ಸಮಸ್ಯೆ ಎಂಬುವುದು ಕೆಲವರಿಗೆ 20 ವರ್ಷ ದಾಟುತ್ತಿದ್ದಂತೆ ಕಂಡು ಬರುತ್ತಿದೆ, ನಮ್ಮ ದೇಹದಲ್ಲಿರುವ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅಂದರೆ ಅತಿಯಾಗಿ ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸುವುದು ಅಥವಾ ಅತಿ ಕಡಿಮೆ ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸುವುದು ಮಾಡಿದಾಗ ಥೈರಾಯ್ಡ್ ಸಮಸ್ಯೆ ಉಂಟಾಗುವುದು.

ಥೈರಾಯ್ಡ್ ಸಮಸ್ಯೆ ಇದ್ದರೆ ಗರ್ಭಧಾರಣೆಯಾಗುವುದು ಕಷ್ಟ, ಒಂದು ವೇಳೆ ಗರ್ಭಿಣಿಯಾದರೆ ಗರ್ಭಪಾತವಾದ ಅಪಾಯ ಅಧಿಕ. ಇನ್ನು ಕೆಲವರಿಗೆ ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಹಾರ್ಮೋನ್‌ನಲ್ಲಿ ವ್ಯತ್ಯಾಸ ಉಂಟಾಗುವುದು. ಆದರೆ ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಹಾರ್ಮೋನ್‌ನಲ್ಲಿ ವ್ಯತ್ಯಾಸವಿದ್ದರೆ ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೆ ಅಪಾಯಕಾರಿ. ಮಗುವಿನ ಬುದ್ಧಿ ಶಕ್ತಿ ಮೇಲೆ ಕೆಟ್ಟ ಪರಿಣಾಮ ಬೀರುವುದು. ಆದ್ದರಿಂದ ಥೈರಾಯ್ಡ್ ಸಮಸ್ಯೆ ಇದ್ದರೆ ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಬೇಕು.
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ
ಥೈರಾಯ್ಡ್ ಸಮಸ್ಯೆಯನ್ನು 2 ವಿಧಗಳಾಗಿ ವಿಂಗಡಿಸಲಾಗಿದೆ
* ಹೈಪೋಥೈರಾಯ್ಡ್': ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾಗಿದ್ದರೆ ಹೈಪೋಥೈರಾಯ್ಡ್ ಎಂದು ಕರೆಯಲಾಗುವುದು
* ಹೈಪರ್ ಥೈರಾಯ್ಡ್: ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾಗಿದ್ದರೆ ಹೈಪರ್ ಥೈರಾಯ್ಡ್ ಎಂದು ಕರೆಯಲಾಗುವುದು.
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಈ ಬಗೆಯ ಆಹಾರಗಳು ಸಹಕಾರಿ.
ಅಯೋಡಿಯನ್ ಇರುವ ಆಹಾರಗಳು: ಹಾಲಿನ ಉತ್ಪನ್ನಗಳು, ಸಮುದ್ರಾಹಾರ, ಮೊಟ್ಟೆ, ಮಾಂಸ, ಲಿವರ್ ಇವುಗಳಲ್ಲಿರುವ ಖನಿಜಾಂಶಗಳು ಥೈರಾಯ್ಡ್ ಗ್ರಂಥಿ ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಲು ಸಹಕಾರಿ.
ಮೆಗ್ನಿಷ್ಯಿಯಂ ಇರುವ ಆಹಾರ: ಬೀನ್ಸ್, ಸೊಪ್ಪು, ಕ್ಯಾರೆಟ್, ಪಾಲಾಕ್, ಅಣಬೆ ಈ ಬಗೆಯ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.
ಹಣ್ಣುಗಳು: ಸೇಬು, ಬೆರ್ರಿ, ಬಾಳೆಹಣ್ಣು, ಗ್ರೇಪ್ಸ್, ಸಿಟ್ರಸ್ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.
ಪ್ರೊಟೀನ್ ಇರುವ ಆಹಾರಗಳು: ಮೀನು, ಮಾಂಸಾಹಾರ, ಕೋಳಿ, ಮೊಟ್ಟೆ ಇವುಗಳಲ್ಲಿ ಪ್ರೊಟೀನ್ ಅಂಶ ಅಧಿಕವಿರುತ್ತದೆ.
ಧಾನ್ಯಗಳು: ಥೈರಾಯ್ಡ್ ಸಮಸ್ಯೆ ಇರುವವರಿಗೆ ಮಲವಿಸರ್ಜನೆಗೆ ತೊಂದರೆಯಾಗುವುದು, ಹೈಪೋಥೈರಾಯ್ಡ್ ಇದ್ದರೆ ಮಲವಿಸರ್ಜನೆ ಕಷ್ಟವಾಗುವುದು. ಮೊಳಕೆ ಬರಿಸಿದ ಧಾನ್ಯಗಳನ್ನು ಬಳಸುವುದರಿಂದ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.
ಹಾಲಿನ ಉತ್ಪನ್ನಗಳು
ಚೀಸ್, ತೆಂಗಿನಕಾಯಿ ಹಾಲು, ಮೊಸರು, ಯೋಗರ್ಟ್, ಬಾದಾಮಿ ಹಾಲು ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
ಮೆಂತೆ ಸೊಪ್ಪು: ಟೊಮೆಟೊ, ಕ್ಯಾಪ್ಸಿಕಂ, ಮೆಂತೆ ಸೊಪ್ಪು ಈ ಬಗೆಯ ತರಕಾರಿ ಕೂಡ ಒಳ್ಳೆಯದು.
ಯಾವ ಬಗೆಯ ಆಹಾರ ಒಳ್ಳೆಯದಲ್ಲ
ಥೈರಾಯ್ಡ್ ಸಮಸ್ಯೆ ಇದ್ದರೆ ಕ್ಯಾಬೇಜ್, ಬ್ರೊಕೋಲಿ, ಹೂಕೋಸು, ಸೋಯಾ ಪದಾರ್ಥಗಳನ್ನು ಬಳಸಬೇಡಿ.
ಗರ್ಭಿಣಿಯಾದಾಗ ಥೈರಾಯ್ಡ್ ಪರೀಕ್ಷೆ ಮಾಡಿಸಲೇಬೇಕು
ಗರ್ಭಧಾರಣೆಯಾದಾಗ ಥೈರಾಯ್ಡ್ ಪರೀಕ್ಷೆ ಮಾಡಿಸಲೇಬೇಕು. ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದರೆ ಅದು ಬೆಳೆಯುತ್ತಿರುವ ಭ್ರೂಣದ ಮೇಲೆ ಪ್ರಬಾವ ಬೀಳುವುದು. ಗರ್ಭಪಾತವಾಗುವುದು ಅಥವಾ ಮಗು ಬುದ್ಧಿಮಾಂದ್ಯವಾಗಿ ಹುಟ್ಟುವ ಸಾಧ್ಯತೆ ಇರುವುದರಿಂದ ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲೇಬಾರದು.



Click it and Unblock the Notifications

