Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರು ಮೆಟ್ಟಿಲು ಹತ್ತುವುದು ಸುರಕ್ಷಿತವೇ?
ಮೆಟ್ಟಿಲುಗಳನ್ನು ಹತ್ತಿ ಇಳಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯರು ಕೂಡ ಹೇಳುವರು. ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳನ್ನು ಬಳಸಿದರೆ ಅದು ದೇಹಕ್ಕೆ ವ್ಯಾಯಾಮ ಕೂಡ ನೀಡುವುದು. ಆದರೆ ಇದು ಸಾಮಾನ್ಯ ಜನರಿಗೆ ಹೇಳಲಾಗುವಂತಹ ಮಾತು. ಇದೇ ಮಾತನ್ನು ನಾವು ಗರ್ಭಿಣಿಯರಿಗೆ ಹೇಳಬಹುದೇ ಎನ್ನುವ ಪ್ರಶ್ನೆಯು ಮೂಡುವುದು.

ಯಾಕೆಂದರೆ ಗರ್ಭಧಾರಣೆ ವೇಳೆ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಕೂಡ ಗಮನಿಸಬೇಕಾಗಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಸೂಕ್ತವೇ ಎಂಬ ಪ್ರಶ್ನೆ ಖಂಡಿತವಾಗಿಯೂ ಮೂಡುವುದು. ಗರ್ಭಧಾರಣೆ ವೇಳೆ ಮೆಟ್ಟಿಲುಗಳನ್ನು ಹತ್ತಬಾರದು ಎಂದು ಹಿರಿಯರು ಹೇಳುತ್ತಾರೆ.
ಆದರೆ ಕೆಲವರ ಪ್ರಕಾರ ಇದು ತುಂಬಾ ಸುರಕ್ಷಿತ. ಇದನ್ನು ಯಾವಾಗ ನಿಲ್ಲಿಸಬೇಕು ಮತ್ತು ಯಾವ ಕಾಳಜಿ ತೆಗೆದುಕೊಳ್ಳಬೇಕು ಎಂದು ಈ ಲೇಖನದಲ್ಲಿ ಗಮನಿಸುವ.

ಗರ್ಭಧಾರಣೆ ವೇಳೆ ಮೆಟ್ಟಿಲು ಹತ್ತುವುದು ಸುರಕ್ಷಿತವೇ?
ದೇಹವು ಸಮತೋಲನದಲ್ಲಿದ್ದರೂ ಗರ್ಭಧಾರಣೆ ವೇಳೆ ಮೆಟ್ಟಿಲು ಹತ್ತುವುದು ಸುರಕ್ಷಿತವೇ ಎನ್ನುವ ಪ್ರಶ್ನೆ ಬರುವುದು. ಇಲ್ಲಿ ಭೀತಿ ಎಂದರೆ ಮೆಟ್ಟಿಲು ಹತ್ತುವಾಗ ಜಾರುವುದು ಅಥವಾ ಕುಸಿದು ಬೀಳೂವ ಸಾಧ್ಯತೆ ಇರುವುದು.
ಗರ್ಭಧಾರಣೆಯ ಅಂತಿಮ ತ್ರೈಮಾಸಿಕದಲ್ಲಿ ಹೊಟ್ಟೆ ದೊಡ್ಡದಾಗಿ ಸಮತೋಲನವು ಇಲ್ಲದೆ ಇರುವ ಪರಿಣಾಮವಾಗಿ ಮೆಟ್ಟಿಲು ಹತ್ತುವಾಗ ಜಾರುವ ಸಾಧ್ಯತೆ ಇದೆ. ಈ ಹಮತದಲ್ಲಿ ನೀವು ಮೆಟ್ಟಿಲಿನಿಂದ ಜಾರಬಹುದು. ಆಗ ಹೊಟ್ಟೆಗೆ ತಾಗಿ ದೊಡ್ಡ ಸಮಸ್ಯೆ ಉಂಟಾಗಬಹುದು. ಗರ್ಭಧಾರಣೆಯ 37ನೇ ವಾರದಲ್ಲಿ ಮಗು ಸೊಂಟದ ಭಾಗಕ್ಕೆ ಬರುವುದು. ಇದರಿಂದ ನಿಮಗೆ ಉಸಿರಾಡಲು ಸುಲಭವಾಗುವುದು.
ಹೊಟ್ಟೆಯಲ್ಲಿ ಮಗು ಸಂಪೂರ್ಣವಾಗಿ ಬೆಳೆದು ನಿಂತಿರುವ ಪರಿಣಾಮವಾಗಿ ನಿಮಗೆ ಮಟ್ಟಿಲು ಹತ್ತಲು ತುಂಬಾ ಕಷ್ಟವಾಗಬಹುದು. ನಿಮಗೆ ಮಟ್ಟಿಲು ಹತ್ತಲೇ ಬೇಕು ಎನ್ನುವ ಅನಿವಾರ್ಯತೆ ಇದ್ದರೆ ಆಗ ನೀವು ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ. ಸ್ವಲ್ಪ ನಿಂತುಕೊಂಡು ಅಡ್ಡ ಸರಳನ್ನು ಹಿಡಿಯಿರಿ ಮತ್ತು ಸಾಮಾನ್ಯವಾಗಿ ಉಸಿರಾಡಿ.

ಮೆಟ್ಟಿಲು ಹತ್ತುವುದು ಗರ್ಭಿಣಿಯರಿಗೆ ಯಾಕೆ ಒಳ್ಳೆಯದು?
ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ವ್ಯಾಯಾಮ ಸಿಗುವುದು. ಇದೊಂದು ರೀತಿಯ ದೈಹಿಕ ಚಟುವಟಿಕೆ ಆಗಿದೆ. ನಡೆಯುವುದು ಮತ್ತು ವ್ಯಾಯಾಮದಷ್ಟೇ ಇದು ಒಳ್ಳೆಯದು. ಮೆಟ್ಟಿಲು ಹತ್ತಿದರೆ ಪ್ರಿಕ್ಲಾಂಪ್ಸಿಯಾ (ಗರ್ಭಧಾರಣೆ ಸಂದರ್ಭದಲ್ಲಿ ಕಂಡುಬರುವಂತಹ ಅಧಿಕ ರಕ್ತದೊತ್ತಡದ ಸಮಸ್ಯೆ)ವನ್ನು ಕಡಿಮೆ ಮಾಡಬಹುದು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಜರ್ನಲ್ ಹೇಳಿದೆ.
ದೈಹಿಕವಾಗಿ ಚಟುವಟಿಕೆ ಇಲ್ಲದೆ ಇರುವಂತಹ ಗರ್ಭಿಣಿಯರು ಮೆಟ್ಟಿಲು ಹತ್ತುವ ಮೂಲಕವಾಗಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಶೇ. 29ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಗರ್ಭಧಾರಣೆ ಸಮಯದ ಮಧುಮೇಹ ಅಪಾಯ ತಗ್ಗಿಸುವುದು
ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಶನ್ ನ ಅಧ್ಯಯನದ ಪ್ರಕಾರ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಮೆಟ್ಟಿಲು ಹತ್ತಿದರೆ ಅದರಿಂದ ಗರ್ಭಧಾರಣೆ ವೇಳೆ ಕಂಡುಬರುವಂತಹ ಮಧುಮೇಹದ ಅಪಾಯವು ಕಡಿಮೆ ಆಗುವುದು. ಆದರೆ ಕೆಲವು ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡು ಮೆಟ್ಟಿಲುಗಳನ್ನು ಹತ್ತಬೇಕು ಎಂದು ಅಧ್ಯಯನಗಳು ಹೇಳಿವೆ.

ಗರ್ಭಧಾರಣೆ ವೇಳೆ ಮೆಟ್ಟಿಲುಗಳನ್ನು ಹತ್ತಲು ಕೆಲವು ಸಲಹೆಗಳು
- ಗರ್ಭಧಾರಣೆ ವೇಳೆ ಮೆಟ್ಟಿಲು ಹತ್ತುವಿರಾದರೆ ಆಗ ನೀವು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.
- ನೀವು ಮೆಟ್ಟಿಲು ಹತ್ತುವಾಗ ಮತ್ತು ಕೆಳಗೆ ಇಳಿಯುವಾಗ ಬದಿಯ ಕಬ್ಬಿಣದ ಡ್ರಿಲ್ ಹಿಡಿಯಿರಿ.
- ಒಂದು ಕೈಯಲ್ಲಿ ಬೇರೆ ಏನಾದರೂ ಸಾಮಾನು ಇದ್ದರೆ ಇನ್ನೊಂದು ಕೈಯಿಂದ ಡ್ರಿಲ್ ಹಿಡಿಯಿರಿ.
- ಮೆಟ್ಟಿಲುಗಳು ಸರಿಯಾಗಿ ಹತ್ತಲು ಬೆಳಕು ಇರಲಿ. ಕತ್ತಲೆಯಲ್ಲಿ ಮೆಟ್ಟಿಲುಗಳನ್ನು ಹತ್ತಲು ಹೋಗಬೇಡಿ.
- ಮೆಟ್ಟಿಲುಗಳಿಗೆ ಕಾರ್ಪೆಟ್ ಹಾಕಿದ್ದರೆ ಅದನ್ನು ಬಿಗಿಯಾಗಿ ಫಿಕ್ಸ್ ಮಾಡಲಾಗಿದೆಯಾ ಎಂದು ನೋಡಿ ಮತ್ತು ಅದು ಸಡಿಲವಾಗಿದ್ದರೆ ಜಾರಬಹುದು.
- ಮೆಟ್ಟಿಲು ಹತ್ತುವ ವೇಳೆ ನಿಧಾನವಾಗಿ ನಡೆಯಿರಿ. ಅವಸರ ಮಾಡಬೇಡಿ.
- ಮೆಟ್ಟಿಲುಗಳನ್ನು ಹತ್ತುವ ವೇಳೆ ನೀವು ಸರಿಯಾಗಿ ಉಸಿರಾಡಿ.
- ಮೆಟ್ಟಿಲುಗಳಲ್ಲಿ ನೀರು ಅಥವಾ ಜಾರುವ ಬೇರೆ ಅಂಶ ಇಲ್ಲವೆನ್ನುವುದನ್ನು ಸ್ಪಷ್ಟಪಡಿಸಿ.
- ಉದ್ದದ ಬಟ್ಟೆ ಧರಿಸಿಕೊಂಡು ನೀವು ಮೆಟ್ಟಿಲು ಹತ್ತಬೇಡಿ. ಇಂತಹ ವೇಳೆ ನೀವು ಜಾರಿ ಬೀಳುವಂತಹ ಸಾಧ್ಯತೆಯು ಹೆಚ್ಚಾಗಿ ಇರುವುದು.
- ಮೆಟ್ಟಿಲು ಜಾರಿದರೆ ಅಥವಾ ಕುಸಿದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿಯಾಗಿ.
- ಅಧಿಕ ರಕ್ತಸ್ರಾವ/ ರಕ್ತದೊತ್ತಡ
- ಅನಿಯಂತ್ರಿತವಾಗಿರುವಂತಹ ಅಧಿಕ ರಕ್ತದೊತ್ತಡ ಮತ್ತು ಅಸಮತೋಲಿತ ಮಧುಮೇಹದಿಂದಾಗಿ ತುಂಬಾ ಬಳಲಿಕೆ ಉಂಟಾಗಬಹುದು ಹಾಗೂ ದೇಹದ ಸಮತೋಲನ ಕಳೆದುಕೊಳ್ಳಬಹುದು.
- ಇಂತಹ ಯಾವುದೇ ಸಮಸ್ಯೆ ಇಲ್ಲವೆಂದಾದರೆ ಆಗ ನೀವು ಮೆಟ್ಟಿಲು ಹತ್ತಬಹುದು. ನಿಮಗೆ ಹಿತಕರ ಹಾಗೂ ಕಾಳಜಿ ಇದ್ದರೆ ಆಗ ನೀವು ಮೆಟ್ಟಿಲು ಹತ್ತಬಹುದಾಗಿದೆ. ಡ್ರಿಲ್ ಹಿಡಿಯದೆ ನೀವು ಮೆಟ್ಟಿಲು ಹತ್ತಬೇಡಿ ಅಥವಾ ಇಳಿಯಬೇಡಿ. ಮೆಟ್ಟಿಲು ಹತ್ತಲು ದೇಹದ ಮೇಲೆ ಹೆಚ್ಚಿನ ಭಾರ ಹಾಕಬೇಡಿ.

ಮೆಟ್ಟಿಲು ಹತ್ತುವಾಗ ಜೋಪಾನ

ಗರ್ಭಧಾರಣೆ ವೇಳೆ ಯಾವಾಗ ಮೆಟ್ಟಿಲು ಹತ್ತುವುದನ್ನು ಕಡೆಗಣಿಸಬೇಕು?
ಮೊದಲ ತ್ರೈಮಾಸಿಕದಲ್ಲಿ ಮೆಟ್ಟಿಲು ಹತ್ತುವುದು ತುಂಬಾ ಸುರಕ್ಷಿತ. ಆದರೆ ವೈದ್ಯರು ಮೆಟ್ಟಿಲು ಹತ್ತಬಾರದು ಎಂದು ಹೇಳಿದ್ದರೆ ಹೀಗೆ ಮಾಡಲು ಹೋಗಬೇಡಿ.




Click it and Unblock the Notifications
