Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸಿದರೆ ಗರ್ಭಪಾತ ಆಗುವುದೇ?
ನಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ಸೇರಿಸಲು ಕಾತುರರಾಗಿ ಕಾಯುವ ಗರ್ಭಾವಸ್ಥೆ, ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಆದರೆ ಈ ಕನಸುಗಳನ್ನು ನುಚ್ಚುನೂರು ಮಾಡುವ ಗರ್ಭಪಾತ, ಯಾವುದೇ ಗರ್ಭಿಣಿ ಮಹಿಳೆ ಎದುರಿಸುವ ಕೆಟ್ಟ ಅನುಭವ. ಇದ್ದಕ್ಕಿದ್ದಂತೆ ಆಗುವ ಈ ಆಘಾತ ನಮ್ಮ ಜೀವನವೇ ನಶ್ವರ ಎನ್ನುವಂತಹ ಭಾವನೆಯನ್ನು ನೀಡುತ್ತದೆ!
ಆರಂಭಿಕ ಗರ್ಭಪಾತಗಳು ಮತ್ತು ಕೊನೆಯ ಗರ್ಭಪಾತಗಳು ಎಂದು ಎರಡು ವಿಧಗಳನ್ನು ಕಾಣಬಹುದು. ಅನೇಕ ಅಂಶಗಳು ಈ ಆಘಾತಕ್ಕೆ ಕೊಡುಗೆ ನೀಡುತ್ತವೆ. ಆದರೆ ಕಾರಣ ಯಾವುದೇ ಇರಲಿ, ಕುಟುಂಬ, ಅದರಲ್ಲೂ ವಿಶೇಷವಾಗಿ ತಾಯಿ ತನ್ನ ಮಗುವನ್ನು ಕಳೆದುಕೊಂಡ ನೋವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ!
ಗರ್ಭಪಾತದ ಕಾರಣಗಳ ಬಗ್ಗೆ ಅನೇಕ ಅನುಮಾನಗಳ ನಡುವೆ ' ಕ್ರೀಡೆ ಗರ್ಭಪಾತದಕ್ಕೆ ಕಾರಣ ' ಎನ್ನುವುದೂ ಸೇರಿದೆ. ನೀವು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಅಥವಾ ಯಾರೊಂದಿಗೂ ಸಂಪರ್ಕವಿಲ್ಲದೆ ನೀವು ಆಟವನ್ನಾಡಬಹುದು. ಆದರೆ, ' ಗರ್ಭಪಾತದಕ್ಕೆ ಇನ್ನೊಬ್ಬರ ಜೊತೆಗಿನ ಕ್ರೀಡೆ ಕಾರಣವಾಗಬಹುದೇ ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು.

ಗರ್ಭಿಣಿಯರು ಕುಡಿಯಬಹುದಾದ ಮತ್ತು ಕುಡಿಯಬಾರದ ಪಾನೀಯ
ಗರ್ಭಧಾರಣೆಯ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ನೀವು ಇಷ್ಟಪಡುವಿರಾದರೆ, ಬೇರೊಬ್ಬರೊಂದಿಗೆ ಅಥವಾ ಗುಂಪುಗಳಲ್ಲಿ ಆಟವಾಡದೇ ನೀವು ಒಬ್ಬರೆ ಆಡುವುದರಿಂದ ಗರ್ಭಪಾತದ ಅಪಾಯಗಳನ್ನು ತಪ್ಪಿಸಬಹುದು. ಇಲ್ಲಿ ನಾವು ಸಾಮಾನ್ಯವಾಗಿ ಗರ್ಭಿಣಿಯರು ಆಡುವ ಕೆಲವು ಕ್ರೀಡೆಗಳ ಸಾಧಕ ಬಾಧಕಗಳನ್ನು ಚರ್ಚಿಸುತ್ತಿದ್ದೇವೆ.
ಈಜುವುದು:
ನಿಧಾನವಾಗಿ ಈಜಲು ಇಷ್ಟ ಪಡುವ ಮಹಿಳೆಯರಿಗೆ ' ಕ್ರೀಡೆ ಗರ್ಭಪಾತಕ್ಕೆ ಕಾರಣವೇ ಎನ್ನುವ ಪ್ರಶ್ನೆಗೆ ನಮ್ಮ ಉತ್ತರ ಇಲ್ಲ ಎಂಬುದು! ಈ ಕ್ರೀಡೆ ಗರ್ಭಧಾರಣೆಯ ಎಲ್ಲಾ ತಿಂಗಳುಗಳಲ್ಲಿಯೂ ಸುರಕ್ಷಿತವಾಗಿರಬಹುದು. ಆದರೆ ಉಸಿರಾಟಕೆ ತೊಂದರೆ ಆಗುವ ಹಾಗೆ ಮುಳುಗುವುದು ಇಂತಹ ಸಾಹಸಗಳನ್ನು ಖಂಡಿತವಾಗಿ ಮಾಡಬಾರದು.
ಹೊರಾಂಗಣ ಆಟಗಳು:
ಹೊರಾಂಗಣ ಆಟಗಳು ಗರ್ಭಧಾರಣೆಯನ್ನೂ ಲೆಕ್ಕಿಸದೆ ಅನೇಕ ಮಹಿಳೆಯರು ಆಡಲು ಬಯಸುವ ಆಟಗಳು. ಆದರೆ, ಗರ್ಭಿಣಿಯರು ಸ್ವತಃ ಕಾಳಜಿ ಮಾಡುವುದು ಅತ್ಯಗತ್ಯ. ಆದರೆ ಇಂತಹ ಆಟಗಳನು ಗರ್ಭಿಣಿಯರು ಆಡದೇ ಇರುವುದೇ ಉತ್ತಮ ಎನುವುದು ನಮ್ಮ ಅಭಿಮತ.
ಗರ್ಭಾವಸ್ಥೆಯಲ್ಲಿ ಕೂದಲಿನ ಬಗ್ಗೆ ಜಾಗ್ರತೆಯಿರಲಿ
ಜಾಗಿಂಗ್:
ನೀವು ಯಾವುದೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳದಿದ್ದ ಸಂದರ್ಭದಲ್ಲಿ, ಜಾಗಿಂಗ್ ಗರ್ಭಾವಸ್ಥೆಯಲ್ಲಿ ಉತ್ತಮಪಾದ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಎಲ್ಲಿಯವರೆಗೆ ನೀವು ಮಧ್ಯಮ ಗರ್ಭಾವಸ್ಥೆಯ ತಿಂಗಳನ್ನು ತಲುಪುತ್ತೀರೋ, ಅಲ್ಲಿಯವರೆಗೆ ' ಕ್ರೀಡೆ ಗರ್ಭಪಾತಕ್ಕೆ ಕಾರಣವಲ್ಲ ಎಂದೇ ಹೇಳಬಹುದು.
ರಾಕೆಟ್ ಆಟಗಳು:
ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ರೀತಿಯ ರಾಕೆಟ್ ಕ್ರೀಡೆಗಳು ಕೆಲವೇ ಜನರನ್ನು ಹೊಂದಿರುವ ಆಟಗಳಾಗಿದ್ದು ನಿಮಗೆ ಯಾವುದೇ ದೈಹಿಕ ತೊಂದರೆಗಳಿಲ್ಲದಿದ್ದರೆ ಗರ್ಭಾವಸ್ಥೆಯಲ್ಲಿಯೂ ಈ ಆಟಗಳನ್ನು ಆಡಬಹುದು. ಆದರಿಂದ ಇಂತಹ ಕ್ರೀಡೆಗಳು ಗರ್ಭಪಾತಕ್ಕೆ ಕಾರಣವಲ್ಲ, ಸುರಕ್ಷಿತ ಎಂದೇ ಹೇಳಬಹುದು.
ಜೊತೆಗಾರರ ಕ್ರೀಡೆಗಳು:
ಹಲವು ಜನರೊಂದಿಗೆ ಅಥವಾ ಗುಂಪಿನೊಂದಿಗೆ ಆಟವನ್ನಾಡಿದರೆ ಗರ್ಭಪಾತ ಸಂಭವಿಸುತ್ತದೆಯೇ ಎಂದರೆ ನಮ್ಮ ಉತ್ತರ ಖಂಡಿತವಾಗಿಯೂ ಹೌದು ಎನ್ನುವುದು. ನೀವು ಗರ್ಭಿಣಿಯಾಗಿರುವಾಗ, ಸಾಕರ್, ಬ್ಯಾಸ್ಕೆಟ್ಬಾಲ್ ಮತ್ತು ಇತರ ಗುಂಪುಗಾರಿಕೆಯ ಆಟಗಳು ಗರ್ಭಾವಸ್ಥೆಯಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಸೀಗೆಕಾಯಿ ಈ ರೀತಿ ಬಳಸಿದರೆ ಹೆಚ್ಚು ಪರಿಣಾಮಕಾರಿ
ಲಿಫ್ಟಿಂಗ್ ಮತ್ತು ಆಯಾಸಗೊಳಿಸುವ ಕ್ರೀಡೆಗಳು:
ವೇಟ್ ಲಿಫ್ಟಿಂಗ್ ತರಬೇತಿ ಗರ್ಭಿಣಿ ಮಹಿಳೆಯರಿಗೆ ಮಿತಿಯಲ್ಲಿರುವ ಮತ್ತೊಂದು ಕ್ರೀಡೆಯಾಗಿದೆ. ಭಾರ ಎತ್ತುವ ಕ್ರೀಡೆಯ ವಿಷಯಕ್ಕೆ ಬಂದಾಗ ಗರ್ಭಪಾತಕ್ಕೆ ಕ್ರೀಡೆ ಕಾರಣವೇ ಎನ್ನುವುದಕ್ಕೆ ನಮ್ಮ ಉತ್ತರ ಹೌದು ಎಂಬುದು.
ಸಾಹಸ ಕ್ರೀಡೆಗಳು:
ಕ್ರೀಡೆ ಗರ್ಭಪಾತಕ್ಕೆ ಕಾರಣವೇ ಎನ್ನುವ ವಿಷಯಕ್ಕೆ ಹೌದು ಎನ್ನುವ ಉತ್ತರಕ್ಕೆ ಪುಷ್ಠಿ ನೀಡುವ ವಿಷಯ ಸಾಹಸ ಕ್ರೀಡೆಗಳು. ವಾಟರ್ ಸ್ಕೀಯಿಂಗ್, ಪಾರಾಚೂಟ್, ಸ್ಕೂಬಾ ಡೈವಿಂಗ್ ಮತ್ತು ಸಮರ ಕಲೆಗಳ ರೀತಿಯ ಕ್ರೀಡೆಗಳನ್ನು ಗರ್ಭಿಣಿಯಾಗಿದ್ದಾಗ ಆಡಲೇಬಾರದು.
ಗರ್ಭಧಾರಣೆಯ ವಿಷಯ ಬಂದಾಗ ಯಾರೂ ಅಪಾಯವನ್ನು ಎದುರಿಸಲು ಬಯಸುವುದಿಲ್ಲ. ನೀವು ಅಪಾಯಕಾರಿ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದಕ್ಕಿಂತ ಮೊದಲು ನೀವು ವೈದ್ಯಕೀಯವಾಗಿ ಫಿಟ್ ಆಗಿದ್ದೀರೇ ಎಂದು ಖಚಿತಪಡಿಸಿಕೊಳ್ಳಿ.



Click it and Unblock the Notifications