Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯಲ್ಲಿ ಕಾಡುವ ಎದೆಯುರಿ ತಡೆಗಟ್ಟುವುದು ಹೇಗೆ?
ಗರ್ಭಾವಸ್ಥೆಯಲ್ಲಿ ಬಹುತೇಕ ಗರ್ಭಿಣಿಯರುಗೆ ಎದೆಯುರು ಸಮಸ್ಯೆ ಉಂಟಾಗುವುದು. ಗರ್ಬಾವಸ್ಥೆಯಲ್ಲಿ ಕಾಡುವ ಹಲವು ಸಮಸ್ಯೆಗಳ ಜೊತೆಗೆ ಈ ಎದೆಯುರಿ ಕೂಡ ಕಾಣಿಸಿಕೊಂಡಾಗ ತುಂಬಾನೇ ಹಿಂಸೆ ಅನಿಸುವುದು.

ಕೆಲವರಿಗೆ ಈ ರೀತಿ ಎದೆಯುರಿ ಸ್ವಲ್ಪ ಹೊತ್ತು ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಗಂಟೆ-ಗಟ್ಟಲೆ ಕಾಡುವುದು. ಇದರ ಜೊತೆಗೆ ಈ ಬಗೆಯ ಸಮಸ್ಯೆಗಳು ಕಂಡು ಬರುವುದು
* ಹೊಟ್ಟೆ ಉಬ್ಬುವುದು
* ಬಾಯಿಯಲ್ಲಿ ಹುಳಿ-ಹುಳಿ ನೀರು ಬರುವುದು
* ಗಂಟಲು ಕೆರೆತ
* ಆಗಾಗ ಕೆಮ್ಮುವುದು
ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ಗಳ ಬದಲಾವಣೆ
ಗರ್ಬಾವಸ್ಥೆಯಲ್ಲಿ ಎದೆಯುರಿಗೆ ಪ್ರೊಗೆಸ್ಟಿರೋನೆ (Progesterone) ಎಂಬ ಪ್ರೆಗ್ನೆನ್ಸಿ ಹಾರ್ಮೋನ್ ಕಾರಣವಾಗಿದೆ.
ಮಗು ಬೆಳವಣಿಗೆಯಾಗುತ್ತಿರುವಾಗ
ಗರ್ಭದಲ್ಲಿ ಮಗು ಬೆಳೆಯುತ್ತಿದ್ದಂತೆ ಎದೆಯುರಿ ಸಮಸ್ಯೆ ಹೆಚ್ಚಾಗುವುದು. ಏಕೆಂದರೆ ಮಗು ಬೆಳೆಯುತ್ತಿದ್ದಂತೆ ಸ್ಥಳಾವಕಾಶ ಹೆಚ್ಚು ಬೇಕಾಗುವುದು, ಆಗ ಅದು ಇತರ ಅಂಗಾಂಗಗಳ ಮೇಲೆ ಒತ್ತಡ ಹಾಕುತ್ತದೆ, ಇದರಿಂದ ಎದೆಯುರಿ ಉಂಟಾಗುವುದು.
ನಿಧಾನಕ್ಕೆ ಜೀರ್ಣವಾಗುವುದು
ಇನ್ನೂ ಗರ್ಬಾವಸ್ಥೆಯಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗುವುದು. ಇದರಿಂದ ಕೂಡ ಹೃದಯಯುರಿ ಸಮಸ್ಯೆ ಹೆಚ್ಚಾಗುವುದು.
' ಗರ್ಬಾವಸ್ಥೆಯಲ್ಲಿ ಎದೆಯುರಿ ತಡೆಗಟ್ಟುವುದು ಹೇಗೆ?
* ನಿಮ್ಮ ಆಹಾರಕ್ರಮದ ಕಡೆ ಗಮನ ನೀಡಿ
ಅಸಿಡಿಕ್ ಹಾಗೂ ಖಾರದ ಆಹಾರ ಸೇವನೆ ಮಾಡುವುದರಿಂದ ಹೃದಯಯುರಿ ಸಮಸ್ಯೆ ಉಂಟಾಗುವುದು. ನೀವು ಸಿಟ್ರಸ್, ಟೊಮೆಟೊ, ಈರುಳ್ಳಿ, ಕೆಫೀನ್, ಬೆಳ್ಳುಳ್ಳಿ, ಚಾಕೋಲೇಟ್, ಸೋಡಾ ಅತವಾ ಇತರ ಅಸಿಡಿಟಿ ಈ ಬಗೆಯ ಆಹಾರ ಎದೆಯುರಿ ಸಮಸ್ಯೆ ಉಂಟಾಗುವುದು.
ಮೂರು ಹೊತ್ತು ತಿನ್ನುವ ಬದಲು ಆಗಾಗ ತಿನ್ನಿ
ನೀವು ಮೂರು ಹೊತ್ತು ತಿನ್ನುವ ಬದಲಿಗೆ ಆಗಾಗ ತಿನ್ನುವುದರಿಂದ ಎದೆಯುರಿ ತಡೆಗಟ್ಟಬಹುದು.
ಊಟ ಮಾಡುವಾಗ ನೇರವಾಗಿ ಕೂರಿ
ನೀವು ಊಟ ಮಾಡುವಾಗ ನೇರವಾಗಿ ಕೂತು ತಿನ್ನಿ.
ಮಲಗುವ ಮೂರು ಗಂಟೆಯ ಮುಂಚೆ ಸೇವಿಸಿ
ನೀವು ಮಲಗುವ ಮೂರು ಗಂಟೆ ಮುಂಚೆ ಆಹಾರ ಸೇವಿಸಿ, ತಿಂದ ತಕ್ಷಣ ಮಲಗಿದರೆ ಎದೆಯುರಿ ಸಮಸ್ಯೆ ಹೆಚ್ಚಾಗುವುದು.
ಎತ್ತರದ ತಲೆದಿಂಬು ಇಟ್ಟು ಮಲಗಿ
ನೀವು ಎತ್ತರದ ತಲೆದಿಂಬು ಇಡಿ, ಭುಜದ ಬಳಿಯೂ ದಿಂಬು ಇಡಿ , ದಿಂಬು ಮೇಲೆ ಕೂಡ ಕಾಲು ಇಟ್ಟು ಮಲಗಿ. ಇಲ್ಲದಿದ್ದರೆ ಸ್ಪೆಷಲ್ ವೆಡ್ಜ್ ಪಿಲ್ಲೋ ಖರೀದಿಸಿ ಅದರಲ್ಲಿ ಮಲಗಿ, ಇದರಿಂದ ಎದೆಯುರಿ ಸಮಸ್ಯೆ ತಡೆಗಟ್ಟಬಹುದು.
ಸಡಿಲವಾದ ಬಟ್ಟೆ ಧರಿಸಿ
ನೀವುಊಟ ಮಾಡುವಾಗ ನೀರು ಕುಡಿಯಬೇಡಿ, ಊಟ ಮಾಡಿದ ಬಳಿಕ ನೀರು ಕುಡಿಯಿರಿ.
ತುಂಬಾ ಎದೆಯುರಿ ಉಂಟಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯಿರಿ
ತುಂಬಾ ಎದೆಯುರಿ ಇದ್ದಾಗ ನೀವು ವೈದ್ಯರ ಹತ್ರ ಹೇಳಿದರೆ ಅವರು ನಿಮಗೆ ಸೂಕ್ತ ಔಷಧ ನೀಡುತ್ತಾರೆ, ಯಾವುದೇ ಕಾರಣಕ್ಕೆ ಸ್ವಂತಮದ್ದು ಮಾಡಬೇಡಿ.



Click it and Unblock the Notifications

