Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯನ್ನು ಪ್ರೀತಿಸಿ, ಪ್ರತಿಕ್ಷಣವನ್ನೂ ಆಸ್ವಾದಿಸಿ...
ಜಗತ್ತಿನಲ್ಲಿ ಕಾಣುವಂತಹ ಅನೇಕ ವಿಸ್ಮಯಗಳಲ್ಲಿ ತಾಯ್ತನವೂ ಒಂದು. ವಿಶ್ವದೆಲ್ಲೆಡೆ ತಾಯಿಗೆ, ತಾಯಿಯ ಮಹತ್ವದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ತಾಯ್ತನ ಹೊಂದುವುದು ಮಹಿಳೆಯರಲ್ಲಿ ತಮ್ಮ ಜೀವನದ ಒಂದು ಅಮೂಲ್ಯವಾದ ಘಟ್ಟ. ಅನೇಕ ಮಹಿಳೆಯರು ತಾಯ್ತನ ಹೊಂದುವುದು ತಮ್ಮ ಜೀವನದ ಪರಮೋಚ್ಛ ಭಾಗ್ಯವೆಂದು ನಂಬಿದ್ದಾರೆ. ಈ ಅನುಭವವನ್ನು ಅತ್ಯಂತ ಆನಂದದಿಂದ ಸ್ವೀಕರಿಸುತ್ತಾರೆ. ಇದು ಪ್ರಕೃತಿಯ ಅವಿಸ್ಮರಣೀಯ ಅಚ್ಚರಿಗಳಲ್ಲೊಂದು.
ಈ ಉಲ್ಲಾಸಕರ ಕ್ಷಣಕ್ಕಾಗಿ ಅನೇಕ ಮಹಿಳೆಯರು ಹಂಬಲಿಸುತ್ತಿರುತ್ತಾರೆ. ಈ ತಾಣದಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯನ್ನು ಆನಂದದಿಂದ ಅನುಭವಿಸಲು ಮತ್ತು ಆರೋಗ್ಯಕರ ಹೆರಿಗೆಗೆ ಉಪಯುಕ್ತವಾಗುವ ಕೆಲವು ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ಇದರ ಪ್ರಯೋಜನ ಹೊಂದಿರಿ. ಗರ್ಭಧಾರಣೆಯು ಮಹಿಳೆಯರ ಜೀವನದ ಪಾಲಿಗೆ ಅತ್ಯಂತ ರೋಮಾಂಚನಕಾರಿ ಘಟ್ಟವಾಗಿದೆ. ಇದೊಂದು ಸರಳ ವಿಚಾರವಾಗಿದ್ದರೂ ಸಹ ಇದರಲ್ಲಿ ಅನೇಕ ಆತಂಕಗಳು, ಅಭಿಪ್ರಾಯಗಳು, ಪ್ರಶ್ನೆಗಳು ಎದುರಾಗುತ್ತದೆ.

ಗರ್ಭಾವಸ್ಥೆಯಲ್ಲಿರುವ ಪ್ರತಿಯೊಂದು ಹೆಣ್ಣೂ ಹೆರಿಗೆಯ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಆರೋಗ್ಯಯುಕ್ತ ಶಿಶುವನ್ನು ಹೆರಲು ಹೆರಿಗೆಗಿಂತ ಮೂರು ತಿಂಗಳ ಮೊದಲೇ ಎಲ್ಲಾ ರೀತಿಯಲ್ಲಿ ಯೋಜಿಸಿಕೊಳ್ಳಬೇಕಾಗುತ್ತದೆ. ಆರೋಗ್ಯಯುಕ್ತ ಹೆರಿಗೆಗಾಗಿ ಕೆಲವು ಉಪಯುಕ್ತ ಸಲಹೆಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದ್ದು, ಈ ಅಂಶಗಳಿಂದ ಪ್ರಯೋಜನ ಪಡೆದು ಆರೋಗ್ಯಯುಕ್ತ ಹೆರಿಗೆ ಅನುಭವವನ್ನು ಹೊಂದಿರಿ.
ಸುಸ್ಥಿತಿಯ ದೇಹವನ್ನು ಹೊಂದಿರಿ
ಗರ್ಭಾವಸ್ಥೆಯನ್ನು ಸುಧಾರಿಸಿಕೊಂಡು ಸುಲಭವಾದ ಹೆರಿಗೆ ಹೊಂದುವುದು ಅತೀ ಮುಖ್ಯವಾದ ಘಟ್ಟವಾಗಿದೆ. ಇದಕ್ಕಾಗಿ ಪ್ರತಿದಿನ 30 ನಿಮಿಷ ವ್ಯಾಯಾಮವನ್ನು ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಿ. ನೀವು ಬಯಸಿದಲ್ಲಿ, ಪ್ರಸವಪೂರ್ವದಲ್ಲಿ ತರಗತಿಗಳಿಗೆ ಸೇರಿಕೊಂಡು ಉತ್ತಮ ದೇಹ ಸ್ಥಿತಿ ಹೊಂದಿರಿ.
ಪ್ರೋಟಿನ್‌ಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸಿ
ಒತ್ತಡ ಕಡಿಮೆಮಾಡಿಕೊಳ್ಳಿ
ಒತ್ತಡವು ನಿಮ್ಮ ಗರ್ಭಾವಸ್ಥೆಯನ್ನು ಮತ್ತು ಸುಲಭವಾದ ಹೆರಿಗೆಯನ್ನು ಹೆಚ್ಚು ಕಷ್ಟವಾಗುವಂತೆ ಮಾಡುತ್ತದೆ. ಆರಾಮಾಗಿರಿ, ಒಮ್ಮೆ ಜೋರಾಗಿ ನಿಟ್ಟುಸಿರು ಬಿಡಿ.
ಹಸಿಶುಂಠಿಯ ಚಹಾ ಸೇವಿಸಿ
ಸಾಧ್ಯವಾದಷ್ಟು ನೀರು ಕುಡಿಯಿರಿ
ಗರ್ಭಿಣಿಯರಿಗೆ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರುವುದು ಅಗತ್ಯವಾಗಿದೆ. ಆದರೆ ಚಳಿಗಾಲದಲ್ಲಿ ಕೊಂಚ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಏಕೆಂದರೆ ಚಳಿಗಾಲದಲ್ಲಿಯೂ ನಮ್ಮ ದೇಹ ಸಾಕಷ್ಟು ನೀರನ್ನು ಬೆವರಿನ ಮೂಲಕ ಕಳೆದುಕೊಳ್ಳುತ್ತದೆ. ಅಲ್ಲದೇ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಹೆಚ್ಚಿನ ನೀರು ಮತ್ತು ಆಹಾರದ ಅವಶ್ಯಕತೆಯಿದೆ. ಸಾಮಾನ್ಯವಾಗಿ ದಿನಕ್ಕೆ ಎಂಟು ಲೋಟ ನೀರು ಕುಡಿಯುತ್ತಿದ್ದಲ್ಲಿ ಅದರಲ್ಲೂ ಚಳಿಗಾಲದಲ್ಲಿ ಹನ್ನೆರಡು ಲೋಟ ಕುಡಿಯಬೇಕು.



Click it and Unblock the Notifications


