Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆರಿಗೆ ನೋವು ಕಡಿಮೆ ಮಾಡುವ ವಿಧಾನಗಳು
ಗರ್ಭಿಣಿ ಮಹಿಳೆಗೆ ಪ್ರಸವದ ವೇಳೆ ಸಹಿಸಲು ಅಸಾಧ್ಯವಾಗಿರುವಂತಹ ನೋವಿದ್ದರೂ ಸಹಿತ ಹುಟ್ಟಲಿರುವ ಮಗುವಿನ ಬಗ್ಗೆ ಕನಸು ಕಾಣುತ್ತಾ ಎಲ್ಲಾ ನೋವನ್ನು ಮರೆತುಬಿಡುವಳು. ಆದರೆ ಹೆಚ್ಚಿನ ಗರ್ಭಿಣಿಯರು ಹೆರಿಗೆ ನೋವಿಗೆ ತುಂಬಾ ಹೆದರಿ ಹೋಗುವರು. ಈ ನೋವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲ್ಲ. ಪ್ರತಿನಿತ್ಯ ನೂರಾರು ಮಂದಿ ಮಹಿಳೆಯರು ಈ ನೋವು ಸಹಿಸಿಕೊಂಡು ಮಗುವಿಗೆ ಜನ್ಮ ನೀಡುತ್ತಿರುವರು. ಆದರೆ ನೋವು ಕಡಿಮೆ ಮಾಡಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬಹುದು. ಇನ್ನು ಕೆಲವನ್ನು ನೀವು ಕಡೆಗಣಿಸಬೇಕು.
ಯಾಕೆಂದರೆ ಇದರಿಂದ ನೋವು ಮತ್ತಷ್ಟು ಹೆಚ್ಚಾಗುವುದು. ಗರ್ಭಧಾರಣೆ ವೇಳೆ ನೀವು ತುಂಬಾ ಎಚ್ಚರಿಕೆ ಇರುವುದು ಮತ್ತು ಈ ಕ್ರಮಗಳನ್ನು ಅನುಸರಿಸಿಕೊಂಡು ಹೋದರೆ ಆಗ ಪ್ರಸವದ ನೋವು ಕಡಿಮೆಯಾಗುವುದು. ಮಗುವಿಗೆ ಜನ್ಮ ನೀಡು ವೇಳೆ ಆಗುವ ನೋವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

ಬೆನ್ನ ಮೇಲೆ ಮಲಗುವುದು
ಬೆನ್ನಿನ ಮೇಲೆ ಮಲಗುವುದು ತುಂಬಾ ಸಾಮಾನ್ಯ ಕ್ರಮ. ಯಾಕೆಂದರೆ ಮಗುವಿನ ಸಂಪೂರ್ಣ ಭಾರವು ನಿಮ್ಮ ಬೆನ್ನ ಮೇಲೆ ಬೀಳುವುದು. ಇದು ಮಗುವಿಗೆ ಜನ್ಮ ನೀಡಲು ಇದು ತುಂಬಾ ನೋವಿನ ಭಂಗಿಯಾಗಿದೆ. ಇದರಿಂದ ನಿಮ್ಮ ರಕ್ತ ಸಂಚಲನೆಗೂ ಪರಿಣಾಮ ಬೀಡುವುದು. ನಿಮ್ಮ ವೈದ್ಯರೊಂದಿಗೆ ಮಾತನಾಡಿ ನೀವು ನೇರವಾಗಿ ಅಥವಾ ಮುಂದೆಬಾಗಿರುವ ಭಂಗಿಯಲ್ಲಿ ಜನ್ಮ ನೀಡಬಹುದೇ ಎಂದು ಕೇಳಿ. ಹಾಸಿಗೆಯ ಮೇಲೆ ನೇರವಾಗಿ ಬೆನ್ನ ಮೇಲೆ ಮಲಗುವುದು ಅತ್ಯುತ್ತಮ ಭಂಗಿಯಾಗಿದೆ, ಬೆನ್ನುಹುರಿಗೆ ಹಾಸಿಗೆಯೇ ಸರಿಯಾದ ಆಧಾರ ನೀಡುವಂತಿರಬೇಕು.
ನೋವಿನ ಬಗ್ಗೆ ಭೀತಿ
ಗರ್ಭಧಾರಣೆಯ ವೇಳೆ ಹೆಚ್ಚಿನ ನೋವಿನ ಬಗ್ಗೆ ಭೀತಿ ಪಟ್ಟರೆ ಆಗ ನೋವು ಹೆಚ್ಚಾಗುವುದು. ಎರಡನೇ ಹೆರಿಗೆಯಾಗುವಂತಹ ಮಹಿಳೆಯರು ಮೊದಲ ನೋವಿನ ಬಗ್ಗೆ ನೆನೆಸಿಕೊಂಡು ಭೀತಿ ಪಡುವುದು ಸಹಜ. ಭೀತಿ ಮತ್ತು ಅದರ ಕಲ್ಪನೆಯು ನೋವನ್ನು ಹೆಚ್ಚಿಸುವುದು. ಭೀತಿಯಿಂದ ತುಂಬಾ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಉಸಿರಾಡಲು ಆಗಲ್ಲ. ಭೀತಿಯಿಂದ ಹೊರಬರಲು ನೀವು ಹೆರಿಗೆ ಬಗ್ಗೆ ತುಂಬಾ ಓದಿಕೊಳ್ಳುವುದು ಅತೀ ಅಗತ್ಯ. ಬೆಂಬಲ ಹಾಗೂ ಜ್ಞಾನಕ್ಕಾಗಿ ನೀವು ಪ್ರಸವ ಮತ್ತು ಗರ್ಭಧಾರಣೆ ಗುಂಪಿನ ಜತೆಗೆ ಸೇರಿಕೊಳ್ಳಬಹುದು. ಇದು ಆನ್ ಲೈನ್ ನಲ್ಲಿ ಇರುವುದು. ಧನಾತ್ಮಕವಾಗಿದ್ದರೆ ಆಗ ನೀವು ಹೆರಿಗೆ ಬಗ್ಗೆ ಹೆಚ್ಚಿನ ಗಮನಹರಿಸಬಹುದು ಮತ್ತು ನೋವು ಕಡಿಮೆ ಮಾಡಿಕೊಂಡು ಮಗುವಿಗೆ ಜನ್ಮ ನೀಡಬಹುದು. ಎಲ್ಲವೂ ಕೆಲವೇ ನಿಮಿಷಗಳಲ್ಲಿ ಕಳೆದುಹೋಗಲಿದೆ ಮತ್ತು ಅಂತ್ಯದಲ್ಲಿ ನಿಮ್ಮ ಮಗು ಕೈಯಲ್ಲಿರಲಿದೆ.
ಹೆರಿಗೆಗೆ ಬೆಂಬಲವಿಲ್ಲದೆ ಇರುವುದು
ನಿಮಗೆ ಏನಾದರೂ ಅಸಾಮಾನ್ಯ ಅನುಭವವಾಗುತ್ತಲಿದ್ದರೆ ಆಗ ನೀವು ಹೆರಿಗೆ ತಜ್ಞರಿಗೆ ಹೇಳಿ ಮತ್ತು ಅವರು ತುಂಬಾ ಕಡಿಮೆ ಸಮಯದಲ್ಲಿ ಹೆರಿಗೆ ಮಾಡಿಸುವರು. ಮೃಧು ಹಾಗೂ ಸ್ನೇಹಪರವಾಗಿರುವ ಆಸ್ಪತ್ರೆಯ ಸಿಬ್ಬಂದಿಗಳು ಹೆರಿಗೆ ಕೋಣೆಯಲ್ಲಿ ಇದ್ದರೆ ಆಗ ನಿಮ್ಮ ನೋವು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಆಪ್ತರು ಜತೆಗಿದ್ದರೂ ಅವರೊಂದಿಗೆ ಈ ನೋವನ್ನು ಮರೆಯಬಹುದು. ವೈದ್ಯರು ಮತ್ತು ಆಸ್ಪತ್ರೆಯವರೊಂದಿಗೆ ಮಾತನಾಡಿ ಸರಿಯಾದ ನರ್ಸ್ ಗಳನ್ನು ಕೊಡಲು ಹೇಳಿ. ಇದರಿಂದ ನಿಮ್ಮ ಭೀತಿಯು ಸಂಪೂರ್ಣವಾಗಿ ಕಡಿಮೆಯಾಗುವುದು.
ಪ್ರಸವ ವೇಳೆ ಒತ್ತಡದ ಪರಿಸ್ಥಿತಿ ಕಡೆಗಣಿಸುವುದು
ಒತ್ತಡ ಕಡಿಮೆ ಮಾಡುವಂತಹ ಯಾವುದೇ ವಸ್ತುವನ್ನು ನಿಮ್ಮ ಹೆರಿಗೆ ಕೋಣೆಯಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಇದರಿಂದ ನೀವು ಆರಾಮವಾಗಿ ಮಗುವಿನ ಜನ್ಮ ನೀಡಬಹುದು. ನೀವು ಆಯ್ಕೆ ಮಾಡಿಕೊಂಡಿರುವ ಆಸ್ಪತ್ರೆಯು ಒಳ್ಳೆಯದಾಗಿರಲಿ ಮತ್ತು ಅಲ್ಲಿ ಯಾವುದೇ ದುರ್ಘಟನೆಗಳು ನಡೆದಿಲ್ಲದಿರಲಿ. ಹೆರಿಗೆ ವೇಳೆ ಹೆಚ್ಚಿನ ಯಂತ್ರಗಳನ್ನು ಬಳಸದಂತೆ, ಖಾಸಗಿತನ ಕಾಪಾಡಿ, ಅಪರಿಚಿತರನ್ನು ಬಿಟ್ಟುಕೊಡದಂತೆ ನೀವು ಆಸ್ಪತ್ರೆಯವರಲ್ಲಿ ಹೇಳಿ. ಮಗುವಿಗೆ ಜನ್ಮ ನೀಡಲು ನೀವು ತುಂಬಾ ಆರಾಮವಾಗಿದ್ದೀರಿ ಎಂದನಿಸಿದಾಗ ನೀವು ಹೆರಿಗೆ ಕೋಣೆಯೊಳಗೆ ಪ್ರವೇಶಿಸಿ.
ಹೆರಿಗೆ ಶೀಘ್ರವಾಗಲು ಕೃತಕ ವಿಧಾನ ಬಳಸಬೇಡಿ
ಕೆಲವೊಂದು ಸಲ ವೈದ್ಯರು ಹೆರಿಗೆ ನೋವು ಬರಲು ಕೆಲವೊಂದು ಮದ್ದನ್ನು ನೀಡಬಹುದು. ಆದರೆ ನೈಸರ್ಗಿಕವಾಗಿ ನಿಮಗೆ ಹರಿಗೆ ನೋವು ಬರಲಿ. ಕೃತಕ ವಿಧಾನಗಳನ್ನು ನೀವು ಕಡೆಗಣಿಸಬೇಕು. ಕೃತಕ ಆಕ್ಸಿಟೋಸಿನ್ ಬಳಸಿಕೊಂಡು ಪ್ರಸವ ಕ್ರಿಯೆ ಬೇಗ ಮಾಡಬಹುದು. ಆದರೆ ಇದರಿಂದಲೂ ಅತಿಯಾದ ನೋವು ಕಂಡುಬರುವುದು. ಹೆರಿಗೆ ಬೇಗ ಮಾಡಲು ಇತರ ಕೆಲವು ವಿಧಾನಗಳು ಇವೆ. ಆದರೆ ಅದು ಕೂಡ ನೋವುಂಟು ಮಾಡುವುದು. ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಮಾತ್ರ ಇದರ ಮೊರೆ ಹೋಗಿ. ಇಲ್ಲವಾದಲ್ಲಿ ನೀವು ನೈಸರ್ಗಿಕವಾಗಿಯೇ ಹೆರಿಗೆ ಮಾಡಿಸಿಕೊಳ್ಳಿ.
ನೈಸರ್ಗಿಕ ನೋವು ನಿವಾರಕ ವಿಧಾನ ಕಡೆಗಣನೆ
ಹೆರಿಗೆ ವೇಳೆ ನೀವು ನೋವು ಕಡಿಮೆ ಮಾಡುವಂತಹ ಹಲವಾರು ರೀತಿಯ ನೈಸರ್ಗಿಕ ವಿಧಾನಗಳನ್ನು ತಿಳಿದುಕೊಳ್ಳಬೇಕು. ಇದನ್ನು ನೀವು ತಿಳಿದುಕೊಂಡರೆ ಆಗ ಹೆರಿಗೆ ವೇಳೆ ನೀವು ನೋವು ಕಡಿಮೆ ಮಾಡಿಕೊಳ್ಳಬಹುದು. ಕೃತಕ ಮದ್ದುಗಳು ಮತ್ತು ಎಪಿಡ್ಯುರಲ್ ಗಳು ನಿಮ್ಮ ನಿಶ್ಚೇತನಗೊಳಿಸಿ ಗೊಂದಲ ಉಂಟುಮಾಡುವುದು. ಇದರಿಂದ ನೀವು ನಿಶ್ಚಲವಾಗಬಹುದು. ನೀವು ಪ್ರಯತ್ನಪೂರ್ವಕವಾಗಿ ಮಗುವನ್ನು ಮುಂದೆ ದೂಡದಂತೆ ಆಗುವುದು ಮತ್ತು ಸಿಸೇರಿಯನ್ ಮಾಡಬೇಕಾಗಬಹುದು. ಇದು ನೈಸರ್ಗಿಕ ವಿಧಾನಕ್ಕಿಂತ ಹೆಚ್ಚು ನೋವು ನೀಡುವುದು.
ಅತಿಯಾಗಿ ತಿನ್ನಬೇಡಿ
ಆಹಾರವು ತುಂಬಾ ಆರಾಮದಾಯಕ ಹಾಗೂ ಶಮನಕಾರಿಯಾಗಿರಬೇಕು. ಇದನ್ನು ನೀವು ಹೆರಿಗೆಗೆ ಮೊದಲು ಅನುಸರಿಸಬೇಕು. ತುಂಬಾ ಲಘು ಮತ್ತು ಸುಲಭವಾಗಿ ಜೀರ್ಣವಾಗುವಂತಹ ಆಹಾರ ಅಥವಾ ದ್ರವಾಹಾರ ಸೇವನೆ ಮಾಡಬೇಕು. ಕೊಬ್ಬಿನಾಂಶ ಮತ್ತು ಜೀರ್ಣಿಸಲು ಕಠಿಣವಾಗಿರುವ ಆಹಾರ ಸೇವನೆ ಮಾಡಬೇಡಿ. ಇದರಿಂದ ಹೆರಿಗೆಯ ಅಂತ್ಯದಲ್ಲಿ ನಿಮಗೆ ವಾಕರಿಕೆ ಮತ್ತು ವಾಂತಿ ಬರಬಹುದು. ಜನ್ಮ ನೀಡುವ ವೇಳೆ ನೀವು ಹೆಚ್ಚು ನೀರು ಸೇವನೆ ಮಾಡಿ.
ಹೆರಿಗೆ ವೇಳೆ ಕುಳಿತುಕೊಳ್ಳುವುದು
ಮಲಗಿಕೊಂಡು ನೀವು ಮಗುವಿನ ನಿರೀಕ್ಷೆ ಮಾಡುವುದು ಒಳ್ಳೆಯ ಕೆಲಸವಲ್ಲ. ನೀವು ಈ ವೇಳೆ ತುಂಬಾ ಚಟುವಟಿಕೆಯಿಂದ ಇರಬೇಕು. ಬೆಂಬಲದೊಂದಿಗೆ ನಡೆದಾಡುವುದು ಮತ್ತು ವ್ಯಾಯಾಮದ ಚೆಂಡನ್ನು ಬೌನ್ಸ್ ಮಾಡುವುದು ಇತ್ಯಾದಿ ಮಾಡಬಹುದು. ಇದರಿಂದ ಪ್ರಕ್ರಿಯೆಗೆ ವೇಗ ಬರುವುದು.



Click it and Unblock the Notifications
