Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ ಪ್ಲಾಸ್ಟಿಕ್ ಕಂಟೇನರ್‌ನಿಂದ ದೂರವಿರಿ...
ಪ್ಲಾಸ್ಟಿಕ್ ನಮಗೆ ನೋಡಲು ಅತ್ಯಂತ ಅನುಕೂಲಕರವಾದ ಪಾತ್ರೆಗಳನ್ನು ಮತ್ತು ಪರಿಕರಗಳನ್ನು ನೀಡುವ ಲೋಹವಲ್ಲದ ಪದಾರ್ಥವಾಗಿದೆ. ಇದು ಹಗುರ ಮತ್ತು ಬಣ್ಣದಲ್ಲಿರುವುದರಿಂದ ನಮಗೆ ಇಷ್ಟವಾಗುತ್ತದೆ. ಹಾಗೆಂದು ಇದರ ಬಣ್ಣದ ಸೌಂದರ್ಯಕ್ಕೆ ಮರುಳಾಗಬೇಡಿ. ಈ ಸೌಂದರ್ಯದ ಹಿಂದೆ ಅಷ್ಟೇ ಮಾರಕವಾಗುವಂತಹ ಅನಾಹುತಗಳು ಸಹ ಇವೆ. ಈಗಾಗಲೇ ಸಾಬೀತಾಗಿರುವಂತೆ ಪ್ಲಾಸ್ಟಿಕ್ ಬಾಟಲ್ ಮತ್ತು ಪಾತ್ರೆಗಳಲ್ಲಿ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಬರುತ್ತದೆಯಂತೆ. ಅದು ಹೇಗೆ ಎಂದರೆ ನಾವು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುವಾಗ, ಅದರ ಮೂಲಕ ಪ್ಲಾಸ್ಟಿಕ್ ಹೊಟ್ಟೆಯ ಒಳಗೆ ಹೋಗುವುದರ ಮೂಲಕ ನಮಗೆ ಕ್ಯಾನ್ಸರ್ ಬರುತ್ತದೆ.
ಆದ್ದರಿಂದಲೆ ಮೈಕ್ರೋವೇವ್ ಓವೆನ್‌ನಲ್ಲಿ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಆಹಾರ ಪದಾರ್ಥಗಳನ್ನು ಬಿಸಿ ಮಾಡಲು ಹೋಗಬೇಡಿ. ಬಿಸಿ ಮಾಡುವಿಕೆಯು ಕ್ಯಾನ್ಸರ್‌ಕಾರಕ ರಾಸಾಯನಿಕಗಳನ್ನು ಆಹಾರದಲ್ಲಿ ಬೆರೆಯುವಂತೆ ಮಾಡುತ್ತದೆ. ಇದನ್ನು ಗರ್ಭಿಣಿ ಸ್ತ್ರೀಯರು ಸೇವಿಸಿದದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಗರ್ಭಿಣಿಯರು ಯಾವುದೇ ಕಾರಣಕ್ಕು ಕ್ಯಾನ್‌ನಲ್ಲಿರುವ ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿರುವ ಆಹಾರ ಪದಾರ್ಥಗಳನ್ನು ಸೇವಿಸಲು ಹೋಗಲೇಬಾರದು. ಅದರಲ್ಲಿರುವ ಅಪಾಯಕಾರಿ ಆಹಾರ ಪದಾರ್ಥಗಳು ನಿಮಗೂ ಮತ್ತು ನಿಮ್ಮ ಹೊಟ್ಟೆಯಲ್ಲಿರುವ ಮಗು ಇಬ್ಬರಿಗೂ ಒಳ್ಳೆಯದಲ್ಲ.

ಕ್ಯಾನ್‌ನಲ್ಲಿರುವ ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿರುವ ಆಹಾರ ಪದಾರ್ಥಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದಿಲ್ಲವಾದರು, ಅದರಲ್ಲಿ BPA ಅಥವಾ ಬಿಸ್ಫೆನಾಲ್ ಎಂಬ ಅಂಶವು ಇರುತ್ತದೆ. ಇದು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ಕುಂಠಿತ ಮಾಡುತ್ತದೆ. ಬನ್ನಿ ಕ್ಯಾನ್‌ನಲ್ಲಿರುವ ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಆಗುವ ತೊಂದರೆಗಳನ್ನು ತಿಳಿದುಕೊಳ್ಳಲ್ಲು ಮುಂದೆ ಓದಿ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?
ಹಾರ್ಮೋನ್‌ಗಳನ್ನು ಏರು ಪೇರು ಮಾಡುತ್ತದೆ
ಕ್ಯಾನ್‌ನಲ್ಲಿರುವ ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿರುವ ಆಹಾರ ಪದಾರ್ಥಗಳನ್ನು ಗರ್ಭಿಣಿಯರು ಸೇವಿಸುವುದರಿಂದ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ, ಮಗುವಿನ ವರ್ತನೆಗೆ ಅಪಾಯವನ್ನು ತಂದೊಡ್ಡುತ್ತದೆ. ಜೊತೆಗೆ ಕೆಲವೊಂದು ನರ ಸಂಬಂಧಿ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಈ ಕಂಟೇನರ್‌ಗಳಲ್ಲಿ ಬಿಸ್ಫೆನಲ್ ಅಂಶವು ಸಹ ಇರುವುದರಿಂದ ಇದು ಗರ್ಭಿಣಿಯರ ಹಾರ್ಮೋನ್‌ಗಳನ್ನು ಏರು ಪೇರು ಮಾಡುತ್ತದೆ. ಈ ರಾಸಾಯನಿಕದಿಂದ ಗರ್ಭಿಣಿಯರಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು.
ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ
ಕ್ಯಾನ್‌ನಲ್ಲಿರುವ ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿರುವ ಆಹಾರ ಪದಾರ್ಥಗಳಲ್ಲಿರುವ ಅಪಾಯಕಾರಿ ರಾಸಾಯನಿಕ ಪದಾರ್ಥಗಳು ತಾಯಿಯಲ್ಲಿ ಈಸ್ಟ್ರೋಜೆನ್ ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಇದು ಮಗುವಿನ ಮೇಲೆ ದುಷ್ಪರಿಣಾಮವನ್ನು ಬೀರುವುದ ಜೊತೆಗೆ ಮಹಿಳೆಯರು ಮತ್ತು ಪುರುಷರ ಸಂತಾನೋತ್ಪತ್ತಿಯ ಮೇಲೆ ಸಹ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ಇದನ್ನು ಸೇವಿಸಬಾರದು ಎಂದು ಸಲಹೆ ನೀಡುತ್ತೇವೆ. ಯಾವುದೇ ಕಾರಣಕ್ಕು ಊಟ ಮಾಡಲು, ಬಿಸಿ ಮಾಡಲು ಮತ್ತು ನೀರು ಕುಡಿಯುವ ಉದ್ದೇಶಗಳಿಗೆ ಪ್ಲಾಸ್ಟಿಕ್ ಪಾತ್ರೆ ಮತ್ತು ಕ್ಯಾನ್‌ಗಳನ್ನು ಬಳಸಬೇಡಿ ಎಂಬುದು ನಮ್ಮ ಸಲಹೆ. ಅಪಾಯಕಾರಿ ಪ್ಲಾಸ್ಟಿಕ್ ಚೀಲ ಬಳಸುವ ಮುಂಚೆ ಇತ್ತ ಗಮನ ಹರಿಸಿ!
ಬಿಸ್ಫೆನಲ್ ಹಲವಾರು ದೇಶಗಳಲ್ಲಿ ನಿರ್ಬಂಧಿಸಲ್ಪಟ್ಟಿದೆ
ಚೀನಾ, ಫ್ರಾನ್ ಮತ್ತು ಕೆನಡಾ ದೇಶಗಳಲ್ಲಿ ಈ ಬಿಸ್ಫೆನಲ್ ನಿರ್ಬಂಧಿಸಲ್ಪಟ್ಟಿದೆ. ಬಿಸ್ಫೆನಲ್ ಹೊಂದಿರುವ ಯಾವುದೆ ಉತ್ಪನ್ನಗಳನ್ನು ತಕ್ಷಣ ನಿರ್ಬಂಧಿಸಿದರೆ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಆದ್ದರಿಂದ ಇಂದು ಹಲವಾರು ಪ್ಲಾಸ್ಟಿಕ್ ಉತ್ಪನ್ನಗಳು ಇಂದು "ಬಿಸ್ಫೆನಲ್ ಮುಕ್ತ" ಎಂಬ ಬರಹವನ್ನು ಹೊತ್ತು ಬರುತ್ತಿವೆ.



Click it and Unblock the Notifications


