Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ತಾಯಿಯ ಸ್ಥೂಲಕಾಯ ಮಗಳ ಬೆಳವಣಿಗೆಯ ಮೇಲೆ ಪ್ರಭಾವ!
ಇತ್ತೀಚಿನ ಸಂಶೋಧನೆಗಳ ಮೂಲಕ ಗರ್ಭಾವಸ್ಥೆಯಲ್ಲಿ ಸ್ಥೂಲಕಾಯ ಮತ್ತು ಗರ್ಭಾವಸ್ಥೆಯ ತಾತ್ಕಾಲಿಕ ಮಧುಮೇಹ (gestational diabetes) ಪಡೆದಿದ್ದ ತಾಯಂದಿರ ಹೆಣ್ಣುಮಕ್ಕಳು ಸಾಮಾನ್ಯ ವಯಸ್ಸಿಗಿಂತಲೂ ತುಸು ಮುನ್ನವೇ ಋತುಮತಿಯಾಗಿರುವ ಅಚ್ಚರಿಯ ಸಂಗತಿಯನ್ನು ಕಂಡುಕೊಳ್ಳಲಾಗಿದೆ.

ಈ ಹೊಸ ಸಂಗತಿಯಲ್ಲಿ ಹೆಣ್ಣುಮಗು ಗರ್ಭದಲ್ಲಿದ್ದಾಗಲೇ ತಾಯಿಯ ಸ್ಥೂಲಕಾಯ ಮತ್ತು ತಾತ್ಕಾಲಿಕ ಮಧುಮೇಹ ಕೆಲವು ಪ್ರಭಾವಗಳಿಗೆ ಒಳಗಾಗಿದ್ದು ಇದರ ಪರಿಣಾಮಗಳಲ್ಲಿ ಬೇಗನೇ ಋತುಮತಿಯಾಗುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಕೆಲವು ಸಂದರ್ಭಗಳಲ್ಲಿ ಈ ಹೆಣ್ಣುಮಕ್ಕಳು ಬೇರೆ ಹೆಣ್ಣುಮಕ್ಕಳಿಗಿಂತಲೂ ಕಿರಿಯ ವಯಸ್ಸಿನಲ್ಲಿಯೇ ಮೈಮೇಲಿನ ತಾರುಣ್ಯದ ರೋಮಗಳನ್ನು ಬೆಳೆಸಿಕೊಳ್ಳುತ್ತಾರೆ.
ಪ್ರಾಪ್ತ ವಯಸ್ಸಿಗಿಂತಲೂ ಮುನ್ನವೇ ಮೈನೆರೆಯುವುದರಿಂದ ಮಹಿಳೆಯ ಆರೋಗ್ಯದಲ್ಲಿಯೂ ಏರುಪೇರಾಗುತ್ತದೆ ಎಂಬುದನ್ನು ಈಗಾಗಲೇ ಕಂಡುಕೊಳ್ಳಲಾಗಿದೆ. ಅಲ್ಲದೇ ಈ ಸ್ಥಿತಿಗೆ ಒಳಗಾದವರಲ್ಲಿ ಟೈಪ್ 2 ವಿಧದ ಮಧುಮೇಹವೂ ಶೀಘ್ರವೇ ಆವರಿಸುವ ಸಂಭವ ಹೆಚ್ಚು ಎಂದು ಕಂಡುಕೊಳ್ಳಲಾಗಿದೆ.
ಅಷ್ಟೇ ಅಲ್ಲ, ಕೆಲವು ವಿಧದ ಕ್ಯಾನ್ಸರ್ ಮತ್ತು ಹಾರ್ಮೋನುಗಳ ಏರುಪೇರಿನಿಂದ ಋತುಚಕ್ರ, ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವ ಪಿಒಎಸ್ (polycystic ovarian syndrome) ಎಂಬ ತೊಂದರೆಗೆ ಒಳಗಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಆದ್ದರಿಂದ ಗರ್ಭಿಣಿಯರು ತಮ್ಮ ತೂಕವನ್ನು ನಿಯಂತ್ರಣದಲ್ಲಿರಿಸಿ ಸೂಕ್ತ ಮಟ್ಟದಲ್ಲಿರುವುದಂತೆ ನೋಡಿಕೊಳ್ಳುವುದು ತಮ್ಮ ಮಗುವಿನ ಆರೋಗ್ಯದ ದೃಷ್ಟಿಯಿಂದಲೂ ಅಗತ್ಯವಾಗಿದೆ.
ಈ ಸಂಶೋಧನೆಯನ್ನು ನಡೆಸಿದ ತಜ್ಞರ ತಂಡ ವಿವಿಧ ರಾಷ್ಟ್ರೀಯತೆ ಹೊಂದಿರುವ ನಾನ್ನೂರು ಗರ್ಭಿಣಿಯರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ ಆ ಬಳಿಕ ಜನಿಸಿದ ಮಕ್ಕಳ ಆರೋಗ್ಯದ ವಿವರಗಳ ಅಂಕಿ ಅಂಶಗಳನ್ನು ಕಲೆಹಾಕಿ ಈ ಮಾಹಿತಿಗಳನ್ನು ವಿಶ್ಲೇಷಿಸಿ ಗರ್ಭಾವಸ್ಥೆಯ ಸ್ಥೂಲಕಾಯಕ್ಕೂ ಹಣ್ಣುಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಋತುಮತಿಯರಾಗುವುದಕ್ಕೂ ನಿಕಟ ಸಂಬಂಧವಿದೆ ಎಂಬುದನ್ನು ಖಚಿತಪಡಿಸಿದೆ.
ಪ್ರಸ್ತುತ ಸ್ಥೂಲಕಾಯ ಹೊಂದಿರುವ ಮಹಿಳೆಯರಿಗೆ ಗರ್ಭ ಧರಿಸುವ ಇಚ್ಛೆ ಇದ್ದರೆ ಇದನ್ನು ಕಾರ್ಯರೂಪಕ್ಕೆ ತರುವ ಮುನ್ನ ತಮ್ಮ ಸ್ಥೂಲಕಾಯವನ್ನು ಆರೋಗ್ಯಕರ ತೂಕಕ್ಕೆ ಇಳಿಸಿಕೊಳ್ಳುವುದು ಎಂಬುದು ತಜ್ಞರ ಈ ಸಲಹೆಯಾಗಿದೆ. ಇಂದಿನ ದಿನಗಳಲ್ಲಿ ಲಭ್ಯವಿರುವ ಸೌಕರ್ಯಗಳು ಮಹಿಳೆಯರ ನಿತ್ಯದ ಚಟುವಟಿಕೆಯನ್ನೇ ಬದಲಿಸಿರುವುದರಿಂದ ಬರೆಯ ಮನೆ ಕೆಲಸದಿಂದ ಸ್ಥೂಲಕಾಯ ಕಡಿಮೆಯಾಗುದೇ ಹೆಚ್ಚುವ ಸಂಭವವಿದೆ.
ವಾಸ್ತವವಾಗಿ ಸ್ಥೂಲಕಾಯ ಹೆಚ್ಚಲಿಕ್ಕೆ ಈ ಸೌಲಭ್ಯಗಳೂ ಪರೋಕ್ಷವಾಗಿ ಕಾರಣವಾಗಿವೆ. ಆದ್ದರಿಂದ ತೂಕ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದಾದರೊಂದು ಕ್ರಮವನ್ನು ಆಯ್ದುಕೊಳ್ಳುವುದು ಮುಂದೆ ಬರಲಿರುವ ಮಗಳ ಆರೋಗ್ಯದ ದೃಷ್ಟಿಯಿಂದಲಾದರೂ ಅಗತ್ಯ ಹಾಗೂ ಅನಿವಾರ್ಯವಾಗಿದೆ.



Click it and Unblock the Notifications



