Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರ್ಭಾವಸ್ಥೆಯಲ್ಲಿ ಆಕ್ವಾ ಏರೋಬಿಕ್ಸ್ ಎಷ್ಟು ಸುರಕ್ಷಿತ?
ವಾಟರ್ ಏರೋಬಿಕ್ಸ್ ,ಆಳವಿಲ್ಲದ ನೀರಿನಲ್ಲಿ ಮಾಡಲಾಗುವ ಒಂದು ಏರೋಬಿಕ್ ವ್ಯಾಯಾಮ ವಿಧ. ಸಾಮಾನ್ಯವಾಗಿ ಈ ವ್ಯಾಯಾಮವನ್ನು ಈಜುಕೊಳದಲ್ಲಿ ನಡೆಸಲಾಗುತ್ತದೆ. ಆಕ್ವಾ ಏರೋಬಿಕ್ಸ್ ನ್ನು ಸಾಮಾನ್ಯವಾಗಿ, ಆಳವಿಲ್ಲದ ಈಜುಕೊಳದಲ್ಲಿ ನಿಂತು ಮಾಡಲಾಗುತ್ತದೆ, ಮತ್ತು ಈ ವಿಧಾನವು ಈಜುವಿಕೆಯನ್ನು ಒಳಗೊಂಡಿರುವುದಿಲ್ಲ.
ಈ ವ್ಯಾಯಾಮವನ್ನು ಸಾಮಾನ್ಯವಾಗಿ ಎಲ್ಲಾ ವಯಸ್ಕರೂ ಮಾಡಬಹುದು. ಗರ್ಭಿಣಿ ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಅನುಮಾನವೆಂದರೆ ಆಕ್ವಾ ಏರೋಬಿಕ್ಸ್ ಗರ್ಭಾವಸ್ಥೆಯಲ್ಲಿ ಸುರಕ್ಷಿತವೇ ಎಂಬುದು. ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಹೆಚ್ಚು ನೆರವಾಗುತ್ತದೆ.
ಇದು ನಿಮ್ಮ ಮನಸ್ಥಿತಿ ಸುಧಾರಿಸಲು, ದೇಹದ ನೋವು ನಿವಾರಣೆ, ಮಲಬದ್ಧತೆ ತಪ್ಪಿಸಲು ಮತ್ತು ನಿಮಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಆದರೆ ಆಕ್ವಾ ಏರೋಬಿಕ್ಸ್ ಗರ್ಭಿಣಿಯಾಗಿದ್ದಾಗ ಸುರಕ್ಷಿತವೇ? ನಮ್ಮ ಉತ್ತರ ಹೌದು. ಇದು ಸುರಕ್ಷಿತ!
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಧಾರಣೆಯ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳು

ಆಕ್ವಾ ಏರೋಬಿಕ್ಸ್ ಸಂಪೂರ್ಣವಾಗಿ ನಿಮ್ಮ ದೇಹಕ್ಕೆ ವ್ಯಾಯಾಮ ನೀಡುವ ಸುರಕ್ಷಿತ ವಿಧಾನವಾಗಿದೆ. ಆಕ್ವಾ ಏರೋಬಿಕ್ಸ್, ಆಕ್ವಾ ಜುಂಬಾ, ನೀರಿನಲ್ಲಿ ಯೋಗ, ಮತ್ತು ಆಕ್ವಾ ಜೋಂಗಿಂಗ್ ಒಳಗೊಂಡಿದೆದ್ದು ಗರ್ಭಾವಸ್ಥೆಯಲ್ಲೂ ಸುರಕ್ಷಿತವಾಗಿದೆ.
ನೀರಿನ ಏರೋಬಿಕ್ಸ್ ಸೇರಿದಂತೆ ಸೌಮ್ಯ ವ್ಯಾಯಾಮ ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿದೆ. ಗರ್ಭಿಣಿಯಾಗಿದ್ದಾಗ ನೀರಿನ ಏರೋಬಿಕ್ಸ್ ಮಾಡುವುದರಿಂದ ಅದರಿಂದ ನಿಮಗೆ ಸಿಗುವ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಆದಾಗ್ಯೂ, ನೀವು ನಿಮಗೆ ಯಾವುದೇ ವೈದ್ಯಕೀಯ ತೊಡಕುಗಳೂ ಇಲ್ಲ ಎಂದು ನಿಮ್ಮ ವೈದ್ಯರ ಬಳಿ ಖಚಿತಪಡಿಸಿಕೊಳ್ಳಿ.
ನೀವು ಆಕ್ವಾ ಏರೋಬಿಕ್ಸ್‌ನ್ನು ಸೇರುವ ಅಥವಾ ಮೊದಲೇ ಹೋಗುತ್ತಿದ್ದರೆ ಗರ್ಭಿಣಿಯಾದಾಗಲೂ ಅದನ್ನು ಮುಂದುವರೆಸಬಹುದಾದ ಕೆಲವು ಪ್ರಮುಖ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.
ಈಜುವುದನ್ನು ತಿಳಿಯುವ ಅಗತ್ಯವಿಲ್ಲ : ಆಕ್ವಾ ಏರೋಬಿಕ್ಸ್, ಉತ್ತಮವಾಗಿ ಯಾರು ಈಜಬಲ್ಲರೋ ಅವರಿಗೆ ಮಾತ್ರ ಎಂದು ತಿಳಿಯಬೇಡಿ. ವಾಸ್ತವವಾಗಿ ಆಕ್ವಾ ಏರೋಬಿಕ್ಸ್ ಗರ್ಭಾವಸ್ಥೆಯಲ್ಲಿ ಸುರಕ್ಷಿತ ಮತ್ತು ಈಜುಲು ಗೊತ್ತಿಲ್ಲದ ಮಹಿಳೆಯರು ಕೂಡ ಈ ವ್ಯಾಯಾಮವನ್ನು ಮಾಡಬಹುದು.
ಬೀಳುವ ಯಾವುದೇ ಅಪಾಯವಿಲ್ಲ : ಗರ್ಭಿಣಿ ಮಹಿಳೆಯರು ವ್ಯಾಯಾಮಗಳಿಂದ ದೂರ ಉಳಿಯಲು ಮುಖ್ಯ ಕಾರಣವೆಂದರೆ ಅವರಲ್ಲಿರುವ ಬಿದ್ದು ಬಿಡಬಹುದೆಂಬ ಭಯ. ಆದರೆ ಒಳ್ಳೆಯ ಸುದ್ದಿಯೆಂದರೆ ಆಕ್ವಾ ಏರೋಬಿಕ್ಸ್, ನೀರಿನಲ್ಲಿ ಮಾಡಲಾಗುತ್ತದೆ ಮತ್ತು ಇಲ್ಲಿ ಯಾವುದೇ ಬೀಳುವ ಭಯವಿಲ್ಲ.
ಒತ್ತಡ ಶಮನ : ಆಕ್ವಾ ಏರೋಬಿಕ್ಸ್ ತರಗತಿಗಳು, ಏರೋಬಿಕ್ ಸಹಿಷ್ಣುತೆ, ಪ್ರತಿರೋಧಕ ಶಕ್ತಿಯ ತರಬೇತಿ, ಮತ್ತು ಆನಂದಿಸಬಹುದಾದ ಸಂಗೀತ ಇವುಗಳನ್ನೂ ಒಳಗೊಂಡಿವೆ. ಆದ್ದರಿಂದ ನಿಮ್ಮ ಮನಸ್ಸು ಮತ್ತು ದೇಹದ ಶಾಂತವಾಗಿಸಲು ಇದು ಪರಿಪೂರ್ಣ ವ್ಯಾಯಾಮವೆನಿಸುತ್ತದೆ.
ಉತ್ತಮ ರಕ್ತ ಪರಿಚಲನೆ: ಆಕ್ವಾ ಏರೋಬಿಕ್ಸ್, ನಿಮ್ಮ ರಕ್ತ ಮತ್ತು ಹೃದಯದ ಕಾರ್ಯವನ್ನು ಹೆಚ್ಚಿಸಲು ಉತ್ತಮ ವಿಧಾನ. ನೀವು ಆಕ್ವಾ ಏರೋಬಿಕ್ಸ್ ಗರ್ಭಾವಸ್ಥೆಯಲ್ಲಿ ಸುರಕ್ಷಿತ ಎಂಬುದನ್ನು ಅರಿತರೆ, ಆಕ್ವಾ ಏರೋಬಿಕ್ಸ್ ಎಷ್ಟು ಸುರಕ್ಷಿತ ಎಂಬುದಕ್ಕೆ ನಿಮಗೆ ನೀವೆ ಉತ್ತರವನ್ನು ಕಂಡುಕೊಳ್ಳಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಂಟನೆಯ ತಿಂಗಳಲ್ಲಿ ದೈಹಿಕ ಸಂಪರ್ಕ ಎಷ್ಟು ಸರಿ ?
ತೂಕ ನಿಯಂತ್ರಣ : ಗರ್ಭಾವಸ್ಥೆಯಲ್ಲಿ ತೂಕವನ್ನು ನಿಯಂತ್ರಿಸುವುದು ಅತ್ಯಂತ ಕಷ್ಟದ ವಿಷಯ. ಆಕ್ವಾ ಏರೋಬಿಕ್ಸ್ ಗರ್ಭಧಾರಣೆಯಲ್ಲಿ ಮಾಡುವುದರಿಂದ ದೇಹದ ದ್ರವ್ಯರಾಶಿಯನ್ನು ಸಾಮಾನ್ಯವಾಗಿಸಿ ನಿಮ್ಮ ತೂಕ ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರಸವ ಸುಲಭ : ಆಕ್ವಾ ಏರೋಬಿಕ್ಸ್, ಗರ್ಭಾವಸ್ಥೆಯಲ್ಲಿ ಸುರಕ್ಷಿತ ಮತ್ತು ನಿಮ್ಮ ಸ್ನಾಯುಗಳನ್ನು ವಿಶ್ರಾಂತಿಯಿಂದ ಇರಿಸಿಕೊಳ್ಳಲು ಮತ್ತು ಹಾರ್ಮೋನುಗಳು ಸಮತೋಲನ ಮಾಡಲು ಅತ್ಯುತ್ತಮ ವ್ಯಾಯಾಮ ವಿಧಾನವಾಗಿದೆ. ಇದು ನಿಮಗೆ ಸುಲಭವಾಗಿ ಹೆರಿಗೆಯಾಗಲು ಸಹಾಯ ಮಾಡುತ್ತದೆ.
ಕಾಲುಗಳ ಮೇಲೆ ಎಡಿಮಾ ತಡೆಗಟ್ಟುತ್ತದೆ : ಆಕ್ವಾ ಏರೋಬಿಕ್ಸ್ ನಿಮ್ಮ ಕಾಲುಗಳಲ್ಲಿ ಉಂಟಾಗುವ ಎಡಿಮಾ ಅಥವಾ ಊತವನ್ನು ತಡೆಯಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು. ಆಕ್ವಾ ಏರೋಬಿಕ್ಸ್ ಮಾಡುವುದು ಗರ್ಭಾವಸ್ಥೆಯಲ್ಲಿ ಸುರಕ್ಷಿತ ಮತ್ತು ಇದು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಇದರಿಂದ ಕಾಲು ಊತವನ್ನು ಬಹುಪಾಲು ತಡೆಯಬಹುದು.
ಮಿತವಾಗಿ ಆಕ್ವಾ ಏರೋಬಿಕ್ಸ್ ವ್ಯಾಯಾಮವನ್ನು ಮಾಡುವುದು ಗರ್ಭಾವಸ್ಥೆಯಲ್ಲಿ ಒಳ್ಳೆಯದು. ಆದರೆ, ನೀವು ನಿಮ್ಮ ದೇಹಕ್ಕೆ ಮಿತಿಮೀರಿದ ಚಲನೆಯಗೆ ಕಾರಣವಾಗುವ ವ್ಯಾಯಾಮಗಳನ್ನು ಮಾಡಬಾರದು. ಅನುಭವಿ ಆಕ್ವಾ ಏರೋಬಿಕ್ಸ್ ತರಬೇತುದಾರ ಸೂಚನೆಗಳನ್ನು ಅನುಸರಿಸಿ ಈ ವ್ಯಾಯಾಮವನ್ನು ಮಾಡುವುದು ಸೂಕ್ತ. ನೀವು ಆಕ್ವಾ ಏರೋಬಿಕ್ಸ್ ಮಾಡಲು ವೈದ್ಯಕೀಯವಾಗಿ ಫಿಟ್ ಆಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈಗ ನೀವು ಗರ್ಭಾವಸ್ಥೆಯಲ್ಲಿ ವಾಟರ್ ಏರೋಬಿಕ್ಸ್ ಮಾಡುವ ಲಾಭಗಳನ್ನು ಅರಿತಿರಿ ತಾನೆ? ಇನ್ಯಾಕೆ ತಡ? ಆಕ್ವಾ ಏರೋಬಿಕ್ಸ್ ತರಗತಿಗಳಿಗೆ ಇಂದೇ ಸೇರಿಕೊಳ್ಳಿ ಮತ್ತು ಆರಾಮವಾಗಿರುವ, ಒತ್ತಡ ಮುಕ್ತ ಗರ್ಭಧಾರಣೆಯನ್ನು ಅನುಭವಿಸಿ!



Click it and Unblock the Notifications
