Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಿಣಿಯರಿಗೆ ಕಾಡುವ ವಾಂತಿಯ ಸಮಸ್ಯೆಗೆ ಸರಳ ಟಿಪ್ಸ್
ಗರ್ಭಾವಸ್ಥೆ ಎಂಬುದು ಸ್ತ್ರೀಯ ಬಾಳಿನ ಮಹತ್ವದ ಕ್ಷಣವಾಗಿದ್ದು ಈ ಸಂತಸದ ಕ್ಷಣದಲ್ಲೂ ಆಕೆ ನೋವನ್ನು ಅನುಭವಿಸುವುದು ಇದ್ದೇ ಇರುತ್ತದೆ. ವಾಂತಿ ಈ ಸಂದರ್ಭದಲ್ಲಿ ಆಕೆಯನ್ನು ಕಾಡುವ ಕಾಯಿಲೆ ಎಂದೆನಿಸಿದ್ದು ಬೆಳಗ್ಗಿನ ರೋಗ ಎಂಬ ಹೆಸರನ್ನೂ ಇದು ಹೊಂದಿದೆ. ಓಸ್ಟ್ರೋಜನ್ ಮಟ್ಟಗಳ ಹೆಚ್ಚುವಿಕೆಯಿಂದ, ರಕ್ತದಲ್ಲಿನ ಕಡಿಮೆ ಸಕ್ಕರೆ ಪ್ರಮಾಣ ಹಾಗೂ ಕೆಲವೊಂದು ವಾಸನೆಗಳ ಅಸಹನೀಯತೆ, ಬಣ್ಣಗಳಿಂದ ಈ ವಾಕರಿಕೆ ಉಂಟಾಗುತ್ತದೆ.
ಕೆಲವೊಮ್ಮೆ ಇದು ಬೆಳಗ್ಗೆ ಮಾತ್ರವೇ ಕಂಡುಬಂದರೆ ಹೆಚ್ಚು ಸಮಯದಲ್ಲಿ ದಿನಪೂರ್ತಿ ಇದು ಕಾಡುತ್ತದೆ. ಪ್ರಥಮ ತ್ರೈಮಾಸಿಕದ ಕೊನೆಯಲ್ಲಿ ಇದು ಆರಾಮವನ್ನು ನೀಡುತ್ತದೆ. ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದಕ್ಕೆ ಇಂದಿನ ಲೇಖನದಲ್ಲಿ ನಾವು ಸಲಹೆಗಳನ್ನು ನೀಡುತ್ತಿದ್ದೇವೆ. ಗರ್ಭಾವಸ್ಥೆಯಲ್ಲಿ ಕಾಡುವ ವಾಂತಿಯನ್ನು ನಿವಾರಿಸಲು ಕೆಲವೊಂದು ಮನೆಮದ್ದುಗಳಿದ್ದು ಇವುಗಳು ನಿಮಗೆ ಉಪಶಮವನ್ನು ನೀಡಲಿದೆ.

ನಿಮ್ಮನ್ನು ನೀವು ಆರಾಮವಾಗಿರಿಸಿಕೊಳ್ಳಿ
ಗರ್ಭಿಣಿಯು ಆರಾಮದಾಯಕ ಉಡುಪುಗಳನ್ನು ಧರಿಸಿಕೊಳ್ಳುವುದರಿಂದ ಆಗಾಗ್ಗೆ ಆರಾಮವನ್ನು ಮಾಡಿಕೊಳ್ಳುವುದರಿಂದ ತಾಯಿಯು ಈ ದಿನಗಳ ಸವಿಯನ್ನು ಸವಿಯಬಹುದಾಗಿದೆ. ಆದಷ್ಟು ನಿಮ್ಮೊಳಗೆ ನಡೆಯುತ್ತಿರುವ ತುಮುಲಗಳನ್ನು ಅರಿತುಕೊಂಡು ಅದನ್ನು ಆಸ್ವಾದಿಸಲು ಕಲಿತುಕೊಳ್ಳಿ. ಗರ್ಭಿಣಿಯರ ಪ್ರಾಣ ಹಿಂಡುವ ವಾಂತಿ ಸಮಸ್ಯೆಗೆ ಕಡಿವಾಣ ಹಾಕುವುದು ಹೇಗೆ?
ಒತ್ತಡವನ್ನು ನಿವಾರಿಸಿಕೊಳ್ಳಿ
ವಾಕರಿಕೆ ಪದವನ್ನೇ ನಿಮ್ಮ ಮನದಿಂದ ತೆಗೆದುಹಾಕಿ. ನಿಮಗೆ ಈ ಭಾವನೆಗಳು ಉಂಟಾದಂತೆಲ್ಲಾ ಒತ್ತಡಕ್ಕೆ ಹೆಚ್ಚು ನೀವು ಒಳಗಾಗುತ್ತೀರಿ. ಮನಸ್ಸನ್ನು ಆದಷ್ಟು ಪರಿವರ್ತಿಸಿಕೊಳ್ಳುತ್ತಿರಿ ಅಂತೆಯೇ ಆರೋಗ್ಯಕರ ಚಟುವಟಿಕೆಗಳನ್ನು ನಿಮ್ಮದಾಗಿಸಿಕೊಳ್ಳಿ. ಸುಡೊಕು ಆಡುವುದು, ಪುಸ್ತಕ ಓದುವುದು, ನಡಿಗೆ ಮೊದಲಾದ ಚಟುವಟಿಕೆಗಳಿಗೆ ನಿಮ್ಮನ್ನು ತೊಡಗಿಸಿಕೊಳ್ಳಿ.
ಮಸಾಲೆ ಬಳಕೆ ಬೇಡ
ನೈಸರ್ಗಿಕ ಪರಿಹಾರಗಳು
ಗರ್ಭಾವಸ್ಥೆಯಲ್ಲಿ ಕಾಡುವ ವಾಂತಿಯನ್ನು ನಿವಾರಿಸಲು ಹಲವಾರು ಮನೆಮದ್ದುಗಳಿವೆ. ಶುಂಠಿ ವಾಂತಿ ನಿವಾರಣೆಗೆ ಅತ್ಯುಪಯುಕ್ತವಾಗಿದೆ. ಅರ್ಧ ಚಮಚದಷ್ಟು ಶುಂಠಿ ರಸಕ್ಕೆ ಅರ್ಧ ಚಮಚ ಜೇನು ಮತ್ತು ಲಿಂಬೆ ರಸವನ್ನು ಸೇರಿಸಿ. ಇದಕ್ಕೆ ಸ್ವಲ್ಪ ಲವಂಗದ ಹುಡಿಯನ್ನು ಹಾಕಿ ಅಂತೆಯೇ ಲವಂಗದ ಹುಡಿಯನ್ನು ಮಿಶ್ರ ಮಾಡಿಕೊಳ್ಳಿ. ನಿಮ್ಮ ವಾಕರಿಕೆಯನ್ನು ಇದು ಕ್ಷಣ ಮಾತ್ರದಲ್ಲಿ ದೂರಮಾಡುವುದು ಖಂಡಿತ.
ವಾಂತಿ ಉತ್ಪತ್ತಿ ಮಾಡುವ ವಸ್ತುಗಳನ್ನು ದೂರವಿರಿಸಿ
ನಿಮಗೆ ಯಾವ ಉತ್ಪನ್ನಗಳು ವಾಂತಿಯನ್ನು ಉಂಟುಮಾಡುತ್ತವೆ ಹಾಗೂ ಯಾವುದರ ವಾಸನೆಯಿಂದ ವಾಕರಿಕೆ ಆಗುತ್ತಿದೆ ಎಂಬುದನ್ನು ನೋಡಿಕೊಂಡು ಅಂತಹ ಉತ್ಪನ್ನಗಳನ್ನು ನಿಮ್ಮಿಂದ ದೂರವಿರಿಸಿ. ಆದಷ್ಟು ಇವುಗಳ ಬಗ್ಗೆ ಟಿಪ್ಪಣಿಯನ್ನು ಮಾಡಿಕೊಂಡು ಅವುಗಳಿಂದ ದೂರವಿರಿ.
ವಾಂತಿಗೆ ಪರಿಹಾರಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ
ವಾಂತಿಯ ಲಕ್ಷಣಗಳನ್ನು ದೂರಮಾಡಲು ಕೆಲವೊಂದು ವಸ್ತುಗಳು ನಿಮಗೆ ಸಹಾಯ ಮಾಡುತ್ತದೆ. ಲಿಂಬೆ ಅಥವಾ ಕಿತ್ತಳೆ ಸಿಪ್ಪೆ ಇಂತಹವುಗಳಲ್ಲಿ ಒಂದಾಗಿದೆ. ಆದಷ್ಟು ನಿಮ್ಮೊಂದಿಗೆ ಲಿಂಬೆಯನ್ನು ಒಯ್ಯಲು ಮರೆಯದಿರಿ. ವಾಕರಿಕೆ ಲಕ್ಷಣಗಳುಂಟಾಗುತ್ತಿದೆ ಎಂದಾದಲ್ಲಿ ಅವುಗಳನ್ನು ಆಘ್ರಾಣಿಸುತ್ತಿರಿ.
ಡಿಜಿಟಲ್ ಬಳಕೆ ಬೇಡ
ಕಂಪ್ಯೂಟರ್ ಮಾನಿಟರ್ ಕೂಡ ವಾಕರಿಕೆಯನ್ನುಂಟು ಮಾಡುತ್ತವೆ. ಆದ್ದರಿಂದ ಆದಷ್ಟು ಈ ಸಮಯದಲ್ಲಿ ಕಂಪ್ಯೂಟರ್ ಇಲ್ಲವೇ ಲ್ಯಾಪ್ ಟಾಪ್ ಬಳಕೆಯನ್ನು ಮಾಡದಿರಿ. ನಿಮ್ಮ ಮಗುವಿಗಿಂತ ಯಾವುದೂ ದೊಡ್ಡದಲ್ಲ ಎಂಬುದನ್ನು ಅರಿತುಕೊಂಡಿರಿ.
ಸಮಸ್ಯೆಗಳನ್ನು ಹೇಳಿ



Click it and Unblock the Notifications




