Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಾವಸ್ತೆಯಲ್ಲಿ ನೀವು ಇನ್ನಷ್ಟು ಸೆಕ್ಸಿಯಾಗಿ ಕಾಣುವುದು ಹೇಗೆ?
ಸಾಕಷ್ಟು ಮಹಿಳೆಯರು ಗರ್ಭಿಣಿಯಾದಾಗ ಆತಂಕಕ್ಕೆ ಒಳಗಾಗುತ್ತಾರೆ,ಇದು ಕೇವಲ ಹಾರ್ಮೋನ್ ಬದಲಾವಣೆಯಿಂದ ಮಾತ್ರವಲ್ಲ, ಹೆರಿಗೆ ನೋವು,ಪ್ರಸವ ಇವುಗಳ ಬಗ್ಗೆಯೂ ಕೂಡ ಆತಂಕ ಇರುತ್ತದೆ. ಮಹಿಳೆ ತಾಯಿಯಾಗುತ್ತಿರುವಾಗ ಸಾಕಷ್ಟು ಬದಲಾವಣೆಗಳಾಗುತ್ತವೆ. ಸಾಮಾನ್ಯವಾಗಿ ತೂಕ ಹೆಚ್ಚಳದಲ್ಲಿ, ಹೆರಿಗೆಯ ತಿಂಗಳು ಹೆಚ್ಚುತ್ತಿದ್ದಂತೆ ಹೊಟ್ಟೆಬರುವಿಕೆ, ಇವುಗಳೆಲ್ಲ ಮಹಿಳೆಗೆ ತಾನು ಹೇಗೆ ಕಾಣಬಹುದು ಎಂಬ ಆತಂಕ ಹುಟ್ಟಿಸುತ್ತದೆ.
ಗರ್ಭವತಿಯಾಗುವುದೆಂದರೆ ಡಲ್ ಆಗಿರುವುದು ಅಥವಾ ಹೆಚ್ಚು ನೋವು ತುಂಬಿರುತ್ತದೆ ಎಂದೇನು ಇಲ್ಲ ಬದಲಿಗೆ ಗರ್ಭಿಣಿಯಾಗುವುದು ನಿಮ್ಮಲ್ಲಿರುವ ಸ್ತ್ರೀ ಮತ್ತು ತಾಯಿತನ ಹೊರಸೂಸುವ ಸಂತೋಷಕರವಾದ ವಿಷಯ. ಕೆಲವು ಮಹಿಳೆಯರು ಗರ್ಭಿಣಿಯಾಗಿರುವಾಗ ಕೂಡ ಸೆಕ್ಸಿಯಾಗಿ, ಫಿಟ್ ಆಗಿ ಇರುತ್ತಾರೆ. ಅದು ಹೇಗೆ ಎಂಬುದರ ಬಗ್ಗೆ ಈ ಕೆಳಗೆ ಕೆಲವು ಸಲಹೆಗಳನ್ನು ನೀಡಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹೆರಿಗೆಯ ನಂತರ ಹೆಚ್ಚಿದ ಮೈ ತೂಕ ಕಮ್ಮಿಮಾಡಬೇಕೆ?

1.ವರ್ಕ್ ಔಟ್:
ಗರ್ಭಾವಸ್ಥೆಯ ಸಂಪೂರ್ಣ ಕಾಲದಲ್ಲಿ ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡುವುದು ಸೂಕ್ತ. ಇಲ್ಲಿ ವರ್ಕ್ ಔಟ್ ಎಂದರೆ ವಾಕಿಂಗ್, ಸ್ವಿಮ್ಮಿಂಗ್, ವಾಟರ್ ಏರೋಬಿಕ್ಸ್ ಮತ್ತು ಯೋಗ. ಶ್ರಮದಾಯಕ ಜೀವನಕ್ರಮವಿದ್ದರೆ ಅಥವಾ ಗರ್ಭಧಾರಣೆಯಲ್ಲಿ ತೊಂದರೆ ಇದ್ದರೆ ಅಂತಹ ಸಂದರ್ಭದಲ್ಲಿ ವ್ಯಾಯಾಮ ಮಾಡುವುದು ಸೂಕ್ತವಲ್ಲ.
ವೈದ್ಯರ ಸಲಹೆಯ ಮೇರೆಗೆ ಕೆಲವೊಂದು ವ್ಯಾಯಮ ಮಾಡುವುದು ಸೂಕ್ತ. ಜೊತೆಗೆ ವರ್ಕ್ ಔಟ್ ಮಾಡುವಾಗ ಸಾಕಷ್ಟು ನೀರು ಸೇವಿಸಿ. ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸುವುದು ನಿಮ್ಮನ್ನು ತಾಜಾವಾಗಿ ಇಡುವುದು ಮಾತ್ರವಲ್ಲ ನಿಮ್ಮ ದೇಹಕ್ಕೆ ಬೇಕಾಗುವ ನೀರನ್ನು ಒದಗಿಸುತ್ತದೆ ಮತ್ತು ನಿಮ್ಮ ತ್ವಚೆಯ ಕಾಂತಿಯನ್ನು ಕಾಪಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೀವರಿಯಬೇಕಾದ ಗರ್ಭಾವಸ್ಥೆಯ ಚಿಕನ್‌ಫಾಕ್ಸ್ ಅಪಾಯಗಳು!
2. ಫ್ಯಾಶನೆಬಲ್ ಆಗಿರುವ ಬಟ್ಟೆಯನ್ನು ಉಪಯೋಗಿಸಿ:
ನೀವು ನೋಡಿರಬಹುದು ಗರ್ಭಿಣಿ ಮಹಿಳೆಯರು ಸಾಮಾನ್ಯವಾಗಿ ಹಳೆಯ ದೊಡ್ಡ ಅಳತೆಯ ಟೀ ಶರ್ಟ್ ಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ನೀವು ಸೆಕ್ಸಿಯಾಗಿ,ಫಿಟ್ ಆಗಿ ಕಾಣಿಸಬೇಕೆಂದರೆ ಫ್ಯಾಶನೆಬಲ್ ಆಗಿರುವ ಹೊಸ ರೀತಿಯ ಮಾತೃತ್ವಕ್ಕೆಂದೇ ಇರುವ ಬಟ್ಟೆಗಳನ್ನು ಧರಿಸಿ. ಇದು ನಿಮಗೆ ಆರಾಮದಾಯಕವಾಗಿ ಕೂಡ ಇರುತ್ತದೆ.
3.ಸಮತೋಲಿತ ಆಹಾರ ಬಳಸಿ:
ನಿಮ್ಮ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಬಳಸಿ. ಇದರಿಂದ ನಿಮ್ಮ ದೇಹಕ್ಕೆ ಬೇಕಾದ ವಿಟಮಿನ್ ಮತ್ತು ಖನಿಜಾಂಶಗಳು ಇದರಿಂದ ದೊರೆಯುತ್ತವೆ. ಕೆಫಿನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಕೆಫಿನ್ ಹೆಚ್ಚು ಬಳಸುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿರುವ ನಿಮ್ಮ ಮಗುವಿನ ಬೆಳವಣಿಗೆಗೆ ಕೂಡ ಪರಿಣಾಮ ಬೀರುತ್ತದೆ.
4.ಹೇರ್ ಸ್ಟೈಲ್:
ಪ್ರತಿಯೊಂದು ಮಹಿಳೆಯು ಗರ್ಭಾವಸ್ಥೆಯಲ್ಲಿರುವಾಗ ದೇಹದಲ್ಲಿ ಕಂಡುಬರುವ ಹಾರ್ಮೊನಿನ ಬದಲಾವಣೆಯಿಂದಾಗಿ ಕೂದಲು ದಟ್ಟವಾಗಿ, ಹೊಳೆಯುವಂತೆ ಬೆಳಯುತ್ತದೆ. ಈ ಸಮಯದಲ್ಲಿ ಕೂದಲು ಕತ್ತರಿಸಬೇಡಿ ಅಥವಾ ಕೂದಲನ್ನು ಹಿಂದೆ ಕಟ್ಟಿಬಿಡಬೇಡಿ. ಬದಲಿಗೆ ಹೇರ್ ಸ್ಟೈಲರ್ ಅನ್ನು ಭೇಟಿಯಾಗಿ ನಿಮಗೆ ಹೊಂದಾಣಿಕೆಯಾಗುವಂತಹ ಸ್ಟೈಲ್ ಮಾಡಲು ಹೇಳಿ. ನಿಮ್ಮ ಕೂದಲು ಸುಂದರವಾಗಿದ್ದಾಗ ನಿಮಗೆ ಹೊಂದಾಣಿಕೆಯಾಗುವಂತೆ ಇದ್ದಾಗ ನೀವು ಸೆಕ್ಸಿಯಾಗಿ ಕಾಣಿಸುತ್ತೀರಿ.
5.ಮೇಕಪ್ ಮತ್ತು ಸೌಂದರ್ಯ ಸಾಧನಗಳಿಗೆ ಗುಡ್ ಬೈ ಹೇಳಿ:
ಸೌಂದರ್ಯ ಸಾಧನವನ್ನು ಬಳಸದೇ ಇರಬೇಡಿ. ಗರ್ಭಿಣಿಯಾದಾಗ ಕೆಲವೊಮ್ಮೆ ಸೌಂದರ್ಯ ಸಾಧನದಲ್ಲಿರುವ ರಾಸಾಯನಿಕ ಅಂಶಗಳು ಅಲರ್ಜಿಯನ್ನು ಉಂಟು ಮಾಡಬಹುದು. ಇದರಿಂದ ನೀವು ಸೌಂದರ್ಯ ಸಾಧನದಿಂದ ದೂರ ಉಳಿಯುವಂತಾಗಬಹುದು. ನಿಮ್ಮ ವೈದ್ಯರ ಸಲಹೆಯನ್ನು ಪಡೆದು ನಿಮಗೆ ಸೂಕ್ತ ಎನಿಸುವ ಸೌಂದರ್ಯ ಸಾಧನಗಳನ್ನು ಬಳಸಿ.
6. ನಿಮ್ಮ ಮೇಲೆ ನಂಬಿಕೆ ಇರಿಸಿಕೊಳ್ಳಿ:
ನೀವು ಸೆಕ್ಸಿಯಾಗಿ ಕಾಣುತ್ತಿದ್ದೀರಿ ಮತ್ತು ಸುಂದರವಾಗಿದ್ದೀರಿ ಎಂದು ನಂಬಿ ಮತ್ತು ನೀವು ಸುಂದರವಾಗಿ ಕಾಣಿಸುತ್ತೀರಿ.ಸಕಾರಾತ್ಮಕ ಭಾವನೆಗಳ ಮೂಲಕ ಋಣಾತ್ಮಕ ಭಾವನೆಗಳನ್ನು ಹೋಗಲಾಡಿಸಿ.



Click it and Unblock the Notifications
