Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಿಣಿಯರೇ, ಚಾಕೊಲೇಟ್‌ನ್ನು ಇಷ್ಟಪಟ್ಟು ತಿನ್ನಲು ಮರೆಯದಿರಿ!
ಗರ್ಭಾವಸ್ಥೆಯಲ್ಲಿ ಏನೇನೋ ತಿನ್ನಬೇಕೆಂಬ ಬಯಕೆಯಾಗುತ್ತದೆ. ಹುಳಿಮಾವಿನಕಾಯಿ, ಖಾರವಾದ ಬಜ್ಜಿ, ಕಹಿಯಾದ ಹಾಗಲಕಾಯಿ, ಉಪ್ಪು ಸೇರಿಸಿದ ಹುಣಸೇಹಣ್ಣು ಇನ್ನೂ ಏನೇನೋ. ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಚಾಕೊಲೇಟ್. ಒಂದು ಸಮೀಕ್ಷೆಯ ಪ್ರಕಾರ ವಿಶ್ವದ 80%ಕ್ಕೂ ಹೆಚ್ಚು ಗರ್ಭಿಣಿಯರು ಈ ಬಯಕೆಯನ್ನು ತೋರ್ಪಡಿಸುತ್ತಾರೆ. ಈ ಹೊತ್ತಿನಲ್ಲಿ ಇವರಿಗೆ ಊಟದ ಬಗ್ಗೆ ಇರುವ ಕಟ್ಟುಪಾಡುಗಳೂ ಹೆರಿಗೆಯಾಗುವವರೆಗೆ ಸಡಿಲಗೊಳ್ಳುತ್ತವೆ. ಬದಲಿಗೆ ಇನ್ನೂ ಹೆಚ್ಚು ತಿನ್ನುವಂತೆ ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯ ಚೆನ್ನಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ.
ಬಯಕೆ ಇದೆ ಎಂದ ಮಾತ್ರಕ್ಕೆ ನಿಯಂತ್ರಣ ಮೀರಿ ತಿನ್ನುವುದೂ ಅಪಾಯಕರ. ಆದರೆ ಗರ್ಭಿಣಿಗೆ ತೂಕ ಕಡಿಮೆಯಾಗುವುದು, ಪೋಷಕಾಂಶಗಳ ಕೊರತೆ ನಿಃಶಕ್ತಿ, ರಕ್ತಹೀನತೆ ಮೊದಲಾದವು ಎದುರಾಗದಂತೆ ಸಾಕಷ್ಟು ಪ್ರಮಾಣದಲ್ಲಿ ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುವುದು ಅಗತ್ಯ. ಬೇರೆಲ್ಲಾ ಆಹಾರವೇನೋ ಸರಿ, ಆದರೆ ಚಾಕೊಲೇಟ್?
ಸಾಮಾನ್ಯರೇ ಇದನ್ನು ಹೆಚ್ಚಾಗಿ ತಿಂದರೆ ಹಾಳಾಗುವ ಹಲ್ಲು, ಮೂಡುವ ಮೊಡವೆ, ಹೆಚ್ಚುವ ತೂಕ ಗರ್ಭಿಣಿಯರನ್ನೂ ಕಾಡದೇ ಇರುತ್ತದೆಯೇ? ಆದರೆ ಇತ್ತೀಚಿನ ಸಂಶೋಧನೆಗಳು ಗರ್ಭಿಣಿಯರು ಬಯಸಿದ್ದನ್ನೇ ಸಿಹಿಸುದ್ದಿಯಾಗಿ ನೀಡಿವೆ. ಅಂದೆಂದರೆ ಗರ್ಭಾವಸ್ಥೆಯಲ್ಲಿ ಚಾಕಲೇಟಿನ ಸೇವನೆ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ! ಬನ್ನಿ, ಇದು ಹೇಗೆ ಉತ್ತಮ ಎಂಬುದನ್ನು ಕೆಳಗೆ ನೀಡಿರುವ ಮಾಹಿತಿ ಮೂಲಕ ನೋಡೋಣ...

* ಈ ಸಂಶೋಧನೆಯಲ್ಲಿ ವಿವಿಧ ಪ್ರಾಯದ ಗರ್ಭಿಣಿಯರ ಆರೋಗ್ಯವನ್ನು ಕೂಲಕಂಶವಾಗಿ ಅಭ್ಯಸಿಸಲಾಯಿತು. ಇವರಿಗೆ ನಿತ್ಯವೂ ಕೊಂಚ ಚಾಕಲೇಟುಗಳನ್ನು ಆಹಾರದೊಂದಿಗೆ ನೀಡಿ ವಿವರಗಳನ್ನು ಕಲೆಹಾಕಲಾಗಿತ್ತು.
* ಚಾಕಲೇಟಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳು ಗರ್ಭಿಣಿಯರಿಗೆ ಎದುರಾಗುವ ಮೈತುಂಬಿಕೊಳ್ಳುವ, ರಕ್ತದೊತ್ತಡ ಹೆಚ್ಚುವ ಒಂದು ಬಗೆಯ ಸ್ಥಿತಿ (pre-eclampsia) ಬರದೇ ಇರದಂತೆ ತಡೆಯುತ್ತದೆ ಎಂಬುದನ್ನು ಸಂಶೋಧನೆಗಳಿಂದ ಕಂಡುಬಂದಿದೆ.
* ಈ ಸ್ಥಿತಿಯಲ್ಲಿ ಗರ್ಭಾವಸ್ಥೆಯ ಇಪ್ಪತ್ತನೆಯ ವಾರದಲ್ಲಿ ರಕ್ತದ ಒತ್ತಡ ಹೆಚ್ಚುವುದು ಮತ್ತು ಸುಸ್ತು ಆವರಿಸುವುದು, ಮೈ ತುಂಬಿಕೊಳ್ಳುವುದು (ಹಿರಿಯರು ಇದಕ್ಕೆ ನೀರು ತುಂಬಿಕೊಳ್ಳುವುದು ಎಂದು ಕರೆಯುತ್ತಾರೆ) ಮೊದಲಾದ ಲಕ್ಷಣಗಳು ಕಾಣಬರುತ್ತವೆ. ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಬಾಧೆಯಾಗಬಲ್ಲುದು.
* ಈ ಸ್ಥಿತಿಯನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಗರ್ಭಾಪಾತ, ಅವಧಿಗೂ ಮುನ್ನ ಮಗುವಿನ ಜನನ ಮತ್ತು ಇನ್ನೂ ಕೆಲವು ವಿಪರೀತ ಪರಿಸ್ಥಿತಿಗಳಲ್ಲಿ ತಾಯಿ ಮತ್ತು ಮಗುವಿನ ಮರಣಕ್ಕೂ ಕಾರಣವಾಗಬಹುದು.
* ಈ ಸಂಶೋಧನೆಯ ಮೂಲಕ ನಿಯಮಿತವಾಗಿ ಚಾಕಲೇಟನ್ನು ಸೇವಿಸುತ್ತಾ ಬರುವ ಮೂಲಕ ಗರ್ಭಿಣಿಯ ರಕ್ತಪರಿಚಲನೆ ಉತ್ತಮವಾಗಿರುವುದು ಕಂಡುಬಂದಿದೆ. ಅಲ್ಲದೇ ಇದರಿಂದ ಜರಾಯು (placenta) ಅಥವಾ ಮಾಸುವಿನ ದೃಢತೆ ಹೆಚ್ಚುವುದನ್ನೂ ಕಂಡುಕೊಳ್ಳಲಾಗಿದೆ. ಮಾಸು ಉತ್ತಮವಿದ್ದಷ್ಟೂ ಮಗುವಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ ಹಾಗೂ ಹೆರಿಗೆಯೂ ಸುಲಭವಾಗುತ್ತದೆ.
* ಸಂಶೋಧನೆಯಲ್ಲಿ ಪಾಲ್ಗೊಂಡ ತಜ್ಞರ ಪ್ರಕಾರ ಗರ್ಭಿಣಿ ವಾರಕ್ಕೆ ಐದು ಪ್ರಮಾಣದಷ್ಟು ಚಾಕೊಲೇಟ್ ಅನ್ನು ಸೇವಿಸಿದಾಗ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಇದಕ್ಕೂ ಹೆಚ್ಚಾದರೆ ಇದರ ಪ್ರಯೋಜನಕ್ಕಿಂತ ಕೆಡಕೇ ಹಚ್ಚಾಗಬಹುದು.



Click it and Unblock the Notifications

