Latest Updates
-
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ!
ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಿಸುತ್ತಾ ಈ ಫರ್ಟಿಲಿಟಿ ಮಸಾಜ್..? ಇದನ್ನು ಮಾಡೋದು ಹೇಗೆ..?
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಗರ್ಭಧರಿಸುವುದು ಸ್ವಲ್ಪ ಕ್ಲಿಷ್ಟಕರವಾದ ಪ್ರಕ್ರಿಯೆಯಾಗಿದೆ. ಒತ್ತಡ, ಆಹಾರ ಶೈಲಿ, ಇನ್ನಿತರ ಆರೋಗ್ಯ ಸಮಸ್ಯೆಗಳು ಗರ್ಭಧಾರಣೆಯನ್ನು ನಿಧಾನವಾಗಿಸುತ್ತೆ ಅಥವಾ ಗರ್ಭಿಣಿಯಾಗಲು ಅಡೆತಡೆಗಳನ್ನು ಒಡ್ಡುತ್ತದೆ, ಈ ಕಾರಣಗಳಿಂದಾಗಿ ಕೆಲವೊಮ್ಮೆ ಗರ್ಭಧರಿಸಿದರೂ ಗರ್ಭಪಾತವಾಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ನೀವು ಎಷ್ಟೇ ಪ್ರಯತ್ನಿಸಿದರೂ ಗರ್ಭಧರಿಸುವುದು ಸಾಧ್ಯವಾಗದೇ ಇದ್ದಲ್ಲಿ ಫಲವತ್ತತೆಯ ಮಸಾಜ್ ಮೂಲಕವೂ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚಾಗಬಹುದು ಎನ್ನುತ್ತಾರೆ ವೈದ್ಯರು. ಏನಿದು ಫಲವತ್ತತೆ ಅಥವಾ ಫರ್ಟಿಲಿಟಿ ಮಸಾಜ್, ಇದು ಪರಿಣಾಮಕಾರಿಯೇ, ಇದು ಹೇಗೆ ವರ್ಕ್‌ಔಟ್ ಆಗುತ್ತೆ ಎನ್ನುವ ಕುತೂಹಲ ನಿಮಗಿದ್ದರೆ ಈ ಲೇಖನ ಓದಿ.

ಏನಿದು ಫರ್ಟಿಲಿಟಿ ಮಸಾಜ್..?
ಮಸಾಜ್ ಅಂದರೆ ದೇಹದಲ್ಲಿನ ರಕ್ತಪರಿಚಲನೆಯನ್ನು ಸರಾಗಗೊಳಿಸಲು ಸಹಾಯ ಮಾಡುವಂತಹ ಒಂದು ಪ್ರಕ್ರಿಯೆ. ಫರ್ಟಿಲಿಟಿ ಮಸಾಜ್ ಎಂದರೂ ಹೀಗೇನೆ. ರಕ್ತಪರಿಚಲನೆಯನ್ನು ಹೆಚ್ಚಿಸಲು ಹೊಟ್ಟೆಯ ಮಸಾಜ್ ಮಾಡಲಾಗುತ್ತದೆ. ಇದು ಫಲವತ್ತತೆಯನ್ನು ಹೆಚ್ಚಿಸುತ್ತೆ ಎಂದು ವೈದ್ಯರೂ ಹೇಳುತ್ತಾರೆ. ಫರ್ಟಿಲಿಟಿ ಮಸಾಜ್ ಮಾಡೋವಾಗ ಪಾದಗಳ ಸುತ್ತ ಇರುವ ಅಕ್ಯುಪ್ರೆಶರ್ ಪಾಯಿಂಟ್ಗಳ ಮೇಲೆ ಒತ್ತಡವನ್ನು ಹಾಕಲಾಗುತ್ತದೆ.
ನಮ್ಮ ಪಾದದ ಮೇಲೆ, ಅಂಗಾಲಿನಲ್ಲಿರುವ ಅಕ್ಯುಪ್ರೆಶರ್ ಪಾಯಿಂಡ್‌ಗಳು ಗರ್ಭಾಶಯ, ಅಂಡಾಶಯ ಮತ್ತು ಇತರ ಸಂತಾನೋತ್ಪತ್ತಿ ಅಂಗಾಂಗಳಿಗೆ ಸಂಬಂಧಿರುತ್ತದೆ. ಅಲ್ಲದೇ ಈ ಮಸಾಜ್‌ನಲ್ಲಿ ಭುಜ ಮತ್ತು ಕುತ್ತಿಗೆಯ ಭಾಗದಲ್ಲಿಯೂ ನಿಧಾನವಾಗಿ ಒತ್ತಲಾಗುತ್ತದೆ. ಇವೆಲ್ಲವೂ ಫಲವತ್ತತೆಯ ಮಸಾಜ್‌ನಲ್ಲಿ ಒಳಗೊಂಡಿರುತ್ತದೆ. ಆದರೆ ಈ ಮಸಾಜ್ ಮಾಡೋ ವಿಧನಾ ವೈದ್ಯರಿಂದ ವೈದ್ಯರಿಗೆ ಬದಲಾಗಬಹುದು. ಕೆಲವರು ಹಲವು ರೀತಿಯಲ್ಲಿ ಮಸಾಜ್ ಮಾಡಬಹುದು.

ಫರ್ಟಿಲಿಟಿ ಮಸಾಜ್‌ನಿಂದ ಗರ್ಭಿಣಿಯಾಗೋದು ಸಾಧ್ಯಾನಾ..?
ನೂರಕ್ಕೆ ನೂರು ಪ್ರತಿಶತ ಇದು ಯಶಸ್ವಿ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಈ ಮಸಾಜ್ ಮಾಡುವುದು ಸಂತಾನೋತ್ಪತ್ತಿ ಅಂಗ, ಗರ್ಭಾಶಯ, ಅಂಡಾಶಯಗಳ ಆರೋಗ್ಯವನ್ನು ಸುಧಾರಿಸಲು ಹಾಗೂ ರಕ್ತ ಪರಿಚಲನೆಯನ್ನು ಸುಧಾರಣೆಗೊಳಿಸಲು ಮಾತ್ರ. ನಿರ್ದಿಷ್ಟವಾಗಿ ಈ ಫರ್ಟಿಲಿಟಿ ಮಸಾಜ್ ಫಲವತ್ತತೆಯ ಮೇಲೆ ನೇರ ಪರಿಣಾಮ ಬೀರದು ಅಥವಾ ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗದು. ಇದನ್ನು ಸಾಬೀತುಪಡಿಸಲು ಸಂಶೋಧನೆಯನ್ನೂ ಮಾಡಲಾಗಿಲ್ಲ.
ಇತ್ತೀಚಿನ ದಿನಗಳಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುವುದೆಂದರೆ ದೈನಂದಿನ ಒತ್ತಡಗಳು. ಆದರೆ ಈ ಯೋಗ, ಧ್ಯಾನ್ಯ ಮತ್ತು ಮಸಾಜ್‌ನಂತಹ ಕ್ರಿಯೆಗಳು ಒತ್ತಡವನ್ನು ನಿವಾರಿಸುತ್ತದೆ. ಮಸಾಜ್ ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತೆ, ಜೊತೆಗೆ ಸಿರೋಟಿನ್ ಮತ್ತು ಡೊಪಮೈನ್ ಹಾರ್ಮೋನ್ ಹೆಚ್ಚಿಸುತ್ತೆ. ಇದು ಆರೋಗ್ಯದ ಸುಧಾರಣೆಗೆ ಹಾಗೂ ಮನೋಸ್ಥಿತಿಯನ್ನು ಬದಲಾಯಿಸಲು ಸಹಕರಿಸುತ್ತೆ. ಈ ಕಾರಣದಿಂದಾಗಿ ಗರ್ಭಿಣಿಯಾಗುವ ಸಾಧ್ಯತೆಯೂ ಹೆಚ್ಚಾಗಬಹುದಷ್ಟೇ.

ಮಾಯನ್ ಫಲವತ್ತೆತೆಯ ಮಸಾಜ್
ಮಾಯನ್ ಫರ್ಟಿಲಿಟಿ ಮಸಾಜ್ ಅದರಲ್ಲಿ ನುರಿತ ತಜ್ಞರನ್ನು ಆಧರಿಸಿ ಮಸಾಜ್ ಮಾಡುವ ವಿಧಾನ ಭಿನ್ನವಾಗಿರುತ್ತದೆ. ಮಾಯಾನ್ ಮಸಾಜ್ ಎನ್ನುವುದು ಸಾಂಪ್ರದಾಯಿಕ ಥೆರಪಿಯ ವಿಧಾನವಾಗಿದ್ದು, ಆದರೆ ಈ ವಿಧಾನವನ್ನು ಎಲ್ಲಿಯೂ ಲಿಖಿತ ರೂಪದಲ್ಲಿ ದಾಖಲಿಸಲಾಗಿಲ್ಲ. ಈ ವಿಧಾನದಲ್ಲಿ ಗರ್ಭಾಶಯ ಮತ್ತು ಅಂಡಾಶಯದ ಸುತ್ತಲಿನ ಪ್ರದೇಶದಲ್ಲಿ ಮಸಾಜ್ ಮಾಡಲಾಗುತ್ತದೆ. ಆದರೆ ಈ ಮಸಾಜ್ ಮಾಡುವ ವಿಧಾನದಲ್ಲಿ ಸ್ವಲ್ಪ ಆಚೀಚೆ ಆದರೂ ಕೂಡಾ ಈ ಮಸಾಜ್ ಥೆರಪಿ ಬಂಜೆತನಕ್ಕೆ ಕಾರಣವಾಗುಬಹುದು ಎಂದೂ ಹೇಳಲಾಗುತ್ತೆ.
ಮಾಯನ್ ಮಸಾಜ್ ಮಾಡೋದರಿಂದ ಗರ್ಭಿಣಿಯಾಗಲು ಸಹಾಯವಾಗುತ್ತೆ ಎನ್ನುವುದನ್ನು ಯಾವುದೇ ಸಂಶೋಧನೆಯಲ್ಲೂ ತೋರಿಸಲಾಗಿಲ್ಲ. ಆದರೆ ಈ ರೀತಿಯ ಮಾಸಜ್‌ನಿಂದ ನಿಮ್ಮ ದೇಹವು ವಿಶ್ರಾಂತಿ ಪಡೆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬಂದರೆ ಗರ್ಭಿಣಿಯಾಗುವ ಅವಕಾಶಗಳು ಹೆಚ್ಚಿರಬಹುದು. ಆದರೆ ಈ ರೀತಿಯ ಹೊಟ್ಟೆಯ ಮಸಾಜ್ ನೀವು ಮಾಡಿಸಿಕೊಳ್ಳುವುದಾದರೆ ಎಚ್ಚರಿಕೆ ವಹಿಸಿ. ಹೆಚ್ಚು ಒತ್ತಡ ಹಾಕುವುದರಿಂದ ಒಳಗಿನ ಅಂಗಾಂಶಗಳಿಗೆ ಹಾನಿಯಾಗಬಹುದು. ಮಸಾಜ್ ಮಾಡುವಾಗ ನೋವಾದರೆ ತಕ್ಷಣ ನಿಲ್ಲಿಸಲು ಹೇಳಿ.

ಸ್ವಯಂ ಫಲವತ್ತತೆಯ ಮಸಾಜ್
ಸ್ವಯಂ ಅಂದರೆ ನಿಮಗೆ ನೀವೇ ಫಲವತ್ತತೆಯನ್ನು ಹೆಚ್ಚಿಸಲು ಮಾಡುವಂತಹ ಮಸಾಜ್. ಇದೊಂಥರಾ ಉಚಿತವಾದ ಥೆರಪಿ ಯಾಕೆಂದರೆ ನಿಮಗೆ ನೀವೆ ಮಾಡಿಕೊಳ್ಳಬಹುದಾದ ಮಸಾಜ್. ಇತರ ಫರ್ಟಿಲಿಟಿ ಮಸಾಜ್‌ನಂತೆ ಕಿಬ್ಬೊಟ್ಟೆ, ಹೊಟ್ಟೆಯ ಸುತ್ತ, ಪಕ್ಕೆಲುಬಿನ ಉದ್ದಕ್ಕೆ, ಸೊಂಟದ ಮೂಳೆಗಳ ಮೇಲೆ ವೃತ್ತಾಕಾರವಾಗಿ ಸ್ವಲ್ಪ ಒತ್ತಡವನ್ನು ಹಾಕಿ ಮಸಾಜ್ ಮಾಡುವುದಾಗಿದೆ. ಇದನ್ನು ನೀವು ದಿನವೂ ಮಾಡಬಹುದು, ಪ್ರತಿದಿನ ಮಾಡೋದರಿಂದ ಹೆಚ್ಚಿನ ಪ್ರಯೋಜನವನ್ನೂ ನೀವು ಪಡೆಯಬಹುದು. ಆದರೆ ಇದರಿಂದಾನೂ ನೂರಕ್ಕೆ ನೂರು ಪ್ರತಿಶತ ಗರ್ಭಿಣಿಯಾಗೇ ಆಗುತ್ತೀರಿ ಎಂದು ಹೇಳಲಾಗದು. ಗರ್ಭಿಣಿಯಾಗಿದ್ದರೆ ಮಾತ್ರ ಈ ಮಸಾಜ್ ಮಾಡೋದಕ್ಕೆ ಹೋಗಬೇಡಿ.

ಮಸಾಜ್‌ನ ಪ್ರಯೋಜನಗಳು
ಈ ಫರ್ಟಿಲಿಟಿ ಮಸಾಜ್‌ನಿಂದ ಗರ್ಭ ಧರಿಸಬಹುದು ಎಂದು ಖಡಾಖಂಡಿತವಾಗಿ ಹೇಳಲಾಗದಿದ್ದರೂ, ಈ ಮಸಾಜ್‌ನಿಂದ ಪ್ರಯೋಜನವಂತೂ ಇದ್ದೇ ಇದೆ. ಅದೇನೆಂದರೆ ನೀವು ಈ ಸಾರಿಯಾದರೂ ಗರ್ಭ ಧರಿಸಲೇಬೇಕು ಎನ್ನುವ ಒತ್ತಡವನ್ನು ಮನಸ್ಸಿನ ಮೇಲೆ ಹಾಕಿರುತ್ತೀರಿ. ಈ ಮಸಾಜ್ ಮಾಡುವ ಮೂಲಕ ಈ ರೀತಿಯ ಒತ್ತಡವನ್ನು ಮನಸ್ಸಿನಿಂದ ತೆಗೆದುಹಾಕಬಹುದು. ಸಂಶೋಧನೆಯಲ್ಲೂ ಹೆಚ್ಚು ಒತ್ತಡ ಇರುವ ಮಹಿಳೆಯರು ಗರ್ಭಧರಿಸುವ ಸಾಧ್ಯತೆಗಿಂತ ಕಡಿಮೆ ಒತ್ತಡವಿರುವ ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಹಾಗಾಗಿ ಮಸಾಜ್ ಮಾಡುವುದು ಒಂದು ರೀತಿಯಲ್ಲಿ ಒಂದು ರೀತಿಯಲ್ಲಿ ಒಳ್ಳೆಯದೇ. ಇದರ ಇನ್ನಿತರ ಪ್ರಯೋಜನಗಳೆಂದರೆ,
1. ಹಾರ್ಮೋನ್ ಸಮತೋಲನ
ನಿಯಮಿತವಾಗಿ ಮಸಾಜ್ ಮಾಡುವುದರಿಂದ ಅಂಗಾಂಗಳಲ್ಲಿ ರಕ್ತದ ಹರಿವನ್ನು ಸುಧಾರಿಸಬಹುದು ಮತ್ತು ರಕ್ತದಲ್ಲಿರುವ ಹಾರ್ಮೋನ್‌ಗಳನ್ನು ಅಗತ್ಯವಿರುವ ಸ್ಥಳಕ್ಕೆ ತಲುಪಿಸಬಹುದು. ಇದು ಋತುಚಕ್ರವನ್ನು ಸುಧಾರಿಸುವುದು. ಅಂಡೋತ್ಪತ್ತಿ ಮತ್ತು ಗರ್ಭಾಶಯದಲ್ಲಿನ ಎಂಡೊಮೆಟ್ರಿಯಲ್ ಲೈನಿಂಗ್ ಅನ್ನು ದಪ್ಪವಾಗಿಸುವುದು. ಮಸಾಜ್ ಯಕೃತ್ತಿನ ಕಾರ್ಯವನ್ನು ಉತ್ತೇಜಿಸುತ್ತದೆ ಜೊತೆಗೆ ಯಾವುದೇ ಹೆಚ್ಚುವರಿ ಈಸ್ಟ್ರೊಜೆನ್ ಅನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ,

2. ಆಮ್ಲಜನಕಯುಕ್ತ ರಕ್ತ
ಮಸಾಜ್ ಮಾಡಿದಾಗ ದೇಹದಲ್ಲಿ ರಕ್ತದ ಹರಿವು ಹೆಚ್ಚುತ್ತೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ,ಹೆಚ್ಚು ಆಮ್ಲಜನಕಯುಕ್ತ ರಕ್ತವು ಅಂಗಾಂಶಗಳಿಗೆ ಸಿಗುತ್ತದೆ. ದೇಹದ ಪ್ರತಿಯೊಂದು ಜೀವಕೋಶಕ್ಕೂ ಆರೋಗ್ಯವಾಗಿರಲು ಆಮ್ಲಜನಕಯುಕ್ತ ರಕ್ತದ ಅಗತ್ಯವಿದೆ. ಇದಲ್ಲದೆ, ಇದು ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸಬಹುದು. IVF ಸಮಯದಲ್ಲಿ ಯಶಸ್ವಿ ಅಂಡಾಣು ವರ್ಗಾವಣೆಗೆ ಗರ್ಭಾಶಯಕ್ಕೆ ಆಮ್ಲಜನಕಯುಕ್ತ ರಕ್ತ ಪೂರೈಕೆಯ ಅಗತ್ಯವಿರುತ್ತದೆ. ಅಂಡಾಣುವಿನ ಅಳವಡಿಕೆಯನ್ನು ಬೆಂಬಲಿಸಲು ಎಂಡೊಮೆಟ್ರಿಯಲ್ ಲೈನಿಂಗ್‌ಗೆ ಇದು ಅತ್ಯಗತ್ಯ, ವೀರ್ಯವು ಸರಿಯಾದ ಸ್ಥಳಕ್ಕೆ ಬರಲು ಸಹಾಯ ಮಾಡುತ್ತದೆ ಮತ್ತು ಫಲವತ್ತತೆಗೆ ಆರೋಗ್ಯಕರ ವಾತಾವರಣವನ್ನು ಒದಗಿಸಲು ಗರ್ಭಕಂಠದ ಲೋಳೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
3. ನಿಯಮಿತ ಆರೋಗ್ಯಕರ ಋತುಚಕ್ರಕ್ಕೆ ಸಹಕಾರಿ
ಫಲವತ್ತತೆ ಮಸಾಜ್‌ಗಳು ಮುಟ್ಟಿನ ನಂತರ ಗರ್ಭಾಶಯದೊಳಗೆ ಅಂಟಿಕೊಂಡಿರುವ ಎಲ್ಲಾ ಹಳೆಯ ರಕ್ತವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ಅವಧಿಯ ಕೊನೆಯಲ್ಲಿ ಮತ್ತು ಆರಂಭದಲ್ಲಿ ಕಂಡುಬರುವ ಕಂದು ರಕ್ತವಾಗಿದೆ, ಮತ್ತು ಗರ್ಭಾಶಯವು ಪಕ್ಕಕ್ಕೆ, ಹಿಂದಕ್ಕೆ ಅಥವಾ ಮುಂದಕ್ಕೆ ಬಾಗಿದ್ದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಹಳೆಯ ರಕ್ತವು ಒಳಗೆ ಸಿಲುಕಿಕೊಳ್ಳುವುದು ಒಳ್ಳೆಯದಲ್ಲ ಏಕೆಂದರೆ ಅದು ಗರ್ಭಕೋಶದಲ್ಲಿ ವಿಷವನ್ನು ಸೃಷ್ಟಿಸುತ್ತದೆ ಮತ್ತು ಇದು ಮುಟ್ಟಿನ ಸಮಯದಲ್ಲಿ ತೀವ್ರವಾದ ಹೊಟ್ಟೆ ನೋವಿಗೆ ಕಾರಣವಾಗುವ ಅಂಶವಾಗಿದೆ. ಹಳೆಯ ರಕ್ತವು ಒಳಗೆ ಸಿಲುಕಿಕೊಳ್ಳಲು ಇನ್ನೊಂದು ಕಾರಣವೆಂದರೆ ಗರ್ಭಾಶಯವು ಸಂಕುಚಿತಗೊಳ್ಳುವುದು, ರಕ್ತದ ಅಸಮರ್ಪಕ ಹರಿವಿನಿಂದಲೂ ಹೀಗಾಗುತ್ತೆ. ಆದರೆ ಹೊಟ್ಟೆಯ ಮಸಾಜ್ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.
ಮಸಾಜ್‌ನಿಂದ ಏನಾದರೂ ಹಾನಿ..,?
ಗರ್ಭಿಣಿಯಾಗಲು ಪ್ರಯತ್ನಿಸುವಾಗ ಮಸಾಜ್‌ಗಳನ್ನು ಮಾಡುವುದು ಸುರಕ್ಷಿತವೆನ್ನಬಹುದು. ಆದರೆ ಗರ್ಭಿಣಿಯಾದ ಮೇಲೆ ಈ ಹೊಟ್ಟೆಯ ಮೇಲೆ ಒತ್ತಡವನ್ನು ಹಾಕುವ ಇಂತಹ ಮಸಾಜ್‌ಗಳನ್ನು ಮಾಡಲು ಹೋಗಬೇಡಿ. ಗರ್ಭಿಣಿಯಾದ ಮೊದಲ ತ್ರೈಮಾಸಿಕದಲ್ಲಿ ಯಾವ ಡಾಕ್ಟರ್ ಕೂಡಾ ಮಸಾಜ್ ಮಾಡೋದಕ್ಕೆ ಸಲಹೆ ನೀಡುವುದಿಲ್ಲ. ಗರ್ಭಿಣಿಯಾದ ಮೂರು ತಿಂಗಳ ನಂತರ ತರಬೇತಿ ಪಡೆದ ಉತ್ತಮ ತಜ್ಞರಿಂದ ಮಾತ್ರ ಪ್ರಸವ ಪೂರ್ವ ಮಸಾಜ್ ಮಾಡಿಸಲು ಹೇಳಬಹುದು.
ಮೊದಲ ತ್ರೈಮಾಸಿಕ ದಾಟಿದ ನಂತರ ಬೆನ್ನಿನ ಮೇಲೆ ಮಲಗುವುದನ್ನು ಆದಷ್ಟು ಕಡಿಮೆ ಮಾಡಿ. ಯಾಕೆಂದರೆ ಗರ್ಭದ ಒತ್ತಡವು ಬೆನ್ನಿನ ಮೇಲೆ ಬೀಳಬಹುದು. ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೂ, ಗರ್ಭಿಣಿಯಾಗಿದ್ದರೂ ನಿಮ್ಮ ವೈದ್ಯರಲ್ಲಿ ಮಸಾಜ್ ಮಾಡಬಹುದಾ ಬೇಡವಾ ಎನ್ನುವುದರ ಬಗ್ಗೆ ಸಲಹೆ ಪಡೆಯಿರಿ. ಯಾವುದೇ ಕಾರಣಕ್ಕೂ ಸ್ವಯಂ ವೈದ್ಯರಾಗುವ ಪ್ರಮೇಯ ಬೇಡ.



Click it and Unblock the Notifications











