Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ, ಪ್ಲಾಸ್ಟಿಕ್ ಬಾಟಲಿಗಳ ಬಳಕೆಯಿಂದ ದೂರವಿರಿ
ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಆರೋಗ್ಯಕರವಲ್ಲ ಎಂಬ ಮಾತು ಈಗ ಎಲ್ಲಾ ಕಡೆ ಕೇಳಿಬರುತ್ತಿದೆ. ಅದರಲ್ಲೂ ಗರ್ಭಿಣಿಯರು ಪ್ಲಾಸ್ಟಿಕ್ a ಬಾಟಲಿಗಳನ್ನು ಬಳಸಬಹುದೇ ಎಂಬ ಪ್ರಶ್ನೆಗೆ ತಜ್ಞರು ಇದರಿಂದ ಹುಟ್ಟುವ ಮಕ್ಕಳು ಸ್ಥೂಲಕಾಯ ಹೊಂದಿರುವ ಸಾಧ್ಯತೆ ಇದೆ ಎಂದು ತಿಳಿಸುತ್ತಾರೆ.

ಇದಕ್ಕೆ ಕಾರಣವೇನು ಎಂದು ಮಾಹಿತಿಗಳನ್ನು ಕೆದಕಿದರೆ BPA (bisphenol-a)ಎಂಬ ರಾಸಾಯನಿಕ ಕಾರಣವಾಗಿರಬಹುದು ಎಂದು ತೋರುತ್ತದೆ. ಏಕೆಂದರೆ ಪ್ಲಾಸ್ಟಿಕ್ ಬಾಟಲಿ ಮತ್ತು ಚಿಕ್ಕ ಡಬ್ಬಿಗಳನ್ನು ತಯಾರಿಸಲು ಬಳಸಲಾಗುವ ಪ್ಲಾಸ್ಟಿಕ್ಕಿನಲ್ಲಿ ಈ ರಾಸಾಯನಿಕ ಅಡಕವಾಗಿರುತ್ತದೆ.
ಗರ್ಭಿಣಿಯರು ಒಂದು ವೇಳೆ ಈ ರಾಸಾಯನಿಕವನ್ನು ಅನಾಚೂನವಾಗಿ ಸೇವಿಸಿದರೆ ಮುಂದೆ ಹುಟ್ಟುವ ಮಕ್ಕಳಲ್ಲಿ ಏಳು ವರ್ಷ ತುಂಬುವ ಮೊದಲೇ ಅತಿ ಸ್ಥೂಲಕಾಯ ಹೊಂದಲು ಕಾರಣವಾಗುತ್ತದೆ ಎಂಬ ಮಾಹಿತಿಯನ್ನು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?
ಪ್ಲಾಸ್ಟಿಕ್ ಬಾಟಲಿಗಳ ಆಹಾರ, ನೀರನ್ನು ಸೇವಿಸಿದ ಗರ್ಭಿಣಿಯರ ಮೂತ್ರಪರೀಕ್ಷೆಯಲ್ಲಿ 90% ಹೆಚ್ಚು ಹಾನಿಕಾರಕ ರಾಸಾಯನಿಕಗಳಿರುವುದು ಕಂಡುಬಂದಿದೆ. ಇದಕ್ಕೆ ಕಾರಣವೇನೆಂದರೆ ಈ BPA ರಾಸಾಯನಿಕ ಎಂಡ್ರೋಕ್ರೈನ್ ಎಂಬ ಹಾರ್ಮೋನಿನ ಪ್ರಮಾಣದಲ್ಲಿ ಏರುಪೇರು ಮಾಡುವ ಮೂಲಕ ಕೊಬ್ಬು ಹೆಚ್ಚು ಸಂಗ್ರಗೊಳ್ಳಲು ನೆರವಾಗುವ ಮೂಲಕ ಮಕ್ಕಳ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಬಾಟಲಿಗಳು ಮಗುವಿಗೆ ಅಪಾಯಕಾರಿಯೇ?
ಈ ವಿಷಯವನ್ನು ಹಲವಾರು ಸಂಶೋಧನೆಗಳು ಮತ್ತು ಪರೀಕ್ಷೆಗಳಿಂದ ದೃಢೀಕರಿಸಲಾಗಿದ್ದು ಇದರೊಂದಿಗೆ ಈ ರಾಸಾಯನಿಕ ಹೃದಯದ ತೊಂದರೆ, ಸ್ಥೂಲಕಾಯ, ಮಧುಮೇಹ, ಖಿನ್ನತೆ, ಉದ್ವೇಗ ಮತ್ತು ಅಸ್ತಮಾದಂತಹ ಕಾಯಿಲೆಗಳನ್ನೂ ಗರ್ಭಿಣಿಯರಲ್ಲಿ ಮತ್ತು ಇತರರಲ್ಲಿಯೂ ಮೂಡಿಸಬಹುದು, ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ BPA ಇರುವಂತಹ ಪ್ಲಾಸ್ಟಿಕ್ಕುಗಳನ್ನು ತ್ಯಜಿಸುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.



Click it and Unblock the Notifications



