Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ಗರ್ಭಧರಿಸಲು ಗ್ರೀನ್ ಟೀ ಸಹಾಯ ಮಾಡುತ್ತದಾ?
ಆಧುನಿಕ ಜಗತ್ತಿನಲ್ಲಿ ಎಲ್ಲವೂ ಆಧುನಿಕವೇ!, ಅದರಲ್ಲಿ ಸಮಸ್ಯೆಗಳು ಸಹ ಆಧುನಿಕವೇ! ಅದರಲ್ಲಿ ಹೆಂಗಸರಿಗೆ ಮತ್ತು ಗಂಡಸರಿಗೆ ಸಂತಾನಹೀನತೆಯ ಸಮಸ್ಯೆಗಳು ಸಹ ಹೊಸ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಸಮಸ್ಯೆಯ ರೀತಿ ಒಂದೇ ಆದರೂ, ಸಮಸ್ಯೆ ಬರುವ ಮಾರ್ಗಗಳು ಬೇರೆ ಬೇರೆಯಾಗಿವೆ.
ಇಂದಿನ ಜೀವನ ಶೈಲಿ, ಅಧಿಕ ತೂಕ, ಪೋಷಕಾಂಶ ರಹಿತ ಆಹಾರ, ಧೂಮಪಾನ, ಆಲ್ಕೋಹಾಲ್ ಸೇವನೆ ಮತ್ತು ಒತ್ತಡ ಎಲ್ಲವೂ ಸೇರಿ ಸಂತಾನ ಹೀನತೆಯ ಸಮಸ್ಯೆಗಳನ್ನು ತಂದಿರಿಸಿತ್ತದೆ. ಹಾಗೆಂದು ಇದಕ್ಕೆ ಪರಿಹಾರವೇ ಇಲ್ಲವೇ? ಇರಿ ಇರಿ ಸಮಸ್ಯೆಯನ್ನು ತಿಳಿದುಕೊಂಡಿದ್ದಾಯಿತಲ್ಲವೇ? ಈಗ ಅದಕ್ಕೆ ಪರಿಹಾರ ಎಲ್ಲಿದೆ ಹುಡುಕೋಣ.

ಅನಾದಿ ಕಾಲದಿಂದಲೂ ಮನುಷ್ಯ ತನಗೆ ಸಮಸ್ಯೆ ಬಂದಾಗ ಮೊರೆ ಹೋಗುತ್ತಿದ್ದುದು ಪ್ರಕೃತಿಯನ್ನು!. ಪ್ರಕೃತಿಯಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಇಂದು ನಾವು ಹೇಳುತ್ತಿರುವ ಪರಿಹಾರ ಗ್ರೀನ್ ಟೀ. ಹೌದು, ಹಿಂದೆ ಗ್ರೀನ್ ಟೀಯಲ್ಲಿ ಕೆಫಿನ್ ಅಂಶವಿರುತ್ತದೆ ಎಂದು ಅಧ್ಯಯನಕಾರರು ಅದನ್ನು ಪರಿಹಾರವಾಗಿ ಸೇವಿಸಲು ಅನುಮೋದಿಸಿರಲಿಲ್ಲ. ಆದರೆ ಈಗ ಅದು ಒಳ್ಳೆಯದು ಯಾವುದೇ ನಕಾರಾತ್ಮಕ ಪರಿಣಾಮಗಳನ್ನು ಬೀರದೆ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ ಎಂದು ಪರಿಗಣಿಸಲ್ಪಟ್ಟಿದೆ.
ಮತ್ತೊಂದು ಅಧ್ಯಯನದ ಪ್ರಕಾರ ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮಹಿಳೆಯು ಗರ್ಭಧರಿಸಲು ಸಹಾಯ ಮಾಡುತ್ತವೆ ಎಂದು ತಿಳಿದು ಬಂದಿದೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಗ್ರೀನ್ ಟೀಯನ್ನು ಸೇವಿಸಿದ ಮಹಿಳೆಯರಲ್ಲಿ ಗರ್ಭಧರಿಸುವ ಸಾಮರ್ಥ್ಯ 50% ಅಧಿಕವಾಗಿತ್ತಂತೆ.
ಗ್ರೀನ್ ಟೀಯಲ್ಲಿರುವ ಪಾಲಿಫೆನಾಲ್‌ಗಳು ಮಹಿಳೆಯರಲ್ಲಿನ ಅಂಡಾಣುಗಳನ್ನು ಮತ್ತಷ್ಟು ಫಲವಂತಿಕೆಯಿಂದ ಕೂಡಿರುವಂತೆ ಮಾಡುತ್ತವೆಯಂತೆ. ಜೊತೆಗೆ ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಶೇಕಡಾವಾರು ಕಾರ್ಯಸಾಧ್ಯವಾದ ಭ್ರೂಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಇದು ಮಹಿಳೆಯರಿಗೆ ಗರ್ಭಧರಿಸಲು ಸಹಾಯ ಮಾಡುವುದಷ್ಟೇ ಅಲ್ಲದೆ, ಭ್ರೂಣಗಳು ಮಗುವಾಗಿ ಗರ್ಭಾಶಯದಲ್ಲಿ ರೂಪ ಪಡೆಯಲು ಸಹ ಸಹಾಯ ಮಾಡುತ್ತದೆ. ಇದರ ಜೊತೆಗೆ ಗ್ರೀನ್ ಟೀಯು ಗಂಡಸರಲ್ಲಿ ಸಹ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಗ್ರೀನ್ ಟೀ ಎಲೆಗಳಲ್ಲಿರುವ ರಾಸಾಯನಿಕ ಅಂಶಗಳು ವೀರ್ಯಾಣುಗಳ ಸಂಖ್ಯೆಯನ್ನು ಮತ್ತು ಅವುಗಳಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ವೀರ್ಯಾಣುಗಳ ಚಲನೆ ಮತ್ತು ಸಕ್ರಿಯವಾಗಿರುವ ಅವಧಿ ಸಹ ಇದನ್ನು ಸೇವಿಸುವುದರಿಂದ ಹೆಚ್ಚುತ್ತದೆ. ಆದರೂ ಇದರ ಫಲಿತಾಂಶಗಳು ಇನ್ನೂ ದೃಢಪಟ್ಟಿಲ್ಲ. ಆದರೂ ನೀವು ಮಗುವನ್ನು ಪಡೆಯಲು ಮನಸ್ಸು ಮಾಡಿದ್ದಲ್ಲಿ, ಪ್ರತಿದಿನ ಗ್ರೀನ್ ಟೀಯನ್ನು ಸೇವಿಸಿ. ಇದು ಸಂತಾನೋತ್ಪತ್ತಿ ಸಮಸ್ಯೆ ಮಾತ್ರವಲ್ಲದೆ, ಫಿಟ್‌ನೆಸ್ ಮತ್ತು ಆರೋಗ್ಯವನ್ನು ಸಹ ಹೆಚ್ಚಿಸುವ ಗುಣಗಳನು ತನ್ನಲ್ಲಿ ಒಳಗೊಂಡಿದೆ. ಇದು ಒತ್ತಡ, ಉದ್ವೇಗ, ಖಿನ್ನತೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುವ ಗುಣಗಳನ್ನು ಒಳಗೊಂಡಿದೆ. ಈ ಎಲ್ಲಾ ಅಂಶಗಳು ಸಂತಾನೋತ್ಪತ್ತಿಯ ಮೇಲೆ ಪರಿಣಾಮವನ್ನು ಬೀರುತ್ತವೆ ಎಂಬುದು ಗಮನಾರ್ಹ.
ಹೀಗೆ ಒಟ್ಟಾರೆಯಾಗಿ ಗ್ರೀನ್ ಟೀಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಆರೋಗ್ಯಕಾರಿ ಅಂಶಗಳು ಸಂತಾನೋತ್ಪತ್ತಿಗೆ, ಮಾನಸಿಕ ಸಮಸ್ಯೆಗೆ, ಹೃದಯದ ನಾಳಗಳ ವ್ಯವಸ್ಥೆಗೆ ಚೈತನ್ಯವನ್ನು ನೀಡುತ್ತದೆ ಎಂದು ತಿಳಿದು ಬಂದಿದೆ. ಗ್ರೀನ್ ಟೀಯಲ್ಲಿ ಇರುವ ಫಾಲಿನ್ ಆಮ್ಲವು ಸಹ ನಿಮಗೆ ವರ ಎಂಬುದನ್ನು ಮರೆಯಬಾರದು. ಹಾಗಾಗಿ ಪ್ರತಿದಿನ ಗ್ರೀನ್ ಟೀ ಸೇವಿಸಲು ಇನ್ನು ತಡವೇಕೆ.



Click it and Unblock the Notifications

