Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಟಿಪ್ಸ್
ಗರ್ಭಿಣಿ ಮಹಿಳೆಯರಲ್ಲಿ ಹಸಿವು ಕಡಿಮೆಯಾಗುವುದು ಅತ್ಯಂತ ಸಾಮಾನ್ಯ ಸಮಸ್ಯೆ. ಆದರೆ ಇದರ ಬಗ್ಗೆ ಕಾಳಜಿ ತೆಗೆದುಕೊಳ್ಳದೆ ಹಾಗೆ ಬಿಟ್ಟುಬಿಡುವ ಸಾಮಾನ್ಯ ಸಮಸ್ಯೆಯಲ್ಲ. ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಗರ್ಭಧಾರಣೆಯ ಸಮಯದಲ್ಲಿ ಆಹಾರದ ಸೇವನೆ ಹೆಚ್ಚು ಮಾಡಬೇಕಾಗುತ್ತದೆ.
ದೇಹದಲ್ಲಿ ಆಗುವ ಹಾರ್ಮೋನು ಬದಲಾವಣೆಗಳಿಂದಾಗಿ ಹಠಾತ್ ಆಗಿ ಹಸಿವು ಕಡಿಮೆಯಾಗುತ್ತದೆ. ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕಾಗಿ ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ.
ಎಲ್ಲವನ್ನು ತಿನ್ನುವುದರ ಬಗ್ಗೆ ನಾವಿಲ್ಲಿ ದೃಷ್ಟಿಹರಿಸುತ್ತಿಲ್ಲ. ಆರೋಗ್ಯಕರವಾಗಿರುವುದನ್ನು ತಿನ್ನುವುದು ಮುಖ್ಯ. ನೀವು ತಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಗರ್ಭದಲ್ಲಿರುವ ಮಗು ಪಡೆಯುತ್ತದೆ. ಇದರಿಂದ ಗರ್ಭಧಾರಣೆ ವೇಳೆ ಆರೋಗ್ಯಕರವಾಗಿ ತಿನ್ನುವುದು ತುಂಬಾ ಮುಖ್ಯ. ಸಮತೋಲಿತ ಆಹಾರ ಕ್ರಮಗಳನ್ನು ಪಾಲಿಸುವುದರಿಂದ ನಿಮ್ಮ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸರಿಯಾದ ರೀತಿಯಲ್ಲಿ ಆಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಿಣಿಯರು ಹೈಹೀಲ್ಡ್ ಧರಿಸುವುದು ಸುರಕ್ಷಿತವೇ?
ಬೆಳಗ್ಗಿನ ಅನಾರೋಗ್ಯ ಮತ್ತು ಇತರ ಕೆಲವೊಂದು ಸಮಸ್ಯೆಗಳಿಂದಾಗಿ ಗರ್ಭಧಾರಣೆಯ ಮೊದಲ ಸಮಯದಲ್ಲಿ ನಿಮ್ಮ ಹಸಿವು ಕಡಿಮೆಯಾಗುತ್ತದೆ. ಆದರೆ ಒಮ್ಮೆ ನೀವು ಬೆಳಗ್ಗಿನ ಅನಾರೋಗ್ಯ ಸಮಸ್ಯೆಯಿಂದ ದೂರವಾದರೆ ಆಗ ನಿಮಗೆ ಸ್ವಾಭಾವಿಕವಾಗಿ ಹಸಿವು ಹಿಂತಿರುಗುತ್ತದೆ.
ಹಾಗೆ ಆಗದಿದ್ದರೆ ಆಗ ನೀವು ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಕೆಲವೊಂದು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಕೆಲವೊಂದು ಟಿಪ್ಸ್ ಪಾಲಿಸಬೇಕಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಧಾರಣೆ ವೇಳೆ ಬರುವ ಸಂಬಂಧದ ಸಮಸ್ಯೆಗಳು

ಸಣ್ಣ ಊಟ ಮಾಡಿ
ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಪ್ರಯತ್ನಿಸುವ ವೇಳೆ ಇದು ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮಹತ್ವದ ವಿಷಯ. ಒಂದೇ ಸಲ ಹೊಟ್ಟೆ ತುಂಬಾ ಊಟ ಮಾಡುವ ಬದಲು ಸಣ್ಣ ಸಣ್ಣ ಪ್ರಮಾಣದಲ್ಲಿ ಊಟ ಮಾಡಿ.

ಲಘು ವ್ಯಾಯಾಮ
ಗರ್ಭಧಾರಣೆ ವೇಳೆ ವ್ಯಾಯಾಮ ಮಾಡುವುದು ಕೇವಲ ನಿಮ್ಮ ದೈಹಿಕ ಫಿಟ್ ನೆಸ್ ನ್ನು ಸುಧಾರಿಸುವುದು ಮಾತ್ರವಲ್ಲದೆ ಹಸಿವು ಹೆಚ್ಚುವಂತೆ ಮಾಡುತ್ತದೆ. ಗರ್ಭಧಾರಣೆ ವೇಳೆ ಕೆಲವೊಂದು ವೈದ್ಯಕೀಯ ಸಮಸ್ಯೆಯಿದ್ದರೆ ಆಗ ವಿಶ್ರಾಂತಿ ಪಡೆಯಬೇಕಾಗುತ್ತದೆ. ಈ ವೇಳೆ ನೀವು ವ್ಯಾಯಾಮಕ್ಕೆ ಮೊದಲು ವೈದ್ಯರ ಸಲಹೆ ಪಡೆಯುವುದು ತುಂಬಾ ಮುಖ್ಯ.

ನೀವು ಇಷ್ಟಪಡುವುದನ್ನು ತಿನ್ನಿ
ನಿಮ್ಮ ಮಾನಸಿಕ ಸ್ಥಿತಿಯಿಂದಾಗಿ ಹಸಿವು ಕಡಿಮೆಯಾಗಿರುವ ಸಾಧ್ಯತೆ ತುಂಬಾ ಹೆಚ್ಚಿದೆ. ಗರ್ಭಧಾರಣೆ ವೇಳೆ ಆಹಾರದ ಕಡುಬಯಕೆಯಾಗುವುದು ಸಾಮಾನ್ಯ. ನಿಮಗೆ ಏನಾದರೂ ವಿಶೇಷವಾಗಿರುವುದನ್ನು ತಿನ್ನಲು ಮನಸ್ಸಾದರೆ ಅದನ್ನು ತಿನ್ನಿ. ಇದು ನಿಮಗೆ ತೃಪ್ತಿ ನೀಡುತ್ತದೆ ಮತ್ತು ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ನೆರವಾಗುತ್ತದೆ.

ಬೆಳಗ್ಗಿನ ಅನಾರೋಗ್ಯ ನಿಭಾಯಿಸಿ
ಬೆಳಗ್ಗಿನ ಅನಾರೋಗ್ಯದಿಂದಾಗಿ ಹೆಚ್ಚಿನ ಗರ್ಭಿಣಿ ಮಹಿಳೆಯರ ಹಸಿವು ಕಡಿಮೆಯಾಗುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಇದು ಕೊನೆಯ ಅವಧಿ ತನಕವೂ ಇರುತ್ತದೆ. ಬೆಳಗ್ಗಿನ ಅನಾರೋಗ್ಯ ನಿಭಾಯಿಸಲು ಕೆಲವೊಂದು ಅಗತ್ಯ ಕ್ರಮ ತೆಗೆದುಕೊಳ್ಳಿ ಮತ್ತು ಇದು ಗರ್ಭಧಾರಣೆ ವೇಳೆ ನಿಮ್ಮ ಹಸಿವು ಹೆಚ್ಚಿಸಲು ನೆರವಾಗಲಿದೆ.

ಯೋಗ
ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಯೋಗಾಭ್ಯಾಸ ಮಾಡುವುದು ಒಳ್ಳೆಯ ವಿಧಾನ. ಹಸಿವು ಹೆಚ್ಚಿಸಲು ಕೆಲವೊಂದು ರೀತಿಯ ಆಸನಗಳಿವೆ. ವೃತ್ತಿಪರ ಯೋಗ ತರಬೇತುದಾರರ ನೆರವಿನಿಂದಲೇ ಯೋಗಾಭ್ಯಾಸ ಮಾಡಿ.

ಆರೋಗ್ಯಕರ ತಿಂಡಿಗಳು
ಗರ್ಭಧಾರಣೆ ವೇಳೆ ಆರೋಗ್ಯಕರ ಆಹಾರ ಸೇವಿಸುವುದು ಒಳ್ಳೆಯ ಐಡಿಯಾ. ನಿಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಆರೋಗ್ಯಕರ ತಿಂಡಿಗಳನ್ನು ಸೇವಿಸಿ. ಇದು ಗರ್ಭಧಾರಣೆ ವೇಳೆ ನಿಮ್ಮ ಹಸಿವು ಹೆಚ್ಚಿಸಲು ನೆರವಾಗುತ್ತದೆ. ಯಾಕೆಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಣ್ಣ ಪ್ರಚೋದನೆ ನಿಮ್ಮ ಹಸಿವು ಹೆಚ್ಚಿಸಬಹುದು.

ಜಂಕ್ ಫುಡ್ ತ್ಯಜಿಸಿ
ಗರ್ಭಧಾರಣೆ ವೇಳೆ ಜಂಕ್ ಫುಡ್ ತಿನ್ನುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಜಂಕ್ ಫುಡ್ ನಿಮ್ಮ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಜಂಕ್ ಫುಡ್ ಸೇವನೆ ಬಿಡಬೇಕು.

ಹೊಸ ರಿಸಿಪಿ ಪ್ರಯತ್ನಿಸಿ
ದೈನಂದಿನ ರಿಸಿಪಿಯಿಂದ ನಿಮಗೆ ಬೋರ್ ಆಗಿದ್ದರೆ ಆಗ ನೀವು ಏನಾದರೂ ಹೊಸತನ್ನು ಪ್ರಯತ್ನಿಸಿ. ಹೊಸ ರುಚಿ ಮತ್ತು ಆಹಾರವು ನಿಮ್ಮ ಹಸಿವನ್ನು ಖಂಡಿತವಾಗಿಯೂ ಹೆಚ್ಚಿಸಲಿದೆ. ಆದರೆ ನೆನಪಿರಲಿ ಗರ್ಭಧಾರಣೆ ವೇಳೆ ಆರೋಗ್ಯಕರ ಆಹಾರ ತಿನ್ನುವುದು ಮುಖ್ಯ.



Click it and Unblock the Notifications