ಗರ್ಭಾವಸ್ಥೆಯಲ್ಲಿ ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಹೇಗೆ?

ಮಹಿಳೆಯರ ಜೀವನದಲ್ಲಿ ಗರ್ಭಿಣಿಯಾಗುವ ಕಾಲಾವಧಿಯು ಅತ್ಯಂತ ಮಹತ್ವದ ಘಟ್ಟವಾಗಿರುತ್ತದೆ. ಈ ಅವಧಿಯಲ್ಲಿ ತಾಯಿಯ ಗರ್ಭದಲ್ಲಿ ಮಗುವು ಬೆಳೆಯುತ್ತ ಇರುತ್ತದೆ, ಆಗ ಹೆಣ್ಣು ಒಂದು ದೇಹ ಎರಡು ಜೀವಗಳೆಂಬ ರೀತಿಯಲ್ಲಿ ಇರುತ್ತಾಳೆ. ಈ ಸಂದರ್ಭದಲ್ಲಿ ಹೆಂಗಸರು ತಮ್ಮ ದೇಹದಲ್ಲಿರುವ ಹಾರ್ಮೋನುಗಳ ಜ್ವಾಲಾಮುಖಿಯ ಬೇಗೆಯಲ್ಲಿ ಬೇಯುತ್ತಿರುತ್ತಾರೆ. ಇದರ ಜೊತೆಗೆ ದೈಹಿಕ ಮತ್ತು ಮಾನಸಿಕ ಒತ್ತಡವು ಅವರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ.

ಆಗ ಬಹುತೇಕ ಸಂದರ್ಭಗಳಲ್ಲಿ ನೀವು ನಿಮ್ಮ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಮತ್ತು ಸಕಾರಾತ್ಮಕ ಮನೋಭಾವನೆಯನ್ನು ಹೊಂದಲು ಕಷ್ಟವಾಗುತ್ತದೆ. ಮಗುವಿನ ಬೆಳವಣಿಗೆಯು ಸಂಪೂರ್ಣವಾಗಿ ತನ್ನ ತಾಯಿ ಏನು ತಿನ್ನುತ್ತಾಳೆ ಮತ್ತು ಆಲೋಚಿಸುತ್ತಾಳೆ ಎಂಬುದನ್ನು ಅವಲಂಬಿಸಿರುತ್ತದೆ. ಮಾನಸಿಕ ಒತ್ತಡವು ಕೇವಲ ಮಗುವಿಗಷ್ಟೇ ಅಲ್ಲ, ತಾಯಿಗು ಸಹ ಅಪಾಯಕಾರಿ.

ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ, ನಿಮ್ಮ ಮಗುವಿನ ಆರೊಗ್ಯದಲ್ಲಿ ಪ್ರತಿಫಲಿಸುತ್ತದೆ. ಆದ್ದರಿಂದ ಗರ್ಭಿಣಿಯಾಗಿರುವ ಹೆಂಗಸರು ತಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ತೀರಾ ಅತ್ಯಾವಶ್ಯಕ. ಆದ್ದರಿಂದ ಗರ್ಭಿಣಿಯಾಗಿರುವಾಗ ಆದಷ್ಟು ಸಕಾರಾತ್ಮಕ ಮನೋಭಾವನೆಯನ್ನು ಹೊಂದಲು ಪ್ರಯತ್ನಿಸಿ.

Ways To Keep Yourself Peaceful When Pregnant

ಅದು ಸರಿ ಈ ಗರ್ಭಿಣಿಯರು ಏಕೆ ಚಿಂತೆ ಮಾಡಲು ಶುರುಮಾಡುತ್ತಾರೆ. ಅದಕ್ಕೆ ಹಲವಾರು ಕಾರಣಗಳು ಇವೆ. ಒಂದು ವೈದ್ಯಕೀಯ ಕಾರಣಗಳಾದರೆ, ಮತ್ತೊಂದು ಕೇಳಿದ ಕಟ್ಟುಕತೆಗಳು, ಪ್ರಸವದ ಕುರಿತಾದ ಭಯ ಅಥವಾ ಮಗುವಿನ ಆರೋಗ್ಯದ ಕುರಿತಾದ ಕಾಳಜಿ. ಹೀಗೆ ನಾನಾ ತರಹದ ವಿಚಾರಗಳು ಅವರನ್ನು ಸುಮ್ಮನೆ ಇರಲು ಬಿಡುವುದಿಲ್ಲ. ಬನ್ನಿ ಅದಕ್ಕಾಗಿ ನಾವು ನಿಮಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಓದಿಕೊಳ್ಳಿ... ಮಗುವಿಗೆ ಹಾಲುಣಿಸಿದ ನಂತರವೂ ಸ್ತನ ಗಾತ್ರವನ್ನು ಕಾಯ್ದುಕೊಳ್ಳುವುದು ಹೇಗೆ?

ಧನಾತ್ಮಕ ಮನೋಭಾವ
ನೀವು ಗರ್ಭಿಣಿಯಾಗಿರುವಾಗ ಧನಾತ್ಮಕ ಮನೋಭಾವವನ್ನು ಅಳವಡಿಸಿಕೊಳ್ಳುವುದರಿಂದ ಗಣನೀಯ ಬದಲಾವಣೆಯನ್ನು ಕಾಣಬಹುದು. ಇದು ಈ ಅವಧಿಯಲ್ಲಿ ತೀರಾ ಅತ್ಯಾವಶ್ಯಕ. ಧನಾತ್ಮಕ ಮನೋಭಾವವು ಮನಸ್ಸಿನ ಆಶಾವಾದಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ಗರ್ಭಿಣಿಯರು ತಾವು ಶಾಂತವಾಗಿರಬೇಕೆಂದರೆ ಇದು ತುಂಬಾ ಮುಖ್ಯವಾದ ಹಂತವಾಗಿದೆ.

ಸಮತೋಲನವನ್ನು ಕಾಯ್ದುಕೊಳ್ಳಿ
ಗರ್ಭಿಣಿಯಾಗಿರುವಾಗ ನೀವು ನಿಭಾಯಿಸುತ್ತಿರುವ ಜವಾಬ್ದಾರಿಗಳ ಕಾರಣವಾಗಿ ಸ್ವಲ್ಪ ಮಟ್ಟಿಗೆ ಚಿತ್ತಸ್ಥೈರ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲಸ ಮತ್ತು ಕುಟುಂಬ ಇವೆರಡರಲ್ಲಿರುವ ಜವಾಬ್ದಾರಿಗಳು ನಿಮ್ಮನ್ನು ಗೊಂದಲಕ್ಕೆ ದೂಡುತ್ತವೆ. ಇವೆರಡರ ನಡುವೆ ಸ್ವಲ್ಪ ಸಮತೋಲನವನ್ನು ಕಾಯ್ದುಕೊಳ್ಳಿ. ಆಗ ಮಾನಸಿಕ ಶಾಂತಿ ತನ್ನಷ್ಟಕ್ಕೆ ತಾನೇ ಬರುತ್ತದೆ.

ಗುಣಮಟ್ಟದಿಂದ ಕೂಡಿದ ಸಂಬಂಧಗಳು
ನಿಮ್ಮ ಮಾನಸಿಕ ಒತ್ತಡವನ್ನು ನಿಭಾಯಿಸಲು ನಿಮಗೆ ಅಗತ್ಯವಾಗಿ ಒಂದು ಬೆಂಬಲ ಬೇಕಾಗುತ್ತದೆ. ಕುಟುಂಬದೊಂದಿಗೆ ಉತ್ತಮ ರೀತಿಯ ಸಂಬಂಧಗಳು ನಿಮ್ಮಲ್ಲಿ ಸುರಕ್ಷತೆಯ ಭಾವನೆಯನ್ನು ಒದಗಿಸುತ್ತದೆ. ಇದರಿಂದ ನಿಮ್ಮಲ್ಲಿ ಧನಾತ್ಮಕ ಮನೋಭಾವಗಳು, ಸಂತೋಷ ಮತ್ತು ನಿಮ್ಮ ಯೋಗ ಕ್ಷೇಮ ವಿಚಾರಿಸುವ ಜನರು ಎಲ್ಲರೂ ಸಿಗುತ್ತಾರೆ. ಆದ್ದರಿಂದ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಉತ್ತಮ ಸಂಬಂಧವನ್ನು ಹೊಂದಿರಿ. ಗರ್ಭಿಣಿಯರೇ ಎಚ್ಚರ: ದಿನನಿತ್ಯ ಆಹಾರ ಶೈಲಿಯ ಬಗ್ಗೆ ಎಚ್ಚರವಿರಲಿ!

ಯೋಗ
ಹಾರ್ಮೊನುಗಳನ್ನು ಸಮತೋಲನದಲ್ಲಿಡಲು ಯೋಗವು ಅತ್ಯುತ್ತಮವಾದ ಮಾರ್ಗವಾಗಿರುತ್ತದೆ. ಜೊತೆಗೆ ಇದು ನಿಮ್ಮನ್ನು ಶಾಂತವಾಗಿಡುತ್ತದೆ ಮತ್ತು ವಿಶ್ರಾಂತಿಯನ್ನು ಸಹ ನೀಡುತ್ತದೆ. ಆದರೆ ಯೋಗ ಮಾಡುವ ಮೊದಲು ನೀವು ವೈಧ್ಯಕೀಯವಾಗಿ ಸದೃಢರಾಗಿದ್ದೀರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಯೋಗವು ನಿಮ್ಮ ಮನಸ್ಸು, ದೇಹ ಮತ್ತು ಸ್ಫೂರ್ತಿಯನ್ನು ಸಮತೋಲನದಲ್ಲಿಡುತ್ತದೆ. ಅಲ್ಲದೆ ಒಮೆಗಾ-3 ಅಧಿಕವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಖಿನ್ನತೆಯನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದು ಮಗುವಿನ ಮೆದುಳಿನ ಬೆಳವಣಿಗೆಗು ಸಹ ಅತ್ಯಾವಶ್ಯಕ.

ಒಣ ಹಣ್ಣು
ಒಣ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಮನೋಭಾವವನ್ನು ಲವಲವಿಕೆಯಿಂದ ಇರುವಂತೆ ಮಾಡಬಹುದು. ಆದ್ದರಿಂದ ಸಮತೋಲನದಿಂದ ಕೂಡಿದ ಆಹಾರವನ್ನು ಸೇವಿಸಿ. ಗರ್ಭಿಣಿಯಾಗಿರುವಾಗ ಪ್ರಶಾಂತವಾಗಿರಬೇಕು ಎಂದುಕೊಂಡಲ್ಲಿ ಈ ಸಲಹೆಗಳನ್ನು ಪಾಲಿಸಿ. ಇದರ ಕುರಿತು ನಿಮ್ಮಲ್ಲಿ ಹೆಚ್ಚಿನ ಸಲಹೆಗಳಿದ್ದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Story first published: Tuesday, February 3, 2015, 17:45 [IST]
X
Desktop Bottom Promotion