Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಎಕ್ಟೋಪಿಕ್ ಪ್ರೆಗ್ನೆನ್ಸಿ: ಗರ್ಭಕೋಶದ ಹೊರಗಡೆ ಬೆಳೆಯುವ ಮಗು ಉಳಿಯುವುದೇ?
ಕೆಲವರಿಗೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವುದು. ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದರೆ ಗರ್ಭಕೋಶದಿಂದ ಹೊರಗಡೆ ಭ್ರೂಣದ ಬೆಳವಣಿಗೆಯಾಗುವುದು. ಈ ರೀತಿಯಾದರೆ ಗರ್ಭಿಣಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.
ಯಾವಾಗ ಫಲವತ್ತತೆಯ ಅಂಡಾಣು ಗರ್ಭಾಕೋಶದ ಹೊರಗಡೆ ಇದ್ದಾಗ ಈ ರೀತಿ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವುದು. ಸಾಮಾನ್ಯವಾಗಿ ಫಲವತ್ತತೆಯ ಅಂಡಾಣು ಗರ್ಭಕೋಶದ ಒಳಗಡೆ ಬೆಳೆದು ಮಗುವಿನ ರೂಪ ತಾಳುತ್ತಿದೆ. ಆದರೆ ಈ ಕೇಸ್‌ನಲ್ಲಿ ಇದು ಗರ್ಭಕೋಶದ ಹೊರಗಡೆ ಬೆಳೆಯುವುದರಿಂದ ಭ್ರೂಣ ಬೆಳೆಯುತ್ತಿದ್ದಂತೆ ಗರ್ಭಿಣಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು.
ಆದ್ದರಿಂದ ಈ ರೀತಿ ಗರ್ಭಧಾರಣೆಯಾದಾಗ ಅದನ್ನು ತೆಗೆಯಬೇಕಾಗುತ್ತದೆ ಅಥವಾ ಕರಗಿಸಬೇಕಾಗುತ್ತದೆ, ಇಲ್ಲದಿದ್ದರೆ ಆ ಗರ್ಭಧಾರಣೆ ತುಂಬಾ ಕಷ್ಟಕರವಾಗುವುದು. ಈ ಎಕ್ಟೋಪಿಕ್ ಪ್ರೆಗ್ನೆನ್ಸಿ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ:

ಎಕ್ಟೋಪಿಕ್ ಪ್ರೆಗ್ನೆನ್ಸಿಯಲ್ಲಿ ಭ್ರೂಣ ಎಲ್ಲಿ ಬೆಳೆಯುತ್ತದೆ?
ಗರ್ಭಕೋಶದಿಂದ ಹೊರಗಡೆ ಬೆಳೆಯುವ ಭ್ರೂಣ ಫಾಲೋಪಿಯನ್ ಟ್ಯೂಬ್ ,ಅಂಡಾಶಯ, ಗರ್ಭಕಂಠ, ಅಥವಾ ಕಿಬ್ಬೊಟ್ಟೆಯಲ್ಲಿ ಬೆಳೆಯಬಹುದು.
ಆದರೆ ಈ ರೀತಿಯ ಪ್ರೆಗ್ನೆನ್ಸಿ ಸಾಮಾನ್ಯವಾಗಿ ಫಾಲೋಪಿಯನ್ ಟ್ಯೂಬ್‌ನಲ್ಲಿ ಕಂಡು ಬರುತ್ತದೆ.

ಎಕ್ಟೋಪಿಕ್ ಪ್ರೆಗ್ನೆನ್ಸಿ ಹೇಗೆ ಉಂಟಾಗುತ್ತದೆ?
ಫಾಲೋಪಿಯನ್ ಟ್ಯೂಬ್ ಬ್ಲಾಕ್ ಆಗಿದ್ದರೆ ಫಲವತ್ತತೆಯ ಅಂಡಾಣು ಗರ್ಭಕೋಶದ ಒಳಗಡೆ ಹೋಗದೆ ಆ ಟ್ಯೂಬ್‌ನಲ್ಲಿಯೇ ಉಳಿದು ಅಲ್ಲಿ ಬೆಳೆಯಲಾರಂಭಿಸುತ್ತದೆ. ಇನ್‌ಫೆಕ್ಷನ್ ಅಥವಾ ಉರಿಯೂತದಿಂದಾಗಿ ಈ ರೀತಿ ಫಾಲೋಪಿಯನ್ ಟ್ಯೂಬ್ ಬ್ಲಾಕ್ ಆಗುತ್ತದೆ. ಈ ಟ್ಯೂಬ್ ನಲ್ಲಿ ಬ್ಲಾಕ್ ಸರ್ಜರಿ ಅಥವಾ ಕಿಬ್ಬೊಟ್ಟೆಯ ಸರ್ಜರಿ ಮಾಡಿದಾಗ ನರಕ್ಕೆ ಪೆಟ್ಟಾದಾಗ ಕೂಡ ಉಟಾಗುವುದು.

ಯಾವಾಗ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವುದು?
1. ಈ ಮೊದಲು ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗಿದ್ದರೆ
2. ಪೆಲ್ವಿಕ್ ಭಾಗದಲ್ಲಿ ಸರ್ಜರಿ ಅಥವಾ ಪೆಲ್ವಿಕ್ ಇನ್‌ಫ್ಲೇಮಟರಿ ಕಾಯಿಲೆ ಇರುವ ಮಹಿಳೆಯರಲ್ಲಿ ಈ ರೀತಿಯ ಸಮ್ಯೆ ಉಂಟಾಗುವುದು.
3. ಗರ್ಭಿಣಿ ಟ್ಯೂಬಲ್ ರಿಕನ್ಸ್‌ಸ್ಟ್ರಕ್ಷನ್ ಮತ್ತು ರೀಕ್ಯಾನಲೈಸೇಷನ್ ಸರ್ಜರಿ ಮಾಡಿಸಿದ್ದರೆ ಉಂಟಾಗುವ ಸಾಧ್ಯತೆ ಇದೆ.
4. CU T, LNG-IUDನಂಥ ಗರ್ಭನಿರೋಧಕಗಳನ್ನು ತುಂಬಾ ಬಳಸಿದ್ದರೆ
* ಗರ್ಭಧಾರಣೆಗೆ ಸಮಸ್ಯೆಯಾಗಿ ಸಂತಾನೋತ್ಪತ್ತಿ ಚಿಕಿತ್ಸೆ ಪಡೆದಿದ್ದರೆ
* ತುಂಬಾ ಧೂಮಪಾನ ಮಾಡುತ್ತಿದ್ದರೆ

ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾದಾಗ ಕಂಡು ಬರುವ ಲಕ್ಷಣಗಳು
1. ಅಸಾಮಾನ್ಯ ರಕ್ತಸ್ರಾವ
2. ತುಂಬಾ ಸೊಂಟನೋವು
3. ಕಿಬ್ಬೊಟ್ಟೆ ಹಾಗೂ ಪೆಲ್ವಿಕ್ ಭಾಗದಲ್ಲಿ ನೋವು
4. ಪೆಲ್ವಿಕ್ ಭಾಗದಲ್ಲಿ ಬಿಗಿಯಾದ ಅನುಭವ
ಎಕ್ಟೋಪಿಕ್ ಪ್ರೆಗ್ನೆನ್ಸಿ ತುಂಬಾ ರಿಸ್ಕಿ. ಭ್ರೂಣ ಬೆಳೆಯುತ್ತಿದ್ದಂತೆ ಟ್ಯೂಬ್ ಒಡೆದು ಒಳಗಡೆ ರಕ್ತಸ್ರಾವವಾಗುವುದು.

ಎಕ್ಟೋಪಿಕ್ ಪ್ರೆಗ್ನೆನ್ಸಿ ನಿರ್ವಹಿಸುವುದು ಹೇಗೆ?
ಎಕ್ಟೋಪಿಕ್ ಪ್ರೆಗ್ನೆನ್ಸಿ ತಡೆಗಟ್ಟಲು ಸಾಧ್ಯವಿಲ್ಲದಿದ್ದರೆ ಅದರ ಅಪಾಯವನ್ನು ತಡೆಗಟ್ಟಬಹುದು. ಧೂಮಪಾನ ಮಾಡುತ್ತಿದ್ದರೆ ಗರ್ಭಧಾರಣೆಯ ಮುನ್ನ ಧೂಮಪಾನ ಬಿಡಬೇಕು. ನೀವು ವೈದ್ಯರಿಗೆ ಗರ್ಭಧಾರಣೆಯಾದ ಪ್ರಾರಂಭದಲ್ಲಿಯೇ ತೋರಿಸಬೇಕು, ಆಗ ಏನಾದರೂ ಸಮಸ್ಯೆಯಿದ್ದರೆ ಬೇಗನೆ ಪತ್ತೆಹಚ್ಚಬಹುದು.
ಎಕ್ಟೋಪಿಕ್ ಪ್ರೆಗನ್ಸಿ ಅಂತ ತಿಳಿದರೆ ಏನು ಮಾಡಬೇಕು?
ಎಕ್ಟೋಪಿಕ್ ಪ್ರೆಗ್ನೆನ್ಸಿಅಮತ ತಿಳಿದು ಬಂದರೆ ಅದನ್ನು ತೆಗಿಸಬೇಕು. ಔಷಧಿ ಅಥವಾ ಸರ್ಜರಿ ಮೂಲಕ ತೆಗೆಯಬಹುದು. ಔಷಧಿ ಭ್ರೂಣದ ಬೆಳವಣಿಗೆಯನ್ನು ತಡೆಗಟ್ಟುತ್ತೆ. ಆ ಎಕ್ಟೋಪಿಕ್ ಟಿಶ್ಯೂ ಅನ್ನು ದೇಹ ಹೀರಿಕೊಳ್ಳುವುದು.. ಈ ರೀತಿ ಪ್ರೆಗ್ನೆನ್ಸಿ ಕಂಡು ಬಂದರೆ ಸಾಮಾನ್ಯವಾಗಿ ಲ್ಯಾಪ್ರೋಸ್ಕೋಪಿ ಮಾಡಿಸಲಾಗುವುದು. ಕೆಲವೊಮ್ಮೆ ಫಾಲೋಪಿಯನ್ ಟ್ಯೂಬ್ ಅಥವಾ ಇತರ ಅಂಗ ಒಡೆದಿದ್ದರೆ ಅದನ್ನು ತೆಗೆಯಬೇಕಾಗುವುದು.



Click it and Unblock the Notifications
