Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಗರ್ಭಾವಸ್ಥೆಯಲ್ಲಿ ಮಧುಮೇಹ: ಪ್ರಾರಂಭದಲ್ಲಿಯೇ ವ್ಯಾಯಾಮದಿಂದ ತಡೆಗಟ್ಟಲು ಸಾಧ್ಯ
ಗರ್ಭಾವಸ್ಥೆಯಲ್ಲಿ ಕೆಲವರಿಗೆ ಮಧುಮೇಹದ ಸಮಸ್ಯೆ ಎದುರಾಗುವುದು. ಗರ್ಭಿಣಿಯರಲ್ಲಿ ಕಾಣಿಸುವ ಈ ಮಧುಮೇಹಕ್ಕೆ gestational diabetes ಎಂದು ಕರೆಯಲಾಗುವುದು.
ಗರ್ಭಾವಸ್ಥೆಯಲ್ಲಿ ಬರುವ ಮಧುಮೇಹ ಹೆರಿಗೆಯ ಬಳಿಕ ಇಲ್ಲವಾಗುವುದು, ಆದರೆ ಗರ್ಭದಲ್ಲಿರುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಮಧುಮೇಹ ಅಪಾಯಕಾರಿಯಾಗಿದೆ. ಗರ್ಭಾವಸ್ಥೆಯಲ್ಲಿ ಮಧುಮೇಹ ಹೆಚ್ಚಾದರೆ ಗರ್ಭಪಾತ, ಅವಧಿ ಪೂರ್ವ ಮಗು ಹುಟ್ಟುವುದು ಅಥವಾ ಮಗುವಿನ ಆರೋಗ್ಯದಲ್ಲಿ ಸಮಸ್ಯೆ, ಮಗುವಿನ ಪ್ರಾಣಕ್ಕೆ ಅಪಾಯ ಉಂಟಾಗುವುದು ಈ ರೀತಿಯ ಹಲವು ಸಮಸ್ಯೆ ಉಂಟಾಗುವುದು.
ನಾವಿಲ್ಲಿ ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹ, ಇದರ ಅಪಾಯ, ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಗರ್ಭಾವಸ್ಥೆಯಲ್ಲಿ ಮಧುಮೇಹ
100ರಲ್ಲಿ 10 ಗರ್ಭಿಣಿಯರಲ್ಲಿ ಮಧುಮೇಹದ ಸಮಸ್ಯೆ ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ತಾಯಿ ಮತ್ತು ಮಗುವಿಗೆ ಅಪಾಯ. ಮಧುಮೇಹದಿಂದ ರಕ್ತದೊತ್ತಡ ಹೆಚ್ಚುವುದು, ಇದರಿಂದ ಗರ್ಭಪಾತ, ಅವಧಿ ಪೂರ್ವ ಮಗು ಹುಟ್ಟುವುದು, ಸಿ ಸೆಕ್ಷನ್ ಹೆರಿಗೆ ಮುಂತಾದ ಸಮಸ್ಯೆ ಎದುರಾಗುವುದು. ಅಲ್ಲದೆ ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ಆ ಮಹಿಳೆಗೆ ಮುಂದೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.

ತುಂಬಾ ಚಟುವಟಿಕೆಯಿಂದ ಇರುವುದರಿಂದ ಮಧುಮೇಹ ತಡೆಗಟ್ಟಬಹುದು
ಗರ್ಭವಸ್ಥೆಯಲ್ಲಿ ಕಾಡುವ ಮಧುಮೇಹದ ಅಪಾಯವನ್ನು ತಡೆಗಟ್ಟಲು ಚಟುವಟಿಕೆಯಿಂದ ಇರುವುದರಿಂದ ಸಾಧ್ಯ ಎಂದು ಅಧ್‌ಯನಗಳು ಹೇಳಿವೆ. ನಿಯಮಿತವಾದ ವ್ಯಾಯಾಯ ಗರ್ಭಿಣಿಯರ ತೂಕ ನಿಯಂತ್ರಣ ಮಾಡುವುದರ ಜೊತೆಗೆ ಮಲಬದ್ಧತೆ, ಹೊಟ್ಟೆ ಉಬ್ಬುವುದು, ಬೆನ್ನುನೋವು ಇವುಗಳನ್ನು ತಡೆಗಟ್ಟುತ್ತದೆ ಹಾಗೂ ಸುಖ ಪ್ರಸವಕ್ಕೆ ಸಹಾಯ ಮಾಡುತ್ತೆ.
ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿದರೆ ಮಧುಮೇಹ ಬರುವ ಅಪಾಯವನ್ನು ತಡೆಗಟ್ಟಬಹುದು ಎಂದು ಅಧ್ಯಯನ ಹೇಳಿದೆ. ಈ ಅಧ್ಯಯನದಲ್ಲಿ 2,246 ಗರ್ಭಿಣಿಯರನ್ನು ಒಳಪಡಿಸಿತ್ತು. ಆಗ ವ್ಯಾಯಾಮ ಮಧುಮೇಹ ತಡೆಗಟ್ಟಲು ಸಹಕಾರಿ ಎಂದು ತಿಳಿದು ಬಂತು.
100ರಲ್ಲಿ 10 ಗರ್ಭಿಣಿಯರಲ್ಲಿ ಮಧುಮೇಹ ಕಂಡು ಬರುತ್ತಿದ್ದು ಗರ್ಭಿಣಿಯರು ಮೊದಲ ತ್ರೈ ಮಾಸಿಕದಿಂದಲೇ ತುಂಬಾ ಚಟುವಟಿಕೆಯಿಂದ ಇದ್ದರೆ ಮಧುಮೇಹ ತಪ್ಪಿಸಬಹುದು ಅಮೆರಿಕದ Tennessee ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಯಾರು ವ್ಯಾಯಾಮ ಮಾಡಬಾರದು?
ಗರ್ಭಿಣಿಯರು ವ್ಯಾಯಾಮ ಮಾಡುವುದು ಒಳ್ಳೆಯದೆ ಆದರೂ ಕೆಲವರಿಗೆ ವ್ಯಾಯಾಮ ಮಾಡದಂತೆ ವೈದ್ಯರು ಸೂಚಿಸುತ್ತಾರೆ,ಅದರಲ್ಲೂ ಈ ಕೆಳಗಿನ ಸಮಸ್ಯೆಯಿದ್ದರೆ ವ್ಯಾಯಾಮ ಮಾಡಬಾರದು
* ಹೃದಯ, ಶ್ವಾಸಕೋಶದ ಸಮಸ್ಯೆಯಿದ್ದರೆ
* Preeclampsia ಅಥವಾ ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ, ಗರ್ಭಿಣಿಯಾದ ಬಳಿಕ ರಕ್ತದೊತ್ತಡ ಸಮಸ್ಯೆ ಕಂಡು ಬಂದರೆ ವ್ಯಾಯಾಮ ಮಾಡಬಾರದು.
* ಗರ್ಭಕಂಠದ ಸಮಸ್ಯೆಯಿದ್ದರೆ
* ಒಂದಕ್ಕಿಂತ ಹೆಚ್ಚು ಮಗುವಿದ್ದರೆ, ಅವಧಿ ಪೂರ್ವ ಹೆರಿಗೆಯಾಗುವ ಸಾಧ್ಯತೆ ಇದ್ದರೆ
* ರಕ್ತಹೀನತೆ ಸಮಸ್ಯೆಯಿದ್ದರೆ
ಹೀಗೆ ಗರ್ಭಿಣಿಯಾಗಿದ್ದಾಗ ಆರೋಗ್ಯ ಸಮಸ್ಯೆಯಿದ್ದರೆ ವ್ಯಾಯಾಮ ಮಾಡಬಾರದು.

ಗರ್ಭಿಣಿಯಾಗಿದ್ದಾಗ ಮಧುಮೇಹ ಬಂದರೆ ನಂತರ ಇರುವುದೇ?
ಗರ್ಭಿಣಿಯಾಗಿದ್ದಾಗ ಮಧುಮೇಹ ಬಂದರೆ ಅದು ಹೆರಿಗೆಯ ಬಳಿಕ ಇಲ್ಲವಾಗುವುದು, ಅಧ್ಯಯನಗಳ ಪ್ರಕಾರ ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತುಂಬಾ ವರ್ಷಗಳ ಬಳಿಕ ಟೈಪ್ 2 ಬರುವ ಸಾಧ್ಯತೆ ಇದೆ ಎಂದು ಹೇಳಿವೆ.
ಇನ್ನು ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ಆದಷ್ಟು ಆಹಾರ ಕಂಟ್ರೋಲ್ ಮಾಡುವ ಮೂಲಕ ನಿಯಂತ್ರಿಸುವುದು ಒಳ್ಳೆಯದು, ರಾಗಿ, ಓಟ್ಸ್ ಈ ರೀತಿಯ ಆಹಾರ ಸೇವನೆ ಒಳ್ಳೆಯದು.
ಆದರೆ ಭಯಪಡಬೇಕಾಗಿಲ್ಲ, ಹೆರಿಗೆಯ ಬಳಿಕ ವ್ಯಾಯಾಮ, ಆರೋಗ್ಯಕರ ಆಹಾರಕ್ರಮ ಪಾಲಿಸಿದರೆ ಟೈಪ್ 2 ಮಧುಮೇಹ ತಡೆಗಟ್ಟಬಹುದು.



Click it and Unblock the Notifications