Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಿಣಿಯಾಗದೇ ಇದ್ದರೂ ಪ್ರೆಗ್ನೆನ್ಸಿ ಟೆಸ್ಟ್‌ನಲ್ಲಿ ಪಾಸಿಟಿವ್ ಅಂತ ಬಂದರೆ ಈ 7 ಕಾರಣಗಳಿಂದಿರಬಹುದು
ಮುಟ್ಟಿನ ದಿನ ಬಂದಿದೆ, ಆದರೆ ಮುಟ್ಟಾಗಿಲ್ಲ, ಒಂದು ತಿಂಗಳು ಮುಟ್ಟಾಗದಿದ್ದಾಗ ನಾನು ಅಮ್ಮ ಆಗುತ್ತಿರಬಹುದೇ ಎಂಬ ಸಂಶಯ ಮನಸ್ಸಿನಲ್ಲಿ ಮೂಡಿದ್ದೇ ತಡ ಪ್ರೆಗ್ನೆನ್ಸಿ ಕಿಟ್ ತಂದು ಪರೀಕ್ಷೆ ಮಾಡಿದರೆ ಪಾಸಿಟಿವ್ ಅಂತ ಗೊತ್ತಾದಾಗ ಮಗುವಿನ ನಿರೀಕ್ಷೆಯಲ್ಲಿದ್ದರೆ ತುಂಬಾನೇ ಖುಷಿಯಾಗುವುದು, ಆದರೆ ಎಷ್ಟೋ ಬಾರಿ ನಾವು ನೋಡಿದ್ದು ನಿಜವಾಗಿರಬೇಕಾಗಿಲ್ಲ.

ಆಸ್ಪತ್ರೆಗೆ ಹೋಗಿ ಮತ್ತೊಮ್ಮೆ ಖಚಿತ ಪಡಿಸಲು ಮೂತ್ರ ಪರೀಕ್ಷೆ ಮಾಡಿಸಿದಾಗಲೂ ಗರ್ಭನಿಂತಿದೆ ಎಂದು ಮತ್ತೊಮ್ಮೆ ಖಚಿತವಾಗುವುದು, ಆದರೆ ಅಲ್ಟ್ರಾಸೌಂಡ್ ಮಾಡಿಸಿದಾಗ ತಿಳಿಯುವುದು ನಿಜವಾಗಿ ಗರ್ಭಧಾರಣೆಯಾಗಿಲ್ಲ ಎಂದು. ಹೌದು ಎಷ್ಟೋ ಜನರಿಗೆ ಈ ಅನುಭವವಾಗಿರುತ್ತದೆ.
ಈ ಕೆಳಗಿನ ಸಂದರ್ಭಗಳಲ್ಲಿ ಗರ್ಭಿಣಿ ಅಂತ ಟೆಸ್ಟ್ ಮಾಡಿದಾಗ ತಿಳಿಯುತ್ತೆ, ಆದರೆ ಆ ಗರ್ಭ ನಿಜವಾಗಿರಲ್ಲ ನೋಡಿ:
1. ಕೆಮಿಕಲ್ ಪ್ರೆಗ್ನೆನ್ಸಿ
ಫಲವತ್ತತೆಯಾದ ಅಂಡಾಣು ಅಂದರೆ ಭ್ರೂಣ ಸರಿಯಾಗಿ ಬೆಳವಣಿಗೆಯಾಗದೇ ಇದ್ದಾಗ, ಗರ್ಭಿಣಿ ಅಂತ ಟೆಸ್ಟ್ ಮಾಡಿದಾಗ ಬರುತ್ತೆ, ಆದರೆ ಮಗುವಾಗಲು ಸಾಧ್ಯವಿಲ್ಲ. ಕೆಮಿಕಲ್ ಪ್ರೆಗ್ನೆನ್ಸಿಗೆ ನಿಖರ ಕಾರಣವೇನು ಎಂಬುವುದು ವೈದ್ಯಕೀಯ ಜಗತ್ತಿಗೂ ಗೊತ್ತಿಲ್ಲ. ನಿಮ್ಮ ಮುಟ್ಟಿನ ದಿನಾಂಕದಲ್ಲಿ ಮುಟ್ಟಾಗದಿದ್ದರೆ ತಕ್ಷಣ ಪ್ರೆಗ್ನೆನ್ಸಿ ಟೆಸ್ಟ್ ಮಾಡಬೇಡಿ. ಒಂದು ವಾರ ಕಾದು ಮಾಡಿಸಿದರೆ ಒಳ್ಳೆಯದು.
ಇಲ್ಲದಿದ್ದರೆ ಗರ್ಭಿಣಿ ಎಂದು ಗೊತ್ತಾಗಿ ಆದ ಖುಷಿ ನಂತರ ಇಲ್ಲವೆಂದು ತಿಳಿದಾಗ ದೂರಾಗುವುದು.
2. ಎಕ್ಟೋಪಿಕ್ ಪ್ರೆಗ್ನೆನ್ಸಿ
ಇದರಲ್ಲಿ ಭ್ರೂಣವನ್ನು ಗರ್ಭಕೋಶದಿಂದ ಹೊರಗಡೆ ಫಾಲೀಪಿಯನ್ ಟ್ಯೂಬ್‌ನಲ್ಲಿ ಬೆಳೆಯುವುದು. ಇದು ತುಂಬಾನೇ ಅಪಾಯಕಾರಿ, ಈ ರೀತಿಯಾದಾಗ ಕೂಡಲೇ ಆ ಭ್ರೂಣವನ್ನು ತೆಗೆಯಬೇಕು.
ಎಕ್ಟೋಪಿಕ್ ಗರ್ಭಧಾರಣೆಗೆ ಕಾರಣಗಳೇನು?
* ಫಾಲೋಪಿಯನ್‌ಗೆ ಏನಾದರೂ ಹಾನಿಯಾಗಿದ್ದರೆ
* ಸಂತಾನೋತ್ಪತ್ತಿಗೆ ಚಿಕಿತ್ಸೆ ಪಡೆದಿದ್ದರೆ
* ಟ್ಯೂಬೆಲ್ ಸರ್ಜರಿಯಾಗುದ್ದರೆ
* ಈ ಮೊದಲು ಮೂತ್ರನಾಳದ ಸೋಂಕು ಇದ್ದರೆ
* ಈ ಮೊದಲು ಎಕ್ಟೋಪಿಕ್ ಪ್ರೆಗ್ನೆನ್ಸಿಯಾಗಿದ್ದರೆ
ಎಕ್ಟೋಪಿಕ್ ಪ್ರೆಗ್ನೆನ್ಸಿಯಲ್ಲಿ
* ಹೊಟ್ಟೆ ನೋವು, ಸೊಂಟ ನೋವು, ಬೆನ್ನು, ಕುತ್ತಿಗೆಯಲ್ಲಿ ನೋವು ಕಂಡು ಬರುವುದು
* ಹೊಟ್ಟೆಯ ಒಂದು ಬದಿಯಲ್ಲಿ ತುಂಬಾ ನೀವು ಇರುವುದು
* ರಕ್ತಸ್ರಾವ ಕಂಡು ಬರುವುದು
* ಸುಸ್ತು, ತಲೆಸುತ್ತು
* ಗುದಧ್ವಾರದ ಬಳಿ ಒತ್ತಡ
3. ಇತ್ತೀಚೆಗೆ ಗರ್ಭಪಾತವಾಗಿದ್ದರೆ
ಗರ್ಭಿಣಿಯಾಗಿದ್ದಾಗ ಉತ್ಪತ್ತಿಯಾದ ಹಾರ್ಮೋನ್ ನಿಮ್ಮ ರಕ್ತದಲ್ಲಿ 6 ವಾರಗಳ ಕಾಲ ಇರುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಪಾತವಾದ ಬಳಿಕ 6 ವಾರದೊಳಗೆ ಪರೀಕ್ಷೆ ಮಾಡಿದರೆ ಪಾಸಿಟಿವ್ ಅಂತ ಬರಬಹುದು.
4. ಕೆಲವೊಮ್ಮೆ ಎರಡು ಲೈನ್ ಡಾರ್ಕ್ ಆಗಿರದಿದ್ದರೆ
ಮನೆಯಲ್ಲಿಯೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದಾಗ ನೊಂದು ಲೈನ್ ಡಾರ್ಕ್ ಆಗಿ ಕಂಡು ಬಂದು ಮತ್ತೊಂದು ಅಷ್ಟೊಂದು ಡಾರ್ಕ್ ಇಲ್ಲದಿದ್ದರೆ ಒಂದು ಗರ್ಭಧಾರಣೆಯ ಆರಂಭವಷ್ಟೇ ಅಥವಾ ಗರ್ಭಧಾರಣೆಯಾಗಿರುವುದಿಲ್ಲ.
5. ಕೆಲವೊಂದು ಔಷಧಗಳು
Novarel
Pregnyl
Ovidrel
Profasi
ಬ್ರ್ಯಾಂಡ್ ಅಡಿಯಲ್ಲಿ ಮಾರಾಟವಾಗುವ ಔಷಧಗಳನ್ನು ಸೇವಿಸಿದಾಗ ಕೂಡ ಈ ರೀತಿ ತಪ್ಪಾದ ಪ್ರೆಗ್ನೆನ್ಸಿ ರಿಸಲ್ಟ್ ಬರುವುದು.
ಖಿನ್ನತೆ, ಪಾರ್ಕಿನ್‌ಸನ್ಸ್ ಮುಂತಾದ ಕಾಯಿಲೆಗೆ ಔಷಧಿ ತೆಗೆದುಕೊಳ್ಳುವುದರಿಂದ ಈ ರೀತಿಯಾಗಬಹುದು.
6. ಕೆಲವೊಂದು ಕಾಯಿಲೆಗಳಿದ್ದಾಗ
* ಕೀಮೋಥೆರಪಿ
* ಮೋಲಾರ್ ಪ್ರೆಗ್ನೆನ್ಸಿ
* ಅಪರೂಪದ ಆ್ಯಂಟಿಬಾಡಿ ಉತ್ಪತ್ತಿಯಾದಾಗ
* ಮೂತ್ರನಾಳದ ಸೋಂಕು
* ಕಿಡ್ನಿ ಸಮಸ್ಯೆ
* ಗರ್ಭಕೋಶದ ಕ್ಯಾನ್ಸರ್
* ಮೇಧೋಜೀರಕ ಸಮಸ್ಯೆ
7. ಚೆಕ್ ಮಾಡುವಸಾಧನ ಸರಿಯಿಲ್ಲದಿದ್ದರೆ
ಕೆಲವೊಮ್ಮೆ ಉಪಕರಣಗಳು ಸರಿಯಿಲ್ಲದಿದ್ದರೆ ತಪ್ಪಾದ ಫಲಿತಾಂಶ ಬರುವುದು. ನೀವು ಪ್ರೆಗ್ನೆನ್ಸಿ ಕಿಟ್ ತಂದು ಪರೀಕ್ಷೆ ಮಾಡಿದಾಗ ಅದು ಸರಿಯಿಲ್ಲದಿದ್ದರೆ ಈ ರೀತಿಯ ತಪ್ಪಾದ ಮಾಹಿತಿ ಸಿಗುವುದು. ಆದ್ದರಿಂದ ಪ್ರೆಗ್ನೆನ್ಸಿ ಟೆಸ್ಟ್ ಜೊತೆಗೆ ಸ್ಕ್ಯಾನಿಂಗ್ ಕೂಡ ಮಾಡಿಸುವುದು ಒಳ್ಳೆಯದು.
ಗರ್ಭಿಣಿ ಅಂತ ಖಚಿತ ಪಡಿಸುವುದು ಹೇಗೆ?
* ನೀವು ಮನೆಯಲ್ಲಿ ಪರೀಕ್ಷೆ ಮಾಡಿಸಿದಾಗ ಗರ್ಭಿಣಿ ಅಂತ ಬಂದರೂ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದ ಮೇಲಷ್ಟೇ ಖಚಿತ ಪಡಿಸಬಹುದು. ಆದ್ದರಿಂದ ನೀವು ಗರ್ಭಿಣಿ ಎಂಬುವುದನ್ನು 2 ತಿಂಗಳವರೆಗೆ ಯಾರಿಗೂ ಹೇಳಲೇಬೇಡಿ, ನಿಮ್ಮ ಗಂಡ-ಹೆಂಡತಿಗಷ್ಟೇ ತಿಳಿದಿರಲಿ. 2 ತಿಂಗಳ ಬಳಿಕವಷ್ಟೇ ಇತರರಿಗೆ ತಿಳಿಸಿ.



Click it and Unblock the Notifications

